ಆಶಾ ಕಾರ್ಯಕರ್ತೆಯರಿಗೆ ₹2,000 ಹೆಚ್ಚಳದ ಲಿಖಿತ ಭರವಸೆ, ಹೋರಾಟ ಹಿಂಪಡೆಯಲು ನಿರ್ಧಾರ?: ಸಿಎಂ ಕಾರ್ಯದರ್ಶಿ

ಬೆಂಗಳೂರು: ರಾಜಧಾನಿಯಲ್ಲಿ 12 ದಿನಗಳಿಂದ ಚಳಿ ಎನ್ನದೇ ಪ್ರತಿಭಟನೆಯ ನಡೆಸಿದ್ದ ಆಶಾ ಕಾರ್ಯಕರ್ತೆಯರಿಗೆ ಕೊನೆಗೂ ಗೌರವಧನ ಹೆಚ್ಚಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಆದರೆ ಸಿಎಂ ಡಿಕೆ ಶಿವಕುಮಾರ್ ಅವರ ಘೋಷಣೆ ನಡುವೆಯು ಲಿಖಿತ ಭರವಸೆಗಾಗಿ ಪ್ರತಿಭಟನೆ ಮುಂದುವರಿಸಲು ನಿರ್ಧರಿಸಿದ್ದ ಆಶಾ ಕಾರ್ಯಕರ್ತೆಯರ ಬೇಡಿಕೆ ಇಂದು ಭಾನುವಾರ ಈಡೇರಿದೆ. 2000 ರೂ. ಗೌರವಧನ ಹೆಚ್ಚಳದ ಲಿಖಿತ ಭರವಸೆ ನೀಡಿದ್ದೇವೆ. ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ಹಿಂಪಡೆಯುವುದಾಗಿ ತಿಳಿಸಿದ್ದಾರೆ ಎಂದು ಸಿಎಂ ಕಾರ್ಯದರ್ಶಿ ಎಸ್‌.ಎಸ್‌.ನಕುಲ್ ತಿಳಿಸಿದ್ದಾರೆ.

ನವೆಂಬರ್ 28 ರಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಆಶಾ ಕಾರ್ಯಕರ್ತೆಯರೊಂದಿಗೆ, ಅವರ ಪ್ರತಿನಿಧಿಗಳೊಂದಿಗೆ ಸವಿವರವಾದ ಸಭೆ ನಡೆಸಿದರು. ಸದರಿ ಸಮಸ್ಯೆಗಳು, ಬೇಡಿಕೆಗಳನ್ನು ಚರ್ಚಿಸಿ ಜನವರಿ 1ರಿಂದ ಪ್ರತಿತಿಂಗಳು 2000 ರೂ. ಗೌರವಧನ ಹೆಚ್ಚಿಸುವುದಾಗಿ ತಿಳಿಸಿದರು. ಇದಕ್ಕೇನು ಮುಖಂಡರು ಒಪ್ಪಿದರೂ ಆದರೆ ಲಿಖಿತ ಭರವಸೆ ನೀಡುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಕಾರ್ಯಕರ್ತೆಯರು ಬಿಗಿಪಟ್ಟು ಹಿಡಿದರು. ಹೀಗಾಗಿ ಪ್ರತಿಭಟನೆ 13ನೇ ದಿನಕ್ಕೆ (ಇಂದು ಭಾನುವಾರ) ಕಾಲಿಟ್ಟಿತು.

