Himachal Pradesh Earthquake: ಹಿಮಾಚಲ ಪ್ರದೇಶದ ಚಂಬಾದಲ್ಲಿ ಭೂಕಂಪ
ಹಿಮಾಚಲ ಪ್ರದೇಶದ ಚಂಬಾ ಪಟ್ಟಣದಲ್ಲಿ ಗುರುವಾರ ಸಂಜೆ 5.3 ತೀವ್ರತೆಯ ಭೂಕಂಪ ಸಂಭವಿಸಿದೆ. ಚಂಬಾ ಪಟ್ಟಣ ಮತ್ತು ಇಲ್ಲಿಂದ ಸುಮಾರು 100 ಕಿ.ಮೀ. ದೂರದಲ್ಲಿರುವ ಮನಾಲಿಯಲ್ಲಿ ಕೂಡ ಭೂಕಂಪನದ ಅನುಭವ ಆಗಿರುವುದಾಗಿ ವರದಿಯಾಗಿದೆ.
ಭೂಕಂಪನದಿಂದ ಯಾವುದೇ ದೊಡ್ಡ ಪ್ರಮಾಣದ ಹಾನಿಯಾಗಿರುವ ಬಗ್ಗೆ ಈವರೆಗೂ ಯಾವುದೇ ವರದಿಗಳು ಬಂದಿಲ್ಲ. ಚಂಬಾದಲ್ಲಿ ರಾತ್ರಿ 9:34ಕ್ಕೆ 10 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ.

ಮನಾಲಿಯಲ್ಲಿ ಸಾಕಷ್ಟು ಬಲವಾದ ನಡುಕ ಅನುಭವವಾಯಿತು. ಸುಮಾರು ಏಳು ಸೆಕೆಂಡುಗಳ ಕಾಲ ಭೂಮಿ ನಡುಗಿದ ಅನುಭವ ಆಯಿತು ಎಂದು ಎಂದು ಮನಾಲಿ ಸ್ಥಳೀಯರಾದ ದಿವ್ಯಾಂಶು ಹೇಳಿರುವುದಾಗಿ ಎನ್‌ಡಿಟಿವಿ ವರದಿಯಲ್ಲಿ ತಿಳಿಸಿದೆ.
Earthquake of Magnitude:5.3, Occurred on 04-04-2024, 21:34:32 IST, Lat: 33.09 & Long: 76.59, Depth: 10 Km ,Location:Chamba, Himachal Pradesh, India for more information Download the BhooKamp App https://t.co/SYNmt1ew5B @KirenRijiju @Ravi_MoES @Dr_Mishra1966 @ndmaindia… pic.twitter.com/Bc2FRprnWw
— National Center for Seismology (@NCS_Earthquake) April 4, 2024
ಒಂದೆರಡು ಸೆಕೆಂಡ್‌ಗಳ ಕಾಲ ಬಲವಾದ ಕಂಪನವನ್ನು ಅನುಭವಿಸಿದೆ, ಕಟ್ಟಡದಿಂದ ಕೆಳಗಡೆ ಓಡಲು ಯೋಜಿಸುತ್ತಿರುವಾಗಲೇ ಕಂಪನ ನಿಂತುಹೋಯಿತು ಎಂದು ಚಂಡೀಗಢ ನಿವಾಸಿ ಸಂಜಯ್ ಕುಮಾರ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.












Click it and Unblock the Notifications