Earthquake: ಭೂಕಂಪನಕ್ಕೆ ನಲುಗಿದ ದ್ವೀಪರಾಷ್ಟ್ರ ತೈವಾನ್: 7.5 ತೀವ್ರತೆಯ ಭೂಕಂಪನ, 25 ವರ್ಷಗಳಲ್ಲೇ ಶಕ್ತಿ ಶಾಲಿ ಕಂಪನ
ತೈವಾನದಲ್ಲಿ ಬುಧವಾರ 7.5 ತೀವ್ರತೆಯ ಭೂಕಂಪನವಾಗಿದೆ. ಇದರ ಕಂಪನವನ್ನು ನೆರೆಯ ದೇಶಗಳಾದ ಜಪಾನ್, ಫಿಲಿಪೈನ್ಸ್‌ನಲ್ಲೂ ಆಗಿದೆ. ತೈವಾನನ ಅನೇಕ ನಗರಗಳಲ್ಲಿ ಭೂಕಂಪನವಾಗಿದ್ದು, ಹಲವು ಕಟ್ಟಡಗಳು ಧರಾಶಾಹಿ ಆಗಿವೆ. ಕಳೆದ 25 ವರ್ಷಗಳಲ್ಲಿ ಸಂಭವಿಸಿದ ಶಕ್ತಿ ಶಾಲಿ ಭೂಕಂಪ ಇದಾಗಿದೆ ಎಂದು ತಿಳಿದು ಬಂದಿದೆ.
ಬುಧವಾ ಬೆಳಗ್ಗೆ 8 ಗಂಟೆಯ ಸುಮಾರಿಗೆ ಭೂಕಂಪನ ಸಂಭವಿಸಿದೆ. ಕಂಪನದಿಂದ ಹೆಚ್ಚಾಗಿ ಹುವಾಲಿನ್ ಎಂಬ ನಗರಕ್ಕೆ ಹಾನಿಯಾಗಿದೆ. ಇದೇ ನಗರದಲ್ಲಿ ಕಂಪನದ ಕೇಂದ್ರ ಬಿಂದುವನ್ನು ಪತ್ತೆ ಹಚ್ಚಲಾಗಿದೆ. ಭೂಕಂಪನದ ತೀವ್ರತೆಗೆ 87 ಸಾವಿರ ಮೆಗಳ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಹುವಾಲಿನ್‌ನಲ್ಲಿ 7.5 ತೀವ್ರತೆಯ ಕಂಪನವಾದರೆ, ತೈವಾನ್ ರಾಜಧಾನಿ ತೈಪೆಯಲ್ಲಿ 7.2 ತೀವ್ರತೆಯ ಭೂಕಂಪ ಸಂಭವಿಸಿದೆ. ಮುಂಜಾಗರುಕತಾ ಕ್ರಮವಾಗಿ ಭೂಕಂಪನ ಪೀಡಿತ ಪ್ರದೇಶದಲ್ಲಿ ವಿದ್ಯುತ್ ಹಾಗೂ ಇಂಟರ್‌ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

ತೈವಾನನಲ್ಲಿ ಆದ ಭೂಕಂಪನದಿಂದ ದೇಶದ ಹಲವು ಪ್ರದೇಶಗಳಲ್ಲಿ ಭೂಕುಸಿತದ ಘಟನೆ ನಡೆದಿದೆ. 1999ರಲ್ಲಿ ಕೊನೆಯ ಬಾರಿಗೆ ಅತ್ಯಂತ ಭೀಕರ ಭೂಕಂಪ ಸಂಭವಿಸಿತ್ತು. ಈ ದಾರುಣ ಘಟನೆಯಲ್ಲಿ 2500 ಜನ ಪ್ರಾಣವನ್ನು ಕಳೆದುಕೊಂಡಿದ್ದರು.
ಬುಧವಾರ ಸ್ಥಳೀಯ ಕಾಲಮಾನ ಬೆಳಗ್ಗೆ 7.48ಕ್ಕೆ 15.5 ಕಿಲೋಮೀಟರ್ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ಪತ್ತೆ ಆಗಿದೆ. ಯುಎಸ್ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ, ಭೂಕಂಪದ ಕೇಂದ್ರಬಿಂದುವು ದಕ್ಷಿಣ ತೈವಾನ್‌ನ ಕ್ವಾಲಿಯನ್ ನಗರದಿಂದ 18 ಕಿಲೋಮೀಟರ್ ದೂರದಲ್ಲಿದೆ. ಕ್ವಾಲಿಯನ್ ಈ ದೇಶದ ದೊಡ್ಡ ರಾಜ್ಯ ಹಾಗೂ ಪೂರ್ವ ಕರಾವಳಿ ಆಗಿದೆ. ತೈವಾನ್ ಮಾಧ್ಯಮವರದಿಯ ಪ್ರಕಾರ, ಭೂಕುಸಿತದಿಂದಾಗಿ ಕ್ವಾಲಿಯನ್‌ಗೆ ತೈವಾನ್ ರೈಲ್ವೆಯ ಎಲ್ಲಾ ರೈಲುಗಳನ್ನು ರದ್ದುಗೊಳಿಸಲಾಗಿದೆ.
