ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಡೋನೇಷಿಯಾ ಪ್ರವಾಸಿ ತಾಣದಲ್ಲಿ ಭೂಕಂಪ, 13 ಮಂದಿ ಸಾವು

By Mahesh
|
Google Oneindia Kannada News

ಜಕಾರ್ತ, ಜುಲೈ 29: ಇಂಡೋನೇಷಿಯಾದ ಲಾಂಬೊಕ್​ ದ್ವೀಪ ಪ್ರದೇಶದಲ್ಲಿ ಭಾನುವಾರ ಮುಂಜಾನೆ ಪ್ರಬಲ ಭೂಕಂಪ ಸಂಭವಿಸಿದೆ. ಈ ದುರ್ಘಟನೆಯಲ್ಲಿ 10 ಮಂದಿ ಮೃತಪಟ್ಟಿರುವ ವರದಿ ಬಂದಿದೆ.

ಜನಪ್ರಿಯ ಪ್ರವಾಸಿ ತಾಣ ಬಾಲಿ ದ್ವೀಪದಿಂದ ಪೂರ್ವಕ್ಕೆ 10 ಕಿ.ಮೀ ದೂರದಲ್ಲಿರುವ ಲಾಂಬೊಕ್ ನಲ್ಲಿ 6.4 ರಷ್ಟು ಪ್ರಬಲ ಭೂಕಂಪ ಇದಾಗಿದೆ. ನೂರಾರು ಮಂದಿ ಗಾಯಗೊಂಡಿದ್ದಾರೆ. ಹಲವಾರು ಕಟ್ಟಡಗಳು ನೆಲಸಮವಾಗಿವೆ.

Magnitude 6.4 earthquake strikes Indonesia’s Lombok island 13 dead

ರಿಂಜನಿ ಬೆಟ್ಟ ಹತ್ತಲು ಹೊರಟ್ಟಿದ್ದ ಮಲೇಷಿಯಾದ ಪ್ರವಾಸಿಗರು ಮೃತಪಟ್ಟಿದ್ದಾರೆ ಎಂದು ಪೂರ್ವ ಲಾಂಬೋಕ್​ ಪೊಲೀಸ್​ ಎಂ. ಎಕಾ ಫತುರ್​​ ರಹ್ಮಾನ್ ಹೇಳಿದ್ದಾರೆ.


'ಸುಮಾರು 20-30 ಸೆಕೆಂಡ್​ಗಳ ಕಾಲ ಸ್ವಿಮ್ಮಿಂಗ್​ ಪೂಲ್​ನಲ್ಲಿದ್ದ ನೀರು ಸಮುದ್ರದ ಅಲೆಯಂತೆ ರಭಸವಾಗಿ ನುಗ್ಗಿತು, ಹೋಟೆಲ್ ನಿಂದ ಎಲ್ಲರೂ ಹೊರಗಡೆ ಓಡಿದರು' ಎಂದು ಬಿಬಿಸಿ ಮರಾಠಿ ವರದಿಗಾರ ವಿನಾಯಕ್ ಗಾಯಕ್ವಾಡ್ ತಮ್ಮ ಅನುಭವ ಹೇಳಿಕೊಂಡಿದ್ದಾರೆ.

English summary
A strong earthquake has struck Indonesia's Lombok island. The US Geological Survey said the quake had a magnitude of 6.4 and its epicenter was 1.4 kilometers (0.8 miles) southwest of Lelongken, Indonesia
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X