SWR: ಬೆಂಗಳೂರಿನಿಂದ ಇಲ್ಲಿಗೆ ಮಾ.10ರಿಂದ ವಿಶೇಷ ರೈಲುಗಳ ಸಂಚಾರ, ವೇಳಾಪಟ್ಟಿ ಹೀಗಿದೆ
ಬೆಂಗಳೂರು: ಹೋಳಿ ಹಬ್ಬದ ಬೆನ್ನಲ್ಲೆ ಹೆಚ್ಚುತ್ತಿರುವ ರೈಲು ಪ್ರಯಾಣಿಕರ ದಟ್ಟಣೆ ನಿವಾರಣೆಗೆ ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಿಂದ ಕಟಿಹಾರ್ ನಿಲ್ದಾಣವರೆಗೆ ವಿಶೇಷ ರೈಲುಗಳ ಕಾರ್ಯಾಚರಣೆ ನಡೆಸುವುದಾಗಿ ನೈಋತ್ಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ರೈಲಿನ ಸಂಚಾರ, ಎಷ್ಟು ಟ್ರಿಪ್, ವೇಳಾಪಟ್ಟಿ ಹಾಗೂ ನಿಲುಗಡೆ ನಿಲ್ದಾಣಗಳ ಮಾಹಿತಿ ಇಲ್ಲಿದೆ.
ಕರ್ನಾಟಕದ ಬೆಂಗಳೂರಿನಿಂದ ಆಂಧ್ರಪ್ರದೇಶ ಗಡಿ ಭಾಗದ ಪ್ರದೇಶಗಳು, ತೆಲಂಗಾಣ ಮತ್ತು ಬಿಹಾರ ಭಾಗಗಳಲ್ಲಿ ಸಂಚರಿಸುವವ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಈ ಮಾರ್ಗದ ದಟ್ಟಣೆ ಕಡಿವಾಣಕ್ಕೆ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಯಶವಂತಪುರ ಮತ್ತು ಕತಿಹಾರ್ ನಡುವೆ ನಾಲ್ಕು ಟ್ರಿಪ್‌ಗಳ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಓಡಿಸಲಾಗುತ್ತಿದೆ.

ಯಶವಂತಪುರದಿಂದ ಕತಿಹಾರ್‌ಗೆ ಪ್ರಯಾಣಿಸುವ ವಿಶೇಷ ಎಕ್ಸ್‌ಪ್ರೆಸ್ ರೈಲು (06545) 2026 ಮಾರ್ಚ್ 10ರಿಂದ ಮಾರ್ಚ್ 31 ರವರೆಗೆ ಕಾರ್ಯಾಚರಣೆ ನಡೆಸಲಿದೆ. ಈ ಸೇವೆಯು ಮಂಗಳವಾರ ಬೆಳಗ್ಗೆ 07 ಗಂಟೆಗೆ ಹೊರಡಲಿದ್ದು, ಗುರುವಾರ ಬೆಳಿಗ್ಗೆ 04 ಗಂಟೆಗೆ ಗಮ್ಯಸ್ಥಾನ ಕತಿಹಾರ ತಲುಪುತ್ತದೆ.
ಮರಳಿ ಅದೇ ದಿಕ್ಕಿನಲ್ಲಿ ಕತಿಹಾರ್-ಯಶವಂತಪುರ ಬೆಂಗಳೂರು ಎಕ್ಸ್‌ಪ್ರೆಸ್ ರೈಲು (06546) 2026 ಮಾರ್ಚ್ 13ರಿಂದ ಮಾರ್ಚ್ 27ವರೆಗೆ ಪ್ರಯಾಣ ಸೇವೆ ನೀಡಲಿದೆ. 2026 ಏಪ್ರಿಲ್ 03ರಂದು ಅಂತಿಮ ಪ್ರಯಾಣ ಸೇವೆ ಲಭ್ಯ ಇದ್ದು, ಪ್ರಯಾಣಿಕರು ಇದರ ಸದುಪಯೋಗ ಮಾಡಿಕೊಳ್ಳುವಂತೆ ತಿಳಿಸಲಾಗಿದೆ. ಈ ರೈಲು ಶುಕ್ರವಾರ ಬೆಳಗ್ಗೆ 05:15ಕ್ಕೆ ಹೊರಟು ಭಾನುವಾರ ಬೆಳಗ್ಗೆ 04ಗಂಟೆಗೆ ಯಶವಂತಪುರಕ್ಕೆ ಬಂದು ಸೇರಲಿದೆ.
