Get Updates
Get notified of breaking news, exclusive insights, and must-see stories!

8th Pay Commission: ನೌಕರರಿಗೆ ಸಿಹಿ ಸುದ್ದಿ: 8ನೇ ವೇತನ ಆಯೋಗ ಜಾರಿಯ ಅಪ್ಡೇಟ್: ದಿನಾಂಕ, ಪ್ರಯೋಜನ ವಿವರ

ಬೆಂಗಳೂರು, ಫೆಬ್ರವರಿ 26: 7ನೇ ವೇತನ ಆಯೋಗದಡಿ (7th Pay Commission) ತುಟ್ಟಿಭತ್ಯೆ (DA) ಶೇ. 4ರಷ್ಟು ಹೆಚ್ಚಳ ಪಡೆಯಲು ಸಿದ್ಧವಾಗಿರುವ ಕೇಂದ್ರ ಸರ್ಕಾರಿ ನೌಕರರಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. 8ನೇ ವೇತನ ಆಯೋಗದ (8th Pay Commission) ಜಾರಿಗೆ ಬಗ್ಗೆ ಕೇಂದ್ರ ಸರ್ಕಾರ ಅಪ್ಡೇಟ್ ಮಾಹಿತಿ ನೀಡಿದೆ.

8ನೇ ವೇತನ ಆಯೋಗಕ್ಕಾಗಿ ಕಾಯುತ್ತಿರುವ ಎಲ್ಲಾ ಸರ್ಕಾರಿ ನೌಕರರು 2026ರ ಜನವರಿ 1 ರಿಂದ 8 ನೇ ವೇತನ ಆಯೋಗ ಆರಂಭವಾಗುವ ಸಾಧ್ಯತೆಗಳು ಇವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಸಂಬಳದ ಹೆಚ್ಚಳ ಮತ್ತು VIII ನೇ ವೇತನ ಆಯೋಗದ ಅರ್ಜಿದಾರಿಗೆ ಸಂಬಂಧಿಸಿದಂತೆ ಈ ಮಾಹಿತಿ ಪೂರಕವಾಗಬಹುದು.

8th Pay Commission: When Will Implement 8th Pay Commission, Know Date, Employees Profit

ಹೊಸ ಅಯೋಗ 2026 ರಿಂದ ಜಾರಿ ನಿರೀಕ್ಷೆ

ಎಂಟನೇ ವೇತನ ಆಯೋಗದ ಇದೇ ದಿನಾಂಕವರೆಗೆ ಯಾವುದೇ ಅಧಿಕೃತವಾಗಿ ತಿಳಿಸಿಲ್ಲ. ಇತ್ತೀಚಿನ ಸುದ್ದಿಗಳ ಪ್ರಕಾರ, ಸರ್ಕಾರವು ಜನವರಿ 2026ರಿಂದ ಜಾರಿಗೆ ತರಲಿದೆ. ಯಾವುದೇ ವಲಯದ ಸರ್ಕಾರಿ ನೌಕರರು ತಮ್ಮ ಮಾಸಿಕ ವೇತನವನ್ನು ಹೆಚ್ಚಿಸುವುದರಿಂದ 8 ನೇ ವೇತನದ ಲಾಭ ಪಡೆಯಲಿದ್ದಾರೆ.

ತುಟ್ಟಿ ಭತ್ಯೆ (DA), ಸಾರಿಗೆ ಭತ್ಯೆ (TA), ಆರೋಗ್ಯ ಭತ್ಯೆ, ಮನೆ ಬಾಡಿಗೆ ಭತ್ಯೆ (HRA) ಮುಂತಾದ ಎಲ್ಲಾ ಭತ್ಯೆಗಳನ್ನು ಸರ್ಕಾರವು ಮುಂದಿನ ಮಾರ್ಚ್‌ಗೆ ಹೆಚ್ಚಿಸಲಿದೆ. 7ನೇ ವೇತನ ಆಯೋಗದಡಿ ತುಟ್ಟಿಭತ್ಯೆ ಏರಿಕೆ ಹುಡುಕುತ್ತಿರುವ ಅರ್ಜಿದಾರರು 8ನೇ ವೇತನ ಆಯೋಗದ ವೇತನ ಹೆಚ್ಚಳದ ಲಾಭಗಳನ್ನು ಮುಂದಿನ ದಿನಗಳಲ್ಲಿ ಪಡೆಯಲಿದ್ದಾರೆ.