ASHA Workers End 13-Day Bengaluru Protest After Rs 2 000 Honorarium Hike Written Assurance SS Nakul

ಇಂದು ಸಿಎಂ ಕಾರ್ಯದರ್ಶಿಯಿಂದ ಲಿಖಿತ ಭರವಸೆ

ಇಂದು ಭಾನುವಾರ ಬೆಳಗ್ಗೆ ಮುಖ್ಯಮಂತ್ರಿಗಳ ಕಾರ್ಯದರ್ಶಿ ಎಸ್.ಎಸ್.ನಕುಲ್ ಅವರು ಲಿಖಿತ ಪತ್ರದಲ್ಲಿ ಮಹತ್ವದ ಮಾಹಿತಿ ತಿಳಿಸಿದ್ದಾರೆ. 'ಸಿಎಂ ಸಭೆಯಲ್ಲಿ ಆಶಾ ಕಾರ್ಯಕರ್ತೆಯರ ಮಾಸಿಕ ಗೌರವಧನ ಹೆಚ್ಚಿಸಲು ನಿರ್ಧರಿಸಲಾಯಿತು. ಈ ಹೆಚ್ಚಳವು 01.01.2027 ರಿಂದ ಜಾರಿಯಾಗಲಿದೆ ಎಂದು ತಿಳಿಸಿದ್ದಾರೆ.

'ಆಶಾ' ಕಾರ್ಯಕರ್ತೆಯರು ಇಲ್ಲದಿದ್ರೂ ಕೆಲಸ ನಡೆಯುತ್ತೆ ಎಂದ ಯುಟಿ ಖಾದರ್! ಲಾಜಿಕ್ ತಿಳಿಸಿದ ಆರ್.ಅಶೋಕ್ ಕಿಡಿ
'ಆಶಾ' ಕಾರ್ಯಕರ್ತೆಯರು ಇಲ್ಲದಿದ್ರೂ ಕೆಲಸ ನಡೆಯುತ್ತೆ ಎಂದ ಯುಟಿ ಖಾದರ್! ಲಾಜಿಕ್ ತಿಳಿಸಿದ ಆರ್.ಅಶೋಕ್ ಕಿಡಿ

ಸಭೆಯಲ್ಲಿ ಮುಖ್ಯಮಂತ್ರಿಗಳು ಆಶಾ ಕಾರ್ಯಕರ್ತೆಯರ ಮನವಿಗಳನ್ನು ಸಕಾರಾತ್ಮಕವಾಗಿ ಪರಿಗಣಿಸಿದ್ದಾರೆ. ಆಶಾ ಕಾರ್ಯಕರ್ತೆಯರ ಪ್ರತಿನಿಧಿಗಳು 7 ಮುಖ್ಯಮಂತ್ರಿಗಳಿಗೆ ಧನ್ಯವಾದಗಳನ್ನು ಅರ್ಪಿಸಿ, ತಮ್ಮ ಪ್ರತಿಭಟನೆಯನ್ನು 7 ಹಿಂಪಡೆಯಲು ಒಪ್ಪಿಕೊಂಡರು ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಆದರೆ ಈ ಕುರಿತು ಆಶಾ ಕಾರ್ಯಕರ್ತೆಯರ ಸಂಘಟನೆಗಳು, ಮುಖಂಡರಿಂದ ಈವರೆಗೂ ಅಧಿಕೃತ ಮಾಹಿತಿ ಬಂದಿಲ್ಲ..

ಇತ್ತ ಜನವರಿಯಿಂದ ನೀಡಿದ ಭರವಸೆಯಂತೆ ಆಶಾ ಕಾರ್ಯಕರ್ತೆಯರ ಮಾಸಿಕ ಗೌರವಧನವನ್ನು ₹2,000/- ರಂತೆ ಹೆಚ್ಚಿಸಲು ಅಗತ್ಯ ಪ್ರಕ್ರಿಯೆಗಳಿಗೆ ಆದ್ಯತೆಯ ಮೇರೆಗೆ ಪ್ರಾರಂಭಿಸುವಂತೆ ನಿರ್ದೇಶಿಸಲಾಗಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಸಿಎಂ ಮಾತಿಗೆ ಬಗ್ಗದ 'ಆಶಾ': ಹೈಡ್ರಾಮಾ!

