'ವಂದೇ ಭಾರತ್ ಅಲ್ಲ, ಖಾಯೇಗಾ ಭಾರತ್ ಎಕ್ಸ್‌ಪ್ರೆಸ್': ರೈಲಲ್ಲಿ ಊಟ ಸವಿದು ಫ್ಯಾಮಿಲಿ ರಿವ್ಯೂ! ವಿಡಿಯೋ ವೈರಲ್

Vande Bharat Express: ಭಾರತೀಯ ರೈಲ್ವೆ ಜಾಲದಲ್ಲಿ ಕ್ರಾಂತಿ ಸೃಷ್ಟಿಸಿದ ವಂದೇ ಭಾರತ್ ಎಕ್ಸ್ ರೈಲು (Vande Bharat Express Train) ಪ್ರಯಾಣಿಕರ ಅಚ್ಚುಮೆಚ್ಚಿನ ರೈಲಾಗಿದೆ. ಇದೀಗ ಈ ರೈಲಿನ ಆಹಾರದ, ತಿಂಡಿ ಮೆನು ಕೂಡ ಪ್ರಯಾಣಿಕರಿಗೆ ಹೆಚ್ಚು ಇಷ್ಟವಾಗಿದೆ. ಇತ್ತೀಚೆಗೆ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸಿದ ಕುಟುಂಬವೊಂದು ಇದು 'ವಂದೇ ಭಾರತ್ ಎಕ್ಸ್‌ಪ್ರೆಸ್ ಅಲ್ಲ, ಕಾಯೇಗಾ ಭಾರತ್ ಎಕ್ಸ್‌ಪ್ರೆಸ್‌' (ತಿನ್ನುವ ಭಾರತ್ ಎಕ್ಸ್‌ಪ್ರೆಸ್) ಎಂದು ಬಣ್ಣಿಸುವ ಮೂಲಕ ರೈಲಿನೊಳಗೆ ಊಟದ ಆತಿಥ್ಯವನ್ನು ಬಣ್ಣಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ವಿಡಿಯೋವೊಂದು ವೈರಲ್ ಆಗುತ್ತಿದೆ.

ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ av.jit.bis_kolkata ಪೇಜಿನಿಂದ ವಿಡಿಯೋ ಹಂಚಿಕೊಳ್ಳಲಾಗಿದೆ. ರೈಲು ಪ್ರಯಾಣದಲ್ಲಿ ಉಪಹಾರ, ಪದೇ ಪದೇ ತಮ್ಮ ಬಳಿ ಬರುವ ಚಹಾ ಮತ್ತು ಕಾಫಿ, ಹೊಟ್ಟೆ ತುಂಬಿಸುವ ಮಧ್ಯಾಹ್ನದ ಊಟ, ಮತ್ತು ಐಸ್‌ಕ್ರೀಮ್ ಕೂಡ ಸಿಕ್ಕರೆ ಹೇಗಿರುತ್ತದೆ..? ಹೌದು, 'ವಂದೇ ಭಾರತ್ ಎಕ್ಸ್‌ಪ್ರೆಸ್'ನಲ್ಲಿ ರೈಲಿನಲ್ಲಿ ಹೌರಾದಿಂದ ನ್ಯೂ ಜಲ್ಪೈಗುರಿಗೆ ಪ್ರಯಾಣಿಸಿದ ಬಂಗಾಳಿ ಕುಟುಂಬವೊಂದಕ್ಕೆ ಇಂತಹದ್ದೇ 'ರುಚಿಕರ' ಅನುಭವ ದೊರೆತಿದೆ. ಊಟ, ತಿಂಡಿ, ಕಾಫಿ, ಸ್ನಾಕ್ಸ್ ಹೀಗೆ ತರಹೇವಾರಿ ಫುಡ್ ತಿಂದಿದ್ದಾರೆ. ವಂದೇ ಭಾರತ್ ರೈಲಲ್ಲಿ ಆಗಾಗ ಸಿಗುವ ಟಿ, ಕಾಫಿ, ತಿಂಡಿ, ಊಟ ಸೇವೆ ಕಂಡು ಇದು 'ಚಲಿಸುವ ರೆಸ್ಟೋರೆಂಟ್' ಅಂತಲೂ ಕರೆದಿದ್ದಾರೆ.

Family Calls Vande Bharat Express Khayega Bharat Express Over Non-Stop Food in Viral Video

ಇದು 'ಖಾಯೇಗಾ ಭಾರತ್ ಎಕ್ಸ್‌ಪ್ರೆಸ್'!

