ಕರ್ನಾಟಕಕ್ಕೆ 2ನೇ 'ವಂದೇ ಭಾರತ್ ಸ್ಲೀಪರ್ ರೈಲು' ಘೋಷಣೆ: ಎಲ್ಲಿಂದ-ಎಲ್ಲಿಗೆ, ಮಾರ್ಗ, ಅಪ್ಡೇಟ್ ಇಲ್ಲಿದೆ
ಬೆಂಗಳೂರು: ಕರ್ನಾಟಕದ ಮೊದಲ ' ವಂದೇ ಭಾರತ್ ಸ್ಲೀಪರ್ ರೈಲು' ಬೆಂಗಳೂರು-ಮುಂಬೈ ನಡುವೆ ಕಾರ್ಯಾಚರಣೆ ಆರಂಭಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಕನ್ನಡಿಗರಿಗೆ ಮತ್ತೊಂದು ಗುಡ್‌ನ್ಯೂಸ್ ನೀಡಿದೆ. ಕರ್ನಾಟಕದ 2ನೇ ವಂದೇ ಭಾರತ್ ಸ್ಲೀಪರ್ (Karnataka 2nd Vande Bharat Sleeper Train) ರೈಲಿನ ಅಧಿಕೃತ ಮಾಹಿತಿ, ಎಲ್ಲಿಂದ ಎಲ್ಲಿಗೆ, ಮಾರ್ಗದ ಕುರಿತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ತಿಳಿಸಿದ್ದಾರೆ.
ನೂತನ ಸ್ಲೀಪರ್ ವಂದೇ ಭಾರತ್ ರೈಲು ಕಾರ್ಯಾಚರಣೆಗೆ ಚಾಲನೆ ನೀಡಲು ಬೆಂಗಳೂರಿಗೆ ಆಗಮಿಸಿದ್ದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಕರ್ನಾಟಕದ ಸಂಸದರ ನಿರಂತರ ಬೇಡಿಕೆ, ಮನವಿಗೆ ಸ್ಪಂದಿಸಿದ್ದಾರೆ. ಮುಂದಿನ ಕರ್ನಾಟಕದ ಎರಡನೇ ವಂದೇ ಭಾರತ್ ರೈಲು ಕೂಡ ಬೆಂಗಳೂರು-ಮುಂಬೈ ಸಂಪರ್ಕಿಸಲಿದೆ. ಇದು ಉತ್ತರ ಕರ್ನಾಟಕ ಮಾರ್ಗವಾಗಿ ಸಾಗಲಿದೆ ಎಂದು ಅವರು ಖಚಿತಪಡಿಸಿದ್ದಾರೆ.

ಉತ್ತರ ಕರ್ನಾಟಕಕ್ಕೂ ಸ್ಲೀಪರ್ ವಂದೇ ಭಾರತ್! ಕೇಂದ್ರ ಸಚಿವ
ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಅಶ್ವಿನಿ ವೈಷ್ಣವ್ ಅವರ ಭಾಷಣದ ವಿಡಿಯೋ ತುಣುಕು ಹಂಚಿಕೊಂಡಿದ್ದಾರೆ. ಅದರಲ್ಲಿ ಸಚಿವರು 'ಕರ್ನಾಟಕದ ಮುಂದಿನ ಎರಡನೇ ಸ್ಲೀಪರ್ ವಂದೇ ಭಾರತ್ ರೈಲು ಬೆಂಗಳೂರಿನಿಂದ ಉತ್ತರ ಕರ್ನಾಟಕ ಸಂಪರ್ಕಿಸಲಿದೆ. ಉತ್ತರ ಕರ್ನಾಟಕದ ಹುಬ್ಬಳ್ಳಿ, ಧಾರವಾಡ ಮಾರ್ಗವಾಗಿ ಪುಣೆ, ಮುಂಬೈ ತಲುಪಲಿದೆ. ಈ ಮೂಲಕ ಕರ್ನಾಟಕದ ಸಂಸದರ ನಿರಂತರ ಒತ್ತಾಯ, ಬೇಡಿಕೆ ಈಡೇರಿಸಲಿದ್ದೇವೆ' ಎಂದು ಅವರು ಅಧಿಕೃತ ಮಾಹಿತಿ ನೀಡಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ಹೇಳಿದ್ದೇನು?
