7th Pay Commission: ಕೇಂದ್ರ ಸರ್ಕಾರಿ ಕೆಲ ನೌಕರರು-ಪಿಂಚಣಿದಾರರಿಗೆ ಮಾರ್ಚ್ 'ಡಿಎ' ಹೆಚ್ಚಳವೇ ಬಂದಿಲ್ಲ..!
ಬೆಂಗಳೂರು, ಏಪ್ರಿಲ್ 14: ಕೇಂದ್ರ ಸರ್ಕಾರ ತನ್ನ ವ್ಯಾಪ್ತಿಯ ಕೋಟಿಗೂ ಹೆಚ್ಚು ನೌಕರರಿಗೆ 'ತುಟ್ಟಿ ಭತ್ಯೆ' ಹೆಚ್ಚಳವನ್ನು ಕಳೆದ ಮಾರ್ಚ್ ತಿಂಗಳಲ್ಲಿ ಹೆಚ್ಚಿಸಿದೆ. ಹೀಗಿದ್ದರೂ ಸಹ ನೌಕರರು ಹಾಗೂ ಪಿಂಚಣಿದಾರರು ಮಾರ್ಚ್ ತಿಂಗಳ ಪರಿಷ್ಕೃತ ವೇತನ ಸ್ವೀಕರಿಸಿಲ್ಲ ಎಂದು ವರದಿ ಆಗಿದೆ.
ಹೌದು, ಕೇಂದ್ರ ಸಂಪುಟ ತುಟ್ಟಿಭತ್ಯೆ ಹೆಚ್ಚಳಕ್ಕೆ ಅನುಮೋದನೆ ನೀಡಿತ್ತು. ಮಾರ್ಚ್‌ನಲ್ಲಿ ಈ ಬಗ್ಗೆ ಘೋಷಣೆ ಆದರೂ ಸಹಿತ ಕೆಲವು ಸರ್ಕಾರಿ ಸಿಬ್ಬಂದಿ ಏಪ್ರಿಲ್ ವೇತನ ಬದಲಾವಣೆಗಾಗಿ ಕಾಯುತ್ತಿದ್ದಾರೆ. ನೌಕರರು ಮತ್ತು ಪಿಂಚಣಿದಾರರು ಡಿಎ ಹೆಚ್ಚಳದಿಂದಾಗಿ ತಮ್ಮ ಮಾರ್ಚ್ ತಿಂಗಳ ಸಂಬಳದಲ್ಲಿ ಏರಿಕೆ ಆಗಲಿದೆ ಎಂದು ಅಂದಾಜಿಸಿದ್ದರು. ಆದರೆ ಇವರಿಗೆ ಹಿಂದಿನ ತಿಂಗಳಿನಂತೆ ಸಂಬಳ ಪಾವತಿ ಆಗಿದೆ.

ಡಿಎ ಸೇರಿ ವೇತನ ಜಮೆಯ ನಿರೀಕ್ಷೆ
ವರ್ಷಕ್ಕೆ ಎರಡು ಭಾರಿ ಏರಿಕೆ ಆಗುವ ನೌಕರರ ಡಿಎ ಅನ್ನು ಈ ಮಾರ್ಚ್ ಆರಂಭದಲ್ಲಿ ಘೋಷಣೆ ಮಾಡಲಾಗಿತ್ತು. ಉದ್ಯೋಗಿಗಳು ಮತ್ತು ಪಿಂಚಣಿದಾರರು ಮಾರ್ಚ್ ತಿಂಗಳ ವೇತನದಲ್ಲಿ 'ಡಿಎ' ಸೇರಿ ತಾವು ಪಡೆಯುತ್ತೇವೆ ಎಂದುಕೊಂಡು ನಿರೀಕ್ಷೆಯಲ್ಲಿದ್ದರು.
