ಕಲಾಪಗಳಿಗೆ ಸತತ ಗೈರಾಗುವ ಬಿಜೆಪಿ ಸಂಸದರಿಗೆ ಕಾದಿದೆ ಶಿಕ್ಷೆ!

ಸಂಸತ್ ಕಲಾಪಗಳಿಗೆ ಸತತವಾಗಿ ಗೈರಾಗುವ ಬಿಜೆಪಿ ಸಂಸದರಿಗೆ ಎಚ್ಚರಿಕೆ ನೀಡಿದ ಮೋದಿ. ಸತತ ಗೈರಾಗುವ ಸಂಸದರಿಗೆ ಮುಂದಿನ ಚುನಾವಣೆಯಲ್ಲಿ ಸೂಕ್ತ ಉತ್ತರ ನೀಡುವುದಾಗಿ ಎಚ್ಚರಿಕೆ.

ನವದೆಹಲಿ, ಆಗಸ್ಟ್ 11: ಸಂಸತ್ತಿನ ಕಲಾಪಗಳಿಗೆ ಸತತವಾಗಿ ಗೈರು ಹಾಜರಾಗುತ್ತಿರುವ ಬಿಜೆಪಿ ಸಂಸದರಿಗೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಎಚ್ಚರಿಸಿದ್ದಾರೆ.

ರಾಜ್ಯಸಭೆಯಲ್ಲಿ ಗುರುವಾರ ಈ ವಿಚಾರ ಪ್ರಸ್ತಾಪಿಸಿದ ಮೋದಿ, ''ನಿಮ್ಮ (ಬಿಜೆಪಿ ಸಂಸದರು) ಇಚ್ಛೆಯಂತೆ ನಡೆಯುತ್ತಿದ್ದೀರಿ. ಪರವಾಗಿಲ್ಲ ಹಾಗೇ ನಡೆದುಕೊಳ್ಳಿ. ಆದರೆ, ನಾನು ಏನು ಮಾಡಬೇಕೋ ಅದನ್ನೇ ಮಾಡುತ್ತೇನೆ'' ಎಂದಿದ್ದಾರೆ.

Will take action in 2019: PM to absentee MPs

''ನಾನು ಈಗ ಮಾತನಾಡುವುದಿಲ್ಲ. 2019ರ ಮಹಾ ಚುನಾವಣೆ ವೇಳೆ ಮಾತನಾಡುತ್ತೇನೆ'' ಎಂದು ಅವರು ಮಾರ್ಮಿಕವಾಗಿ ಹೇಳಿದ್ದಾರೆ. ರಾಜ್ಯ ಸಭೆ ಮಾತ್ರವಲ್ಲ, ಲೋಕಸಭೆಯಲ್ಲಿರುವ ಬಿಜೆಪಿ ಸಂಸದರಿಗೂ ಅನ್ವಯಿಸಿ ಮೋದಿ ಈ ಮಾತುಗಳನ್ನು ಹೇಳಿದ್ದಾರೆ.

ಪ್ರಧಾನಿಯವರ ಈ ಹೇಳಿಕೆಯು ಈಗಾಗಲೇ ಬಿಜೆಪಿ ಸಂಸದರಲ್ಲಿ ಆತಂಕ ಸೃಷ್ಟಿಸಿದ್ದು, ಸತತ ಗೈರು ಹಾಜರಾದವರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಸಿಗುವುದಿಲ್ಲ ಎಂಬ ಸುದ್ದಿಗಳು ಬಿಜೆಪಿ ವಲಯದಲ್ಲಿ ಹರಿದಾಡುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+