• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೇಶದಲ್ಲಿರುವ 'ಶತ್ರುಗಳ ಆಸ್ತಿ' ಮಾರಾಟಕ್ಕೆ ಮುಂದಾದ ಸರಕಾರ, ಹೀಗಂದರೆ ಏನು?

|

ನವದೆಹಲಿ, ನವೆಂಬರ್ 9: 1947ರ ದೇಶ ವಿಭಜನೆ ಸಂದರ್ಭದಲ್ಲಿ, ಆ ನಂತರದ ಯುದ್ಧದ ವೇಳೆ ಶತ್ರು ದೇಶಗಳಿಗೆ ತೆರಳಿದವರ ಆಸ್ತಿ ಮಾರಾಟ ಮಾಡಲು ಕೇಂದ್ರ ಸರಕಾರ ಮುಂದಾಗಿದೆ. ಇಂಥ ಆಸ್ತಿಗಳ ಪ್ರಮಾಣ ಕನಿಷ್ಠ 3 ಸಾವಿರ ಕೋಟಿ ರುಪಾಯಿ ($ 412.26 ಮಿಲಿಯನ್) ಎಂದು ಅಂದಾಜು ಮಾಡಲಾಗಿದೆ.

"ಶತ್ರುಗಳ ಆಸ್ತಿ" ಎಂದು ಯಾವುದನ್ನು ಪರಿಗಣಿಸುತ್ತಾರೆಂದರೆ, ಒಂದು ಕಾಲದಲ್ಲಿ ಯಾರು ಆ ಸ್ವತ್ತಿನ ಮಾಲೀಕರಾಗಿದ್ದರೋ ಮತ್ತು ಯಾರು ಆನಂತರ ಪಾಕಿಸ್ತಾನ ಹಾಗೂ ಚೀನಾಗೆ ತೆರಳಿದರೋ ಅಂಥ ಆಸ್ತಿಯನ್ನು ಶತ್ರುಗಳ ಆಸ್ತಿ ಎಂದು ಪರಿಗಣಿಸಲಾಗುತ್ತದೆ. ಆ ಎರಡೂ ದೇಶಗಳ ಜತೆಗೆ ಭಾರತವು ಯುದ್ಧ ಕೂಡ ಮಾಡಿದೆ.

MSMEಗಳಿಗೆ 1 ಗಂಟೆಯಲ್ಲಿ 1 ಕೋಟಿ ಸಾಲ ಸೇರಿ 12 ಯೋಜನೆ ಘೋಷಣೆ

ಒಮ್ಮೆ ಭಾರತದ ನಾಗರಿಕರು ಪಾಕಿಸ್ತಾನ ಅಥವಾ ಚೀನಾದ ಪೌರತ್ವ ಪಡೆದ ಮೇಲೆ ಅವರನ್ನು 'ಶತ್ರುಗಳು' ಎಂದು ಪರಿಗಣಿಸಲಾಗುತ್ತದೆ. ಭಾರತದಲ್ಲಿರುವ ಅವರು ಭೂಮಿ, ಮನೆ ಹಾಗೂ ಷೇರುಗಳು ಇವುಗಳನ್ನೆಲ್ಲ ಶತ್ರುಗಳ ಆಸ್ತಿ ಎನ್ನಲಾಗುತ್ತದೆ.

Narendra Modi

ಮೋದಿ ಸರಕಾರವು ಶತ್ರುಗಳ ಆಸ್ತಿ ಕಾಯ್ದೆ 1968 ಅನ್ನು ಇನ್ನಷ್ಟು ಬಿಗಿಗೊಳಿಸಿದೆ. ಆ ಕಾಯ್ದೆ ಅಡಿಯಲ್ಲಿ ಶತ್ರುಗಳು ಎಂದು ಪರಿಗಣಿಸುವವರ ಉತ್ತರಾಧಿಕಾರಿಗಳಿಗೂ ಆ ಆಸ್ತಿಯನ್ನು ಸುಲಭವಾಗಿ ದಕ್ಕಿಸಿಕೊಳ್ಳಲು ಸಾಧ್ಯವಿಲ್ಲ.

ಯಾರು ಭಾರತ ಬಿಟ್ಟು ಪಾಕಿಸ್ತಾನಕ್ಕೆ ಹೋಗಿದ್ದರೋ ಅವರು ಮುಸ್ಲಿಮರು. ಹಲವು ಬಿಕ್ಕಟ್ಟುಗಳ ಜತೆಗೆ ಇನ್ನೂ ಎರಡೂ ದೇಶಗಳ ಮಧ್ಯೆ ಸಂಬಂಧ ಸುಧಾರಿಸಿಲ್ಲ. ಪಾಕಿಸ್ತಾನವು ಸಹ ಇದೇ ರೀತಿಯ ಕಾನೂನು ಜಾರಿಯಲ್ಲಿಟ್ಟಿದೆ. ಯಾರು ವಿಭಜನೆ ಸಂದರ್ಭದಲ್ಲಿ ಭಾರತಕ್ಕೆ ಬಂದರೋ ಅವರಿಗೆ ಈ ಕಾನೂನು ಅನ್ವಯ ಆಗುತ್ತದೆ.

ಎಬಿಪಿ ಸಮೀಕ್ಷೆ: ಎನ್‌ಡಿಎಗೆ 300, ಯುಪಿಎಗೆ 116, ಇತರೆ 127 ಸ್ಥಾನಗಳು

ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನ ಕೆಲವು ಜನಕಲ್ಯಾಣ ಯೋಜನೆಗಳನ್ನು ಸರಕಾರ ಕೈಗೆತ್ತಿಕೊಳ್ಳಲಿದ್ದು, ಅದಕ್ಕಾಗಿ ಹಣಕಾಸು ಹೊಂದಿಸುತ್ತಿದೆ. ಇದರ ಸಲುವಾಗಿ ಇಂಥದ್ದೊಂದು ಕ್ರಮಕ್ಕೆ ಮುಂದಾಗಿದೆ ಎನ್ನಲಾಗುತ್ತಿದೆ. ಇಂಥ ಮಾರಾಟದಿಂದ ಬರುವ ಮೊತ್ತವನ್ನು ಸರಕಾರವು ಬಂಡವಾಳ ಹಿಂತೆಗೆತದ ಭಾಗ ಎಂದು ಪರಿಗಣಿಸುವುದಾಗಿ ಹೇಳಲಾಗಿದೆ.

ಶತ್ರುಗಳ ಆಸ್ತಿ ಮಾರಾಟದ ಮೂಲಕ ಸಂಗ್ರಹ ಆಗುವ ಮೊತ್ತವನ್ನು ಸರಕಾರವು ಅಭಿವೃದ್ಧಿ ಹಾಗೂ ಜನರ ಸಲುವಾಗಿ ಸಮಾಜ ಕಲ್ಯಾಣ ಯೋಜನೆಗಳಿಗೆ ಬಳಸಲು ತೀರ್ಮಾನಿಸಿದೆ ಎಂದು ಕೇಂದ್ರ ಕಾನೂನು ಸಚಿವ ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The government said it will sell stocks worth millions of dollars seized from people who moved to Pakistan following partition in 1947 and the wars since, as a way to make up for a shortfall in revenues.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more