ಆಶಾ ಕಾರ್ಯಕರ್ತೆಯರೊಂದಿಗಿನ ಶನಿವಾರದ ಸಿಎಂ ಡಿಕೆ ಶಿವಕುಮಾರ್ ಹಾಗೂ ಆರೋಗ್ಯ ಸಚಿವ ಯು.ಟಿ.ಖಾದರ್ ಅವರ ಸಭೆಯ ಬಳಿಕವು ಹೈಡ್ರಾಮಾ ನಡೆಯಿತು. 'ಆಶಾ' ಮುಖಂಡರು ಸಿಎಂ ಜತೆ ಸಭೆಯಲ್ಲಿ ಗೌರವ ಧನ 2000 ರೂ. ಹೆಚ್ಚಳಕ್ಕೆ ಒಪ್ಪಿ ಪ್ರತಿಭಟನೆ ಹಿಂಪಡೆಯುವುದಾಗಿ ತಿಳಿಸಿದರು. ಅದನ್ನು ಬಂದು ಪ್ರತಿಭಟನಾ ನಿರತ ಕಾರ್ಯಕರ್ತೆಯರ ಬಳಿ ಹೇಳುತ್ತಿದ್ದಂತೆ ಅವರು ಇದಕ್ಕೆ ಒಪ್ಪಲಿಲ್ಲ. ಸರ್ಕಾರದಿಂದ ಮೌಖಿಕ ಭರವಸೆ ಕೇಳುತ್ತ ಬಂದಿದ್ದರಿಂದಲೇ ಈವರೆಗೆ ನಮ್ಮ ಬೇಡಿಕೆ ಈಡೇರಿಲ್ಲ. ಲಿಖತ ಭರವಸೆ ನೀಡುವವರೆಗೂ ನಾವು ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದರು.

ಸಭೆಯಲ್ಲಿ ತಮಗೆ ಮಾಸಿಕ 15,000 ಗೌರವಧ ನೀಡುವುದು ಸೇರಿದಂತೆ ಕೆಲವು ಬೇಡಿಕೆಗಳಿಗೆ ಚರ್ಚಿಸಿದರು. ಬಳಿಕ 2000 ರೂ. ಹೆಚ್ಚಳಕ್ಕೆ ಸರ್ಕಾರ ಒಪ್ಪಿತು. ಆದರೆ ಲಿಖಿತ ಭರವಸೆ ವಿಚಾರ ಮುಂದಿಟ್ಟುಕೊಂಡು ಚಳಿ, ಅನಾರೋಗ್ಯ ನಡುವೆಯು ಇಂದು ಭಾನುವಾರ 13ನೇ ದಿನ ಪ್ರತಿಭಟನೆ ಆರಂಭಿಸಿದರು.

ಈ ನಡುವೆ ಇಂದು ಬೆಳಗ್ಗೆಯೇ ಸಿಎಂ ಡಿಕೆ ಶಿವಕುಮಾರ್ ಅವರ ಕಾರ್ಯದರ್ಶಿಗಳಿಂದ ಲಿಖಿತ ಪತ್ರ ರವಾನೆಯಾಗಿದೆ. ಪತ್ರದಲ್ಲಿ ಎಸ್ಎಸ್ ನಕುಲ್ ಅವರು ಆಶಾ ಕಾರ್ಯಕರ್ತೆಯರು ಸರ್ಕಾರದ ಘೋಷಣೆ ಒಪ್ಪಿ ಪ್ರತಿಭಟನೆ ಹಿಂಪಡೆದಿದ್ದಾರೆ ಎಂದಿದ್ದಾರೆ. ಆದರೆ ಆಶಾ ಕಾರ್ಯಕರ್ತೆಯರಿಂದ ಪ್ರತಿಭಟನೆ ಹಿಂಪಡೆದ ಅಧಿಕೃತ ಹೇಳಿಕೆ ಇನ್ನಷ್ಟೇ ತಿಳಿಯಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+