Namma Metro: ಬೆಂಗಳೂರಿಗೆ ಮೊದಲ ಡಿಟಿಜಿ ರೈಲು ಆಗಮನ 750 ಕಿಮಿ ಪ್ರಾಯೋಗಿಕ ಪರೀಕ್ಷೆ
ಬೆಂಗಳೂರು: ಬೆಂಗಳೂರು ನಮ್ಮ ಮೆಟ್ರೋ ಮಾರ್ಗಗಳಿಗೆ ರೈಲುಗಳನ್ನು ಪೂರೈಸುವ ಪಶ್ಚಿಮ ಬಂಗಾಳದ ಟಿಟಾಗರ್ ರೈಲ್ ಸಿಸ್ಟಮ್ ಕಂಪನಿ (ಟಿಆರ್‌ಎಸ್‌ಎಲ್) ಕಂಪನಿಯು ಭಾರತದಲ್ಲಿ ಜೋಡಿಸಿದ ಮೊದಲ ದೂರದ ಸ್ಥಾನ ತಲುಪುವ (DTG) ರೈಲನ್ನು ಬೆಂಗಳೂರಿಗೆ ತಲುಪಿಸಿದೆ. ಈ ರೈಲು ಹಸಿರು ಮಾರ್ಗದಲ್ಲಿ ಹಲವಾರು ಪರೀಕ್ಷೆಗೆ ಒಳಪಡಲಿದೆ.
ಕಳೆದ ತಿಂಗಳು ಫೆಬ್ರವರಿ 18 ರಂದು ಟಿಟಾಗರ್ ಕಂಪನಿಯು ಒಟ್ಟು ಆರು ಹಸಿರು ಡಿಟಿಜಿ ಮೆಟ್ರೋ ಬೋಗಿಗಳನ್ನು ಕಳುಹಿಸಿತ್ತು. ಆ ರೈಲು ಇದೇ ಮಾರ್ಚ್ ಮೊದಲ ವಾರ ಬೆಂಗಳೂರಿನ ಪೀಣ್ಯ ಮೆಟ್ರೋ ಡಿಪೋಗೆ ಆಗಮಿಸಿದೆ. ಬೋಗಿಗಳನ್ನು ಇಳಿಸಿ, ರೈಲು ಸೆಟ್ ಆಗಿ ರೂಪಿಸಲಾಗಿದೆ. ಬಳಿಕ ಅದರ ಪರಿಶೀಲನೆಗೆ ಇನ್ಸ್‌ಪೆಕ್ಷನ್ ಬೇ ಲೈನ್ (ಐಬಿಎಲ್) ಗೆ ಸ್ಥಳಾಂತರಿಸಲಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಅಧಿಕಾರಿಗಳು ಡಿಎಚ್‌ಗೆ ಮಾಹಿತಿ ನೀಡಿದ್ದಾರೆ.

ಈ ದೇಶಿಯ ರೈಲು ಸ್ಥಿರ ಮತ್ತು ವಿದ್ಯುತ್ ಸರ್ಕ್ಯೂಟ್ ಪರೀಕ್ಷೆ ಸೇರಿ ಕೆಲವು ಪರೀಕ್ಷೆಗೆ ಒಳಗಾಗಲಿದೆ. ಹಸಿರು ಮಾರ್ಗದಲ್ಲಿ ರಾತ್ರಿಯ ಸಮಯದಲ್ಲಿ ಸಂಚಾರ ಪರೀಕ್ಷೆಗಳು ನಡೆಯಲಿವೆ. ಒಟ್ಟು 750 ಕಿಲೋ ಮಿಟರ್ ಪ್ರಾಯೋಗಿಕ ಸಂಚಾರ ನಡೆಸಲಾಗುತ್ತದೆ. ಟಿಟಾಗರ್ ರೈಲ್ ಸಿಸ್ಟಮ್ ಕಂಪನಿ (ಟಿಆರ್‌ಎಸ್‌ಎಲ್) ಬೆಂಗಳೂರಿಗೆ ಇದೇ ಮಾರ್ಚ್ ತಿಂಗಳ ಅಂತ್ಯದಲ್ಲಿ ಎರಡನೇ ಡಿಟಿಜಿ ರೈಲನ್ನು ಕಳುಹಿಸುವ ನಿರೀಕ್ಷೆ ಇದೆ.
