ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

15 ವರ್ಷದಷ್ಟು ಹಳೆಯ 80 ಲಕ್ಷ ವಾಹನಗಳು ಗುಜರಿಗೆ?: ರಾಜ್ಯದಲ್ಲಿ 'ಗುಜರಿ ನೀತಿ' ಜಾರಿಗೆ?

|
Google Oneindia Kannada News

ಬೆಂಗಳೂರು ಸೆಪ್ಟಂಬರ್ 21: ಹೆಚ್ಚುತ್ತಿರುವ ಪರಿಸರ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ 15 ವರ್ಷಕ್ಕಿಂತಲೂ ಹಳೆಯದಾದ 80 ಲಕ್ಷ ಹಳೆಯ ವಾಹನಗಳನ್ನು ಸಂಚಾರಕ್ಕೆ ಅನರ್ಹಗೊಳಿಸಲು ಮುಂದಾಗಿದೆ. ಈ ಸಂಬಂಧ 'ವಾಹನ ಗುಜರಿ ನೀತಿ- 2021' ಅಳವಡಿಸಿಕೊಳ್ಳಲು ಮುಂದಾಗಿದೆ.

ಇದು ಜಾರಿಯಾದರೆ ವಾಹನಗಳ ಮಾಲೀಕರು ವಾಹನಗಳನ್ನು ಗುಜರಿಗೆ ನೀಡಿ ಪ್ರಮಾಣ ಪತ್ರ ಪಡೆಯಬೇಕು. ಅದನ್ನು ಹೊಸ ವಾಹನಗಳಿಗೆ ಖರೀದಿ ವೇಳೆ ಸಲ್ಲಿಸಿದರೆ ಮೋಟಾರು ವಾಹನ ತೆರಿಗೆಯಲ್ಲಿ ರಿಯಾಯಿತಿ ಪಡೆಯಬಹುದಾಗಿದೆ.

ರಾಜ್ಯದಲ್ಲಿ ನೋಂದಾಯಿತ 2.8 ಕೋಟಿ ವಾಹನಗಳಲ್ಲಿ 15 ವರ್ಷಕ್ಕಿಂತಲೂ ಹೆಚ್ಚು ಹಳೆಯದಾದ 80 ಲಕ್ಷಕ್ಕೂ ಅಧಿಕ ವಾಹನಗಳು ಇವೆ ಎಂದು ಅಂದಾಜಿಸಲಾಗಿದೆ. ಸಾರಿಗೆ ಇಲಾಖೆಯ ಪ್ರಕಾರ, ರಾಜಧಾನಿ ಬೆಂಗಳೂರಿನಲ್ಲೇ ಒಂದು ಕೋಟಿ ವಾಹನಗಳಿವೆ. ಈ ವರ್ಷದ ಮಾರ್ಚ್ ಮಾಸಾಂತ್ಯಕ್ಕೆ 29 ಲಕ್ಷ ವಾಹನಗಳು 15 ವರ್ಷಗಳ ಮಿತಿಯನ್ನು ದಾಟಿರುವುದು ಪತ್ತೆ ಆಗಿದೆ. ಹೆಚ್ಚಿನ ಮಾಲಿನ್ಯಕಾರಕವಾಗಿರುವ ಎರಡು ಸ್ಟ್ರೋಕ್ ಆಟೋರಿಕ್ಷಾಗಳು ಬೆಂಗಳೂರಲ್ಲಿ ಸಂಚಾರ ಸೇವೆ ನೀಡುತ್ತಿವೆ ಎಂದು ಇಲಾಖೆ ತಿಳಿಸಿದೆ.

ಕೇಂದ್ರ ಗುಜರಿ ನೀತಿಯು ಹಳೆಯದಾದ ಹಾಗೂ ಸಂಚಾರಕ್ಕೆ ಯೋಗ್ಯವಲ್ಲದ ವಾಹನಗಳನ್ನು ಹಂತ ಹಂತವಾಗಿ ಅನರ್ಹಗೊಳಿಸಲು ಮತ್ತು ಹಳೆಯ ವಾಹನಗಳನ್ನು ಪರಿಸರ ಸ್ನೇಹಿ ರೀತಿಯಲ್ಲಿ ಮರುಬಳಕೆ ಮಾಡಲು ಉತ್ತೇಜಿಸುತ್ತದೆ. ಹೀಗಾಗಿ ಈ ನೀತಿಯನ್ನು ರಾಜ್ಯ ಸಾರಿಗೆ ಇಲಾಖೆಯು ಸಚಿವ ಸಂಪುಟದ ಮುಂದೆ ಅನುಮೋದನೆಗಾಗಿ ಪ್ರಸ್ತಾಪಿಸಲು ನಿರ್ಧರಿಸಿದೆ. ಈಗಾಗಲೇ ದೇಶದ ಗುಜರಾತ್, ಬಿಹಾರ ಮತ್ತು ಅಸ್ಸಾಂಗಳಲ್ಲಿ ಈ ನೀತಿ ಜಾರಿಯಾಗಿದೆ.

