SWR Alert: ತುಮಕೂರು ರೈಲು ನಿಲ್ದಾಣದ ಪುನರಾಭಿವೃದ್ಧಿ: ಮೆಮು ರೈಲುಗಳು ರದ್ದು, ಎಕ್ಸ್‌ಪ್ರೆಸ್ ರೈಲಗಳು ವಿಳಂಬ
ಬೆಂಗಳೂರು: ರಾಜ್ಯದ ತುಮಕೂರು ನಿಲ್ದಾಣದ ಪುನರಾಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಇದರಿಂದಾಗಿ ರೈಲುಗಳ ತಾತ್ಕಾಲಿಕ ರದ್ದತಿ, ಮರುನಿಗದಿ ಮತ್ತು ಮಾರ್ಗಮಧ್ಯೆ ನಿಯಂತ್ರಣ ಮಾಡಲಾಗುತ್ತಿದೆ ಎಂದು ನೈಋತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ್ ಕನಮಡಿ ಅವರು ತಿಳಿಸಿದ್ದಾರೆ. ಯಾವೆಲ್ಲ ರೈಲುಗಳಲ್ಲಿ ಬದಲಾವಣೆ ಆಗಿದೆ, ಇಲ್ಲಿದೆ ಮಾಹಿತಿ.
ತುಮಕೂರು ನಿಲ್ದಾಣದ ಯಾರ್ಡ್ ನಲ್ಲಿ ನಡೆಯುತ್ತಿರುವ ಪುನರಾಭಿವೃದ್ಧಿ ಕಾಮಗಾರಿಗೆ ಅನುಕೂಲವಾಗುವಂತೆ ಲೈನ್ ಬ್ಲಾಕ್ ಮತ್ತು ಪವರ್ ಬ್ಲಾಕ್ ಕೈಗೊಳ್ಳಲಾಗುತ್ತಿದ್ದು. ಈ ಹಿನ್ನೆಲೆಯಲ್ಲಿ, ನಿಗದಿತ ದಿನಾಂಕಗಳಂದು ಕೆಲವು ರೈಲುಗಳ ಸೇವೆಯನ್ನು ರದ್ದುಗೊಳಿಸಲಾಗುತ್ತದೆ. ಕೆಲವು ರೈಲುಗಳ ನಿರ್ಗಮನ ಸಮಯ ಮರು ನಿಗದಿಪಡಿಸಲಾಗುತ್ತದೆ. ಕೆಲವು ರೈಲುಗಳನ್ನು ಮಾರ್ಗಮಧ್ಯೆ ನಿಯಂತ್ರಿಸಲಾಗುತ್ತದೆ ಎಂದರು.

ರದ್ದಾದ ರೈಲುಗಳ ವಿವರ
ಒಟ್ಟು 12 ದಿನಗಳ ಕಾಲ ಈ ಕೆಳಕಂಡ ಮೆಮು (MEMU) ರೈಲುಗಳ ಸೇವೆಯನ್ನು ರದ್ದುಗೊಳಿಸಲಾಗುತ್ತದೆ. 2026ರ ಅಕ್ಟೋಬರ್ 23ರಿಂದ 25ರವರೆಗೆ, ಅಕ್ಟೋಬರ್ 28ರಿಂದ ನವೆಂಬರ್ 1ರವರೆಗೆ ಹಾಗೂ ನವೆಂಬರ್ 4ರಿಂದ 7ರವರೆಗೆ ಈ ರೈಲುಗಳು ಸಂಚರಿಸುವುದಿಲ್ಲ.
* ತುಮಕೂರು - ಕೆಎಸ್‌ಆರ್ ಬೆಂಗಳೂರು ಮೆಮು ರೈಲು (66572)
* ಕೆಎಸ್‌ಆರ್ ಬೆಂಗಳೂರು ತುಮಕೂರು ಮೆಮು ರೈಲು (66571)
ರೈಲುಗಳ ನಿರ್ಗಮನ ಸಮಯ ಮರುನಿಗದಿ
2026ರ ಅಕ್ಟೋಬರ್ 23ರಿಂದ 25ರವರೆಗೆ, ಅಕ್ಟೋಬರ್ 28ರಿಂದ ನವೆಂಬರ್ 1ರವರೆಗೆ ಹಾಗೂ ನವೆಂಬರ್ 4ರಿಂದ 7ರವರೆಗೆ ಕೆಳಕಂಡ ರೈಲುಗಳ ನಿರ್ಗಮನ ಸಮಯವನ್ನು ಮರುನಿಗದಿಪಡಿಸಲಾಗಿದೆ.
