Earthquake: ಕೇವಲ 14 ಗಂಟೆಗಳಲ್ಲಿ 800 ಬಾರಿ ಕಂಪಿಸಿದ ಭೂಮಿ.!, ಎಲ್ಲಿ?
ಸಾಮಾನ್ಯವಾಗಿ ದಿನದಲ್ಲಿ ಒಂದೆರಡು ಬಾರಿ ಭೂಮಿ ಕಂಪಿಸಿರುವ ಅನುಭವ ಹಲವೆಡೆ ನಡದ ಉದಾಹರಣೆಗಳು ಇದೆ. ಆದರೆ ಐಸ್‌ಲೆಂಡ್‌ನಲ್ಲಿ ಕಳೆದ 14 ಗಂಟೆಗಳ ಅವಧಿಯಲ್ಲಿ 800 ಬಾರಿ ಭೂಮಿ ಕಂಪಿಸಿದ್ದು, ಇಲ್ಲಿನ ಜನರು ಭಯಭೀತರಾಗಿದ್ದಾರೆ.
ರಿಕ್ಟರ್ ಮಾಪನದಲ್ಲಿ 5.2ರಷ್ಟಿದ್ದ ತೀವ್ರತೆಯಿಂದಾಗಿ ಜ್ವಾಲಾಮುಖಿ ಸ್ಪೋಟಿಸುವ ಭೀತಿ ಎದುರಾಗಿದ್ದು, ಈ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಐಸ್‌ಲೆಂಡ್‌ನಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿದೆ. ದೇಶದ ನೈರುತ್ಯ ಭಾಗದ ರೆಕ್ಯಾಜೇನ್ಸ್ ಭಾಗದಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದೆ.

ಉತ್ತರದ ಗ್ರಿಂಡ್‌ವಿಕ್‌ನಲ್ಲಿ ಭೂಕಂಪದ ಕೇಂದ್ರ ಬಿಂದು ಇದೆ. ಈ ಸರಣಿ ಭೂಕಂಪದಿಂದ ಜ್ವಾಲಾಮುಖಿ ಸ್ಫೋಟಿಸುವ ಸಾಧ್ಯತೆಯಿದೆ ಎಂದು ನಾಗರಿಕ ರಕ್ಷಣೆ ಹಾಗೂ ತುರ್ತು ನಿರ್ವಹಣಾ ಇಲಾಖೆ ತಿಳಿಸಿದೆ.
ಗ್ರಿಂಡ್‌ವಿಕ್ ಪ್ರದೇಶದಲ್ಲಿ ಸುಮಾರು 4,000 ಜನರು ವಾಸ ಮಾಡುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಯಾವುದೇ ಅನಾಹುತಗಳಾಗಂದಂತೆ ಇವರನ್ನು ಸ್ಥಳಾಂತರಿಸುವ ಕಾರ್ಯ ಮುಂದುವರೆದಿದೆ. ಶುಕ್ರವಾರ (ನವೆಂಬರ್ 10) ಸಂಜೆ 5:30ರಿಂದ ಭೂಮಿ ಕಂಪಿಸಲು ಆರಂಭವಾಗುದೆ.
ಕಳೆದ ಅಕ್ಟೋಬರ್‌ನಿಂದ ಇಲ್ಲಿಯವರೆಗೆ ಸುಮಾರು 24 ಸಾವಿರ ಬಾರಿ ಭೂಮಿ ಕಂಪಿಸಿದ ಅನುಭವ ಇಲ್ಲಿನ ಜನರಿಗೆ ಆಗಿದೆ. ಅದರಲ್ಲೂ ಕಳೆದ 14 ಗಂಟೆಗಳಲ್ಲಿ 800 ಬಾರಿ ಭೂಮಿ ಕಂಪಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭೂಮಿಯ 5 ಕಿಲೋ ಮೀಟರ್ ಆಳದಲ್ಲಿ ಭೂಕಂಪ ಅಗಿದೆ. ಇಂತಹ ಸಮಯದಲ್ಲಿ ಲಾವಾರಸವು ಮೇಲೆ ಉಕ್ಕಲು ಕೆಲವೇ ಸಮಯಗಳಷ್ಟೇ ಸಾಕು. ಭೂಕಂಪ ಸಂಭವಿಸಿದ ಪ್ರದೇಶಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಇದರಿಂದ ಲಾವಾರಸ ಹರಿಯುವ ಸಾಧ್ಯತೆ ಹೆಚ್ಚು ಎಂದು ಇಲ್ಲಿನ ಜನ ಆತಂಕ ಹೊರಹಾಕಿದ್ದಾರೆ.