15 ವರ್ಷಕ್ಕಿಂತ ಹಳೆಯ ಖಾಸಗಿ ವಾಹನ ರದ್ದು

15 ವರ್ಷಕ್ಕಿಂತ ಹಳೆಯ ಖಾಸಗಿ ವಾಹನ ರದ್ದು

"ಕೇಂದ್ರ ಇದೇ ನೀತಿಯಡಿ 20 ವರ್ಷಕ್ಕಿಂತ ಹಳೆಯದಾದ ಖಾಸಗಿ ವಾಹನಗಳು ಹಾಗೂ 15 ವರ್ಷಕ್ಕಿಂತ ಹಳೆಯದಾದ ವಾಣಿಜ್ಯ ಬಳಕೆಯ ವಾಹನಗಳ ನೋಂದಣಿ ರದ್ದುಪಡಿಸಬೇಕೆಂದು ಸೂಚಿಸುತ್ತದೆ. ಅದೇ ರೀತಿ ಕರ್ನಾಟಕದ ಗುಜರಿ ನೀತಿಯು 15 ವರ್ಷಕ್ಕಿಂತ ಮೇಲ್ಪಟ್ಟ ಖಾಸಗಿ ವಾಹನಕ್ಕೆ ಸಂಬಂಧಿಸಿದೆ. ನಿಯಮಗಳ ಅನ್ವಯ, ನೀತಿ ಜಾರಿ ಆಯಾ ರಾಜ್ಯಗಳಿಗೆ ಸಂಬಂಧಿಸಿದೆ. ವಾಣಿಜ್ಯ ವಾಹನಗಳು ಇದೇ ವ್ಯಾಪ್ತಿಗೆ ಬರುತ್ತವೆ," ಎಂದು ಸಾರಿಗೆ ಆಯುಕ್ತ ಟಿಎಚ್‌ಎಂ ಕುಮಾರ್ ಮಾಹಿತಿ ನೀಡಿದ್ದಾರೆ.

ನೀತಿ ಅಳವಡಿಕೆ ಬಗ್ಗೆ ಸಂಪುಟ ಸಭೆ ನಿರ್ಧರಿಸಲಿದೆ

ನೀತಿ ಅಳವಡಿಕೆ ಬಗ್ಗೆ ಸಂಪುಟ ಸಭೆ ನಿರ್ಧರಿಸಲಿದೆ

ರಾಜ್ಯದಲ್ಲಿ ಈ ನೀತಿ ಅಳವಡಿಕೆ ಕುರಿತು ಸಚಿವ ಸಂಪುಟ ಮುಂದೆ ತರಲಾಗುವುದು. ಅಳವಡಿಕೆಯಾದರೆ ಹಳೆಯ ವಾಹನ ತೆಗೆದು ಹಾಕಿ ನಂತರ ಹೊಸ ವಾಹನಗಳನ್ನು ಖರೀದಿಸುವ ವಾಹನ ಮಾಲೀಕರಿಗೆ ಮೋಟಾರು ವಾಹನ ತೆರಿಗೆ ಸೇರಿದಂತೆ ಹಲವು ಮಾಹಿತಿಯು ಬಹಿರಂಗಗೊಳ್ಳಲಿದೆ. ಇದಕ್ಕು ಮೊದಲೇ ಸ್ವಯಂ ಪ್ರೇರಣೆಯಿಂದ ತಮ್ಮ ವಾಹನಗಳನ್ನು ಗುಜರಿಗೆ ನೀಡುವ ಮಾಲೀಕರು ಅದರ ಪ್ರಮಾಣ ಪತ್ರ ಸಲ್ಲಿಸಿದ ನಂತರ ಹೊಸ ವಾಹನಗಳಿಗೆ ಮೋಟಾರು ವಾಹನ ತೆರಿಗೆಯಲ್ಲಿ ರಿಯಾಯಿತಿ ಪಡೆಯುತ್ತಾರೆ.

