• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

MSMEಗಳಿಗೆ 1 ಗಂಟೆಯಲ್ಲಿ 1 ಕೋಟಿ ಸಾಲ ಸೇರಿ 12 ಯೋಜನೆ ಘೋಷಣೆ

|

ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ 12 ಪ್ರಮುಖ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ MSME ಎಂದು ಕರೆಯುವ ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ಯಮಗಳಿಗೆ ಬೆಂಬಲ ನೀಡುವ ಉದ್ದೇಶದಿಂದ ಕೇಂದ್ರ ಸರಕಾರದ ಈ ಯೋಜನೆಯನ್ನು ನವೆಂಬರ್ 2ರ ಶುಕ್ರವಾರ ಘೋಷಿಸಿದ್ದಾರೆ.

ದೀಪಾವಳಿ ವಿಶೇಷ ಪುರವಣಿ

ಈ 12 ಯೋಜನೆಗಳಿಂದ ಭಾರೀ ಬದಲಾವಣೆ ನಿರೀಕ್ಷೆ ಮಾಡಬಹುದು. ಅದಕ್ಕೆ ಸಾಮೂಹಿಕ ಪ್ರಯತ್ನ, ನಿರ್ಧಾರ ಹಾಗೂ ಜವಾಬ್ದಾರಿ ವಹಿಸಿಕೊಳ್ಳುವುದು ಮುಖ್ಯ. ಎಲ್ಲ ಕಂಪನಿಗಳು GeM ಸದಸ್ಯತ್ವ ಹಾಗೂ ಅದರ ಖರೀದಿದಾರರು -MSME ನೋಂದಣಿ ಮಾಡಲೇಬೇಕು ಎಂದು ಸರಕಾರದಿಂದ ಕಡ್ಡಾಯ ಮಾಡಲಾಗಿದೆ.

ಇನ್ ಸ್ಪೆಕ್ಟರ್ ಎಲ್ಲೆಂದರಲ್ಲಿ ಪರಿಶೀಲನೆಗೆ ಹೋಗಲು ಸಾಧ್ಯವಿಲ್ಲ. ಇದರಿಂದ ಇನ್ ಸ್ಪೆಕ್ಟರ್ ಗಳ ರಾಜ್ಯಭಾರದಿಂದ MSME ಅನ್ನು ತಪ್ಪಿಸಿದಂತೆ ಆಗುತ್ತದೆ.

ಈ 12 ಪ್ರಮುಖ ಯೋಜನೆಗಳಿಂದ MSMEಗಳು ಬಲಿಷ್ಠವಾಗುತ್ತವೆ. ಈಗಿನ ಜಾಗತಿಕ ಸ್ಪರ್ಧೆಯಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡುತ್ತದೆ ಎಂದು ಮೋದಿ ಹೇಳಿದ್ದಾರೆ. ಭಾರತದಲ್ಲಿ ವ್ಯಾಪಾರ ಶುರು ಮಾಡುವುದಕ್ಕೆ ಹಾಗೂ ನಡೆಸುವುದಕ್ಕೆ ಪೂರಕ ವಾತಾವರಣ ಇದೆ ಎಂಬ ಶ್ರೇಯಾಂಕ ಹೆಚ್ಚಳ ಆಗಿರುವ ಬಗ್ಗೆ ಮೋದಿ ಹೆಮ್ಮೆ ವ್ಯಕ್ತಪಡಿಸಿದರು.

ವ್ಯಾಪಾರ ಆರಂಭಿಸಲು ಸೂಕ್ತ ವಾತಾವರಣ ಇರುವ ದೇಶಗಳ ಪಟ್ಟಿಯಲ್ಲಿ ಭಾರತ 23 ಶ್ರೇಯಾಂಕ ಏರಿಕೆ ಕಂಡಿದೆ. 4 ವರ್ಷದ ಹಿಂದೆ ಬಿಜೆಪಿ ಅಧಿಕಾರಕ್ಕೆ ಬರುವಾಗ ಭಾರತ 142ನೇ ಸ್ಥಾನದಲ್ಲಿತ್ತು. ಈಗ 77ನೇ ಸ್ಥಾನದಲ್ಲಿದೆ. ಟಾಪ್ 50ರ ಪಟ್ಟಿಯೊಳಗೆ ತಲುಪುವುದು ಬಹಳ ದೂರ ಏನಿಲ್ಲ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