2025 ರಲ್ಲಿ ಜನವರಿ ಚೀನಾ ನಿರ್ಮಿತ ಪ್ರೊಟೋಟೈಪ್ ಮಾದರಿಯ ರೈಲು ಆಗಮಿಸಿದ್ದು, ಅದರೊಂದಿಗೆ ಈ ಎರಡು ರೈಲುಗಳನ್ನು ಇದೇ ವರ್ಷ ಮೇ-ಜೂನ್ ತಿಂಗಳಲ್ಲಿ ವಾಣಿಜ್ಯ ಸೇವೆಗೆ ನೀಡಲು ನಿರ್ಧರಿಸಲಾಗಿದೆ. ಈ ಹೊಸ ರೈಲುಗಳು ನೇರಳೆ ಹಾಗೂ ಹಸಿರು ಮಾರ್ಗಗಳಲ್ಲಿ ಸೇವೆಗೆ ನಿಯೋಜನೆಗೊಳ್ಳಲಿವೆ. ಬೆಳಗ್ಗೆ ಮತ್‌ತು ಸಂಜೆ ಪೀಕ್ ಹವರ್‌ನಲ್ಲಿ ಜನದಟ್ಟಣೆ ಕಡಿಮೆ ಮಾಡಲು ಸಹಾಯವಾಗುತ್ತದೆ ಎಂದು ನಮ್ಮಮೆಟ್ರೋ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನೇರಳೆ ಮತ್ತು ಹಸಿರು ಮಾರ್ಗದಲ್ಲಿವೆ 57 ರೈಲುಗಳು
ಸದ್ಯ ನೇರಳೆ ಹಾಗೂ ಹಸಿರು ಮಾರ್ಗದಲ್ಲಿ ಸುಮಾರು 57 ರೈಲುಗಳು ನಿತ್ಯ ಕಾರ್ಯಾಚರಣೆ ನಡೆಸುತ್ತಿವೆ. ಪ್ರಯಾಣಿಕರ ದಟ್ಟಣೆ ಹೆಚ್ಚಾಗುತ್ತಿದ್ದು, ಇನ್ನಷ್ಟು ರೈಲುಗಳ ಅಗತ್ಯವಿದೆ. ಟಿಟಾಗರ್ ರೈಲ್ ಸಿಸ್ಟಮ್ ಕಂಪನಿಯು ಇದೇ ವರ್ಷ ಏಪ್ರಿಲ್‌ನಿಂದ ಹಳದಿ ಮಾರ್ಗಕ್ಕೆ ಉಳಿದ ಏಳು ರೈಲುಗಳನ್ನು ಪೂರೈಸುವುದಾಗಿ ತಿಳಿಸಿದೆ. ಈಗಾಗಲೇ ಈ ಮಾರ್ಗದಲ್ಲಿ ಒಟ್ಟು ಎಂಟು ರೈಲುಗಳ ಸೇವೆ ಲಭ್ಯವಿದೆ. ಶೀಘ್ರವೇ 18 ರೈಲುಗಳು ಆಗಮಿಸಲಿದ್ದು, ಅವುಗಳನ್ನು ಹೆಚ್ಚಿನ ಪ್ರಯಾಣಿಕರು ಬಳಸುವ ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ನಿಯೋಜಿಸುವ ಚಿಂತನೆ ಇದೆ.
