3000 ಕೋಟಿ ಕ್ಲಬ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್ ಹವಾ! ರಣವೀರ್ ದಾಖಲೆ ಮೇಲೆ ಕಣ್ಣು!

ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅಂದರೆ ಈಗ ಕೇವಲ ಸ್ಯಾಂಡಲ್‌ವುಡ್‌ಗೆ ಸೀಮಿತವಾದ ಹೆಸರಲ್ಲ. ಕೆಜಿಎಫ್ ಮೂಲಕ ದೇಶಾದ್ಯಂತ ಸದ್ದು ಮಾಡಿದ್ದ ಈ ನಟ, ಇದೀಗ ಜಾಗತಿಕ ಬಾಕ್ಸ್ ಆಫೀಸ್‌ನಲ್ಲೂ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಅದರಲ್ಲೂ ಯಶ್ ನಟನೆಯ ಸಿನಿಮಾಗಳ ಒಟ್ಟು ವಿಶ್ವಾದ್ಯಂತ ಗಳಿಕೆ ಬರೋಬ್ಬರಿ 3380 ಕೋಟಿ ರೂಪಾಯಿ ದಾಟಿದೆ. ಈ ಮೂಲಕ ಕೋವಿಡ್ ನಂತರದ ಅವಧಿಯಲ್ಲಿ 3000 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದ ಭಾರತೀಯ ನಟರ ಎಲೈಟ್ ಕ್ಲಬ್‌ಗೆ ಯಶ್ ಸೇರ್ಪಡೆಯಾಗಿದ್ದಾರೆ. ವಿಶೇಷವೆಂದರೆ, ಈ ಪಟ್ಟಿಯಲ್ಲಿ ಬಾಲಿವುಡ್‌ನ ರಣಬೀರ್ ಕಪೂರ್ ಹಾಗೂ ರಣವೀರ್ ಸಿಂಗ್ ಅವರಂತಹ ಸ್ಟಾರ್‌ಗಳ ಜೊತೆ ಯಶ್ ಕೂಡ ಸ್ಥಾನ ಪಡೆದುಕೊಂಡಿದ್ದಾರೆ.

Yash Box Office Collection Rocking Star Enters 3000 Crore Club With Ramayana Just 63 Crore Behind Ranbir Kapoor

3380 ಕೋಟಿ ಗಳಿಕೆಯೊಂದಿಗೆ ಹೊಸ ದಾಖಲೆ ಬರೆದ ಯಶ್!

ಯಶ್ ಅವರ ಈ ಬಾಕ್ಸ್ ಆಫೀಸ್ ಪಯಣವನ್ನು ಗಮನಿಸಿದರೆ, ಅದರ ಹಿಂದೆ ಮೂರು ಸಿನಿಮಾಗಳ ದೊಡ್ಡ ಕೊಡುಗೆಯಿದೆ. 2022ರಲ್ಲಿ ತೆರೆಕಂಡ 'ಕೆಜಿಎಫ್ ಚಾಪ್ಟರ್ 2' ವಿಶ್ವಾದ್ಯಂತ 1228.59 ಕೋಟಿ ರೂಪಾಯಿ ಗಳಿಸಿ ಭಾರತೀಯ ಚಿತ್ರರಂಗದಲ್ಲೇ ದೊಡ್ಡ ಸಂಚಲನ ಸೃಷ್ಟಿಸಿತ್ತು. ಈ ಸಿನಿಮಾದ ಬಳಿಕ ಯಶ್ ಅವರ ಮುಂದಿನ ಸಿನಿಮಾ ಯಾವಾಗ ಬರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿತ್ತು. ನಂತರ ಬಂದ 'ಟಾಕ್ಸಿಕ್' ಸಿನಿಮಾ ವಿಶ್ವಾದ್ಯಂತ 333.49 ಕೋಟಿ ರೂಪಾಯಿ ಗಳಿಸಿತು. ಇದೀಗ 'ರಾಮಾಯಣ' ಸಿನಿಮಾದ ಮೂಲಕ ಯಶ್ ಮತ್ತೊಂದು ದೊಡ್ಡ ದಾಖಲೆ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಯಶ್ ಅವರ ಸಿನಿಮಾ ವಿಶ್ವಾದ್ಯಂತ 23 ದಿನಗಳಲ್ಲಿ 1818.07 ಕೋಟಿ ರೂಪಾಯಿ ಗಳಿಸಿದೆ.

