ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಮಾ.22ರಿಂದ ಗೋಲ್ಡನ್ ಚಾರಿಯೆಟ್ ರೈಲು ಸೇವೆ ಶುರು

|
Google Oneindia Kannada News

ಬೆಂಗಳೂರು, ಫೆಬ್ರವರಿ 29: ಮಾರ್ಚ್‌ 22ರಿಂದ ರಾಜ್ಯದಲ್ಲಿ ಮತ್ತೊಮ್ಮೆ ಗೋಲ್ಡನ್ ಚಾರಿಯೆಟ್ ರೈಲಿನ ಸಂಚಾರ ಆರಂಭಗೊಳ್ಳಲಿದೆ.

ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವ ಐಷಾರಾಮಿ ಗೋಲ್ಡನ್ ಚಾರಿಯೆಟ್ ರೈಲು ಸೇವೆಯನ್ನು ಹಲವು ವರ್ಷಗಳ ವಿರಾಮದ ಬಳಿಕ ಐಆರ್‌ಸಿಟಿಸಿ ಪುನಃ ಆರಂಭಿಸಲು ಮುಂದಾಗಿದೆ.

ಮಲೆನಾಡ ಮಡಿಲಲ್ಲಿ ಮಕ್ಕಳ ಸೆಳೆಯುತ್ತಿದೆ ಈ ಮಲೆನಾಡ ಮಡಿಲಲ್ಲಿ ಮಕ್ಕಳ ಸೆಳೆಯುತ್ತಿದೆ ಈ "ರೈಲು ಶಾಲೆ"

2008ರಲ್ಲಿ ಗೋಲ್ಡನ್ ಚಾರಿಯೆಟ್ ರೈಲು ಸೇವೆಯನ್ನು ಪ್ರಾರಂಭಿಸಿದ್ದ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರವು ಇತ್ತೀಚೆಗೆ ಮಾಡಿಕೊಳ್ಳಲಾದ ಒಪ್ಪಂದದ ಹಿನ್ನೆಲೆಯಲ್ಲಿ ಐಆರ್‌ಸಿಟಿಸಿ ಗೋಲ್ಡನ್ ಚಾರಿಯೆಟ್ ರೈಲಿನ ಸೇವೆಯನ್ನು ಪುನರಾರಂಭಿಸುತ್ತಿದೆ.

IRCTCs Golden Chariot To Run From 22 March

ಮಾ.22 , ಮಾ.29 ಮತ್ತು ಏ.12ರಂದು ಪ್ರೈಡ್ ಆಫ್ ಕರ್ನಾಟಕ ಎಂಬ ಹೆಸರಿಲ್ಲಿ ಮೂರು ಪ್ರವಾಸಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ.ಏಳು ದಿನ ಆರು ರಾತ್ರಿಗಳ ಪ್ರಯಾಣ ಮುಂಜಾನೆ ಯಶವಂತಪುರ ರೈಲ್ವೆ ನಿಲ್ದಾಣದಿಂದ ಆರಂಭವಾಗಲಿದ್ದು, ಬಂಡಿಪುರ ನ್ಯಾಷನಲ್ ಪಾರ್ಕ್, ಮೈಸೂರು, ಹಳೇಬೀಡು, ಚಿಕ್ಕಮಗಳೂರು, ಹಂಪಿ, ಬಾದಾಮಿ, ಪಟ್ಟದಕಲ್ಲು, ಐಹೊಳೆ ಹಾಗೂ ಗೋವಾಕ್ಕೆ ತೆರಳಿ ಬೆಂಗಳೂರಿಗೆ ಹಿಂದಿರುಗಲಿದೆ.

ನೂತನ ವಿನ್ಯಾಸದ ಪೀಠೋಪಕರಣಗಳು, ಹೊಸ ಮಾದರಿಯ ಕೋಣೆಯಗಳು, ಬಾತ್‌ರೂಮ್, ಮಣ್ಣಿನ ಪಾತ್ರೆಗಳು ಹೀಗೆ ಐಷಾರಾಮಿ ಸೌಲಭ್ಯಗಳನ್ನು ಒಳಗೊಂಡಿರುತ್ತದೆ,. ಅಮೆಜಾನ್, ನೆಟ್‌ಫ್ಲಿಕ್ಸ್ ವೀಕ್ಷಿಸಬಹುದಾದ ಸ್ಮಾರ್ಟ್ ಟಿವಿ, ಸಿಸಿಕ್ಯಾಮರಾವನ್ನು ಕೂಡ ಅಳವಡಿಸಲಾಗಿರುತ್ತದೆ.

English summary
The railway's catering arm IRCTC will resume services of the luxury train Golden Chariot on March 22 after a gap of a few years, officials said on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X