ಭಾನುವಾರ ಶಾಪಿಂಗ್‌ಗೆ ಹೊರಟವರಿಗೆ ಇಲ್ಲಿದೆ ಸಿಹಿ ಸುದ್ದಿ: ಬೆಂಗಳೂರಿನಲ್ಲಿ ಇಂದು ಏಷ್ಟಿದೆ ಚಿನ್ನ-ಬೆಳ್ಳಿ ದರ?
ಭಾನುವಾರವಾದ ಇಂದು ಕುಟುಂಬದವರೊಂದಿಗೆ ಮದುವೆ ಹಾಗೂ ಶುಭ ಸಮಾರಂಭಗಳ ಶಾಪಿಂಗ್‌ಗೆ ಹೊರಡಲು ಸಿದ್ಧರಾಗಿದ್ದೀರಾ? ಹಾಗಾದ್ರೆ ನಿಮಗೆ ಆಭರಣ ಮಾರುಕಟ್ಟೆ ಸಮಾಧಾನಕರ ಸುದ್ದಿ ನೀಡಿದೆ ನೋಡಿ. ಕಳೆದ ಒಂದು ವಾರದಿಂದ ನಿರಂತರ ಏರಿಳಿತ ಕಾಣುತ್ತಿದ್ದ ಬಂಗಾರ ಮತ್ತು ಬೆಳ್ಳಿ ದರಗಳು ಇಂದು ಸ್ಥಿರತೆಯನ್ನ ಕಾಯ್ದುಕೊಂಡಿವೆ.
ವಾರಾಂತ್ಯದಲ್ಲಿ ಆಭರಣ ಖರೀದಿಸಲು ಯೋಜಿಸಿರುವ ಗ್ರಾಹಕರಿಗೆ ಬೆಲೆ ಏರಿಕೆಯ ಆತಂಕವಿಲ್ಲದೆ ಶಾಪಿಂಗ್ ಮಾಡಲು ಇಂದು ಉತ್ತಮ ಅವಕಾಶವಿದೆ. ಹಾಗಾದರೆ, ಇಂದು ಅಂದರೆ ನವೆಂಬರ್ 29, 2026ರಂದು ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಎಷ್ಟಿದೆ? ಇಲ್ಲಿ ನೋಡೋಣ.

ಬೆಂಗಳೂರಿನಲ್ಲಿ ಏಷ್ಟಿದೆ ಚಿನ್ನ, ಬೆಳ್ಳಿ ಬೆಲೆ?
ಇಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 22 ಕ್ಯಾರಟ್ ಆಭರಣ ಚಿನ್ನದ ದರ ಪ್ರತಿ 1 ಗ್ರಾಂಗೆ 11,720 ರೂಪಾಯಿಗಳಷ್ಟಿದೆ. ಹಾಗೆಯೇ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 1,17,200 ರೂಪಾಯಿ ಇದೆ. ಇನ್ನು 24 ಕ್ಯಾರಟ್ ಶುದ್ಧ ಚಿನ್ನದ ಬೆಲೆ 1 ಗ್ರಾಂಗೆ 12,786 ರೂಪಾಯಿಗಳಾಗಿದ್ದು, 10 ಗ್ರಾಂಗೆ 1,27,860 ರೂಪಾಯಿ ನಿಗದಿಯಾಗಿದೆ. ಹಾಗೆಯೇ 18 ಕ್ಯಾರಟ್ ಚಿನ್ನದ ದರ 1 ಗ್ರಾಂಗೆ 9,589 ರೂಪಾಯಿ ಇದೆ.
ಇನ್ನೂ ಈ ಬೆಳ್ಳಿ ವಿಚಾರಕ್ಕೆ ಬಂದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ 1 ಗ್ರಾಂ ಬೆಳ್ಳಿಯ ಬೆಲೆ 170 ರೂಪಾಯಿಗಳಾಗಿದ್ದು, 1 ಕೆಜಿ ಬೆಳ್ಳಿಗೆ 1,70,000 ರೂಪಾಯಿ ದರವಿದೆ. ವಾರಾಂತ್ಯದ ರಜೆ ಇರುವುದರಿಂದ ಇಂದು ಎಂಸಿಎಕ್ಸ್ ವಹಿವಾಟು ಸ್ಥಗಿತಗೊಂಡಿದೆ.
ನಿನ್ನೆಯ (ನವೆಂಬರ್ 28) ಮಾರುಕಟ್ಟೆ ದರಕ್ಕೆ ಹೋಲಿಕೆ ಮಾಡಿ ನೋಡಿದರೆ, ಇಂದು ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ನಿನ್ನೆ ಶನಿವಾರ 22 ಕ್ಯಾರಟ್ ಚಿನ್ನದ ದರ ಪ್ರತಿ ಗ್ರಾಂಗೆ 50 ರೂಪಾಯಿ ಇಳಿಕೆಯಾಗಿ 11,720 ರೂಪಾಯಿಗೆ ಹಾಗೂ 24 ಕ್ಯಾರಟ್ ಚಿನ್ನ 54 ರೂಪಾಯಿ ಇಳಿಕೆಯಾಗಿ 12,786 ರೂಪಾಯಿಗೆ ತಲುಪಿತ್ತು. ಇಂದು ಕೂಡ ಅದೇ ದರಗಳು ಮುಂದುವರಿದಿದ್ದು, ಗ್ರಾಹಕರಿಗೆ ಯಾವುದೇ ಹೆಚ್ಚುವರಿ ಹೊರೆಯಾಗಿಲ್ಲ.
ನಗರವಾರು 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ ಪಟ್ಟಿ
ಬೆಂಗಳೂರು - 11,720 ರೂಪಾಯಿ
ದೆಹಲಿ - 11,735 ರೂಪಾಯಿ
ಚೆನ್ನೈ - 11,720 ರೂಪಾಯಿ
ಮುಂಬೈ - 11,720 ರೂಪಾಯಿ
ಹೈದರಾಬಾದ್ - 11,720 ರೂಪಾಯಿ
ಅಹಮದಾಬಾದ್ - 11,725 ರೂಪಾಯಿ
ಪುಣೆ - 11,720 ರೂಪಾಯಿ
ಕೋಲ್ಕತ್ತಾ - 11,720 ರೂಪಾಯಿ
ಗಮನಿಸಿ: ಮೇಲೆ ನೀಡಲಾದ ಚಿನ್ನ ಮತ್ತು ಬೆಳ್ಳಿಯ ದರಗಳು ಮಾರುಕಟ್ಟೆಯ ಮೂಲ ದರಗಳಾಗಿದ್ದು, ಇವುಗಳಲ್ಲಿ ಜಿಎಸ್‌ಟಿ ಮತ್ತು ಇತರೆ ತೆರಿಗೆಗಳು ಸೇರಿರುವುದಿಲ್ಲ. ನೀವು ಚಿನ್ನದಂಗಡಿಗೆ ಹೋಗಿ ಚಿನ್ನ ಅಥವಾ ಬೆಳ್ಳಿಯನ್ನ ಖರೀದಿಸುವಾಗ ಈ ಬೆಲೆಯ ಜೊತೆಗೆ ಶೇಕಡಾ 3ರಷ್ಟು ಜಿಎಸ್‌ಟಿ ಹಾಗೂ ತಯಾರಿಕಾ ವೆಚ್ಚ ಸೇರ್ಪಡೆಯಾಗುತ್ತದೆ.




Click it and Unblock the Notifications