Ramayana Movie: ಯಶ್ ಅಭಿನಯಕ್ಕೆ ಫಿದಾ ಆದ ರಾಮ್‌ಗೋಪಾಲ್ ವರ್ಮಾ; ರಾವಣನ ಪಾತ್ರದ ಬಗ್ಗೆ ಹೇಳಿದ್ದೇನು
Ramayana Movie: ಯಶ್ ಅಭಿನಯಕ್ಕೆ ಫಿದಾ ಆದ ರಾಮ್‌ಗೋಪಾಲ್ ವರ್ಮಾ; ರಾವಣನ ಪಾತ್ರದ ಬಗ್ಗೆ ಹೇಳಿದ್ದೇನು

ಈ ಮೂರು ಸಿನಿಮಾಗಳ ಒಟ್ಟು ಗಳಿಕೆಯನ್ನು ಲೆಕ್ಕ ಹಾಕಿದರೆ ಯಶ್ ಅವರ ಪಾಲಿನ ಮೊತ್ತ 3380.15 ಕೋಟಿ ರೂಪಾಯಿ ಆಗುತ್ತದೆ.
ಯಶ್ ನಟನೆಯ ಇತ್ತೀಚಿನ 100 ಕೋಟಿ ದಾಟಿದ ಸಿನಿಮಾಗಳ ಗಳಿಕೆಯ ವಿವರ ಹೀಗಿದೆ:

ಕೆಜಿಎಫ್ ಚಾಪ್ಟರ್ 2 - 1228.59 ಕೋಟಿ ರೂ.
ಟಾಕ್ಸಿಕ್ - 333.49 ಕೋಟಿ ರೂ.
ರಾಮಾಯಣ - 1818.07 ಕೋಟಿ ರೂ.
ಒಟ್ಟು - 3380.15 ಕೋಟಿ ರೂಪಾಯಿ.


ಕೆಜಿಎಫ್‌ ದಾಖಲೆ ಹಿಮ್ಮೆಟ್ಟಿಸಿದ ರಾಮಾಯಣ ಸಿನಿಮಾ

ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಚಾರವೆಂದರೆ, yash ಅವರ ಈ ಒಟ್ಟು ಗಳಿಕೆಯಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಪಾಲು 'ರಾಮಾಯಣ' ಸಿನಿಮಾದಿಂದಲೇ ಬಂದಿದೆ. ಅಷ್ಟೇ ಅಲ್ಲ, ಈವರೆಗೆ ಯಶ್ ಅವರ ಅತಿ ಹೆಚ್ಚು ಗಳಿಕೆಯ ಸಿನಿಮಾ ಎಂಬ ಹೆಗ್ಗಳಿಕೆ ಹೊಂದಿದ್ದ ಕೆಜಿಎಫ್ 2 ದಾಖಲೆಯನ್ನೂ ರಾಮಾಯಣ ಹಿಂದಿಕ್ಕಿದೆ.

