ಯುವಜನರ ಕನಸಿಗೆ ಡ್ರಗ್ಸ್ ದೊಡ್ಡ ಕಂಟಕ: ಮನ್ ಕಿ ಬಾತ್‌ನಲ್ಲಿ ಮಾದಕ ವ್ಯಸನ ಗೆದ್ದ ದೆಹಲಿ ಯುವಕನ ಕಥೆ ಹಂಚಿಕೊಂಡ ಮೋದಿ

ನವದೆಹಲಿ: ದೇಶದ ಯುವಜನತೆಯ ಭವಿಷ್ಯ ಮತ್ತು ಕನಸುಗಳಿಗೆ ಮಾದಕವಸ್ತು ಹಾಗೂ ವ್ಯಸನವು ಅತಿ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ. ಭಾನುವಾರ (ನವೆಂಬರ್ 29, 2026) ಪ್ರಸಾರವಾದ ಪ್ರಧಾನಿ ಮೋದಿ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದ 140ನೇ ಸಂಚಿಕೆಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಕುಟುಂಬ ಹಾಗೂ ದೇಶದ ಹಿತದೃಷ್ಟಿಯಿಂದ ಯುವಕರು ಮಾದಕವಸ್ತುಗಳಿಂದ ದೂರವಿರುವುದು ತುಂಬ ಮುಖ್ಯ ಎಂದು ಕರೆ ನೀಡಿದರು.

ನಶಾ ಮುಕ್ತ ಯುವ ಅಭಿಯಾನಕ್ಕೆ ಪ್ರಧಾನಿ ಶ್ಲಾಘನೆ

ತಮ್ಮ ಭಾಷಣದ ಆರಂಭದಲ್ಲೇ ಮಾದಕವಸ್ತುಗಳ ದುಷ್ಪರಿಣಾಮದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ ಮೋದಿ, "ಇಂದು ಇಡೀ ವಿಶ್ವವೇ ಭಾರತದ ಯುವಜನರ ಪ್ರತಿಭೆಯನ್ನ ಕೊಂಡಾಡುತ್ತಿದೆ. ನಮ್ಮ ಯುವಜನತೆ ದೊಡ್ಡ ಕನಸುಗಳನ್ನ ಕಾಣುತ್ತಿದ್ದು, ಅವುಗಳನ್ನ ನನಸಾಗಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ, ಡ್ರಗ್ಸ್ ಮತ್ತು ಮಾದಕ ವ್ಯಸನವು ಅವರ ಈ ಮಹತ್ವಾಕಾಂಕ್ಷೆಗಳಿಗೆ ದೊಡ್ಡ ಅಡ್ಡಿಯಾಗಿದೆ" ಎಂದು ಹೇಳಿದರು.

PM Modi In 140th Mann Ki Baat Drugs Are A Major Challenge To Youth Aspirations Praises Nasha Mukta Abhiyan

ಇದೇ ವೇಳೆ, ಡ್ರಗ್ಸ್ ವಿರುದ್ಧ ಸಮಾಜದಲ್ಲಿ ಹೆಚ್ಚುತ್ತಿರುವ ಜಾಗೃತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, "ದೇಶಾದ್ಯಂತ ನಶಾ ಮುಕ್ತ ಯುವ ಅಭಿಯಾನ ಭರದಿಂದ ಸಾಗುತ್ತಿದೆ. ಕೇವಲ ತಮ್ಮ ಇಚ್ಛಾಶಕ್ತಿಯಿಂದಲೇ ಮಾದಕ ವ್ಯಸನದ ವಿರುದ್ಧ ಕಠಿಣ ಹೋರಾಟ ನಡೆಸಿ, ಅದರಿಂದ ಹೊರಬಂದು ಬದುಕಿಗೆ ಹೊಸ ದಿಕ್ಕು ನೀಡಿದ ಅನೇಕ ಯುವಕರ ಪ್ರೇರಣಾದಾಯಕ ಉದಾಹರಣೆಗಳು ನಮ್ಮ ಮುಂದಿವೆ" ಎಂದು ಹರ್ಷ ವ್ಯಕ್ತಪಡಿಸಿದರು.

ಮನ್ ಕೀ ಬಾತ್‌ನಲ್ಲಿ ಬೆಂಗಳೂರಿನ ನಿಂಗಮ್ಮಗೆ ಪ್ರಧಾನಿ ಮೋದಿ ಶಹಬ್ಬಾಸ್: ಯಾರಿವರು?
ಮನ್ ಕೀ ಬಾತ್‌ನಲ್ಲಿ ಬೆಂಗಳೂರಿನ ನಿಂಗಮ್ಮಗೆ ಪ್ರಧಾನಿ ಮೋದಿ ಶಹಬ್ಬಾಸ್: ಯಾರಿವರು?

ವ್ಯಸನ ಗೆದ್ದ ದೆಹಲಿ ಯುವಕನೊಂದಿಗೆ ಪ್ರಧಾನಿ ಸಂವಾದ

ಕಾರ್ಯಕ್ರಮದಲ್ಲಿ ಡ್ರಗ್ಸ್ ವ್ಯಸನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ, ಮಾದಕ ವ್ಯಸನದಿಂದ ಸಂಪೂರ್ಣವಾಗಿ ಹೊರಬಂದ ದೆಹಲಿಯ ಯುವಕನೊಬ್ಬನೊಂದಿಗಿನ ಸಂವಾದವನ್ನ ಪ್ರಧಾನಿ ಹಂಚಿಕೊಂಡರು. ದೆಹಲಿಯ ಸದರ್ ಬಜಾರ್ ಪ್ರದೇಶದಲ್ಲಿ ಶಾಲೆಗೆ ಹೋಗುತ್ತಿದ್ದ ದಿನಗಳಲ್ಲೇ ತಾನು ಹೇಗೆ ಡ್ರಗ್ಸ್ ಚಟಕ್ಕೆ ಬಿದ್ದೆ ಎಂಬುದನ್ನ ಅವರು ವಿವರಿಸಿದರು.