* ಯಶವಂತಪುರ ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ರೈಲು (20689): ಯಶವಂತಪುರದಿಂದ ಈ ರೈಲಿನ ನಿರ್ಗಮನವನ್ನು 75 ನಿಮಿಷಗಳ ಕಾಲ ವಿಳಂಬಗೊಳಿಸಲಾಗುತ್ತದೆ.
* ಕೆಎಸ್‌ಆರ್ ಬೆಂಗಳೂರು-ಧಾರವಾಡ ಎಕ್ಸ್‌ಪ್ರೆಸ್ ರೈಲು (12725): ಕೆಎಸ್‌ಆರ್ ಬೆಂಗಳೂರಿನಿಂದ ರೈಲಿನ ನಿರ್ಗಮನವನ್ನು 30 ನಿಮಿಷಗಳ ವಿಳಂಬಗೊಳಿಸಲಾಗುತ್ತದೆ.
ರೈಲುಗಳ ಮಾರ್ಗಮಧ್ಯೆ ನಿಯಂತ್ರಣ
* ತಾಳಗುಪ್ಪ - ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು (20652) 2026ರ ಅಕ್ಟೋಬರ್ 23ರಿಂದ 25ರವರೆಗೆ, ಅಕ್ಟೋಬರ್ 28ರಿಂದ ನವೆಂಬರ್ 1ರವರೆಗೆ ಹಾಗೂ ನವೆಂಬರ್ 4ರಿಂದ 7ರವರೆಗೆ ಮಾರ್ಗಮಧ್ಯೆ 40 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
* ಕೆಎಸ್‌ಆರ್ ಬೆಂಗಳೂರು-ತುಮಕೂರು ಮೆಮು ರೈಲು (66567): 2026ರ ಅಕ್ಟೋಬರ್ 23ರಿಂದ 25ರವರೆಗೆ, ಅಕ್ಟೋಬರ್ 28ರಿಂದ ನವೆಂಬರ್ 1ರವರೆಗೆ ಹಾಗೂ ನವೆಂಬರ್ 4ರಿಂದ 7ರವರೆಗೆ ಮಾರ್ಗಮಧ್ಯೆ 30 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
* ವಾಸ್ಕೋಡ ಗಾಮಾ- ಯಶವಂತಪುರ ಎಕ್ಸ್‌ಪ್ರೆಸ್ ರೈಲು (17310): 2026ರ ಅಕ್ಟೋಬರ್ 22ರಿಂದ 24ರವರೆಗೆ, ಅಕ್ಟೋಬರ್ 27ರಿಂದ 31ರವರೆಗೆ ಹಾಗೂ ನವೆಂಬರ್ 3ರಿಂದ 6ರವರೆಗೆ ಮಾರ್ಗ ಮಧ್ಯೆ 15 ನಿಮಿಷಗಳ ಕಾಲ ನಿಯಂತ್ರಣಗೊಳ್ಳಲಿದೆ.
* ಮೈಸೂರು - ಬೆಳಗಾವಿ ಎಕ್ಸ್‌ಪ್ರೆಸ್ ರೈಲು (20676): 2026ರ ಅಕ್ಟೋಬರ್ 23ರಿಂದ 25ರವರೆಗೆ, ಅಕ್ಟೋಬರ್ 28ರಿಂದ ನವೆಂಬರ್ 1ರವರೆಗೆ ಹಾಗೂ ನವೆಂಬರ್ 4ರಿಂದ 7ರವರೆಗೆ ಮಾರ್ಗಮಧ್ಯೆ 15 ನಿಮಿಷಗಳ ಕಾಲ ನಿಯಂತ್ರಣಗೊಳ್ಳಲಿದೆ.
* ಉದಯಪುರ ಸಿಟಿ - ಮೈಸೂರು ಎಕ್ಸ್‌ಪ್ರೆಸ್ ರೈಲು (19667): 2026ರ ಅಕ್ಟೋಬರ್ 26 ಮತ್ತು ನವೆಂಬರ್ 2ರಂದು ಮಾರ್ಗಮಧ್ಯೆ 30 ನಿಮಿಷಗಳ ಕಾಲ ನಿಯಂತ್ರಣಕ್ಕೊಳಪಡಲಿದೆ ಎಂಧು ಅಧಿಕಾರಿಗಳು ತಿಳಿಸಿದ್ದಾರೆ.


Click it and Unblock the Notifications
