Ramayana Movie: ಯಶ್ ಅಭಿನಯಕ್ಕೆ ಫಿದಾ ಆದ ರಾಮ್‌ಗೋಪಾಲ್ ವರ್ಮಾ; ರಾವಣನ ಪಾತ್ರದ ಬಗ್ಗೆ ಹೇಳಿದ್ದೇನು

ರಾಮಾಯಣ ಸಿನಿಮಾ ಹಾಗೂ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ನಿರ್ದೇಶಕ ರಾಮಗೋಪಾಲ್ ವರ್ಮಾ ಅವರು ಮೆಚ್ಚುಗೆಯ ಮಾತನಾಡಿದ್ದಾರೆ.

ರಾಮ್‌ಗೋಪಾಲ್ ವರ್ಮಾ ಅವರು, ಯಶ್ ಅವರ ಟಾಕ್ಸಿಕ್ ಸಿನಿಮಾ ಬಿಡುಗಡೆಯಾದ ಸಂದರ್ಭದಲ್ಲಿ ಧುರಂಧರ್ ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದರು. ಇದೀಗ ರಾಮಾಯಣ ಸಿನಿಮಾ ಎರಡು ಬಾರಿ ನೋಡಿದೆ. ಸಿನಿಮಾ ತುಂಬಾ ಚೆನ್ನಾಗಿದೆ ಎಂದಿದ್ದಾರೆ. ಅಲ್ಲದೆ ನಟ, ರಾಕಿಂಗ್ ಸ್ಟಾರ್ ಯಶ್ ಬಗ್ಗೆಯೂ ರಾಮಗೋಪಾಲ್ ವರ್ಮಾ ಅವರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

Ramayana Ram Gopal Varma Hails Yash s Ravana Calls His Performance Unforgettable

Ramayana: ರಾಮಾಯಣ ಸಿನಿಮಾದ ಬಗ್ಗೆ ರಾಮ್‌ಗೋಪಾಲ್‌ ವರ್ಮಾ ಹೇಳಿದ್ದೇನು ?

ರಾಮಾಯಣ ಸಿನಿಮಾದ ಬಗ್ಗೆ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ರಾಮಗೋಪಾಲ್ ವರ್ಮಾ ಅವರು, ರಾಮಾಯಣವನ್ನು ಎರಡನೇ ಬಾರಿಗೆ ವೀಕ್ಷಿಸಿದ್ದೇನೆ ಮತ್ತು ನಾನು ನಾಸ್ತಿಕನಾಗಿದ್ದೇನೆ ಮತ್ತು ಆದ್ದರಿಂದ ಈ ವಿಶ್ಲೇಷಣೆಯು ಚಲನಚಿತ್ರ ವೀಕ್ಷಕನಾಗಿ ಹೇಳುತ್ತಿದ್ದೇನೆ, ರಾಮಭಕ್ತನಾಗಿ ಅಲ್ಲ ಎಂದಿದ್ದಾರೆ. ಇತರ ವಿಮರ್ಶಕರು ಚಿತ್ರದ ಅದ್ಧೂರಿತನವನ್ನು ಮೆಚ್ಚದಿದ್ದರೂ, "ಆದರೆ ಇದರಲ್ಲಿ ಆತ್ಮವಿಲ್ಲ" ಅಥವಾ "ಸಂಗೀತ ಇನ್ನಷ್ಟು ಚೆನ್ನಾಗಿರಬಹುದಿತ್ತು" ಎಂದು ಹೇಳುತ್ತಾರೆ. ಆದರೆ ಅವರು ಗಮನಿಸದ ಸಂಗತಿಯೆಂದರೆ, ಚಿತ್ರದ ಅದ್ಧೂರಿತನದಲ್ಲೇ ಅದರ ಜೀವವಿದೆ. ಈ ಚಿತ್ರದ ಹಿಂದೆ ಕೆಲಸ ಮಾಡಿದ ಪ್ರತಿಭಾವಂತರು ಹೊಂದಿದ್ದ ಅಪಾರ ಮಹತ್ವಾಕಾಂಕ್ಷೆಯೇ ಅದರ ಭಾವನಾತ್ಮಕ ಶಕ್ತಿ ಅಂತ ಹೇಳಿದ್ದಾರೆ.

