ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿ ಫೇಸ್ ಬುಕ್ ಸಂಸ್ಥಾಪಕ

Posted By:
Subscribe to Oneindia Kannada

ಸ್ಯಾನ್ ಫ್ರಾನ್ಸಿಸ್ಕೋ, ಮಾರ್ಚ್ 10: ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಹಾಗೂ ಅವರ ಪತ್ನಿ ಪ್ರೆಸಿಲ್ಲಾ ಚಾನ್ ದಂಪತಿ ಮತ್ತೊಂದು ಮಗುವನ್ನು ನಿರೀಕ್ಷಿಸುತ್ತಿದ್ದಾರೆ. ಇದನ್ನು ಖುದ್ದು ಮಾರ್ಕ್ ಜುಗರ್ ಬರ್ಗ್ ಅವರೇ ತಮ್ಮ ಅಧಿಕೃತ ಫೇಸ್ ಬುಕ್ ಪೇಜ್ ನಲ್ಲಿ ಪ್ರಕಟಿಸಿದ್ದಾರೆ.

ಮಾರ್ಕ್ ಹಾಗೂ ಪ್ರೆಸಿಲ್ಲಾ ದಂಪತಿಗೆ ಮ್ಯಾಕ್ಸ್ ಎಂಬ 15 ತಿಂಗಳ ಗಂಡು ಮಗುವಿದೆ. ಸತತವಾಗಿ ಮೂರು ಬಾರಿ ಗರ್ಭ ಕಟ್ಟುವಿಕೆಯ ವೈಫಲ್ಯತೆಯ ನಂತರ ಮ್ಯಾಕ್ಸ್ ಹುಟ್ಟಿದ್ದು ಆ ದಂಪತಿಗಳಿಗೆ ಹಿಡಿಸಲಾರದಷ್ಟು ಖುಷಿ ನೀಡಿತ್ತು.

Mark Zuckerberg And Wife Are Expecting Another Baby Girl

ಇದೀಗ, ಪ್ರೆಸಿಲ್ಲಾ ಅವರು ಮತ್ತೆ ಗರ್ಭವತಿಯಾಗಿದ್ದಾರೆಂದು ಮಾರ್ಕ್ ಹೇಳಿದ್ದಾರೆ. ''ನನ್ನ ಪತ್ನಿ ಮತ್ತೆ ಗರ್ಭವತಿಯಾಗಿರುವುದು ನನಗೆ ಖುಷಿ ಕೊಟ್ಟಿದೆ. ಹಾಗಾಗಿ, ಈ ಬಾರಿಯೂ ನಾವು ಯಾವುದೇ ತೊಂದರೆಯಾಗದೇ ನೂತನ ಅತಿಥಿ ಬರಲೆಂದು ಆಶಿಸಿದ್ದೇವೆ. ನನಗಂತೂ ಆ ಮಗು ಹೆಣ್ಣಾಗಿರಲಿ ಎಂಬ ಆಶಯವಿದೆ'' ಎಂದು ಅವರು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mark Zuckerberg and wife Priscilla Chan are going to be parents again! The Facebook CEO shared the news on his official page on the popular social media site this morning.
Please Wait while comments are loading...