Taiwan Earthquake: ತೈವಾನ್‌ನಲ್ಲಿ ಇಬ್ಬರು ಭಾರತೀಯರು ನಾಪತ್ತೆ; ಶೋಧ ಕಾರ್ಯ
ಪ್ರಬಲ ಭೂಕಂಪಕ್ಕೆ ತೈವಾನ್ ದೇಶ ತತ್ತರಿಸಿದೆ. ಬುಧವಾರ ತತ್ತರಿಸಿದ ಭೂಕಂಪದಲ್ಲಿ ಇಬ್ಬರು ಭಾರತೀಯರು ಕೂಡ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ. ಕಾಣೆಯಾಗಿರುವ ಭಾರತೀರು ಒಬ್ಬರು ಪುರುಷ ಮತ್ತು ಮಹಿಳೆಯಾಗಿದೆ ಎಂದು ತಿಳಿದುಬಂದಿದೆ.
ಇಬ್ಬರು ಭೂಕಂಪದಲ್ಲಿ ಕಾಣೆಯಾಗುವ ಮುನ್ನ ಕಂಪನದ ಕೇಂದ್ರಬಿಂದು ತಾರೊಕೊ ಗಾರ್ಜ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಇಬ್ಬರ ಪತ್ತೆಗೆ ಶೋಧಕಾರ್ಯ ನಡೆಯುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ತೈವಾನ್‌ನಲ್ಲಿ 25 ವರ್ಷಗಳಲ್ಲಿ ಪ್ರಬಲವಾದ ಭೂಕಂಪನದಲ್ಲಿ ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು 1,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
ಹಲವು ಕಟ್ಟಡಗಳು ನೆಲಸಮ
ಭೂಕಂಪದ ಕೇಂದ್ರಬಿಂದುವು ಹುವಾಲಿಯನ್ ಕೌಂಟಿಯ ಕರಾವಳಿಯಲ್ಲಿದೆ, ಭೂಕಂಪನದಿಂದ ಕೆಲವು ಕಟ್ಟಡಗಳು ವಾಲಿದ್ದು, ನೆಲಮಹಡಿಗಳು ಪುಡಿ ಪುಡಿಯಾಗಿವೆ.
ಭೂಕಂಪನದ ಸ್ಥಳದಿಂದ 150 ಕಿ.ಮೀ ದೂರದಲ್ಲಿದ್ದ ತೈಪೆಯ ರಾಜಧಾನಿಯಲ್ಲೂ ಹಳೆಯ ಕಟ್ಟಡಗಳು ಬಿರುಕು ಬಿಟ್ಟವು. ಶಾಲೆಗಳಲ್ಲಿದ್ದ ವಿದ್ಯಾರ್ಥಿಗಳನ್ನು ಮುಂಜಾಗ್ರತಾ ಕ್ರಮವಾಗಿ ಮೈದಾನಗಳಿಗೆ ಸ್ಥಳಾಂತಿರಸಲಾಯಿತು.
ಭೂಕಂಪನದ ಅನುಭವವಾಗುತ್ತಿದ್ದಂತೆ ಕೆಲವು ಮಕ್ಕಳು ಬೀಳುವ ವಸ್ತುಗಳ ವಿರುದ್ಧ ರಕ್ಷಿಸಲು ಪಠ್ಯಪುಸ್ತಕಗಳಿಂದ ತಮ್ಮನ್ನು ತಾವು ಮುಚ್ಚಿಕೊಳ್ಳುತ್ತಿರುವುದು ಕಂಡುಬಂದಿದೆ ಎಂದು ಎಪಿ ವರದಿ ಮಾಡಿದೆ.
ಕುಸಿದುಬಿದ್ದಿರುವ ಕಟ್ಟಡಗಳ ಅಡಿಯಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಹೆಚ್ಚು ತೊಂದರೆಯಲ್ಲಿರುವುದನ್ನು ತಿಳಿದುಕೊಂಡು ಮತ್ತು ಅವರನ್ನು ಪತ್ತೆಹಚ್ಚಲು ಅಥವಾ ಮುಕ್ತಗೊಳಿಸಲು ಕೆಲಸ ಮಾಡಲಾಗುತ್ತಿದೆ.
ಎರಡು ರಾಕ್ ಕ್ವಾರಿಗಳಲ್ಲಿ ಸಿಕ್ಕಿಬಿದ್ದ ಸುಮಾರು 70 ಕಾರ್ಮಿಕರು ಸುರಕ್ಷಿತವಾಗಿದ್ದಾರೆ ಎಂದು ಅಗ್ನಿಶಾಮಕ ಸಂಸ್ಥೆ ತಿಳಿಸಿದೆ, ಆದರೆ ಅವರನ್ನು ತಲುಪುವ ರಸ್ತೆಗಳು ಬಂಡೆಗಳು ಬೀಳುವುದರಿಂದ ಹಾನಿಗೊಳಗಾಗಿದ್ದು. ಗುರುವಾರ ಆರು ಕಾರ್ಮಿಕರನ್ನು ಏರ್ ಲಿಫ್ಟ್ ಮಾಡುವುದಾಗಿ ತಿಳಿಸಿದ್ದಾರೆ.












Click it and Unblock the Notifications