ಸರ್ಕಾರದ ಈ ಕ್ರಮದಿಂದಾಗಿ ಅಯೋಗ್ಯ ಮತ್ತು ಮಾಲಿನ್ಯಕಾರಕ ವಾಹನಗಳ ಸಂಚಾರ ನಿರ್ಬಂಧಿಸಲು ಹಾಗೂ ವಾಹನಗಳಿಂದ ಉಂಟಾಗುವ ಮಾಲಿನ್ಯವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ರಾಜ್ಯಾದ್ಯಂತ ವಾಹನ-ಸ್ಕ್ರಾಪಿಂಗ್ ಸೌಲಭ್ಯ ಕೇಂದ್ರಗಳನ್ನು ಸ್ಥಾಪಿಸಲು ಇಲಾಖೆಯು ಭೂಮಿಯನ್ನು ಗುರುತಿಸಲಿದೆ.

8ವರ್ಷ ಪೂರೈಸಿದ ವಾಹನದ ಫಟ್ನೆಸ್ ಆಗಬೇಕು

8ವರ್ಷ ಪೂರೈಸಿದ ವಾಹನದ ಫಟ್ನೆಸ್ ಆಗಬೇಕು

ನಿಯಮಗಳ ಪ್ರಕಾರ ವಾಹನ ನೋಂದಣಿ ಪ್ರಮಾಣಪತ್ರ ವಾಣಿಜ್ಯ ವಾಹನಕ್ಕೆ 10 ವರ್ಷದವರೆಗೆ ಹಾಗೂ ಖಾಸಗಿ ವಾಹನಕ್ಕೆ 15 ವರ್ಷದವರೆಗೆ ಚಾಲ್ತಿಯಲ್ಲಿರುವತ್ತದೆ. ಈ ಅವಧಿ ಮುಗಿದ ನಂತರ, ವಾಹನಗಳು ಫಿಟ್ನೆಸ್ ಪರೀಕ್ಷೆಗೆ ಒಳಗಾಗಬೇಕು. ಎಂಟು ವರ್ಷ ಪೂರೈಸಿದ ಬಳಿಕ ವಾಹನಗಳು ಪ್ರತಿ ವರ್ಷ ಫಿಟ್ನೆಸ್ ಪರಿಶೀಲನೆಗೆ ಒಳಗೊಳ್ಳಬೇಕು. ಮೊದಲ ಎಂಟು ವರ್ಷಗಳಲ್ಲಿ, ವಾಹನವು ಪ್ರತಿ ಎರಡು ವರ್ಷಗಳಿಗೊಮ್ಮೆ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾಗಬೇಕಿದೆ.

20 ವರ್ಷಕ್ಕಿಂತ ಹಳೆಯದಾದ ಖಾಸಗಿ ವಾಹನಗಳು ಫಿಟ್‌ನೆಸ್ ಪರೀಕ್ಷೆಯಲ್ಲಿ ವಿಫಲವಾದರೆ ಅಥವಾ ಆ ವಾಹನಗಳ ನೋಂದಣಿ ಪ್ರಮಾಣಪತ್ರ ನವೀಕರಿಸದಿದ್ದರೆ 2024 ಜೂನ್ 1ರಿಂದ ಅಂತಹ ವಾಹನಗಳ ನೋಂದಣಿ ರದ್ದು ಮಾಡಲಾಗುವುದು. ಅದೇ ರೀತಿ 15 ವರ್ಷಕ್ಕಿಂತ ಹಳೆಯ ವಾಣಿಜ್ಯ ವಾಹನಗಳನ್ನು 2023 ಏಪ್ರಿಲ್ 1ರಿಂದ ನೋಂದಣಿ ಅಮಾನ್ಯಗೊಳಿಸಲಾಗುತ್ತದೆ.

ಗುಜರಿ ನೀತಿಯಿಂದ ಉದ್ಯೋಗ ಸೃಷ್ಟಿ

ಗುಜರಿ ನೀತಿಯಿಂದ ಉದ್ಯೋಗ ಸೃಷ್ಟಿ

ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ವಾಹನಗಳ ಸ್ಕ್ರ್ಯಾಪಿಂಗ್ ಕೇಂದ್ರ ಸ್ಥಾಪಿಸಲಾಗುವುದು. ಗುಜರಿ ನೀತಿಯು ಆಟೋಮೊಬೈಲ್ ಉದ್ಯಮದಲ್ಲಿ ಉದ್ಯೋಗ ಸಹ ಸೃಷ್ಟಿಸುತ್ತದೆ. ಅಲ್ಲದೇ ವಾಹನಗಳ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಹಳೆಯ ವಾಹನಗಳಿಗೆ ರಸ್ತೆ ತೆರಿಗೆಯ ಶೇ. 10ರಿಂದ 15 ಹಸಿರು ಸೆಸ್ ವಿಧಿಸಲು ಅವಕಾಶ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

English summary
Karnataka State Government decided to implement 'Scrapage Policy' for scrapping 80 lakh old vehicles of 2.8crore registered vehicals in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X