ರಣಬೀರ್ ಕಪೂರ್‌ಗಾಗಿ 3 ವರ್ಷಗಳ ಕಾಲ 35 ಬೆತ್ತದ ರಕ್ಷಾಕವಚ ನಿರ್ಮಿಸಿದ ಈ ಹಳ್ಳಿ ಕಲಾವಿದ: ರಾಮಾಯಣದ ಹಿಂದಿನ ಅಸಲಿ ಶ್ರಮ
ರಣಬೀರ್ ಕಪೂರ್‌ಗಾಗಿ 3 ವರ್ಷಗಳ ಕಾಲ 35 ಬೆತ್ತದ ರಕ್ಷಾಕವಚ ನಿರ್ಮಿಸಿದ ಈ ಹಳ್ಳಿ ಕಲಾವಿದ: ರಾಮಾಯಣದ ಹಿಂದಿನ ಅಸಲಿ ಶ್ರಮ

ರಣಬೀರ್ ಕಪೂರ್‌ಗಿಂತ ಕೇವಲ 63 ಕೋಟಿ ಹಿಂದೆ Yash!

ಇನ್ನು ಈ ಪಟ್ಟಿಯಲ್ಲಿ ಯಶ್ ಅವರ ಪೈಪೋಟಿ ಯಾರ ಜೊತೆಗಿದೆ ಎಂಬುದನ್ನು ನೋಡಿದರೆ ಮತ್ತಷ್ಟು ಕುತೂಹಲ ಮೂಡುತ್ತದೆ. ಬಾಲಿವುಡ್ ನಟ ರಣಬೀರ್ ಕಪೂರ್ ಅವರ COVID19 ನಂತರದ ಸಿನಿಮಾಗಳ ಒಟ್ಟು ಗಳಿಕೆ 3444.05 ಕೋಟಿ ರೂಪಾಯಿ. ಯಶ್ ಅವರ ಗಳಿಕೆ 3380.15 ಕೋಟಿ ರೂಪಾಯಿ. ಅಂದರೆ ಗಳಿಕೆಯಲ್ಲಿ ಇಬ್ಬರ ಸಿನಿಮಾಗಳ ನಡುವಿನ ಅಂತರ ಕೇವಲ 63.9 ಕೋಟಿ ರೂಪಾಯಿ. ರಣಬೀರ್ ಅವರಿಗಿಂತ ಕೇವಲ 63 ಕೋಟಿ ರೂಪಾಯಿ ಹಿಂದಿರುವ ಯಶ್, ಈ ಪಟ್ಟಿಯಲ್ಲಿ ನಂತರದ ಸ್ಥಾನದಲ್ಲಿದ್ದಾರೆ. ರಣಬೀರ್ ಅವರ 'ಶಂಶೇರಾ', 'ಬ್ರಹ್ಮಾಸ್ತ್ರ', 'ತು ಜೂಠಿ ಮೈನ್ ಮಕ್ಕಾರ್', 'ಅನಿಮಲ್' ಹಾಗೂ 'ರಾಮಾಯಣ' ಸಿನಿಮಾಗಳ ಒಟ್ಟು ಗಳಿಕೆ ಈ ಮೊತ್ತಕ್ಕೆ ಕಾರಣವಾಗಿದೆ. ಅದರಲ್ಲೂ 'ರಾಮಾಯಣ' ಸಿನಿಮಾ ಬರುವುದಕ್ಕೂ ಮೊದಲು ರಣಬೀರ್ ಅವರ ಒಟ್ಟು ಗಳಿಕೆ 1625.98 ಕೋಟಿ ರೂಪಾಯಿ ಮಾತ್ರ ಇತ್ತು. ಈಗ ಒಂದೇ ಸಿನಿಮಾದಿಂದ ಅವರ ಗಳಿಕೆ ದುಪ್ಪಟ್ಟಾಗಿದೆ.

ರಣವೀರ್ ಸಿಂಗ್ ದಾಖಲೆ ಮುರಿಯುತ್ತಾರಾ ರಾಕಿ ಭಾಯ್?