Video: A Taiwanese driver stopped their car during today's earthquake and observed river water swaying back and forth.
— #RahulAggarwal (@ImRahulAggarwal) April 3, 2024
📌#Taipei | #Taiwan #Earthquake #Tsunami #TaiwanEarthquake #China #ishigaki #Hualien #Japan #Terremoto #OKINAWA#Taiwan pic.twitter.com/qvpLF5S5Qu
ಹುವಾಲಿನ್‌ನಲ್ಲಿ ಕಂಪನದ ಕೇಂದ್ರ ಬಿಂದು
ವರದಿಯ ಪ್ರಕಾರ ಭೂಕಂಪನದ ಕೇಂದ್ರ ಬಿಂದು ಹುವಾಲಿನ್ ನಗರದಲ್ಲಿ ಹೆಚ್ಚಿನ ಹಾನಿ ಸಂಭವಿಸಿದ್ದು, ರಸ್ತೆಗಳು ಒಡೆದಿವೆ. ಹಲವು ಕಟ್ಟಡಗಳು ಬಿದ್ದಿದ್ದು, ಇದರ ಅಡಿ ಸಿಲುಕಿರುವ ಜನರ ಬಗ್ಗೆಯೂ ಮಾಹಿತಿ ಇನ್ನು ಬಹಿರಂಗವಾಗಿಲ್ಲ. ತೈಪೆಯ್ ಸ್ಥಳಿಯ ಆಡಳಿತ ಇನ್ನು ಹಾನಿಯ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಇನ್ನು ಭೂಕಮಪನದಿಂದಾಗಿ ರೈಲು ಸಂಚಾರಕ್ಕೂ ತೊಂದರೆ ಆಗಿದೆ.
ತೈವಾನ್‌ನಲ್ಲಿ ಸಂಭವಿಸಿದ ಭೂಕಂಪನದ ನಂತರ ನೆರೆಯ ಜಪಾನ್ ಹಾಗೂ ಫಿಲಿಫೈನ್ಸ್ ನಲ್ಲಿ ಸುನಾಮಿ ಅಲರ್ಟ್ ನೀಡಿದ್ದವು. ಜಪಾನ್‌ನ ಹವಾಮಾನ ಇಲಾಖೆಯು ಸಮುದ್ರದಲ್ಲಿ 3 ಮೀಟರ್ ಅಥವಾ ಸುಮಾರು 10 ಅಡಿ ಎತ್ತರದ ಅಲೆಗಳ ಮುನ್ಸೂಚನೆ ನೀಡಿತ್ತು. ಜಪಾನ್ ಮತ್ತು ಫಿಲಿಪೈನ್ಸ್ ಈಗ ಸುನಾಮಿ ಎಚ್ಚರಿಕೆಯನ್ನು ಹಿಂತೆಗೆದುಕೊಂಡಿವೆ.
Massive Earthquake in Taiwan.#TaiwanEarthquake #earthquake#Taiwan
— Cricklover (@kumarmanoj_11) April 3, 2024
pic.twitter.com/rkCDc0cHkT
ಸಹಾಯಕ್ಕೆ ಸಿದ್ಧ
ಚೀನಾದಲ್ಲಿ ತೈವಾನ್ ವ್ಯವಹಾರಗಳನ್ನು ಮೇಲ್ವಿಚಾರಣೆ ಮಾಡುವ ಕಚೇರಿಯು ಭೂಕಂಪದಿಂದ ಉಂಟಾದ ಹಾನಿಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ ಮತ್ತು ತೈವಾನ್‌ಗೆ ಸಹಾಯವನ್ನು ಕಳುಹಿಸಲು ಸಿದ್ಧವಾಗಿದೆ ಎಂದು ಹೇಳಿದೆ ಎಂದು ಚೀನಾದ ಮಾಧ್ಯಮಗಳ ಪ್ರಕಾರ ತಿಳಿದು ಬಂದಿದೆ.
-
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
Prem: ಆಗ ಅಪ್ಪಾಜಿ-ಅಂಬರೀಷಣ್ಣ ಇದ್ರು, ಈಗ ಯಾರಿದ್ದಾರೆ; ಕೆಡಿ ವಿವಾದ ಆದಾಗಲೂ ಯಾರೂ ಸಪೋರ್ಟ್ಗೆ ಬರಲಿಲ್ಲ: ಪ್ರೇಮ್ ಬೇಸರ












Click it and Unblock the Notifications