ಚಿಕ್ಕಮಗಳೂರು: ಯುವತಿಯರ ಮೈ ಕೈ ಮುಟ್ಟಿ ಗೂಸಾ ತಿಂದ ಟೈಲರಪ್ಪ

Posted By:
Subscribe to Oneindia Kannada

ಚಿಕ್ಕಮಗಳೂರು, ನವೆಂಬರ್ 15: ಜಿಲ್ಲೆಯ ಕೊಪ್ಪ ತಾಲೂಕಿನ ನಾರ್ವೆ ಗ್ರಾಮದಲ್ಲಿ ಟೈಲರಿಂಗ್ ಕಲಿಸುವ ನೆಪದಲ್ಲಿ ಯುವತಿರೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದ ವ್ಯಕ್ತಿಗೆ ಜನರು ಧರ್ಮದೇಟು ಕೊಟ್ಟಿದ್ದಾರೆ.

ಹಸನಬ್ಬ ಸಾರ್ವಜನಿಕರಿಂದ ನಡು ಬೀದಿಯಲ್ಲಿ ಸಖತ್ತಾಗಿ ಗೂಸಾ ತಿಂದ ವ್ಯಕ್ತಿ. ಮುತ್ತಿನಕೊಪ್ಪದಲ್ಲಿ ಟೈಲರಿಂಗ್ ಶಾಪ್ ಇಟ್ಟಿಕೊಂಡಿದ್ದ ಈತ, ನಾನು ಉಚಿತವಾಗಿ ಟೈಲರಿಂಗ್ ಕಲಿಸಿಕೊಡಿಸುತ್ತೇನೆಂದು ಸುತ್ತಮುತ್ತಲಿನ ದಲಿತ ಕಾಲೋನಿ ಯುವತಿಯರನ್ನು ಮರಳು ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದ. ಈತನ ಅಸಭ್ಯವ ವರ್ತನೆ ಬಗ್ಗೆ ತಿಳಿದ ಸ್ಥಳೀಯರು ಟೈಲರಪ್ಪನ ಮುಖಮೂತಿ ನೋಡದೆ ಧರ್ಮದೇಟು ನೀಡಿ ಬುದ್ಧಿ ಕಲಿಸಿದ್ದಾರೆ.

A tailor who reportedly misbehaved with women was beaten by public in Chikkamagaluru

ಇನ್ನು ಹಸನಬ್ಬನಿಗೆ ಈಗಾಗಲೇ ಮದುವೆಯಾಗಿದ್ದು, ಹೆಂಡತಿ ಜೊತೆ ಸಂಸಾರ ಮಾಡೋದ ಬಿಟ್ಟು ಒಬ್ಬಂಟಿಯಾಗಿದನಂತೆ.

ಇದನ್ನೇ ಬಂಡವಾಳ ಮಾಡಿಕೊಂಡಿರೋ ಹಸನಬ್ಬ ಟೈಲರಿಂಗ್ ಕಲಿಸುವ ನೆಪದಲ್ಲಿ ಯುವತಿಯರನ್ನು ಮಾರಾಟ ಮಾಡುತ್ತಿದ್ದ ಎನ್ನುವ ಆರೋಪ ಸಹ ಕೇಳಿ ಬಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A tailor who reportedly misbehaved with women was beaten by public in Navrve village at Koppa taluk Chikkamagaluru district. According to sources, the accused told the women that he will help them in learning tailoring.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