ಸಂಸದರ ಪ್ರತ್ಯೇಕ ರಾಷ್ಟ್ರ ಹೇಳಿಕೆಗೆ ವಿತ್ತ ಸಚಿವೆ ಪ್ರತಿಕ್ರಿಯೆ
ಬೆಂಗಳೂರು, ಫೆಬ್ರವರಿ 29: ಕೇಂದ್ರ ಸರ್ಕಾರವನ್ನು ದಕ್ಷಿಣದ ರಾಜ್ಯಗಳಿಗೆ ಅನುದಾನ ಬಿಡುಗಡೆಯಲ್ಲಿ ಅನ್ಯಾಯ ಮಾಡುತ್ತಿದೆ. ಹೀಗೆಂದು ಆರೋಪಿಸಿದ್ದ ಕಾಂಗ್ರೆಸ್ ಸಂಸದ ಡಿ ಕೆ ಸುರೇಶ್ ಅವರು ದಕ್ಷಿಣ ರಾಜ್ಯಗಳು ಪ್ರತ್ಯೇಕ ರಾಷ್ಟ್ರಕ್ಕೆ ಒತ್ತಾಯಿಸಬೇಕಾಗುತ್ತದೆ ಎಂದು ಹೇಳಿದ್ದರು. ಅದಕ್ಕೀಗ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಿರುಗೇಟು ನೀಡಿದ್ದಾರೆ.
ಕೇಂದ್ರ ಹಣಕಾಸು ಆಯೋಗ ಹೇಳಿದನ್ನು ಪಾಲಿಸುವುದನ್ನು ಬಿಟ್ಟು ಕೇಂದ್ರ ಸರ್ಕಾರಕ್ಕೆ ಬೇರಾವ ಪಾತ್ರ ನಿರ್ವಹಿಸುವುದಿಲ್ಲ. ರಾಜ್ಯಗಳು ತಮ್ಮ ಆಯೋಗದೊಂದಿಗೆ ಕುಳಿತು ಅನುದಾನವನ್ನು ಪಡೆಯಲು ಬೇಕಾದ ಮೌಲ್ಯಯುತ ಅಂಶಗಳನ್ನು ಹೈಲೈಟ್ ಮಾಡಬೇಕು ಎಂದು ಸಚಿವೆ ತಿಳಿಸಿದ್ದಾರೆ.

ಒಂದು ವೇಳೆ ದಕ್ಷಿಣ ರಾಜ್ಯಗಳು ಎಲ್ಲವು ಕೂಡಿಕೊಂಡು ಈಗ ''ದಕ್ಷಿಣ ರಾಜ್ಯಗಳನ್ನು ಒಂದು ಪ್ರತ್ಯೇಕ ರಾಷ್ಟ್ರವನ್ನಾಗಿ ಹೊಂದಿದರೆ ಅತ್ಯಂತ ಅಪಾಯಕಾರಿ ಮಿತಿಗೆ ಸಿಲುಕುಬೇಕಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಈ ಕುರಿತು ಅವರು ಇಂಡಿಯನ್ ಎಕ್ಸ್‌ಪ್ರೆಸ್ ಅಡ್ಡಾ ಸಂವಾದದಲ್ಲಿ ತಿಳಿಸಿದ್ದಾರೆಂದು ವರದಿ ಮಾಡಲಾಗಿದೆ.
ನಾನು ದಕ್ಷಿಣ ರಾಜ್ಯದವಳು: ಸಚಿವೆ
ನೀವೊಬ್ಬ ಜವಾಬ್ದಾರಿಯುತ ಸಂಸದ (ಸುರೇಶ್ )ರಾಗಿದ್ದೀರಿ. ಅಲ್ಲದೇ ಕರ್ನಾಟಕದಲ್ಲಿ ನಿಮ್ಮ ಸಹೋದರ ಡಿಕೆ ಶಿವಕುಮಾರ್ ಅವರು ಉಪಮುಖ್ಯಮಂತ್ರಿ ಸ್ಥಾನದಲ್ಲಿದ್ದಾರೆ. ನೀವು ಪ್ರತ್ಯೇಕ ದಕ್ಷಿಣ ರಾಜ್ಯವನ್ನು ಹೊಂದುತ್ತೇವೆ ಎಂದು ಹೇಳಿದರೆ ಅದು ಸಾಧ್ಯವಿಲ್ಲ. ನಾವು ಅದರ ಮಟ್ಟಕ್ಕೆ ಹೋಗುವುದಿಲ್ಲ ಎಂದು ಅವರು ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದರು.

