ಚಾರ್ಮಾಡಿ ಘಾಟಿಯಲ್ಲಿ ಕೆಟ್ಟುನಿಂತ 12 ಚಕ್ರದ ಲಾರಿ-ಮುಂದಾಗಿದ್ದೇನು ಗೊತ್ತಾ?
ಚಿಕ್ಕಮಗಳೂರು, ಏಪ್ರಿಲ್, 04: ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ಆಗಾಗ ಸುದ್ದಿಯಲ್ಲಿರುತ್ತದೆ. ಮಳೆಗಾಲದಲ್ಲಿ ರಸ್ತೆ ಕುಸಿತ, ಚಳಿಗಾಲದಲ್ಲಿ ತುಂತುರು ಹನಿಗಳು ಬೀಳುವ ವೇಳೆ ಇಲ್ಲಿನ ರಸ್ತೆಯಲ್ಲಿ ಪ್ರವಾಸಿಗರ ರಂಪಾಟ ಸೇರಿದಂತೆ ಹೀಗೆ ಹಲವು ರೀತಿಯ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತದೆ. ಅಲ್ಲದೆ, ಇದೀಗ ಇಲ್ಲಿನ ಕಿರಿದಾದ ರಸ್ತೆಯಲ್ಲಿ ಬೃಹತ್ ಗಾತ್ರದ ವಾಹನಗಳು ಲಾಕ್ ಆಗುವ ಘಟನೆಗಳು ನಡೆಯುತ್ತಿದ್ದು, ಇಂತಹದ್ದೇ ಒಂದು ಘಟನೆ ಇಂದು ಮತ್ತೆ ನಡೆದಿದೆ.
ಇತ್ತೀಚೆಗಷ್ಟೇ ಇಲ್ಲಿನ ರಸ್ತೆಯಲ್ಲಿ ಬೃಹತ್ ಗಾತ್ರದ ಲಾರಿಯೊಂದು ಕೆಟ್ಟುನಿಂತು ವಾಹನ ಸವಾರರು ಪರದಾಡುವಂತಾಗಿತ್ತು. ಇದೀಗ 12 ಚಕ್ರದ ಲಾರಿ ಲಾಕ್ ಆದ ಪರಿಣಾಮ ಟ್ರಾಫಿಕ್ ಜಾಮ್ ಸಂಭವಿಸಿ ವಾಹನ ಸವಾರರು ಪರದಾಡಿದ ಘಟನೆ ನಡೆದಿದೆ.

ಚಾರ್ಮಾಡಿ ಘಾಟ್‌ನ್ 2ನೇ ತಿರುವಿನಲ್ಲಿ ಟರ್ನ್ ಆಗದೇ 12 ಚಕ್ರದ ಲಾರಿ ನಿಂತಿದ್ದು, ಇದರಿಂದ ಬೆಳಗ್ಗೆಯಿಂದ ಚಾರ್ಮಾಡಿ ಘಾಟಿಯಲ್ಲಿ ವಾಹನ ಸವಾರರು ಪರದಾಡುವಂತಾಗಿದೆ. ಬಳ್ಳಾರಿಯಿಂದ ಮಂಗಳೂರಿಗೆ ತೆರಳುತ್ತಿದ್ದ 12 ಚಕ್ರದ ಲಾರಿ ಇದಾಗಿದೆ ಎಂದು ತಿಳಿದುಬಂದಿದೆ.
ನಿಯಮದ ಪ್ರಕಾರ ಚಾರ್ಮಾಡಿಯಲ್ಲಿ ಭಾರೀ ವಾಹನಗಳಿಗೆ ನಿಷೇದವಿದೆ. ಆದರೂ ಸಂಚಾರ ಮಾಡಲಾಗಿದ್ದು, ಚೆಕ್ ಪೋಸ್ಟ್ ಇದ್ದರೂ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿರುವ ಆರೋಪ ಕೇಳಿಬಂದಿದೆ.












Click it and Unblock the Notifications