ಆದರೆ ಎಲ್ಲಾ ನೌಕರರು ಮತ್ತು ಪಿಂಚಣಿದಾರರು ಪರಿಷ್ಕರಣೆಯೊಂದಿಗೆ ಮಾರ್ಚ್ ತಿಂಗಳ ವೇತನ ಪಡೆದಿಲ್ಲ. ಒಂದು ವರ್ಗವು ನೌಕರರ ಬ್ಯಾಂಕ್ ಖಾತೆಗಳಲ್ಲಿ ಹಿಂದಿನ ತಿಂಗಳು ಬಂದ ವೇತನದಂತೆಯೇ ಹಣ ಜಮೆ ಆಗಿದೆ. ಸದ್ಯ ಡಿಎ ಹೆಚ್ಚಳ ಪಡೆದ ನೌಕರರು ಏಪ್ರಿಲ್ ತಿಂಗಳ ವೇತನದಲ್ಲಿ 'ಡಿಎ' ಹಣ ಸೇರಿ ಜಮೆ ಆಗಲಿದೆ ಎಂಬ ಆಸೆಯಲ್ಲಿದ್ದಾರೆ.
ಪರಿಷ್ಕೃತ ಪಿಂಚಣಿ ಬಗ್ಗೆ ಫಲಾನುಭವಿ ಪ್ರತಿಕ್ರಿಯೆ
ಈ ಕುರಿತು ನಿವೃತ್ತ ಸಶಸ್ತ್ರ ಪಡೆ ಸಿಬ್ಬಂದಿ ಸಂತೋಷ್ ಸಾಹು ಪ್ರತಿಕ್ರಿಯಿಸಿದರು, ಎಫ್‌ಇ ಡಿಜಿಟಲ್‌ಗೆ ಅವರು ಬಾಕಿ ಸೇರಿದಂತೆ ಮಾರ್ಚ್‌ಗೆ ಹೆಚ್ಚಿದ ಪಿಂಚಣಿ ನಿರೀಕ್ಷಿಸುತ್ತಿರುವುದಾಗಿ ತಿಳಿಸಿದ್ದಾರೆ. ಏಪ್ರಿಲ್ ನಲ್ಲಿ ಸ್ವೀಕರಿಸಿ ವೇತನದಿಂದ ನಮಗೆ ನಿರಾಸೆಯಾಗಿದೆ. ಅದೇನೇ ಇದ್ದರೂ, 3 ತಿಂಗಳ ಬಾಕಿಯ ಜೊತೆಗೆ ಏಪ್ರಿಲ್‌ಗೆ ಪರಿಷ್ಕೃತ ಪಿಂಚಣಿ ಸಿಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಡಿಎ ಪರಿಷ್ಕರಣೆ ವೇಳೆ ಕೇಂದ್ರ ಹೇಳಿದ್ದೇನು?
ಸಂತೋಷ್ ಸಾಹು ಅವರಂತೆ ಎಫ್‌ಇ ಡಿಜಿಟಲ್ ಸಂಪರ್ಕಿಸಿದ ಇತರ ಅನೇಕ ಪಿಂಚಣಿದಾರರು ಸಹ ಮಾಸಿಕ ಪಿಂಚಣಿಯಲ್ಲಿ ತುಟ್ಟಿ ಭತ್ಯೆ ಹೆಚ್ಚಳದ ಹಣ ಸೇರಿಯೇ ಒಟ್ಟು ಹಣ ಕೈ ಸಗಿಲಿದೆ ಎಂದು ಕಾಯುತ್ತಿದ್ದಾರೆ. ತುಟ್ಟಿ ಭತ್ಯೆ ಹೆಚ್ಚಿಸಿದ ಸರ್ಕಾರವು ಮಾರ್ಚ್ ತಿಂಗಳ ವೇತನದಲ್ಲಿ ಬಾಕಿ ಪಾವತಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಕೇಂದ್ರ ಸರ್ಕಾರ ತನ್ನ ನೌಕರರ ತುಟ್ಟಿಭತ್ಯೆಯನ್ನು (ಡಿಎ) ಎರಡು ಬಾರಿ ಹೆಚ್ಚಳ ಮಾಡುತ್ತದೆ. ಸಾಮಾನ್ಯವಾಗಿ ಮಾರ್ಚ್‌ನಲ್ಲಿ ಮತ್ತು ಸೆಪ್ಟೆಂಬರ್ ಕೆಲವೊಮ್ಮೆ ಅಕ್ಟೋಬರ್ ಡಿಎ ಪರಿಷ್ಕರಿಸುತ್ತದೆ. ಒಂದು ಕೋಟಿಗೂ ಹೆಚ್ಚಿರುವ ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಪ್ರತಿ ವರ್ಷ ಜನವರಿಯಿಂದ ಮತ್ತು ಜುಲೈನಿಂದ ಅನ್ವಯವಾಗುವಂತೆ ತುಟ್ಟಿಭತ್ಯೆ ಹೆಚ್ಚಳಕ್ಕೆ ಸರ್ಕಾರ ಒಪ್ಪಿಗೆ ನೀಡುತ್ತದೆ. ಜೊತೆಗೆ ಬಾಕಿ ನೀಡುವುದಾಗಿ ತಿಳಿಸುತ್ತದೆ.