ಬೇರಿಂಗ್ ನಿರ್ವಹಣಾ ಕಾಮಗಾರಿ: ತಗ್ಗಿದ ಮೆಟ್ರೋ ರೈಲಿನ ವೇಗ
ಮೆಜೆಸ್ಟಿಕ್‌ನಿಂದ ರೇಷ್ಮೆ ಸಂಸ್ಥೆ ಕಡೆ ತೆರಳುವ ಹಸಿರು ಮಾರ್ಗದ ಪೈಕಿ ಆರ್‌ವಿ ರಸ್ತೆ ಮತ್ತು ಜಯನಗರ ನಡುವಿನ ರೈಲುಗಳ ಕಾರ್ಯಾಚರಣೆಗಳ ಮೇಲೆ ತಾತ್ಕಾಲಿಕ ವೇಗ ನಿರ್ಬಂಧ ಹೇರಿದೆ. ಈ ಮಾರ್ಗಗಳ ಮಧ್ಯ ರೈಲಿನ ಸಂಚಾರ ವೇಗ ತಗ್ಗಿಸಿ ನಡೆಯುತ್ತಿರುವ ಸಿವಿಲ್ ಕಾಮಗಾರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ಸಪೋರ್ಟ್ ಬೇರಿಂಗ್ ನಿರ್ವಹಣಾ ಕಾಮಗಾರಿ ಇಲ್ಲಿ ನಡೆಯುತ್ತಿದ್ದು, ಅದರ ಮುನ್ನೆಚ್ಚರಿಕೆ ದೃಷ್ಟಿಯಿಂದ ಮೆಟ್ರೋ ರೈಲಿನ ವೇಗ ತಗ್ಗಿಸಲಾಗಿದೆ. ಮಾರ್ಗದ ಪ್ರಯಾಣಿಕರ ಸುರಕ್ಷತೆ ಕಾಯ್ದುಕೊಳ್ಳಲಾಗುತ್ತಿದೆ.
ನಮ್ಮ ಮೆಟ್ರೋದ ಮಾನದಂಡದ ಸುರಕ್ಷತಾ ನಿಯಮಾವಳಿಗಳ ಪ್ರಕಾರ, ಯಾವುದೇ ತಾಂತ್ರಿಕ ಅಂಶಗಳನ್ನು ಗಮನೀಯವಾಗಿ ಪರಿಶೀಲಿಸುವ ಸಂದರ್ಭಗಳಲ್ಲಿ ಕಾರ್ಯಚರಣೆಯ ಸುರಕ್ಷತಾ ದೃಷ್ಟಿಯಿಂದ ರೈಲುಗಳ ವೇಗವನ್ನು ತಾತ್ಕಾಲಿಕವಾಗಿ ನಿಯಂತ್ರಿಸಲಾಗುತ್ತದೆ. ಹಸಿರು ಮಾರ್ಗದ ರೈಲು ಸೇವೆಗಳು ವೇಳಾಪಟ್ಟಿಯಂತೆ ಮುಂದುವರಿಯುತ್ತಿದ್ದು, ಅರ್.ವಿ ರಸ್ತೆ ಮತ್ತು ಜಯನಗರ ನಿಲ್ದಾಣಗಳ ನಡುವೆ ಪ್ರಯಾಣಿಸುವ ಪ್ರಯಾಣಿಕರಿಗೆ ಸ್ವಲ್ಪ ಹೆಚ್ಚುವರಿ ಪ್ರಯಾಣ ಸಮಯ ಅನುಭವವಾಗುವ ಸಾಧ್ಯತೆ ಇದೆ.
ತಾಂತ್ರಿಕ ತಂಡಗಳು ಸಂಬಂಧಿತ ಈ ಭಾಗವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿವೆ. ಸದರಿ ನಿರ್ವಹಣಾ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳಿಸಿ ಎಂದಿನಂತೆ ರೈಲು ಕಾರ್ಯಾಚರಣೆ ವೇಗ ಪಡೆಯಲಿದೆ ಎಂದು ಬಿಎಂಆರ್‌ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
-
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್‌ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ












Click it and Unblock the Notifications