ವಿಡಿಯೋ ಹಂಚಿಕೊಂಡ ಸಂಸದ ತೇಜಸ್ವಿ ಸೂರ್ಯ ಅವರು, ರಾಜ್ಯ ಬಿಜೆಪಿ ಸಂಸದರ ನಿರಂತರ ಪ್ರಯತ್ನ, ಬೇಡಿಕೆ ಮನ್ನಸಿದ ಕೇಂದ್ರ ರೈಲ್ವೆ ಸಚಿವರು ಎರಡನೇ ಸ್ಲೀಪರ್ ವಂದೇ ಭಾರತ್ ರೈಲು ಬಿಡುಗಡೆ ಘೋಷಿಸಿದ್ದಾರೆ. ಈ ರೈಲು ಬೆಂಗಳೂರಿನಿಂದ ಉತ್ತರ ಕರ್ನಾಟಕದ ಹುಬ್ಬಳ್ಳಿ ಮಾರ್ಗವಾಗಿ ಸಾಗಲಿದೆ. ಈ ಮಾರ್ಗದ ಎಲ್ಲ ಪ್ರಯಾಣಿಕರಿಗೆ ಅನುಕೂಲ ಒದಗಿಸಲಿದೆ. ಮುಂದೆ ಅದು ಪುಣೆ ಮೂಲಕ ಮುಂಬೈ ತಲುಪಲಿದೆ ಎಂದು
2ನೇ ವಂದೇ ಭಾರತ್ ಸ್ಲೀಪರ್ ರೈಲು
ನವೆಂಬರ್ 1ರಂದು ಕಾರ್ಯಾಚರಣೆ ಆರಂಭಿಸಿದ ಮುಂಬೈ-ಬೆಂಗಳೂರು ಸ್ಲೀಪರ್ ವಂದೇ ಭಾರತ್ ರೈಲು ಬೆಂಗಳೂರು SMVTಯಿಂದ ಅನಂತಪುರ, ಗುಂತಕಲ್ ಜಂಕ್ಷನ್, ಯಾದಗಿರಿ, ಸೋಲಾಪುರ ಜಂಕ್ಷನ್ ಮೂಲಕ ಮುಂದೆ ಕಲಬುರಗಿ, ರಾಯಚೂರು ಮುಖೇನ್ ಮುಂಬೈ ತಲುಪುತ್ತದೆ. ಈ ರೈಲನ್ನೇ ವಾರದಲ್ಲಿ ಮೂರು ದಿನ ಈ ಮೇಲಿನ ಮಾರ್ಗದಲ್ಲಿ, ಉಳಿದ ಮೂರು ದಿನ ಬೆಂಗಳೂರು-ತುಮಕೂರು-ದಾವಣಗೆರೆ-ಹುಬ್ಬಳ್ಳಿ, ಮಾರ್ಗವಾಗಿ ಬಿಡುವಂತೆ ಪ್ರಯಾಣಿಕರಿಂದ ಒತ್ತಾಯ ಕೇಳಿ ಬಂದಿತ್ತು. ಇದೀಗ ಆ ಆಸೆ ನೆರವೇರುವ ಕಾಲ ಹತ್ತಿರವಾಗಿದೆ. ಮುಂದಿನ ದಿನಗಳಲ್ಲಿ ಎರಡನೇ ವಂದೇ ಭಾರತ್ ರೈಲು ವಾರ ಪೂರ್ತಿ ಉತ್ತರ ಕರ್ನಾಟಕ ಮೂಲಕ ಸಂಚಾರ ಮಾಡಲಿದೆ.
ಪ್ರಯೋಜನವೇನು?
ಉತ್ತರ ಕರ್ನಾಟಕ ಮಾರ್ಗವಾಗಿ ಸ್ಲೀಪರ್ ವಂದೇ ಭಾರತ್ ರೈಲು ಸೇವೆ ಆರಂಭವಾದರೆ, ಸುಧಾರಿತ ಸಾರಿಗೆ ಲಭ್ಯವಾಗುವ ಜೊತೆಗೆ, ಪ್ರವಾಸೋದ್ಯಮ, ಉದ್ಯೋಗಿಗಳಿಗೆ, ಶಿಕ್ಷಣ, ಕೈಗಾರಿಕೆ ಸೇರಿದಂತೆ ಅನೇಕ ಕ್ಷೇತ್ರಗಳಿಗೆ ಪ್ರತ್ಯೆಕ್ಷ, ಪರೋಕ್ಷ ಸಹಾಯವಾಗಲಿದೆ.
Bengaluru-Chennai in just 73 minutes and Bengaluru-Hyderabad in 2 hours 10 minutes! PM Shri @narendramodi Ji has approved the Southern Bullet Train Corridor connecting Bengaluru, Hyderabad, Amaravati and Chennai which will transform connectivity across South India. This corridor will bring these major economic and technology hubs closer, creating an integrated economic region.- Union Minister Shri @AshwiniVaishnaw Ji
— Tejasvi Surya (@Tejasvi_Surya) November 1, 2026


Click it and Unblock the Notifications