ಶೇಕಡಾ 46ರಿಂದ 50ಕ್ಕೆ ಡಿಎ ಹೆಚ್ಚಳ
2023 ರಂತೆ ಈ ವರ್ಷವೂ ಮಾರ್ಚ್ ತಿಂಗಳಲ್ಲಿ ತುಟ್ಟಿಭತ್ಯೆ (ಡಿಎ) ಹೆಚ್ಚಳ ನೀಡಿತು. ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ ಮತ್ತು ತುಟ್ಟಿಭತ್ಯೆಯಲ್ಲಿ ಶೇಕಡಾ 4ರಷ್ಟು ಏರಿಕೆ ಮಾಡಿರುವ ಬಗ್ಗೆ ಸರ್ಕಾರ ಅಧಿಕೃತವಾಗಿ ಘೋಷಿಸಿತು. ಈ ಹೆಚ್ಚಳದಿಂದ ಡಿಎ ಮೂಲವೇತನ ಶೇಕಡಾ 46ರಷ್ಟು ಇದ್ದದ್ದು 50ರಷ್ಟು ಏರಿಕೆ ಆಯಿತು.
ಇದರಿಂದೊಗೆ ಮನೆ ಬಾಡಿಗೆ ಭತ್ಯೆ, ಮಕ್ಕಳ ಶಿಕ್ಷಣ ಭತ್ಯೆ, ಪ್ರಯಾಣ ಭತ್ಯೆ, ತುಟ್ಟಿ ಪರಿಹಾರ ಸಹ ಏರಿಕೆ ಆಗಲಿದೆ ಎಂದು ತಿಳಿಸಲಾಗಿದೆ. ಇದರಲ್ಲಿ ತುಟ್ಟಿ ಪರಿಹಾರವನ್ನು ಸರ್ಕಾರ ಘೋಷಣೆ ಮಾಡಿದೆ.
ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಪ್ರಮಾಣ ಶೇಕಡಾ 50 ರಷ್ಟು ಏರಿಕೆ ಆದ ಬಳಿಕ ಸರ್ಕಾರದಿಂದಲೇ ಹಲವು ಸೌಲಭ್ಯಗಳು ಅವರಿಗೆ ಸಿಗುತ್ತವೆ. ಡಿಎ ಜೊತೆ ಡಿಆರ್, ಎಚ್‌ಆರ್‌ಎ ಹಾಗೂ ಇನ್ನಿತರ ಭತ್ಯೆಗಳು ಹೆಚ್ಚಳ ಮಾಡಬೇಕು ಎಂದು ನಿಯಮ ಹೇಳುತ್ತದೆ. ಇದರಿಂದಾಗಿ ಅವರ ಮೂಲ ವೇತನ ಏರಿಕೆ ಆಗುತ್ತದೆ. ಆದರೆ ಮಾರ್ಚ್ ತಿಂಗಳ ಡಿಎ ಸಿಗದಿರುವುದು ನೌಕರರಲ್ಲಿ ಬೇಸರ ತರಿಸಿದೆ.












Click it and Unblock the Notifications