ಬಳ್ಳಾರಿ ಸೋಲು: ಶ್ರೀರಾಮುಲು ರಾಜಕೀಯ ಭವಿಷ್ಯ ಏನು?
Recommended Video

ಬಳ್ಳಾರಿ, ನವೆಂಬರ್ 07: ಉಪಚುನಾವಣೆ ಫಲಿತಾಂಶ ಬಿಜೆಪಿಗೆ ಭಾರಿ ನಿರಾಸೆ ತಂದಿದೆ. ಅದರಲ್ಲಿಯೂ ಬಳ್ಳಾರಿಯ ಹೀನಾಯ ಸೋಲು ಬಿಜೆಪಿಯಲ್ಲಿ ಬದಲಾವಣೆಗೆ ಕಾರಣ ಆಗಬಹುದಾಗಿದೆ.
ನಾಯಕರ ಸಮುದಾಯದ ಮುಖಂಡ ಎಂಬ ಹೆಸರು ಗಳಿಸಿದ್ದ ಶ್ರೀರಾಮುಲು ಅವರು ಇದೇ ಕಾರಣಕ್ಕೆ ಬಿಜೆಪಿಯಲ್ಲಿ ಉನ್ನತ ಹುದ್ದೆಗಳಿಗೆ ಆಕಾಂಕ್ಷೆ ವ್ಯಕ್ತಪಡಿಸಿದ್ದರು. ಬಿಜೆಪಿ ಸರ್ಕಾರ ರಚಿತವಾದರೆ ಅವರೇ ಡಿಸಿಎಂ ಎಂಬ ವಾದವೂ ಇತ್ತು. ಶ್ರೀರಾಮುಲು ಅವರೇ ಮುಂದಿನ ಮುಖ್ಯಮಂತ್ರಿ ಎಂದು ಕೆಲವು ಬಿಜೆಪಿ ಶಾಸಕರು ಉಪಚುನಾವಣೆಗೆ ಮುಂಚೆ ಹೇಳಿದ್ದರು ಕೂಡಾ.
ನಾಯಕ ಸಮುದಾಯವೇ ಹೆಚ್ಚಿಗಿರುವ ಬಳ್ಳಾರಿಯ ಮೀಸಲು ಕ್ಷೇತ್ರದಲ್ಲಿ ಸ್ಥಳೀಯರೇ ಆಗಿದ್ದುಕೊಂಡು ಸಹ ತಮ್ಮ ತಂಗಿಯನ್ನೇ ರಾಮುಲು ಅವರಿಗೆ ಗೆಲ್ಲಿಸಲಿಕ್ಕಾಗಲಿಲ್ಲ ಎಂಬುದು ಅವರ ರಾಜಕೀಯ ಪ್ರಭಾವವನ್ನು ಬಿಜೆಪಿಯಲ್ಲಿ ಭಾರಿ ಪ್ರಮಾಣದಲ್ಲಿ ತಗ್ಗಿಸಲಿದೆ. ಅಲ್ಲದೆ ರಾಮುಲು, ನಾಯಕರ ಸಮುದಾಯದ ಮುಖಂಡ ಎಂಬ ಪಟ್ಟಕ್ಕೂ ಧಕ್ಕೆ ಬರಲಿದೆ.

ಉತ್ತರ ಕರ್ನಾಟಕದ ಬಿಜೆಪಿಯ ಮುಖಂಡ?
ರಾಮುಲು ಅವರು ಉತ್ತರ ಕರ್ನಾಟಕದ ಬಿಜೆಪಿ ಮುಖಂಡ ಎನಿಸಿಕೊಂಡಿದ್ದರು. ಆದರೆ ತಮ್ಮದೇ ಕ್ಷೇತ್ರದಲ್ಲಿ ಎದುರಾಗಿರುವ ಈ ಭಾರಿ ಸೋಲು ಅವರಿಗೆ ಉತ್ತರ ಕರ್ನಾಟಕ ಬಿಜೆಪಿ ಮೇಲಿನ ಹಿಡಿತವನ್ನು ಸಡಿಲಗೊಳಿಸುವುದರಲ್ಲಿ ಅನುಮಾನವಿಲ್ಲ. ಈ ಸೋಲು ಉತ್ತರ ಕರ್ನಾಟಕದಲ್ಲಿ ಬಿಜೆಪಿ ಹಿನ್ನಡೆಗೆ ಕಾರಣ ಆದರೂ ಅನುಮಾನವಿಲ್ಲ.

