Earthquake: ಚೆನ್ನೈನ ಈ ಭಾಗದಲ್ಲಿ ಗಢಗಢ ನಡುಗಿದ ಭೂಮಿ

ಚೆನ್ನೈ, ಡಿಸೆಂಬರ್‌, 08: ಮೇಲ್ಮೈನ ಒತ್ತಡ ಸೇರಿದಂತೆ ಇನ್ನು ಹಲವು ಕಾರಣಗಳಿಂದ ಆಗಾಗ ಭೂಮಿ ಕಂಪಿಸುತ್ತಿರುತ್ತದೆ. ಅಲ್ಲದೆ ಈಗಾಗಲೇ ಕರ್ನಾಟಕ ವಿಜಯಪುರ ಜಿಲ್ಲೆಯಲ್ಲೇ ಅತೀ ಹೆಚ್ಚು ಬಾರಿ ಭೂಮಿ ಕಂಪಿಸಿದ ಅನುಭವ ಆಗಿರುವ ಘಟನೆಗಳು ನಡೆದಿವೆ. ಇದೀಗ ತಮಿಳುನಾಡು ರಾಜಧಾನಿ ಚೆನ್ನೈ ಬಳಿಯ ಚೆಂಗಲ್‌ಪಟ್ಟುನಲ್ಲಿ ಇಂದು (ಡಿಸೆಂಬರ್ 8) ಬೆಳ್ಳಂಬೆಳಗ್ಗೆ ಭೂಕಂಪನವಾದ ಘಟನೆ ನಡೆದಿದೆ.

ಭೂಮಿ ಕಂಪಿಸಿದ ಅನುಭವದಿಂದಾಗಿದ ಇಲ್ಲಿನ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಇನ್ನು ರಿಕ್ಟರ್ ಮಾಪಕದಲ್ಲಿ 3.2 ತೀವ್ರತೆ ದಾಖಲು ಆಗಿರುವುದಾಗಿ ರಾಷ್ಟ್ರೀಯ ಭೂಕಂಪನಶಾಸ್ತ್ರದ ಕೇಂದ್ರ-ಎನ್‌ಸಿಎಸ್‌ ಮಾಹಿತಿ ನೀಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Earthquake in this part of Chennai

ಹಾಗೆಯೇ ಚೆನ್ನೈನ ಪ್ರಾದೇಶಿಕ ಹವಾಮಾನ ಕೇಂದ್ರವು ಇಂದು ಬಿಡುಗಡೆ ಮಾಡಿದ ದೈನಂದಿನ ಹವಾಮಾನ ವರದಿ ಪ್ರಕಾರ, ಚೆಂಗಲ್ಪಟ್ಟು, ಚೆನ್ನೈ, ತಿರುವಳ್ಳೂರ್ ಮತ್ತು ಕಾಂಚೀಪುರಂನಲ್ಲಿ ಲಘು ಮಳೆಯಾಗುವ ನಿರೀಕ್ಷೆಯಿದೆ.

ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪ

ಹಾಗೆಯೆ ಮತ್ತೊಂದೆಡೆ ತಾಲೂಕಿನ ಉಕಿಮನಾಳ ಗ್ರಾಮದಲ್ಲಿ ಭೂಕಂಪವಾಗಿದೆ. ಇಂದು (ಡಿಸೆಂಬರ್‌ 08) ಬೆಳ್ಳಂಬೆಳಗ್ಗೆ ಉಕಿಮನಾಳ ಗ್ರಾಮದಲ್ಲಿ 3ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಳೆದೆರಡು ವರ್ಷಗಳಿಂದ ವಿಜಯಪುರ ಜಿಲ್ಲೆಯಲ್ಲಿ ಪದೇ ಪದೇ ಭೂಕಂಪ ಆಗುತ್ತಲೇ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+