Narendra Modi Visit Tirupati: ತಿರುಮಲ ಶ್ರೀವಾರಿ ಸೇವೆಯಲ್ಲಿ ಪ್ರಧಾನಿ ಮೋದಿ: ಕಾರ್ತಿಕ ಹುಣ್ಣಿಮೆಯಂದು ವೆಂಕಣ್ಣನ ದರ್ಶನ
ಪ್ರಧಾನಿ ನರೇಂದ್ರ ಮೋದಿ ಅವರು ತಿರುಮಲ ಶ್ರೀಗಳ ದರ್ಶನ ಪಡೆದರು. ದೇವಸ್ಥಾನದ ಮಹಾದ್ವಾರದ ಬಳಿ ಟಿಟಿಡಿ ಅಧ್ಯಕ್ಷ ಭೂಮನ ಕರುಣಾಕರ್ ರೆಡ್ಡಿ ಮತ್ತು ಇವೊ ಧರ್ಮಾ ರೆಡ್ಡಿ ಅವರು ಪ್ರಧಾನಿ ಅವರನ್ನು ಸ್ವಾಗತಿಸಿದರು. ಬಳಿಕ ಶ್ರೀವಾರಿಯ ಸೇವೆಯಲ್ಲಿ ಪಾಲ್ಗೊಂಡರು.
ಇದೇ ವೇಳೆ ಟಿಟಿಡಿ ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ ಹಾಗೂ ಇವೊ ಧರ್ಮ ರೆಡ್ಡಿ ಅವರು ಪ್ರಧಾನಿಗೆ ಸ್ವಾಮಿಯ ಭಾವಚಿತ್ರ ಹಾಗೂ ತೀರ್ಥ ಪ್ರಸಾದ ನೀಡಿ ಗೌರವಿಸಿದರು. ದೇವಾಲಯದಲ್ಲಿ ಪ್ರಧಾನಿ ಸುಮಾರು 50 ನಿಮಿಷಗಳ ಕಾಲ ಕಳೆದರು. ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ತಿರುಮಲಕ್ಕೆ ಭೇಟಿ ನೀಡುತ್ತಿರುವುದು ಇದು ನಾಲ್ಕನೇ ಬಾರಿ. ತಿರುಮಲದಿಂದ ಹೊರಟು ತೆಲಂಗಾಣಕ್ಕೆ ಬರಲಿರುವ ಪ್ರಧಾನಿ, ಇಂದು ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ.

ಪ್ರಧಾನಿಯವರ ಭೇಟಿ ಎರಡು ದಿನಗಳ ಕಾಲ ಮುಂದುವರಿಯಲಿದೆ. ನವೆಂಬರ್ 26ರಂದು ಸಂಜೆ 6.50ಕ್ಕೆ ವಿಶೇಷ ವಿಮಾನದಲ್ಲಿ ತಿರುಪತಿ ಜಿಲ್ಲೆಯ ರೇಣಿಗುಂಟಾ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಆಗಮಿಸಿದರು. ರಾಜ್ಯಪಾಲ ಅಬ್ದುಲ್ ನಜೀರ್ ಮತ್ತು ಮುಖ್ಯಮಂತ್ರಿ ವೈಎಸ್ ಜಗನ್ ಅವರು ಪ್ರಧಾನಿಯವರಿಗೆ ಪುಷ್ಪನಮನ ಸಲ್ಲಿಸಿ ಶಾಲು ಹೊದಿಸಿ ಆತ್ಮೀಯವಾಗಿ ಸ್ವಾಗತಿಸಿದರು. ಅಲ್ಲಿಂದ ರಾತ್ರಿ 7:50ಕ್ಕೆ ರಸ್ತೆ ಮಾರ್ಗವಾಗಿ ತಿರುಮಲ ತಲುಪಿ ಬೆಟ್ಟದ ಮೇಲಿರುವ ಶ್ರೀರಚನಾ ಅತಿಥಿಗೃಹದಲ್ಲಿ ತಂಗಿದ್ದರು.
ನವೆಂಬರ್ 27 ರಂದು ಬೆಳಿಗ್ಗೆ 7:55 ಕ್ಕೆ ಶ್ರೀಗಳ ದರ್ಶನ ಪಡೆದರು. ದೇವಾಲಯದಲ್ಲಿ ಪ್ರಧಾನಿ ಸುಮಾರು 50 ನಿಮಿಷಗಳ ಕಾಲ ಕಳೆದರು. ಸ್ವಾಮಿಯ ದರ್ಶನದ ನಂತರ ವೇದ ವಿದ್ವಾಂಸರ ಆಶೀರ್ವಾದ ಮತ್ತು ಪ್ರಸಾದ ಸ್ವೀಕರಿಸಿ ಶ್ರೀರಚನಾ ಅತಿಥಿಗೃಹಕ್ಕೆ ಮರಳಲಿದ್ದಾರೆ. ಸ್ವಲ್ಪ ವಿಶ್ರಾಂತಿ ಪಡೆದು ತಿರುಮಲದಿಂದ 9:30ಕ್ಕೆ ಹೊರಡಲಿದ್ದಾರೆ. ಅಲ್ಲಿಂದ ತಿರುಪತಿ ವಿಮಾನ ನಿಲ್ದಾಣ ತಲುಪಿ ವಿಶೇಷ ವಿಮಾನದ ಮೂಲಕ ತೆಲಂಗಾಣಕ್ಕೆ ತೆರಳಲಿದ್ದಾರೆ.
ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಲವೆಡೆ ಪ್ರಚಾರ ನಡೆಸುತ್ತಿದ್ದಾರೆ. ರಾಜಸ್ಥಾನದಲ್ಲಿ ಚುನಾವಣೆ ಈಗಾಗಲೆ ನಡೆದಿದೆ. ತೆಲಂಗಾಣದಲ್ಲಿ ನವೆಂಬರ್ 30 ರಂದು ಚುನಾವಣೆ ನಡೆಯುತ್ತಿದೆ. ಇಂದು ಅವರು ತೆಲಂಗಾಣದಲ್ಲಿ ಮೋದಿ ಪ್ರಚಾರ ನಡೆಸಲಿದ್ದಾರೆ.

