ನೇತಾಜಿ ಭಾರತ ಮೊದಲ ಪ್ರಧಾನಿ; ಕಂಗನಾ ಹೇಳಿಕೆಗೆ ಸುಭಾಷ್ ಚಂದ್ರ ಬೋಸ್ ಕುಟುಂಬಸ್ಥರ ಆಕ್ರೋಶ

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಭಾರತದ ಮೊದಲ ಪ್ರಧಾನ ಮಂತ್ರಿ ಎಂದು ಹೇಳಿಕೆ ನೀಡಿದ್ದ ಕಂಗನಾ ರಣಾವತ್ ವಿರುದ್ಧ ನೇತಾಜಿ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಟಿ, ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್ ಇತ್ತೀಚೆಗೆ ನೇತಾಜಿ ಅವರು ಭಾರತದ ಮೊದಲ ಪ್ರಧಾನಿ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದರು. ಅವರ ಹೇಳಿಕೆಯನ್ನು ಕಾಂಗ್ರೆಸ್ ಸೇರಿದಂತೆ ವಿವಿಧ ಮುಖಂಡರು ಖಂಡಿಸಿದ್ದರು.

Netaji s Family Slams Kangana Ranaut s First PM Remark

ಈಗ ಸ್ವತಃ, ನೇತಾಜಿ ಅವರ ಕುಟುಂಬಸ್ಥರೇ ಕಂಗನಾ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ. ಸುಭಾಸ್ ಚಂದ್ರ ಬೋಸ್ ಅವರ ಮೊಮ್ಮಗ ಚಂದ್ರ ಕುಮಾರ್ ಬೋಸ್ ಎಕ್ಸ್‌ನಲ್ಲಿ ಲೇಖನ ಹಂಚಿಕೊಂಡಿದ್ದು, "ಯಾರೂ ತಮ್ಮ ರಾಜಕೀಯ ಮಹತ್ವಾಕಾಂಕ್ಷೆಗಾಗಿ ಇತಿಹಾಸವನ್ನು ತಿರುಚಬಾರದು" ಎಂದಿದ್ದಾರೆ.

ಎಕ್ಸ್‌ ಪೋಸ್ಟ್‌ನಲ್ಲಿ "ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ರಾಜಕೀಯ ಚಿಂತಕ, ಸೈನಿಕ, ರಾಜನೀತಿಜ್ಞ, ದೂರದೃಷ್ಟಿ ಮತ್ತು ಅವಿಭಜಿತ ಭಾರತದ 1 ನೇ ಪ್ರಧಾನಿ. ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಭಾರತೀಯರಾಗಿ ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸಿದ ಏಕೈಕ ನಾಯಕ. ಅವರ ಆದರ್ಶಗಳನ್ನು ಅನುಸರಿಸುವುದು ಅವರಿಗೆ ನೀಡುವ ನಿಜವಾದ ಗೌರವವಾಗಿದೆ" ಎಂದು ಚಂದ್ರಕುಮಾರ್ ಬೋಸ್ ಹೇಳಿದ್ದಾರೆ.

ಬಿಜೆಪಿ ತೊರೆದ ಚಂದ್ರಕುಮಾರ್ ಬೋಸ್

2023ರ ಸೆಪ್ಟೆಂಬರ್‌ನಲ್ಲಿ ಚಂದ್ರಕುಮಾರ್ ಬೋಸ್ ಅವರು ಬಿಜೆಪಿಗೆ ರಾಜೀನಾಮೆ ನೀಡಿದ್ದರು, ಅವರ ತತ್ವಗಳು ಪಕ್ಷದೊಂದಿಗೆ ಹೊಂದಿಕೆಯಾಗುವುದಿಲ್ಲ ಎಂದು ಹೇಳಿಕೆ ನೀಡಿದ್ದರು.

ಹಿಮಾಚಲ ಪ್ರದೇಶದ ಮಂಡಿಯಿಂದ ಬಿಜೆಪಿಯ ಲೋಕಸಭಾ ಅಭ್ಯರ್ಥಿಯಾಗಿರುವ ಕಂಗನಾ ರಣಾವತ್ ಅವರು ನೇತಾಜಿ ಬಗ್ಗೆ ಮಾಡಿದ ಹೇಳಿಕೆಗೆ ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಮಾಡಿದ ನಂತರ ಚಂದ್ರಕುಮಾರ್ ಬೋಸ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಹೇಳಿಕೆ ಸಮರ್ಥಿಸಿಕೊಂಡ ಕಂಗನಾ

ಎಕ್ಸ್‌ನಲ್ಲಿನ ಸುದ್ದಿ ಲೇಖನದ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡ ಕಂಗನಾ ರನೌತ್, ತನ್ನನ್ನು ಟ್ರೋಲ್ ಮಾಡುವವರಿಗೆ ಇತಿಹಾಸವನ್ನು ಓದುವಂತೆ ಉತ್ತರ ನೀಡಿದ್ದಾರೆ. ನೇತಾಜಿ ಅವರು 1943 ರಲ್ಲಿ ಸಿಂಗಾಪುರದಲ್ಲಿ ಆಜಾದ್ ಹಿಂದ್ ಸರ್ಕಾರವನ್ನು ರಚಿಸಿದರು ಮತ್ತು ಸ್ವತಃ ಮೊದಲ ಪ್ರಧಾನಿ ಎಂದು ಘೋಷಿಸಿದರು ಎಂದು ಲೇಖನದಲ್ಲಿ ಹೇಳಲಾಗಿದೆ.

ಕಂಗನಾ ರಣಾವತ್ 2024ರ ಲೋಕಸಭಾ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದಾರೆ. ಮೊದಲ ಬಾರಿಗೆ ಚುನಾವಣೆಗೆ ನಿಂತಿರುವ ಕಂಗನಾ ಮೋದಿ ಹೆಸರಿನಲ್ಲಿ ಮತ ಕೇಳುವುದಾಗಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+