ಬಳ್ಳಾರಿಯಲ್ಲಿ ಬಿಜೆಪಿ ಯುಗಾಂತ್ಯ
ಒಂದು ಸಮಯವಿತ್ತು ಬಳ್ಳಾರಿ ಎಂದರೆ ಅದು ರೆಡ್ಡಿ ಮತ್ತು ರಾಮುಲು ಅವರ ಸಾಮ್ರಾಜ್ಯ ಎಂದು. ಬಳ್ಳಾರಿ ನಡೆಯುವುದು ಅವರಿಬ್ಬರ ಕೈಸನ್ನೆಯ ಮೇಲೆ ಎಂದು ಆದರೆ ಈ ಸೋಲು ಮತ್ತು ಜನಾರ್ದನ ರೆಡ್ಡಿ ಅವರ ಮೇಲೆ ಬೀಳುತ್ತಿರುವ ಸತತ ಕೇಸುಗಳು ಬಳ್ಳಾರಿಯಲ್ಲಿ ರೆಡ್ಡಿ-ರಾಮುಲು ಯುಗಾಂತ್ಯಕ್ಕೆ ಕಾರಣವಾಗಬಹುದು ಅಷ್ಟೆ ಅಲ್ಲದೆ ಬಳ್ಳಾರಿ ಬಿಜೆಪಿಗೆ ಬಾಗಿಲು ಬಂದ್ ಆಗುವ ಸಾಧ್ಯತೆಯೂ ಇದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಳ್ಳಾರಿಯ ಐದು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿರುವುದು ಇದಕ್ಕೆ ಉದಾಹರಣೆ.

ಹೊಸ ನಾಯಕರಿಗಾಗಿ ಹುಡುಕಾಟ
ಬಳ್ಳಾರಿಯಲ್ಲಿ ಸುಮಾರು ಎರಡು ದಶಕದಿಂದ ರಾಮುಲು ಮತ್ತು ರೆಡ್ಡಿ ಅವರೇ ಬಿಜೆಪಿಯ ನಾಯಕರಾಗಿದ್ದರು. ರೆಡ್ಡಿ ಅವರು ಜೈಲು ಸೇರಿದ ನಂತರ ರಾಮುಲು ಅವರದ್ದೇ ಏಕಮೇವಾದಿಪತ್ಯ. ಮಧ್ಯದಲ್ಲಿ ಹೊಸ ಪಕ್ಷ ಕಟ್ಟಿದರಾದರೂ ಅಷ್ಟೆ ಬೇಗ ವಾಪಸ್ ಆದರು. ಆದರೆ ಅವರ ನಾಯಕತ್ವಕ್ಕೆ ಯಾವದೇ ಕತ್ತಾಗಿರಲಿಲ್ಲ. ಆದರೆ ಈ ಸೋಲು ರಾಮುಲು ಬಗ್ಗೆ ಪ್ರಶ್ನೆ ಎತ್ತಿದೆ. ಹಾಗಾಗಿ ಹೈಕಮಾಂಡ್ ಬಳ್ಳಾರಿ ಬಿಜೆಪಿಗೆ ಹೊಸ ಮುಖ ಹುಡುಕುವ ಯತ್ನ ಮಾಡಬಹುದು.

ಬಿಜೆಪಿ ವಿರುದ್ಧ ತಿರುಗಿಬಿಳುವ ಸಾಧ್ಯತೆ
ಬಳ್ಳಾರಿಯಲ್ಲಿ ತಮಗೆ ಬೆಂಬಲ ನೀಡದಕ್ಕಾಗಿ ರಾಮುಲು ಅವರೇ ಬಿಜೆಪಿಯ ನಾಯಕರ ವಿರುದ್ಧ ತಿರುಗಿಬೀಳುವ ಸಾದ್ಯತೆ ದಟ್ಟವಾಗಿದೆ. ಹಾಗೇನಾದರೂ ಆದಲ್ಲಿ ಬಿಜೆಪಿಯಲ್ಲಿ ಮತ್ತೆ ಬಣ ರಾಜಕೀಯ, ಆಂತರಿಕ ತಿಕ್ಕಾಟ ಪ್ರಾರಂಭವಾಗುತ್ತದೆ.
-
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion












Click it and Unblock the Notifications