ಇನ್ನು ಗ್ರಿಂಡ್‌ವಿಕ್‌ನಲ್ಲಿ ತುರ್ತು ಚಿಕಿತ್ಸಾ ಕೇಂದ್ರ ಹಾಗೂ ನೆರವಿನ ಕೇಂದ್ರಗಳನ್ನು ತೆರೆಯಲಾಗಿದೆ. ಇದೇ ಮಾದರಿಯಲ್ಲಿ ದೇಶದ ಇತರ 3 ಕಡೆ ಇಂತಹ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನವದೆಹಲಿಯಲ್ಲಿ ಪ್ರಬಲ ಭೂಕಂಪ
ಮತ್ತೊಂದೆಡೆ ಇತ್ತೀಚೆಗಷ್ಟೇ ನವದೆಹಲಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದರು. ಈ ವೇಳೆ ರಿಕ್ಟರ್ ಮಾಪಕದಲ್ಲಿ 5.6 ತೀವ್ರತೆ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ನೇಪಾಳದಲ್ಲಿ ಭೂಕಂಪ ಈಗಾಗಲೇ ಸಂಚಲನ ಮೂಡಿಸಿದೆ. ಕಳೆದ ನಾಲ್ಕು ದಿನಗಳಲ್ಲಿ ಮೂರನೇ ಬಾರಿ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 5.6 ತೀವ್ರತೆ ದಾಖಲಾಗಿದೆ. ಅಲ್ಲಿ ಭೂಕಂಪವಾಗುತ್ತಿದ್ದಂತೆ ರಾಷ್ಟ್ರ ರಾಜಧಾನಿಯಲ್ಲಿ ಭೂಮಿ ಕಂಪಿಸಿದೆ.
ಒಂದು ವಾರದಲ್ಲಿ ಎರಡನೇ ಬಾರಿ ಭೂಕಂಪ ಸಂಭವಿಸಿರುವುದು ಜನತೆಯ ಆತಂಕಕ್ಕೆ ಕಾರಣವಾಗಿದೆ. ಸೋಮವಾರ ಪಶ್ಚಿಮ ನೇಪಾಳದಲ್ಲಿ 5.6 ತೀವ್ರತೆಯ ಭೂಕಂಪ ಸಂಭವಿಸಿದ್ದು, ಉತ್ತರ ಭಾರತದ ಕೆಲವು ಭಾಗಗಳಲ್ಲಿಯೂ ಬಲವಾದ ಕಂಪನಗಳು ಸಂಭವಿಸಿತ್ತು. ಉತ್ತರಪ್ರದೇಶ ಆಯೋಧ್ಯೆಯಿಂದ ಉತ್ತರಕ್ಕೆ ಭೂಕಂಪನದ ಕೇಂದ್ರಬಿಂದುವಿತ್ತು.
ನೇಪಾಳದಲ್ಲಿ ನಾಲ್ಕು ದಿನಗಳ ಅವಧಿಯಲ್ಲಿ ಮೂರು ಬಾರಿ ಭೂಕಂಪ ಸಂಭವಿಸಿದೆ. ಇತ್ತೀಚೆಗೆ ಸಂಭವಿಸಿದ ಭೂಕಂಪದಲ್ಲಿ 157 ಮಂದಿ ಪ್ರಾಣ ಕಳೆದುಕೊಂಡಿದ್ದರು. ನೂರಾರು ಮನೆಗಳು ನಾಶವಾಗಿವೆ. 2015ರಲ್ಲೂ ನೇಪಾಳದಲ್ಲಿ ಭೀಕರ ಭೂಕಂಪ ಸಂಭವಿಸಿತ್ತು. ಆಗ ರಿಕ್ಷರ್ ಮಾಪಕದಲ್ಲಿ 7.8 ತೀವ್ರತೆ ದಾಖಲಾಗಿತ್ತು. ಈ ವೇಳೆ 9 ಸಾವಿರ ಜನ ಪ್ರಾಣ ಕಳೆದುಕೊಂಡಿದ್ದರು. 22,000ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು ಎಂದು ತಿಳಿದುಬಂದಿತ್ತು.












Click it and Unblock the Notifications