20 ಬೋಗಿಗಳ ವಿಶೇಷ ರೈಲು
ಪ್ರಯಾಣಿಕರ ದಟ್ಟಣೆ ಗಮನದಲ್ಲಿಟ್ಟುಕೊಂಡು ರೈಲ್ವೆ ಅಧಿಕಾರಿಗಳು ಒಟ್ಟು 20 ಬೋಗಿಗಳ ರೈಲುಗಳ ಕಾರ್ಯಾಚರಣೆ ಮಾಡುತ್ತಿದೆ. ಇದರಲ್ಲಿ ಎಸಿ ಟೈರ್ 3 ಸ್ಲೀಪರ್, ಎಸಿ ಟೈರ್ 2 ಸ್ಲೀಪರ್, ನಾನ್ ಎಸಿ ಸ್ಲೀಪರ್, ಜನರಲ್ ಸೇರಿ ಎಲ್ಲ ವರ್ಗದ ಬೋಗಿಗಳು ಇರಲಿವೆ.
ರೈಲು ನಿಲುಗಡೆ ನಿಲ್ದಾಣಗಳು ಯಾವುವು?
ಯಶವಂತಪುರ-ಕತಿಹಾಸ ವಿಶೇಷ ರೈಲು ಎರಡೂ ದಿಕ್ಕುಗಳ ಸಂಚಾರ ಮಾಗದಲ್ಲಿ 'ಯಲಹಂಕ, ಹಿಂದೂಪುರ, ಧರ್ಮಾವರಂ, ಅನಂತಪುರ, ಗೂಟಿ, ಧೋನೆ, ನಂದ್ಯಾಲ್, ಮಾರ್ಕಾಪುರ ರಸ್ತೆ, ನರಸರಾವ್‌ಪೇಟೆ, ಗುಂಟೂರು, ವಿಜಯವಾಡ, ರಾಜಮಂಡ್ರಿ ಮತ್ತು ಸಿಂಹಾಚಲಂ ಉತ್ತರ ಮುಂತಾದ ನಿಲ್ದಾಣಗಳನ್ನು ಒಳಗೊಂಡಿದೆ. ಮುಂದಿನ ನಿಲ್ದಾಣಗಳಲ್ಲಿ ವಿಜಯನಗರಂ, ಶ್ರೀಕಾಕುಳಂ ರಸ್ತೆ, ಪಲಾಸ, ಬ್ರಹ್ಮಪುರ್, ಬಲುಗಾಂವ್, ಖುರ್ದಾ ರಸ್ತೆ, ಭುವನೇಶ್ವರ್, ಕಟಕ್, ಭದ್ರಕ್, ಬಲೇಶ್ವರ್, ಖರಗ್‌ಪುರ, ಆಂಡುಲ್, ದಂಕುನಿ, ಬೋಲ್‌ಪುರ್, ರಾಂಪುರ ಹಾಲ್ಟ್, ಪಾಕುರ್, ಮಾಲ್ಡಾ ಟೌನ್, ಸಾಮ್ಸಿ ಮತ್ತು ಕುಮೇದ್‌ಪುರ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.
ಈ ಮಾರ್ಗ ರೈಲು ಪ್ರಯಾಣಿಕರು ಅಧಿಕೃತ ವೆಬ್‌ಸೈಟ್‌ಗೆ (https://www.indianrail.gov.in/) ಭೇಟಿ ನೀಡಬಹುದು. ಇಲ್ಲವೇ ಎನ್‌ಟಿಇಎಸ್ ಅಪ್ಲಿಕೇಶನ್ ಬಳಸಿ ಅಥವಾ 139 ಅನ್ನು ಡಯಲ್ ಮಾಡುವ ಮೂಲಕ ರೈಲು ಸಮಯ ಮತ್ತು ಇತರ ವಿವರಗಳನ್ನು ಪರಿಶೀಲಿಸಬಹುದು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.












Click it and Unblock the Notifications