ನಾನು ಸಹ ದಕ್ಷಿಣದ ರಾಜ್ಯದಿಂದ ಬಂದಿರುವವಳೇ ಆಗಿದ್ದೇನೆ. ದಕ್ಷಿಣದ ರಾಜ್ಯಗಳು ಉತ್ತಮ ಸಾಧನೆ ಮಾಡಿವೆ ಎಂದು ಅವರು ಶ್ಲಾಘಿಸಿದರು. ನೀವು (ದಕ್ಷಿಣದ ರಾಜ್ಯಗಳು) ಹಣಕಾಸು ಆಯೋಗದೊಂದಿಗೆ ಕುಳಿತು ನಿಮ್ಮ ಬೇಡಿಕೆಗಳು, ಅನುದಾನ ಪಡೆಯುವ ಅಂಶಗಳ ಕುರಿತು ತಿಳಿಸಿ, ಹೈಲೇಟ್ ಮಾಡಿ ಮಾತನಾಡಬೇಕು ಎಂದು ಅವರು ಸಲಹೆ ನೀಡಿದರು.
ಕೇಂದ್ರ ಹಣಕಾಸು ಆಯುಕ್ತರು ನನಗೆ ಮಾಸಿಕವಾಗಿ ಇಷ್ಟನು ಹಣ ಒದಗಿಸುವಂತೆ ಹೇಳಿದರೆ ಅದನ್ನು ನಾನು ಮಾಡಬೇಕಾಗುತ್ತದೆ. ಈ ಆಯುಕ್ತರನ್ನು ಒಬ್ಬರು, ಇಲ್ಲವೇ ಇಬ್ಬರ ಪರವಾಗಿ ತಿರುಚಲು ಸಾಧ್ಯವಿಲ್ಲ ಎಂಬುದನ್ನು ಸಚಿವೆ ಒತ್ತಿ ಹೇಳಿದರು.
ಚರ್ಚೆ ಹುಟ್ಟು ಹಾಕಿದ್ದ ಡಿಕೆಸು ಹೇಳಿಕೆ
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಸಂಸದ ಸುರೇಶ್ ಅವರು, ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದರು. ದಕ್ಷಿಣ ರಾಜ್ಯಗಳಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸದಿದ್ದರೆ ದಕ್ಷಿಣ ರಾಜ್ಯಗಳು ಪ್ರತ್ಯೇಕ ರಾಷ್ಟ್ರಕ್ಕಾಗಿ ಆಗ್ರಹಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಈ ಮೂಲಕ ಅವರ ಹೇಳಿಕೆ ಭಾರಿ ಚರ್ಚೆ ಹುಟ್ಟುಹಾಕಿತ್ತು. ಬಿಜೆಪಿ ನಾಯಕರು ಈ ಹೇಳಿಕೆಯನ್ನು ಖಂಡಿಸಿದ್ದರು.
ಇನ್ನೂ ದಕ್ಷಿಣ ರಾಜ್ಯಗಳಿಂದ ಸಂಗ್ರಹಿಸಲಾದ ತೆರಿಗೆಯನ್ನು ಕೇಂದ್ರ ಸರ್ಕಾರ ಉತ್ತರ ಭಾರತಕ್ಕೆ ವಿತರಿಸುವ ಕೆಲಸ ಮಾಡುತ್ತಿದೆ. ಇದರಿಂದಾಗಿ ದಕ್ಷಿಣ ರಾಜ್ಯಗಳಿಗೆ ಸರಿಯಾದ ಪಾಲು ಸಿಗದೇ ಅನ್ಯಾಯವಾಗುತ್ತಿದೆ ಎಂದು ಸಂಸದರ ಆಕ್ರೊಶ ವ್ಯಕ್ತಪಡಿಸಿದ್ದರು.












Click it and Unblock the Notifications