"ಬಾಲ್ಯದಲ್ಲೇ ತಂದೆಯನ್ನ ಕಳೆದುಕೊಂಡ ಬಳಿಕ ಅಜ್ಜ-ಅಜ್ಜಿಯ ಮನೆಯಲ್ಲಿ ಬೆಳೆದೆ. ಪುಸ್ತಕ, ಶಾಲಾ ಶುಲ್ಕ ಹಾಗೂ ಪಿಕ್ನಿಕ್ ನೆಪದಲ್ಲಿ ಮನೆಯಿಂದ ಹಣ ಪಡೆದು ಅದನ್ನ ಡ್ರಗ್ಸ್‌ಗೆ ಖರ್ಚು ಮಾಡುತ್ತಿದ್ದೆ. ಕ್ರಮೇಣ ತಾಯಿ ಮತ್ತು ಅಜ್ಜಿಯನ್ನೂ ಕಳೆದುಕೊಂಡಾಗ ನನ್ನನ್ನ ನೋಡಿಕೊಳ್ಳುವವರೇ ಇಲ್ಲದಂತಾಯಿತು. ತಿನ್ನಲು ಅನ್ನವಿಲ್ಲದೆ ರಸ್ತೆಗಳಲ್ಲಿ ದಿನ ಕಳೆದೆ. ಭಂಡಾರ ಮತ್ತು ಲಂಗರ್‌ಗಳಲ್ಲಿ ಸಿಗುತ್ತಿದ್ದ ಊಟದಿಂದ ಬದುಕಿದೆ. ಸಾವು ನನ್ನನ್ನ ತನ್ನತ್ತ ಎಳೆದುಕೊಳ್ಳುತ್ತಿರುವಂತೆ ಭಾಸವಾಗುತ್ತಿತ್ತು" ಎಂದು ಆ ಯುವಕ ತನ್ನ ಕರಾಳ ಅನುಭವವನ್ನ ಹಂಚಿಕೊಂಡ.

ಬಳಿಕ ಪುನರ್ವಸತಿ ಕೇಂದ್ರಕ್ಕೆ (Rehabilitation centre) ಸೇರಿ, ಒಮ್ಮೆ ಮತ್ತೆ ಚಟಕ್ಕೆ ಬಿದ್ದರೂ, ಕೊನೆಗೆ ದೃಢ ಸಂಕಲ್ಪದಿಂದ ವ್ಯಸನವನ್ನ ಗೆದ್ದು ಹೊಸ ಬದುಕು ಕಟ್ಟಿಕೊಂಡಿರುವುದಾಗಿ ತಿಳಿಸಿದ.

ನರೇಂದ್ರ ಮೋದಿ ಆಡಳಿತದಲ್ಲಿ ಬೆಲೆ ಏರಿಕೆಯ ಪರ್ವ ಎಂದ ಖರ್ಗೆ; ಸ್ವಲ್ಪ ಕರ್ನಾಟಕವನ್ನೂ ನೋಡಿ ನೆಟ್ಟಿಗರ ರಿಯಾಕ್ಷನ್!
ನರೇಂದ್ರ ಮೋದಿ ಆಡಳಿತದಲ್ಲಿ ಬೆಲೆ ಏರಿಕೆಯ ಪರ್ವ ಎಂದ ಖರ್ಗೆ; ಸ್ವಲ್ಪ ಕರ್ನಾಟಕವನ್ನೂ ನೋಡಿ ನೆಟ್ಟಿಗರ ರಿಯಾಕ್ಷನ್!

ಯುವಕರಿಗೆ ಮೋದಿ ಕಿವಿಮಾತು

ಈ ಯುವಕನ ಧೈರ್ಯವನ್ನ ಕೊಂಡಾಡಿದ ಪ್ರಧಾನಿ ಮೋದಿ, "ನೀವು ಡ್ರಗ್ಸ್ ವಿರುದ್ಧ ಗೆಲುವು ಸಾಧಿಸಿರುವುದಕ್ಕೆ ಅಭಿನಂದನೆಗಳು. ಎಂದಿಗೂ ಮತ್ತೆ ಆ ಹಾದಿಗೆ ಮರಳುವುದಿಲ್ಲ ಎಂದು ಸಂಕಲ್ಪ ಮಾಡಿ ಹಾಗೂ ನಿಮಗೆ ಸಿಗುವ ಪ್ರತಿಯೊಬ್ಬರಿಗೂ ಅದು ತಪ್ಪು ದಾರಿ ಎಂದು ತಿಳಿಹೇಳಿ" ಎಂದರು.

"ಬಲವಾದ ಇಚ್ಛಾಶಕ್ತಿ ಇದ್ದರೆ ಯಾವುದೇ ಗುರಿ ಅಸಾಧ್ಯವಲ್ಲ ಎಂಬುದನ್ನ ನೀವು ತೋರಿಸಿಕೊಟ್ಟಿದ್ದೀರಿ. ನಿಮ್ಮ ಈ ಮಾತುಗಳು ದೇಶದ ಅನೇಕ ಯುವಕರಿಗೆ ಹೊಸ ಶಕ್ತಿ ನೀಡಲಿವೆ" ಎಂದು ಪ್ರಧಾನಿ ಮೋದಿ ಯುವಜನತೆಗೆ ಕಿವಿಮಾತು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+