ಸಿಎಂ 'ದೇವೇಂದ್ರ ಫಡ್ನವಿಸ್' ಕನ್ನಡ ಭಾಷಣ ವೈರಲ್: ತೇಜಸ್ವಿ ಸೂರ್ಯ ಪೋಸ್ಟ್, ಸಂಭ್ರಮ ಬೇಡ ಎಂದ ನೆಟ್ಟಿಗರು!
ಮಹಾರಾಷ್ಟ್ರದ ಸಿಎಂ ದೇವೇಂದ್ರ ಫಡ್ನವಿಸ್ ಅವರು ಬೆಳಗಾವಿಯಲ್ಲಿ ಕನ್ನಡದಲ್ಲಿ ಮಾತನಾಡಿದ ವಿಡಿಯೋ ವೈರಲ್ ಆಗುತ್ತಿದೆ. ಸದಾ ಗಡಿ, ಭಾಷೆ ವಿಚಾರವಾಗಿ ಸುದ್ದಿಯಾಗುತ್ತಿದ್ದ ಉಭಯ ರಾಜ್ಯಗಳನ್ನು ಉಲ್ಲೇಖಿಸಿ ಸಿಎಂ ಮಾತನಾಡಿದ್ದಾರೆ. ಇದಕ್ಕೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು, 'ಪರಸ್ಪರ ಸಾಂಸ್ಕೃತಿಕ ಪರಂಪರೆಗಳನ್ನು, ಆಚಾರ-ವಿಚಾರಗಳನ್ನು ಸಂಭ್ರಮಿಸುವುದೇ ನಿಜವಾದ ಭಾರತೀಯತೆಯ ಸತ್ತ್ವ!' ಎಂದು ಬರೆದುಕೊಂಡಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ಬೆಳಗಾವಿ ಜೊತೆಗೆ ಕಾಶ್ಮೀರವನ್ನು ಎಳೆದು ತಂದಿದ್ದಾರೆ. ಸ್ವಲ್ಪ ಕನ್ನಡ ಮಾತನಾಡಿದ್ದಕ್ಕೆ ಸಂಭ್ರಮಿಸಬೇಡಿ ಅಂತಲೂ ಹೇಳಿದ್ದಾರೆ.
ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರ ವಿಡಿಯೋ ಹಂಚಿಕೊಂಡಿರುವ ತೇಜಸ್ವಿ ಸೂರ್ಯ ಅವರು, ದಾದಾ, ನೀವು ಕನ್ನಡದಲ್ಲಿ ಮಾತನಾಡಿದ್ದೀರಿ ಮತ್ತು ನಂತರ ಸಭೆಯು "ಭಾರತ ಮಾತೆಗೆ ಜಯವಾಗಲಿ" ಎಂದು ಘೋಷಣೆ ಕೂಗಿದ್ದೀರಿ. ಇದು ಕನ್ನಡ ತಾಯಂದಿರ ಮಕ್ಕಳಾದ ನಮಗೆಲ್ಲರಿಗೂ ಹೆಮ್ಮೆ ಮತ್ತು ಸಂತೋಷದ ಸಂಗತಿಯಾಗಿದೆ. ಹಿಂದಿಯಲ್ಲಿ ಕನ್ನಡದಲ್ಲಿ ಮಾತನಾಡಿದ್ದಕ್ಕೆ ಕನ್ನಡಿಗರ ಪರವಾಗಿ ಧನ್ಯವಾದಗಳು' ಎಂದು ತಿಳಿಸಿದ್ದಾರೆ.

ಮುಂದುವರಿದು '1986ರಲ್ಲಿ ಪುಣೆಯಲ್ಲಿ ನಡೆದ "ಕನ್ನಡ-ಮರಾಠಿ ಭಾಷಿಕ ಸಮ್ಮೇಳನ"ದಲ್ಲಿ ಬೆಳಗಾವಿಯೊಂದಿಗೆ ಅವಿನಾಭಾವ ನಂಟು ಹೊಂದಿದ್ದ ಮಹಾರಾಷ್ಟ್ರದ ಪ್ರಖ್ಯಾತ ಸಾಹಿತಿ ಪು. ಲ. ದೇಶಪಾಂಡೆ ಅವರು ಹೇಳಿದ ಮಾತು ಈ ಸಂದರ್ಭಕ್ಕೆ ಹೇಳಿ ಮಾಡಿಸಿದಂತಿದೆ'ಎಂದು ಅವರ ಹೇಳಿಕೆ ಉಲ್ಲೇಖಿಸಿದ್ದಾರೆ.
""ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯ ಪರಿಕಲ್ಪನೆಗಳು, ಆದರೆ ಮರಾಠಿ ಮತ್ತು ಕನ್ನಡ ಸಾಂಸ್ಕೃತಿಕ ಪರಿಕಲ್ಪನೆಗಳು. ಸಾಂಸ್ಕೃತಿಕ ಪರಿಕಲ್ಪನೆಗಳಲ್ಲಿ ಸಂಪರ್ಕಿಸುವ ರೇಖೆಗಳಿವೆ, ಆದರೆ ರಾಜ್ಯ ಪರಿಕಲ್ಪನೆಗಳಲ್ಲಿ ಗಡಿಗಳಿವೆ. ಪರಸ್ಪರ ಸ್ವಾಗತಿಸುವುದು ಸಂಸ್ಕೃತಿಯ ಸ್ವಭಾವ, ಆದರೆ 'ಪ್ರವೇಶವಿಲ್ಲ' ಎಂದು ಹೇಳುವುದು ಗಡಿಯ ಸ್ವಭಾವ!" ಎಂದು ಬರೆದುಕೊಂಡಿದ್ದಾರೆ.
ವಿಡಿಯೋದಲ್ಲಿ ಏನಿದೆ?
'ಎಲ್ಲರಿಗೂ ಸಮಸ್ಕಾರ ತಿಳಿಸಿದ ದೇವೇಂದ್ರ ಫಡ್ನವಿಸ್ ಅವರು, 'ಮರಾಠಿ ಮತ್ತು ಕನ್ನಡ ಭಾಷೆಗಳು ಸಹೋರರಂತೆ. ಮಹಾರಾಷ್ಟ್ರ ಮತ್ತು ಕರ್ನಾಟಕ ಸಹೋದರ ರಾಜ್ಯಗಳು. ನಮಗೆಲ್ಲರಿಗೂ ಕನ್ನಡಿಗರ ಮೇಲೆ ಸಂಪೂರ್ಣ ಗೌರವವಿದೆ.' ಎಂದು ಮಾತನಾಡಿದ್ದಾರೆ. ಭಾಷಣದಲ್ಲಿ ಕನ್ನಡ ಮತ್ತು ಹಿಂದಿಯಲ್ಲಿ ಮಾತನಾಡಿದರು. ಅದನ್ನು ತೇಜಸ್ವಿ ಸೂರ್ಯ ಅವರು ಹಂಚಿಕೊಂಡಿದ್ದಾರೆ.
ಮಹಾರಾಷ್ಟ್ರದ ಮುಖ್ಯಮಂತ್ರಿ ಬೆಳಗಾವಿಯಲ್ಲಿ ಕನ್ನಡದಲ್ಲಿ ಮಾತನಾಡಿದ್ದ ವಿಡಿಯೋ ಇದಾಗಿದ್ದು, ನೆಟ್ಟಿಗರು ಸಹ ತಮ್ಮದೇ ಆದ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಬೆಳಗಾವಿ ಭವಿಷ್ಯ ದೃಷ್ಟಿಯಲ್ಲಿ ಇಂದಿನ ಭಾಷಣ ಪ್ರಮುಖವಾಗಿದೆ.
ಸ್ವಲ್ಪ ಕನ್ನಡ ಮಾತನಾಡಿದ್ದಕ್ಕೆ ಸಂಭ್ರಮಿಸಬೇಡಿ: ನೆಟ್ಟಿಗರು ಹೇಳಿದ್ದೇನು?
