ಅಶ್ಲೀಲ ಚಿತ್ರ, ವಿಡಿಯೋ ಪ್ರಸಾರ ಮಾಡುವ 10 ಆ್ಯಪ್, 19 ವೆಬ್‌ಸೈಟ್, 18 ಒಟಿಟಿ ಪ್ಲಾಟ್‌ಫರ್ಮ್‌ಗಳ ನಿಷೇಧ-ಯಾವ್ಯಾವು?
ದೇಶದಲ್ಲಿ ಕೆಲವು ಮೊಬೈಲ್ ಆ್ಯಪ್‌ಗಳಲ್ಲಿ ಅಶ್ಲೀಲ ಚಿತ್ರಗಳು, ಫೋಟೋಗಳನ್ನು ಸೆರೆಯಿಡಿಯುವ ಮೂಲಕ ಮಹಿಳೆಯರು, ವಿದ್ಯಾರ್ಥಿನಿಯರನ್ನು ಬ್ಲಾಕ್ ಮೇಲ್ ಮಾಡುವ ಪ್ರಕರಣಗಳು ಹೆಚ್ಚುತ್ತಲಿವೆ. ಇಂತಹ ಆಪ್‌ಗಳಿಗೆ ಕಡಿವಾಣ ಹಾಕಬೇಕೆನ್ನುವ ಕೂಗುಗಳು ಕೂಡ ಕೇಳಿಬರುತ್ತಿದ್ದವು. ಇದೀಗ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು, ಇಂತಹ ಪ್ಲಾಟ್‌ಪಾರಂ, ವೆಬ್‌ಸೈಟ್‌ಗಳು, ಆಪ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದೆ. ಹಾಗಾದರೆ ಯಾವೆಲ್ಲ ಬ್ಯಾನ್ ಆಗಲಿವೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ
ಅಶ್ಲೀಲ ವಿಡಿಯೋ, ಚಿತ್ರಗಳನ್ನು ಪ್ರಸಾರ ಮಾಡುತ್ತಿದ್ದ 18 ಒಟಿಟಿ ಪ್ಲಾಟ್‌ಫಾರ್ಮ್‌ಗಳು, 19 ವೆಬ್‌ಸೈಟ್‌ಗಳು, 10 ಆ್ಯಪ್‌ಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಅಷ್ಟೇ ಅಲ್ಲದೆ 57 ಸಾಮಾಜಿಕ ಜಾಲತಾಣಗಳ ಖಾತೆಗಳನ್ನೂ ನಿಷೇಧಿಸಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಆದೇಶ ಹೊರಡಿಸಿದೆ.

ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67 ಮತ್ತು 67ಎ, ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 292 ಮತ್ತು ಮಹಿಳೆಯರ ಅಸಭ್ಯ ಪ್ರಾತಿನಿಧ್ಯ (ನಿಷೇಧ) ಕಾಯಿದೆ, 1986ರ ಸೆಕ್ಷನ್ 4ರ ಪ್ರಾಥಮಿಕ ಉಲ್ಲಂಘನೆಗಾಗಿ OTT ಪ್ಲಾಟ್‌ಫಾರ್ಮ್‌ಗಳನ್ನು ನಿಷೇಧಿಸಲಾಗಿದೆ.
ಒಟಿಟಿ, ವೆಬ್‌ಸೈಟ್, ಸೋಷಿಯಲ್ ಮೀಡಿಯಾ ಹಾಗೂ ಆ್ಯಪ್‌ಗಳ ಮೂಲಕ ಅಶ್ಲೀಲ, ಅಸಭ್ಯ ವಿಡಿಯೊ, ಮಹಿಳೆಯರನ್ನು ಅಶ್ಲೀಲವಾಗಿ ತೋರಿಸಿದ ಫೋಟೊ, ಪೋಸ್ಟ್‌ಗಳನ್ನು ಅಪ್‌ಲೋಡ್ ಮಾಡಿದ ಹಿನ್ನೆಲೆ, ಕೇಂದ್ರ ಸರ್ಕಾರವು ಈ ನಿರ್ಧಾರವನ್ನು ತೆಗೆದುಕೊಂಡಿದೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಮಧ್ಯೆ ಸಂಬಂಧ ಇರುವುದು ಸೇರಿ ಹಲವು ರೀತಿಯ ಅಸಭ್ಯ, ಅಶ್ಲೀಲ ವರ್ತನೆಗಳ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
18 ಒಟಿಟಿ ಪ್ಲಾಟ್‌ಫಾರ್ಮ್‌ಗಳ ನಿಷೇಧ
* ಡ್ರೀಮ್ಸ್ ಫಿಲ್ಮ್ಸ್
* ವೂವಿ
*ಯೆಸ್‌ಮಾ
* ಅನ್‌ಕಟ್ ಅಡ್ಡಾ
* ಟ್ರೈ ಫ್ಲಿಕ್ಸ್
* ಎಕ್ಸ್ ಪ್ರೈಮ್
* ನಿಯೋನ್ ಎಕ್ಸ್ ವಿಐಪಿ
* ಬೇಶರಮ್ಸ್
* ಹಂಟರ್ಸ್
* ರ‍್ಯಾಬಿಟ್
* ಎಕ್ಸ್‌ಟ್ರಾಮೂಡ್
* ನ್ಯೂಫ್ಲಿಕ್ಸ್
* ಮೂಡ್‌ಎಕ್ಸ್
* ಮೋಜ್‌ಫ್ಲಿಕ್ಸ್
* ಹಾಟ್ ಶಾಟ್ಸ್ ವಿಐಪಿ
* ಫುಗಿ
* ಚಿಕೂಫ್ಲಿಕ್ಸ್
* ಪ್ರೈಮ್ ಪ್ಲೇ
ಇನ್ನು ಒಟಿಟಿ ವೇದಿಕೆಗಳಂತೂ ಮಿಲಿಯನ್‌ಗಟ್ಟಲೇ ವೀಕ್ಷಕರನ್ನು ಹೊಂದಿವೆ. ಒಂದು ಒಟಿಟಿಯಂತೂ ಗೂಗಲ್ ಪ್ಲೇಸ್ಟೋರ್‌ನಲ್ಲಿ ಒಂದು ಕೋಟಿ ಡೌನ್‌ಲೋಡ್‌ಗಳನ್ನು ಕಂಡಿದೆ. ಇನ್ನೂ ಎರಡು ಒಟಿಟಿ ಪ್ಲಾಟ್‌ಫಾರ್ಮ್‌ಗಳು 50 ಲಕ್ಷಕ್ಕೂ ಅಧಿಕ ಡೌನ್‌ಲೋಡ್‌ಗಳನ್ನು ಕಂಡಿವೆ ಎಂದು ಸರ್ಕಾರ ತಿಳಿಸಿದೆ. ಸಾಮಾಜಿಕ ಜಾಲತಾಣಗಳ ಖಾತೆಗಳು ಕೂಡ 32 ಲಕ್ಷ ಫಾಲೋವರ್‌ಗಳನ್ನು ಹೊಂದಿದ್ದವು ಎಂಬ ಮಾಹಿತಿ ಮುಲಗಳಿಂದ ತಿಳಿದುಬಂದಿದೆ.












Click it and Unblock the Notifications