Earthquake: ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪನ, ಬೆಚ್ಚಿಬಿದ್ದ ಜನ
ವಿಜಯಪುರ, ಡಿಸೆಂಬರ್, 08: ರಾಜ್ಯದ ವಿಜಯಪುರ ಜಿಲ್ಲೆಯಲ್ಲೇ ಅತೀ ಹೆಚ್ಚು ಬಾರಿ ಭೂಕಂಪನದ ಅನುಭವ ಆಗಿರೋದು. ಮತ್ತೇ ಇದೀಗ ಇಂದು (ಡಿಸೆಂಬರ್ 08) ಬೆಳ್ಳಂಬೆಳಗೆಯೇ ತಾಲೂಕಿನ ಉಕಿಮನಾಳ ಗ್ರಾಮದಲ್ಲಿ ಭೂಕಂಪಿಸಿದ್ದು, ಇದರಿಂದ ಇಲ್ಲಿನ ಜನರು ಬೆಚ್ಚಿಬಿದ್ದಿದ್ದಾರೆ.
ಗ್ರಾಮದಲ್ಲಿ 3ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಧಿಕಾರಿಗಳು ಮಾಹಿತಿ ನೀಡಿದ್ದರೆ. ಇನ್ನು ಕಳೆದ ಎರಡು ವರ್ಷಗಳಿಂದ ಈ ಜಿಲ್ಲೆಯಲ್ಲಿ ಪದೇ ಪದೇ ಭೂಕಂಪ ಆಗುತ್ತಲೇ ಇದೆ.

ಕೆಲ ದಿನಗಳಿಂದ ವಿಜಯನಗರ ಹಾಗೂ ಕಲಬುರಗಿ ಸುತ್ತಮುತ್ತ ಆಗಾಗ ಭೂಕಂಪನದ ಅನುಭವ ಆಗುತ್ತಲೇ ಇದೆ. ಅದೃಷ್ಟವಶಾತ್ ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5ನ್ನು ಮೀರಿ ಹೋಗಿಲ್ಲ. ಕಳೆದ ವರ್ಷ 10ಕ್ಕೂ ಹೆಚ್ಚು ಬಾರಿ ಈ ಪ್ರದೇಶದಲ್ಲಿ ಕಂಪನ ಸಂಭವಿಸಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ.
ಚೆನ್ನೈನಲ್ಲೂ ಕಂಪಿಸಿದ ಭೂಮಿ
ರಾಜ್ಯದಲ್ಲಿ ಅಷ್ಟೇ ಅಲ್ಲದೆ, ನೆರೆ ರಾಜ್ಯ ತಮಿಳುನಾಡಿನ ಚೆನ್ನೈನಲ್ಲೂ ಕೂಡ ಇಂದು ಬೆಳ್ಳಂಬೆಳಗ್ಗೆ ಭೂಕಂಪನದ ಅನುಭವ ಆಗಿದೆ. ತಮಿಳುನಾಡಿನ ಚೆಂಗಲ್ಪಟ್ಟುವಿನಲ್ಲಿ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 3.2ರಷ್ಟಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು.












Click it and Unblock the Notifications