'ಭಾಷಣ ವೇಳೆ ಸಿಎಂ ಬಳಸಿದ್ದು ಕನ್ನಡ್, ಅದು 'Kannad' (ಕನ್ನಡ್) ಅಲ್ಲ, ಕನ್ನಡ. ಸಂಸದರೇ ಮುಂದಿನ ಬಾರಿ ಅವರನ್ನು ಖುದ್ದಾಗಿ ಭೇಟಿಯಾದಾಗ ತಿಳಿಸಿ. ಅವರು ಒಂದೆರಡು ಕನ್ನಡ ಪದಗಳನ್ನು ಮಾತನಾಡಿದ ಕೂಡಲೇ ಅತಿಯಾಗಿ ಸಂಭ್ರಮಿಸಬೇಡಿ. ಫಡ್ನವೀಸ್ ಅವರಿಗಿಂತ ಚೆನ್ನಾಗಿ ಟ್ರಂಪ್ ಕೂಡ ಕನ್ನಡ ಮಾತನಾಡಬಲ್ಲರು!' ಎಂದು ಒಬ್ಬರು ತಿಳಿಸಿದ್ದಾರೆ.
ಇನ್ನೂಬ್ಬರು 'ಕರ್ನಾಟಕದ ನಾಯಕತ್ವ ಎಂದರೆ ಈಗ ಕೇವಲ ನಗರಗಳ ಹೆಸರುಗಳನ್ನು ಪ್ರಸ್ತಾಪಿಸುವುದು, ಐಸ್‌ಕ್ರೀಮ್ ತಿನ್ನುವುದು, ಮ್ಯಾರಥಾನ್ ಓಡುವುದು ಮತ್ತು 'ನಾನು ಕನ್ನಡ ಪುಸ್ತಕಗಳನ್ನು ಓದಲು ಪ್ರಾರಂಭಿಸಿದ್ದೇನೆ' ಎಂದು ಘೋಷಿಸಿಕೊಳ್ಳುವುದಕ್ಕಷ್ಟೇ ಸೀಮಿತವಾಗಿದೆಯೇನೋ!' ಎಂದು ಮಾರ್ಮಿಕವಾಗಿ ಕಾಮೆಂಟ್ ಮಾಡಿದ್ದಾರೆ.
ಬೆಳಗಾವಿ, ಕಾಶ್ಮೀರ ಸ್ವಂತದವರ ಕಡೆಯೇ ಇದೆ!
'ಇನ್‌ಸ್ಟಾಗ್ರಾಮ್ ಸ್ಟಂಟ್‌ಗಳಿಂದ ಹಿಡಿದು, ಇದ್ದಕ್ಕಿದ್ದಂತೆ ನಾಯಕರಾಗುವ ಕನಸು ಕಾಣುವವರೆಗೆ ಇಂಥವರನ್ನು ಸೃಷ್ಟಿಸಲಾಗುತ್ತಿದೆ' ಎಂದು ಮೂರನೇಯವರು ಹೇಳಿದ್ದಾರೆ. ಮತ್ತೊಬ್ಬರು 'ಇನ್ನೂ ಬೆಳಗಾವಿ (Belgaon). ಮರಾಠಿ ಮಾತನಾಡುವ ಪ್ರದೇಶ. ಕರ್ನಾಟಕವು ಇದನ್ನು ಅಕ್ರಮವಾಗಿ ತನ್ನ ವಶದಲ್ಲಿ ಇಟ್ಟುಕೊಂಡಿದೆ' ಎಂದು ಹೇಳಿದ್ದಾರೆ. ಅದಕ್ಕೆ ಕನ್ನಡಿಗರೊಬ್ಬರು ಸರಿಯಾಗಿಯೇ ಪ್ರತ್ಯುತ್ತರ ಕೊಟ್ಟಿದ್ದಾರೆ.