8ನೇ ವೇತನ ಆಯೋಗದ ಅಧಿಕೃತ ಪ್ರಕಟಣೆ

ಕೇಂದ್ರ ಸರ್ಕಾರವು ಪ್ರತಿ 10 ವರ್ಷಗಳಿಗೊಮ್ಮೆ ವೇತನ ಆಯೋಗ ಜಾರಿಗೆ ಬರಲಿದೆ. ಹಾಲಿ ಏಳನೇ ವೇತನ ಇದರಲ್ಲಿ ಎಲ್ಲಾ ಸರ್ಕಾರಿ ಸೇವಾ ನೌಕರರು ಪ್ರಯೋಜನಗಳನ್ನು ಪಡೆಯುತ್ತಾರೆ. 8ನೇ ವೇತನ ಆಯೋಗದ ದಿನಾಂಕಕ್ಕಾಗಿ ಕಾಯುತ್ತಿರುವ ಅರ್ಜಿದಾರರಿಗೆ 8ನೇ ವೇತನ ಆಯೋಗದ ಅನುಷ್ಠಾನದ ದಿನಾಂಕವನ್ನು ಸರ್ಕಾರ ಅಧಿಕೃತವಾಗಿ ಪ್ರಕಟಿಸಿಲ್ಲ ಎಂದು ತಿಳಿಸಲಾಗಿದೆ.

8th Pay Commission: When Will Implement 8th Pay Commission, Know Date, Employees Profit

ಮೂಲಗಳ ಪ್ರಕಾರ ಕೇಂದ್ರ ಸರ್ಕಾರವು, ಸರ್ಕಾರವು 8ನೇ ವೇತನ ಆಯೋಗವನ್ನು ಜನವರಿ 2026 ರೊಳಗೆ ಅನುಷ್ಠಾನಕ್ಕೆ ತರುವ ಸಾಧ್ಯತೆ ಇದೆ.

2014ರ ಫೆಬ್ರವರಿ 28 ರಂದು ಅಧಿಕೃತವಾಗಿ ಸರ್ಕಾರವು ಕೊನೆಯ ಬಾರಿಗೆ 7ನೇ ವೇತನ ಶ್ರೇಣಿಯ ಆಯೋಗ ಹಾಕಿತು. ನೌಕರರ ಬೇಡಿಕೆಯನ್ನು ಅಂಗೀಕರಿಸಲು ರಾಜ್ಯ ಹಣಕಾಸು ಸಚಿವ ಪಂಕಜ್ ಚೌಧರಿ ಅವರು ಮುಂದಿನ ವರ್ಷದಿಂದ 8 ನೇ ವೇತನ ಆಯೋಗವನ್ನು ಜಾರಿಗೆ ತರುವುದಾಗಿ ಭರವಸೆ ನೀಡಿದ್ದಾರೆ.

ಸದ್ಯ ಮುಂದಿನ ಮಾರ್ಚ್ ತಿಂಗಳಲ್ಲಿ ಕೇಂದ್ರ ಸರ್ಕಾರಿ ನೌಕರರು ಶೇಕಡಾ 4ರಷ್ಟು ತುಟ್ಟಿಭತ್ಯೆ ಏರಿಕೆ ಪಡೆಯಲಿದ್ದಾರೆ. ಇದರೊಂದಿಗೆ ಮನೆ ಬಾಡಿಗೆ ಭತ್ಯೆ, ಪ್ರಯಾಣ ಭತ್ಯೆಯನ್ನು ಸಹ ಇದೇ ಮಾರ್ಚ್‌ ತಿಂಗಳಲ್ಲಿ ಪಡೆಯುವ ಸಾಧ್ಯತೆ ಇದೆ.

ಇದೇ ಮಾರ್ಚ್‌ಗೆ ಕೇಂದ್ರ ಸರ್ಕಾರಿ ನೌಕರರಿಗೆ ಸಿಗುವ ಅಗತ್ಯ ಹೆಚ್ಚಳ ಸಿಗಲಿದೆ. ಅಲ್ಲಿಂದ ಎರಡು ವರ್ಷದಲ್ಲಿ ಎಂಟನೇ ವೇತನ ಆಯೋಗವು ಜಾರಿಗೆ ಬರುವ ಮುನ್ಸೂಚನೆ ಸಿಕ್ಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+