ಬಗೆ ಬಗೆಯ ತಿಂಡಿ-ತಿನಿಸುಗಳು ಆಗಾಗ ಬರುತ್ತಲೇ ಇದ್ದವು. ಹೀಗಾಗಿಯೇ ಆ ಬಂಗಾಳಿ ಕುಟುಂಬವು ರೈಲಿಗೆ "ಖಾಯೇಗಾ ಭಾರತ್ ಎಕ್ಸ್‌ಪ್ರೆಸ್" (ತಿನ್ನುವ ಭಾರತ ಎಕ್ಸ್‌ಪ್ರೆಸ್) ಎಂದು ಹೆಸರಿಟ್ಟಿದ್ದು ವೈರಲ್ ಆಗಿದೆ. ತಮ್ಮ ಕುಟುಂಬಕ್ಕೆ ರೈಲು ಪ್ರಯಾಣದಲ್ಲಿ ಸಿಕ್ಕ ಆಹಾರ ಅನುಭವ ಇಂಥದ್ದು ಎಂದು ಸ್ಮರಿಸಿದೆ. ರೈಲಿನಲ್ಲಿ ನಾವು ಪ್ರಯಾಣಿಕರು ಎಂಬುದೇ ಮರೆತು ಹೋಗಿದೆ. ಯಾವುದೋ "ಚಲಿಸುವ ರೆಸ್ಟೋರೆಂಟ್"ನಲ್ಲಿ ಕುಳಿತಂತೆ ಅನ್ನಿಸುತ್ತದೆ ಎಂದು ವಿಡಿಯೋದಲ್ಲಿ ಕುಟುಂಬ ಸದಸ್ಯರು ಹೇಳಿಕೊಂಡಿದ್ದಾರೆ.

ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ವಿಮಾನದ ಮಾದರಿ ಊಟ ವ್ಯವಸ್ಥೆ! 3 ಮಾರ್ಗಗಳಲ್ಲಿ ಹೊಸ ಮೆನು ಜಾರಿ
ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ವಿಮಾನದ ಮಾದರಿ ಊಟ ವ್ಯವಸ್ಥೆ! 3 ಮಾರ್ಗಗಳಲ್ಲಿ ಹೊಸ ಮೆನು ಜಾರಿ

ಹೌರಾದಿಂದ ಬೆಳಗ್ಗೆ 5:55ಕ್ಕೆ ವಂದೇ ಭಾರತ್ ರೈಲು ಏರಿದ ಕುಟುಂಬವು, ರೈಲಿನ ಸಮಯಪ್ರಜ್ಞೆಗೆ ಮೆಚ್ಚುಗೆ ವ್ಯಕ್ತಪಡಿಸಿತು. ನಾವು ಆಸನದಲ್ಲಿ ಕುಳಿತ ಸ್ವಲ್ಪ ಹೊತ್ತಿನಲ್ಲೇ ನಮ್ಮ ಕುಟುಂಬಕ್ಕೆ, ಎಲ್ಲ ಪ್ರಯಾಣಿಕರಿಗೆ ಬಿಸಿ ಬಿಸಿ ಚಹಾ ಮತ್ತು ಬಿಸ್ಕತ್ತು ನೀಡಲಾಯಿತು. ಪ್ರಯಾಣಿಕರು ಬ್ಲ್ಯಾಕ್ ಟೀ (ಹಾಲು ಬೆರೆಸದ ಚಹಾ) ಮತ್ತು ಓಟ್ಸ್ ಡೈಜೆಸ್ಟಿವ್ ಬಿಸ್ಕತ್ತನ್ನು ಆರಿಸಿಕೊಂಡರು. ಸಿಕ್ಕ ಟೀ ದಿನವಿಡೀ ಇದೇ ರೈಲಿನಲ್ಲಿ ಚಲಿಸಬೇಕಿದ್ದು, ನಮ್ಮ ದೀರ್ಘ ಪ್ರಯಾಣದಲ್ಲಿ ನಿರಂತರವಾಗಿ ಸಿಗಲಿದ್ದ 'ಆಹಾರದ ಸವಿಯಾನ'ದ ಮುನ್ನುಡಿಯಂತಿತ್ತು ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

ಅತ್ಯುತ್ತಮ ಆಹಾರ ಔತಣ

ನಂತರ ತಿಂಡಿ ಹೊತ್ತಿಗೆ ಪ್ರಯಾಣಿಕರಿಗೆ ಬ್ರೆಡ್ ಆಮ್ಲೆಟ್, ಆಲೂಗಡ್ಡೆ ಪೀಸ್ (ಪೊಟಾಟೊ ವೆಡ್ಜಸ್), ಬೇಯಿಸಿದ ತರಕಾರಿಗಳು, ಬೆಣ್ಣೆ ಮತ್ತು ಜಾಮ್ ಒಳಗೊಂಡ ಬೆಳಗಿನ ಉಪಹಾರ ನೀಡಲಾಯಿತು. ಅದಾದ ಬಳಿಕ ರೈಲಿನಲ್ಲಿ ಆಗಾಗ ಕಾಫಿ ಕೂಡ ಸಿಗುತ್ತಿತ್ತು ಎಂದು ಹೇಳಿಕೊಂಡಿದ್ದಾರೆ.