ನಿತೇಶ್ ತಿವಾರಿ ಮತ್ತು ನಮಿತ್ ಮಲ್ಹೋತ್ರಾ ಅವರು ಭಾರತೀಯ ಚಿತ್ರರಂಗದಲ್ಲಿ ಯಾರೂ ಊಹಿಸದ ಸಾಧನೆ ಮಾಡಿದ್ದಾರೆ. ಎಲ್ಲರಿಗೂ ಪರಿಚಿತವಾದ ಮಹಾಕಾವ್ಯದ ಭಕ್ತಿಭಾವವನ್ನು ಅದ್ಭುತವಾದ ದೃಶ್ಯ ವೈಭವದ ಮೂಲಕ ತೆರೆಮೇಲೆ ತಂದಿದ್ದಾರೆ. ಈ ಚಿತ್ರವನ್ನು ನೋಡಿದಾಗ, ಹಾಲಿವುಡ್‌ನ ಅತ್ಯುತ್ತಮ ಚಿತ್ರಗಳೂ ರಂಗಮಂದಿರದ ನಾಟಕಗಳಂತೆ ಭಾಸವಾದವು ಅಂತ ಹೇಳಿದ್ದಾರೆ.

ಮುಂದುವರಿದು ಆರಂಭದ ಬ್ರಹ್ಮಾಂಡದ ಯುದ್ಧದ ದೃಶ್ಯ, ರಾವಣನ ಹತ್ತು ತಲೆಗಳು ಕೇವಲ ತಂತ್ರಜ್ಞಾನದ ಕಸರತ್ತಾಗಿ ಕಾಣಿಸದೆ, ಜ್ಞಾನ ಮತ್ತು ಆಂತರಿಕ ಸಂಘರ್ಷಗಳ ಜೀವಂತ ರೂಪವಾಗಿ ಮೂಡಿಬಂದಿರುವುದು ಅದ್ಭುತವಾಗಿದೆ. ಚಿತ್ರದಲ್ಲಿನ ಕಾಡುಗಳು ಅಲ್ಲಿ ವಾಸಿಸುವ ಜೀವಿಗಳಿಗಿಂತಲೂ ಜೀವಂತವಾಗಿರುವಂತೆ ಕಾಣುತ್ತವೆ. ಎಲ್ಲರ ಉಸಿರು ಬಿಗಿಹಿಡಿಯುವ ಜಟಾಯುವಿನ ಕೊನೆಯ ಹೋರಾಟದ ದೃಶ್ಯವಂತೂ ಇವೆಲ್ಲಕ್ಕಿಂತ ಮಿಗಿಲಾಗಿದೆ. ಇವು ಕೇವಲ ದೃಶ್ಯ ಪರಿಣಾಮಗಳಲ್ಲ; ಭಾರತೀಯ ಚಿತ್ರರಂಗದ ಭವಿಷ್ಯವನ್ನು ಸಾರುವ ಅದ್ಭುತ ದೃಶ್ಯಗಳು.

Ramayana: ರಾವಣನ ಪಾತ್ರದಲ್ಲಿ ಯಶ್ ಅವರ ಅಭಿನಯ

ಯಶ್ ನಟನೆಗೆ ನಿರ್ಮಾಪಕ ರಾಮಗೋಪಾಲ್ ವರ್ಮಾ ಅವರು ಮೆಚ್ಚುಗೆಯ ಮತುಗಳನ್ನಾಡಿದ್ದಾರೆ. ನಮಿತ್ ಮಲ್ಹೋತ್ರಾ ಅವರು ಬಾಲಿವುಡ್‌ನವರಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಸೋಮಾರಿತನದಿಂದ ಹೊರಬಂದು, ದೃಢ ಸಂಕಲ್ಪವಿದ್ದರೆ ಏನೆಲ್ಲ ಸಾಧಿಸಬಹುದು ಎಂಬುದನ್ನು ತೋರಿಸಿದ್ದಾರೆ. ರಾವಣನ ಪಾತ್ರದಲ್ಲಿ ಯಶ್ ಅವರ ಅಭಿನಯ ಹಲವು ದಶಕಗಳವರೆಗೆ ನೆನಪಿನಲ್ಲಿ ಉಳಿಯಲಿದೆ. ನಾನು ಸಿನಿಮಾ ನೋಡಲು ಆರಂಭಿಸಿದಾಗಿನಿಂದ ಇಂತಹ ಪ್ರಭಾವ ಬೀರುವ ಅಭಿನಯವನ್ನು ನೋಡಿದ ನೆನಪಿಲ್ಲ ಅಂತ ಹೇಳಿದ್ದಾರೆ.