ಸದ್ಯ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ಬಾಲಿವುಡ್ ನಟ ರಣವೀರ್ ಸಿಂಗ್. ಅವರ ಕೋವಿಡ್ ನಂತರದ ಸಿನಿಮಾಗಳ ಒಟ್ಟು ವಿಶ್ವಾದ್ಯಂತ ಗಳಿಕೆ 3802.73 ಕೋಟಿ ರೂಪಾಯಿ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 'ಧುರಂಧರ್' ಫ್ರಾಂಚೈಸಿಯ ಎರಡು ಸಿನಿಮಾಗಳು ಅವರ ಗಳಿಕೆಗೆ ಬಹುದೊಡ್ಡ ಕೊಡುಗೆ ನೀಡಿವೆ.

ರಾಜ್ಯದಲ್ಲಿ ರಾಮಾಯಣ ಅಬ್ಬರ: ₹150 ಕೋಟಿ ಕ್ಲಬ್ ಸೇರಿದ ಮೊದಲ ಕನ್ನಡೇತರ ಚಿತ್ರ, ಯಶ್ ನಟನೆಗೆ ಧುರಂಧರ್ 2 ದಾಖಲೆ ಉಡೀಸ್!
ರಾಜ್ಯದಲ್ಲಿ ರಾಮಾಯಣ ಅಬ್ಬರ: ₹150 ಕೋಟಿ ಕ್ಲಬ್ ಸೇರಿದ ಮೊದಲ ಕನ್ನಡೇತರ ಚಿತ್ರ, ಯಶ್ ನಟನೆಗೆ ಧುರಂಧರ್ 2 ದಾಖಲೆ ಉಡೀಸ್!

ಹಾಗಾದರೆ ಈ ಮೂವರು ನಟರ ಗಳಿಕೆಯ ಲೆಕ್ಕಾಚಾರ ಹೇಗಿದೆ?

ರಣವೀರ್ ಸಿಂಗ್ - 3802.73 ಕೋಟಿ ರೂ.
ರಣಬೀರ್ ಕಪೂರ್ - 3444.05 ಕೋಟಿ ರೂ.
ಯಶ್ - 3380.15 ಕೋಟಿ ರೂ.

ರಣವೀರ್ ಸಿಂಗ್ ಅವರ ದಾಖಲೆಯನ್ನು ಹಿಂದಿಕ್ಕಲು ರಣಬೀರ್ ಕಪೂರ್‌ಗೆ ಇನ್ನೂ ಸುಮಾರು 358 ಕೋಟಿ ರೂಪಾಯಿ ಬೇಕಿದ್ದರೆ, ಯಶ್‌ಗೆ ಸುಮಾರು 422 ಕೋಟಿ ರೂಪಾಯಿ ಗಳಿಕೆ ಬೇಕಿದೆ.

ಒಟ್ಟಿನಲ್ಲಿ ಯಶ್ ಅವರ ಈ ಸಾಧನೆ ಕನ್ನಡ ಚಿತ್ರರಂಗದ ಪಾಲಿಗೂ ಹೆಮ್ಮೆಯ ಸಂಗತಿ. ಅದರಲ್ಲೂ ಒಂದೆರಡು ಸಿನಿಮಾಗಳ ಮೂಲಕವೇ ಜಾಗತಿಕ ಮಟ್ಟದಲ್ಲಿ ದೊಡ್ಡ ಮಟ್ಟದ ಬಾಕ್ಸ್ ಆಫೀಸ್ ದಾಖಲೆಗಳನ್ನು ನಿರ್ಮಿಸಿರುವ ಯಶ್, ಇದೀಗ ರಣವೀರ್ ಸಿಂಗ್ ಅವರ ದಾಖಲೆಯ ಸಮೀಪಕ್ಕೆ ಬರುವತ್ತ ಗಮನ ಸೆಳೆದಿದ್ದಾರೆ. ಮುಂದಿನ ದಿನಗಳಲ್ಲಿ ರಾಕಿಂಗ್ ಸ್ಟಾರ್ ಈ ಅಂತರವನ್ನು ಕಡಿಮೆ ಮಾಡುತ್ತಾರಾ? 4000 ಕೋಟಿ ಕ್ಲಬ್ ತಲುಪುತ್ತಾರಾ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+