ರೈಲಿನ ಸಮಯಪಾಲನೆಯು, ಆಹಾರ ಸೇವೆಯು ನಮ್ಮ ಕುಟುಂಬಕ್ಕೆ ಬಹಳ ಇಷ್ಟವಾಯಿತು. ಆಹಾರದೊಂದಿಗೆ ಒಳಗಿನ ಸ್ವಚ್ಛತಾ ನಿರ್ವಹಣೆ, ಶೌಚಾಲಯಗಳು ಬಳಕೆ ಎಲ್ಲವು ಕಂಡು ಅವರು ವಂದೇ ಭಾರತ್ ರೈಲಿನ ಸೇವೆ ಶ್ಲಾಘಿಸಿದರು. ಈ ಬಾರಿ ರೈಲು ಸಂಚಾರವು ವಿಶೇಷ ಅನುಭವ ನೀಡಿತು, ಸ್ಮರಣೀಯವಾಗಿತ್ತು ಎಂದು ತಿಳಿಸಿದರು.

ಮಧ್ಯಾಹ್ನವು ಭರ್ಜರಿ ಊಟ!

ರೈಲು ನ್ಯೂ ಜಲ್ಪೈಗುರಿಯತ್ತ ಸಾಗುತ್ತಾ ಮಾಲ್ಡಾ ನಿಲ್ದಾಣ ದಾಟಿತು. ಅಷ್ಟರಲ್ಲೇ ಮಧ್ಯಾಹ್ನದ ಊಟದ ಸಮಯವಾಗಿತ್ತು. ಆಗ ಹೊಟ್ಟೆ ತುಂಬಿಸುವಂತಹ ಭರ್ಜರಿ ಊಟ ನಮ್ಮ ಮುಂದೆ ಬಂತು. ಅದರಲ್ಲಿ ಅನ್ನ, ದಾಲ್, ಆಲೂಗಡ್ಡೆ ಪೀಸ್, ಪರೋಠ ಮತ್ತು ಚಿಕನ್ ಕರಿ ಮುಖ್ಯವಾಗಿತ್ತು. ಊಟ ಮುಗಿಯುತ್ತಿದ್ದಂತೆ ಸಿಹಿ ತಿನಿಸಾಗಿ 'ಮಿಸ್ತಿ ದೋಯಿ' (ಸಿಹಿ ಮೊಸರು) ಮತ್ತು ಐಸ್‌ಕ್ರೀಮ್ ಕೂಡ ಪ್ರಯಾಣಿಕರಿಗೆ ನೀಡಲಾಯಿತು. ಕೂತಲ್ಲೇ ಎಲ್ಲವು ಬರುವುದು ನೋಡಿ ಈ ಕುಟುಂಬ ತಾವು ರೆಸ್ಟೋರೆಂಟ್‌ನಲ್ಲಿದ್ದೇವೆ ಎಂದು ಭಾವಿಸಿದರು.

SWR: ಅರಸೀಕೆರೆ-ಮೈಸೂರು, ಮೈಸೂರು-ಬೆಂಗಳೂರು ರೈಲು ರದ್ದು: ನೈಋತ್ಯ ರೈಲ್ವೆಯಿಂದ ಮಹತ್ವದ ಮಾಹಿತಿ
SWR: ಅರಸೀಕೆರೆ-ಮೈಸೂರು, ಮೈಸೂರು-ಬೆಂಗಳೂರು ರೈಲು ರದ್ದು: ನೈಋತ್ಯ ರೈಲ್ವೆಯಿಂದ ಮಹತ್ವದ ಮಾಹಿತಿ

ಪ್ರಾದೇಶಿಕ ಆಹಾರ ಪದ್ಧತಿಗೆ ರೈಲ್ವೆ ಆದ್ಯತೆ

ಭಾರತೀಯ ರೈಲ್ವೆಯು ಆಯಾ ಸ್ಥಳೀಯ ಪ್ರಾದೇಶಿಕ ಆಹಾರ ಮೆನುವನ್ನು ತನ್ನ ವಂದೇ ಭಾರತ್ ರೈಲ್ವೆ ಸೇವೆಯಲ್ಲಿ ಸೇರಿಸಿಕೊಂಡಿದೆ. ಇದರಿಂದ ಕರಾವಳಿ, ಉತ್ತರ ಭಾರತ, ದಕ್ಷಿಣ ಭಾರತದ ಆಯಾ ರಾಜ್ಯಗಳ ಆಹಾರ ಸಂಸ್ಕೃತಿ ಎಲ್ಲರಿಗೂ ಪರಿಚಯಿಸುತ್ತಿದೆ. ಸದ್ಯ ವೈರಲ್‌ ಆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹತ್ತು ಲಕ್ಷಕ್ಕೂ ಅಧಿಕ ವಿವ್ಸ್ ಪಡೆದಿದೆ. ಕೆಲವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+