Bengaluru Metro: ಕೇಂದ್ರಕ್ಕಿಂತ ರಾಜ್ಯವೇ ಹೆಚ್ಚು ಅನುದಾನ ಕೊಡ್ತಿದೆ: ಸಂಸದ ತೇಜಸ್ವಿ ಸೂರ್ಯಗೆ ಡಿ.ಕೆ. ಶಿವಕುಮಾರ್ ಟಾಂಗ್‌
Bengaluru Metro: ಕೇಂದ್ರಕ್ಕಿಂತ ರಾಜ್ಯವೇ ಹೆಚ್ಚು ಅನುದಾನ ಕೊಡ್ತಿದೆ: ಸಂಸದ ತೇಜಸ್ವಿ ಸೂರ್ಯಗೆ ಡಿ.ಕೆ. ಶಿವಕುಮಾರ್ ಟಾಂಗ್‌

ಅವರು ಕೇವಲ ಖಳನಾಯಕನ ಪಾತ್ರ ನಿರ್ವಹಿಸಿಲ್ಲ. ತಪಸ್ಸು, ಬುದ್ಧಿವಂತಿಕೆ ಮತ್ತು ಯಾರಿಗೂ ತಲೆಬಾಗದ ಮನೋಭಾವದಿಂದ ತನ್ನ ಶಕ್ತಿಯನ್ನು ಗಳಿಸಿದ ವ್ಯಕ್ತಿಯಾಗಿ ರಾವಣನನ್ನು ಚಿತ್ರಿಸಿದ್ದಾರೆ. ರಾವಣನ ಹಿನ್ನೆಲೆ, ಆತನ ನೋವು, ಶಿವನ ಮೇಲಿನ ಭಕ್ತಿ ಮತ್ತು ಕೊನೆಗೆ ಆತನನ್ನೇ ಬಂಧಿಸುವ ಮಹತ್ವಾಕಾಂಕ್ಷೆಯನ್ನು ಶ್ರೀಧರ್ ರಾಘವನ್ ಅದ್ಭುತವಾಗಿ ಬರೆದಿದ್ದಾರೆ. ಸೀತೆಯನ್ನು ಅಪಹರಿಸುವ ನಿರ್ಧಾರ ತೆಗೆದುಕೊಳ್ಳುವ ಮುನ್ನ ರಾವಣ ತನ್ನ ಹತ್ತು ತಲೆಗಳ ಮೂಲಕ ನಡೆಸುವ ಆಂತರಿಕ ಸಂಘರ್ಷವನ್ನು ಯಶ್ ಅತ್ಯಂತ ಪರಿಣಾಮಕಾರಿಯಾಗಿ ಅಭಿನಯಿಸಿದ್ದಾರೆ.

ಯಶ್ ಅವರೇ ಚಿತ್ರದ ಆಕರ್ಷಣೆಯ ಕೇಂದ್ರ ಎಂದು ಹೇಳುವ ವಿಮರ್ಶೆಗಳು ಸರಿಯಾಗಿಯೇ ಇವೆ. ಆದರೆ ಅವರ ಅಭಿನಯದಿಂದ ರಾವಣನೇ ರಾಮನ ಕಥೆಯ ಪ್ರಮುಖ ಕೇಂದ್ರಬಿಂದುವಾಗಿ ಕಾಣಿಸುತ್ತಾನೆ ಎಂಬುದನ್ನು ಹಲವರು ಗಮನಿಸಿಲ್ಲ. ಸಂಕ್ಷಿಪ್ತವಾಗಿ ಹೇಳುವುದಾದರೆ, ರಾವಣನಿಲ್ಲದೆ ರಾಮನಿಲ್ಲ. ರಣಬೀರ್ ಕಪೂರ್ ಅವರ ರಾಮನ ಪಾತ್ರವು ಲೋಕದ ದುಷ್ಟಶಕ್ತಿಗಳಿಗೆ ಸರಿಯಾದ ಪ್ರತಿರೂಪವಾಗಿದೆ. ರಾಮನ ದೈವಿಕ ವ್ಯಕ್ತಿತ್ವದ ಹಿಂದಿನ ಉದ್ದೇಶವೂ ಇದೇ ಆಗಿದೆ.

