ತಾನೇ ಕೆಲಸ ಮಾಡಿದ ಸಿನಿಮಾದ ಕತೆಯಂತೆ ಆಗಿದೆ ಮಗನ ಬದುಕು
Recommended Video

ಚೆನ್ನೈ, ಫೆಬ್ರವರಿ 27: ತಮಿಳು ಸಿನಿಮಾ ನಿರ್ದೇಶಕ ಮಣಿರತ್ನಂ ಅವರು 2017 ರಲ್ಲಿ ಒಂದು ಸಿನಿಮಾ ಮಾಡಿದ್ದರು, 'ಕಾಟ್ರು ವಿಲೆಯಾಡಿ' ಎಂದು ಅದರ ಹೆಸರು. ಆ ಚಿತ್ರಕ್ಕೂ ಇಂದು ಭಾರತದ ವಿಂಗ್ ಕಮಾಂಡರ್ ಅಭಿನಂದನ್ ಅವರು ಪಾಕ್ ಸೈನ್ಯಕ್ಕೆ ಸೆರೆ ಸಿಕ್ಕಿರುವುದಕ್ಕೂ ಮನಕಲುಕುವ ಸಂಬಂಧವೊಂದಿದೆ.
ಆ ಸಿನಿಮಾದಲ್ಲಿಯೂ ಸಹ ನಾಯಕ ಏರ್ ವಿಂಗ್ ಕಮಾಂಡರ್ ಆಗಿರುತ್ತಾನೆ ಮತ್ತು ಪಾಕಿಸ್ತಾನದ ಸೈನ್ಯಕ್ಕೆ ಸೆರೆಸಿಕ್ಕುತ್ತಾನೆ. ಇಷ್ಟೆ ಆಗಿದ್ದರೆ ಇದು ದೊಡ್ಡ ವಿಷಯವಲ್ಲ. ಆದರೆ ಆ ಸಿನಿಮಾದ ಕತೆಗೆ ಸಹಾಯ ಮಾಡಿದವರು ಇಂದು ಪಾಕ್ ಸೇನೆಯ ಬಂಧನದಲ್ಲಿರುವ ಅಭಿನಂದನ್ ಅವರ ತಂದೆಯೇ!
ಹೌದು, ಪಾಕ್ ಸೇನೆಗೆ ಸೆರೆ ಸಿಕ್ಕಿರುವ ಅಭಿನಂದನ್ ಅವರ ತಂದೆ ವಾರ್ತಮನ್ ಅವರು ಏರ್ ಮಾರ್ಷಲ್ ಕಾರ್ಯ ನಿರ್ವಹಿಸಿದವರು. ಅವರು 'ಕಾಟ್ರು ವಿಲೆಯಾಡು' ಸಿನಿಮಾದ ಕತೆಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು.

ಅವರು ಸಹಾಯ ಮಾಡಿದ ಸಿನಿಮಾದ ಕತೆಯ ನಾಯಕನ ಪರಿಸ್ಥಿತಿಯಲ್ಲಿ ಇಂದು ಸ್ವತಃ ತಮ್ಮ ಮಗ ಇದ್ದಾನೆ ಆದರೆ ಅದು ಸಿನಿಮಾ, ಅಲ್ಲಿ ನಾಯಕ ತಪ್ಪಿಸಿಕೊಂಡು ಬರುತ್ತಾನೆ ಆದರೆ ಇದು ನಿಜ ಜೀವನ. ಇಲ್ಲಿ 'ಹಿರೋಯಿಸಂ'ಗೆ ಅವಕಾಶ ಕಡಿಮೆ.
ಅಭಿನಂದನ್ ಅವರ ತಂದೆ ವಾರ್ತಮನ್ ಅವರು ಭಾರತೀಯ ವಾಯು ಸೇನೆಯಲ್ಲಿ ಬಹುಕಾಲ ಸೇವೆ ಸಲ್ಲಿಸಿದವರು. ಏರ್ ಮಾರ್ಷಲ್ ಅಂತಹಾ ಉನ್ನತ ಹುದ್ದೆಗಳನ್ನು ನಿಭಾಯಿಸಿ ನಿವೃತ್ತರಾಗಿದ್ದಾರೆ.
ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿದ ಅವರಿಗೆ ಸೇನೆಯ ನಿಷ್ಠೆ ಕರ್ತವ್ಯಪ್ರಜ್ಞೆ, ತ್ಯಾಗ, ಬಲಿದಾನಗಳ ಅರಿವು ಇದೆ. ಆದರೆ ತಮ್ಮ ಕರುಳ ಕುಡಿ ಪಾಕ್‌ನಲ್ಲಿ ಭಯದ ನೆರಳಲ್ಲಿ ಒದ್ದಾಡುತ್ತಿರುವುದು ಹಿರಿಯ ಜೀವಕ್ಕೆ ಅಪಾರ ನೋವು ತಂದಿರಲು ಸಾಕು.












Click it and Unblock the Notifications