'ಕಾಶ್ಮೀರ ಮತ್ತು ಬೆಳಗಾವಿ - ಇವೆರಡೂ ತಮ್ಮ ನಿಜವಾದ ಮಾಲೀಕರ ಬಳಿಯೇ ಉಳಿಯುತ್ತವೆ, ನೀವು ಚಿಂತಿಸಬೇಡಿ' ಎಂದು ಹೇಳಿದ್ದಾರೆ. ಭಾಷಣ ವೇಳೆ ರಾಜಕಾರಣಿಗಳು ನಾವೆಲ್ಲ ಒಂದೇ ಎನ್ನುತ್ತಾರೆ. ಆದರೆ ಸಮಸ್ಯೆ ಅಂತ ಬಂದಾಗ ಹಿಂದು ಮುಂದು ನೋಡುತ್ತಾರೆ. ಹೀಗಾಗಿಯೇ ಅದೆಷ್ಟೋ ಭಾಷೆ, ಗಡಿ ಸಮಸ್ಯೆಗಳು ಇನ್ನೂ ಜೀವಂತವಾಗಿದೆ. ಕನ್ನಡ, ಮರಾಠಿ ಭಾಷಿಗರು, ರಾಜ್ಯದ ಗಡಿ ವಿಚಾರವನ್ನು ಜನಸಾಮಾನ್ಯರು ಅಷ್ಟು ಸುಲಭವಾಗಿ ಮರೆಯುವುದಿಲ್ಲ. ಪ್ರತಿ ಬಾರಿ ಇಂಥಹ ಬೆಳವಣಿಗೆ ಈ ರೀತಿಯ ಅಭಿಪ್ರಾಯಗಳು ಕೇಳಿ ಬರುತ್ತವೆ.
ಪರಸ್ಪರ ಸಾಂಸ್ಕೃತಿಕ ಪರಂಪರೆಗಳನ್ನು, ಆಚಾರ-ವಿಚಾರಗಳನ್ನು ಸಂಭ್ರಮಿಸುವುದೇ ನಿಜವಾದ ಭಾರತೀಯತೆಯ ಸತ್ತ್ವ!@Dev_Fadnavis ದಾದಾ, ನೀವು ಕನ್ನಡದಲ್ಲಿ ಮಾತನಾಡಿದಾಗ ಮತ್ತು ಆಗ ಸಭೆಯಲ್ಲಿ ಮೊಳಗಿದ "ಭಾರತ ಮಾತೆಗೆ ಜಯವಾಗಲಿ" ಎಂಬ ಘೋಷಣೆಗಳು ಕನ್ನಡ ತಾಯಿಯ ಮಡಿಲಿನ ಮಕ್ಕಳಾದ ನಮ್ಮೆಲ್ಲರಿಗೂ ಅತ್ಯಂತ ಹೆಮ್ಮೆ ಮತ್ತು ಸಂತೋಷದ ಸಂಗತಿ. ಕನ್ನಡದ ನೆಲದಲ್ಲಿ ಕನ್ನಡದಲ್ಲೇ ಮಾತನಾಡಿದ್ದಕ್ಕೆ ಕನ್ನಡಿಗರೆಲ್ಲರ ಪರವಾಗಿ ಧನ್ಯವಾದಗಳು! 💛❤️🙏1986ರಲ್ಲಿ ಪುಣೆಯಲ್ಲಿ ನಡೆದ "ಕನ್ನಡ-ಮರಾಠಿ ಭಾಷಿಕ ಸಮ್ಮೇಳನ"ದಲ್ಲಿ ಬೆಳಗಾವಿಯೊಂದಿಗೆ ಅವಿನಾಭಾವ ನಂಟು ಹೊಂದಿದ್ದ ಮಹಾರಾಷ್ಟ್ರದ ಪ್ರಖ್ಯಾತ ಸಾಹಿತಿ ಪು. ಲ. ದೇಶಪಾಂಡೆ ಅವರು ಹೇಳಿದ ಮಾತು ಈ ಸಂದರ್ಭಕ್ಕೆ ಹೇಳಿ ಮಾಡಿಸಿದಂತಿದೆ.पु. ल. यांनी म्हटल्याप्रमाणे -"महाराष्ट्र आणि कर्नाटक या राजकीय संकल्पना आहेत, तर मराठी आणि कन्नड या सांस्कृतिक संकल्पना आहेत. सांस्कृतिक संकल्पनांमध्ये जोडणाऱ्या रेषा असतात, तर राजकीय संकल्पनांमध्ये सीमा असतात. एकमेकांचे स्वागत करणे हा संस्कृतीचा स्वभाव आहे, तर 'प्रवेश बंद' असे म्हणणे हा सीमांचा स्वभाव आहे!"ಭಾರತೀಯತೆ, ವಿವಿಧತೆಯಲ್ಲಿ ಏಕತೆ!
— Tejasvi Surya (@Tejasvi_Surya) November 29, 2026




Click it and Unblock the Notifications