ಪಂಚ ರಾಜ್ಯಗಳ ಚುನಾವಣೆ
ತೆಲಂಗಾಣ ವಿಧಾನಸಭೆ ಚುನಾವಣೆ ನವೆಂಬರ್ 30ರಂದು ನಡೆಯಲಿದೆ. ದೇಶದಲ್ಲಿ ಪಂಚರಾಜ್ಯಗಳ ಚುನಾವಣೆ ನಡೆಯುತ್ತಿದ್ದು ಒಂದೇ ದಿನ ಫಲಿತಾಂಶ ಬರಲಿದೆ. ಈಗಾಗಲೇ ಮಿಜೋರಾಂ ರಾಜ್ಯದ ಚುನಾವಣೆ ನವೆಂಬರ್ 7ರಂದು ಒಂದೇ ಹಂತದಲ್ಲಿ ನಡೆದಿತ್ತು, ಛತ್ತಿಸ್‌ಗಢದಲ್ಲಿ ಮೊದಲ ಹಂತದ ಚುನಾವಣೆ ನವೆಂಬರ್ 7 ಮತ್ತು ಎರಡನೇ ಹಂತದ ಚುನಾವಣೆ ನವೆಂಬರ್ 17ರಂದು ನಡೆದಿದೆ. ಮಧ್ಯಪ್ರದೇಶ ಚುನಾವಣೆ ಕೂಡ ನವೆಂಬರ್ 17ರಂದು ನಡೆದಿದ್ದು, ರಾಜಸ್ಥಾನ ವಿಧಾನಸಭೆ ಚುನಾವಣೆ ನವೆಂಬರ್ 23ರಂದು ನಡೆದಿದೆ. ಐದು ರಾಜ್ಯಗಳ ಚುನಾವಣಾ ಫಲಿತಾಂಶ ಡಿಸೆಂಬರ್ 3ರಂದು ಪ್ರಕಟವಾಗಲಿದೆ.
ತೆಲಂಗಾಣದಲ್ಲಿ ಮೋದಿ ಪ್ರಚಾರ
ತೆಲಂಗಾಣದಲ್ಲಿ 119 ಕ್ಷೇತ್ರಗಳಿಗೆ ವಿಧಾನಸಭೆ ಚುನಾವಣೆ ನಡೆಯಲಿದ್ದು ಆಡಿಳಿತಾರೂಢ ಭಾರತ್ ರಾಷ್ಟ್ರ ಸಮಿತಿ (BRS) 36-39 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದ್ದು, ಕಾಂಗ್ರೆಸ್ 69 ರಿಂದ 72 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಹೇಳಿದೆ. ಎಐಎಂಐಎಂ 5-6 ಸ್ಥಾನಗಳಲ್ಲಿ, ಬಿಜೆಪಿ 2-3 ಮತ್ತು ಇತರೆ 0-1 ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. ಸಮೀಕ್ಷೆಗಳ ಫಲಿತಾಂಶವನ್ನು ನಿಜವಾಗಿಸಲು ಬಿಜೆಪಿ ಪ್ರಯತ್ನಿಸುತ್ತಿದೆ.












Click it and Unblock the Notifications