ರಣಬೀರ್ ಕಪೂರ್ ಒಂದೇ ರೀತಿಯ ಮುಖಭಾವ ಹೊಂದಿದ್ದಾರೆ ಎಂದು ಟೀಕಿಸುವವರು ರಾಮನ ಪಾತ್ರದ ಆಳವನ್ನು ಅರ್ಥಮಾಡಿಕೊಂಡಿಲ್ಲ. ರಾಮನ ವ್ಯಕ್ತಿತ್ವ ಅವರು ಏನನ್ನು ವ್ಯಕ್ತಪಡಿಸುತ್ತಾರೆ ಎಂಬುದಕ್ಕಿಂತ, ಏನನ್ನು ತಡೆಹಿಡಿಯುತ್ತಾರೆ ಎಂಬುದರಲ್ಲಿದೆ. ವನವಾಸವನ್ನು ಶಾಂತವಾಗಿ ಒಪ್ಪಿಕೊಳ್ಳುವ ರೀತಿ, ಕಾಡಿನ ದೃಶ್ಯಗಳಲ್ಲಿ ತೋರಿಸುವ ನಿಯಂತ್ರಿತ ಆಕ್ರಮಣಶೀಲತೆ ಮತ್ತು ಅವರ ನಿಶ್ಚಲತೆಯಲ್ಲಿ ಕಾಣುವ ದೃಢ ನಿರ್ಧಾರ ಅದ್ಭುತವಾಗಿದೆ. ಇಂತಹ ಪಾತ್ರವನ್ನು ನಿರ್ವಹಿಸುವುದು ನಟನಿಗೆ ಅತ್ಯಂತ ಕಷ್ಟದ ಕೆಲಸ. ಏಕೆಂದರೆ ರಾಮ ಕಾರ್ಯಪ್ರವೃತ್ತರಾದಾಗ ಅವರ ಬಾಣಗಳು ಗುರಿ ತಲುಪುವುದಷ್ಟೇ ಅಲ್ಲ, ಅವರ ತತ್ವಗಳೂ ಎದುರಾಳಿಗಳ ಮನಸ್ಸನ್ನು ತಲುಪುತ್ತವೆ.

ಮೆಟ್ರೋ ಯೋಜನೆಗೆ ಶೇ.84 ವೆಚ್ಚ ಕರ್ನಾಟಕದ್ದೇ, ಕೇಂದ್ರದ ಪಾಲು ಶೇ.16 ಮಾತ್ರ; ಸಚಿವ ಕೃಷ್ಣಬೈರೇಗೌಡ: ತೇಜಸ್ವಿ ಸೂರ್ಯಗೆ ಮುಖಭಂಗ!
ಮೆಟ್ರೋ ಯೋಜನೆಗೆ ಶೇ.84 ವೆಚ್ಚ ಕರ್ನಾಟಕದ್ದೇ, ಕೇಂದ್ರದ ಪಾಲು ಶೇ.16 ಮಾತ್ರ; ಸಚಿವ ಕೃಷ್ಣಬೈರೇಗೌಡ: ತೇಜಸ್ವಿ ಸೂರ್ಯಗೆ ಮುಖಭಂಗ!

'ರಾಮಾಯಣ: ಭಾಗ 1' ಭಾರತೀಯ ಚಿತ್ರರಂಗದಲ್ಲಿ ಹೊಸ ಮಾನದಂಡಕ್ಕೆ ನಾಂದಿ ಹಾಡಿದೆ. ನವೆಂಬರ್ 5ರ ನಂತರ ಬಿಡುಗಡೆಯಾಗುವ ಪ್ರತಿಯೊಂದು ಚಿತ್ರವನ್ನೂ ಈ ಚಿತ್ರದೊಂದಿಗೆ ಹೋಲಿಸಲಾಗುತ್ತದೆ. ಇನ್ನು 'ರಾಮಾಯಣ: ಭಾಗ 1' ಚಿತ್ರಕ್ಕೆ ಸವಾಲಾಗಬಲ್ಲದ್ದು 'ರಾಮಾಯಣ: ಭಾಗ 2' ಮಾತ್ರ ಅಂತಲೂ ನಿರ್ದೇಶಕ ರಾಮಗೋಪಾಲ್‌ ವರ್ಮಾ ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+