ಸಣ್ಣ ಉದ್ಯಮಗಳಿಗೆ ದೀಪಾವಳಿ ಗಿಫ್ಟ್!: 59 ನಿಮಿಷದಲ್ಲಿ ಸಿಗಲಿದೆ ಸಾಲ

1) 59 ನಿಮಿಷದಲ್ಲಿ ಸಾಲ ಮಂಜೂರು : 59 ನಿಮಿಷಗಳಿಗೆ ಸಾಲ ಮಂಜೂರು ಮಾಡುವ ಪೋರ್ಟಲ್ ಅರ್ಪಣೆ ಮಾಡುತ್ತಿದ್ದೇನೆ. ಅದರಿಂದ ಈಗಾಗಲೇ MSME ಉದ್ಯಮದಾರರಿಗೆ ಅನುಕೂಲ ದೊರೆಯಲು ಆರಂಭವಾಗಿದೆ. ಒಂದು ಕೋಟಿ ರುಪಾಯಿ ತನಕ ಸಾಲ ಮಂಜೂರು 59 ನಿಮಿಷದೊಳಗೆ ಆಗುತ್ತದೆ. ದೇಶದ ಯಾವುದೇ ಮೂಲೆಯಲ್ಲಿರುವ ಉದ್ಯಮಿಗಳಿಗೆ ಇದರಿಂದ ಅನುಕೂಲವಾಗುತ್ತದೆ.

2) ಕಂಪ್ಯೂಟರೈಸ್ಡ್ ರಾಂಡಮ್ ಅಲಾಟ್ ಮೆಂಟ್ : ವ್ಯಾಪಾರದ ಪಾರದರ್ಶಕತೆಗಾಗಿ ಇನ್ ಸ್ಪೆಕ್ಟರ್ ಅನ್ನು ಕಂಪ್ಯೂಟರೈಸ್ಡ್ ರಾಂಡಮ್ ಅಲಾಟ್ ಮೆಂಟ್ ಮೂಲಕ ನಿಯೋಜನೆ ಮಾಡಲಾಗುತ್ತದೆ. ಆತ 48 ಗಂಟೆಗಳೊಳಗಾಗಿ ವರದಿಯನ್ನು ಪೋರ್ಟಲ್ ನಲ್ಲಿ ದಾಖಲಿಸಬೇಕು.

ಸಾಲಮನ್ನಾ ದೃಢೀಕೃತ ಮಾಹಿತಿಗೆ ಬ್ಯಾಂಕ್‌ಗಳಿಗೆ ಗಡುವು ನೀಡಿದ ಸರ್ಕಾರ

3) ಸಾಲು ಮಂಜೂರು : ಸಾಲದ ವೇಳೆ ಬಡ್ಡಿ ಸಹಾಯಧನವನ್ನು 3ರಿಂದ 5 ಪರ್ಸೆಂಟ್ ಗೆ ಏರಿಸಲು ಸರಕಾರ ತೀರ್ಮಾನ ಮಾಡಿದೆ. ಜಿಎಸ್ ಟಿಗೆ ನೋಂದಣಿ ಮಾಡಿಕೊಳ್ಳುವುದು ಹಾಗೂ ತೆರಿಗೆ ಪಾವತಿಸುವುದು ಈಗ ನಿಮ್ಮ ಶಕ್ತಿ ಎಂದರು ಪ್ರಧಾನಿ.

4) ತ್ವರಿತ ಸಾಲ : ಜಿಎಸ್ ಟಿಗೆ ನೋಂದಣಿ ಮಾಡಿಕೊಂಡಿರುವ MSME ಉದ್ಯಮಗಳಿಗೆ ಹೊಸದಾಗಿ ಸಾಲ ಪಡೆಯುವಾಗ ಅಥವಾ ಹೆಚ್ಚುವರಿ ಸಾಲ ಪಡೆಯುವಾಗ 1 ಕೋಟಿ ತನಕದ ಮೊತ್ತಕ್ಕೆ 2 ಪರ್ಸೆಂಟ್ ರಿಯಾಯಿತಿ ದೊರೆಯುತ್ತದೆ.

5) MSMEಗಳಿಂದಲೇ ಖರೀದಿ : ಸರಕಾರದ ಕಂಪನಿಗಳು ಅದರ ಒಟ್ಟಾರೆ ಖರೀದಿಯಲ್ಲಿ 25% ನಷ್ಟನ್ನು MSMEಗಳಿಂದಲೇ ಖರೀದಿಸಬೇಕು. ಇದಕ್ಕೂ ಮುನ್ನ ಸರಕಾರಗಳು MSMEಗಳಿಂದ 20% ಮಾತ್ರ ಖರೀದಿಸುತ್ತಿದ್ದವು. ಕಳೆದ ವರ್ಷ ಸರಕಾರಿ ಕಂಪನಿಗಳು ಒಟ್ಟಾರೆಯಾಗಿ ವಿವಿಧ ಮೂಲಗಳಿಂದ 1.14 ಲಕ್ಷ ಕೋಟಿ ರುಪಾಯಿ ಖರೀದಿ ಮಾಡಿವೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆ ಬಗ್ಗೆ ಇಲ್ಲಿದೆ ಸಮಗ್ರ ಮಾಹಿತಿ

6) ಮಹಿಳೆಯರ ಮುಂದಾಳತ್ವದಲ್ಲಿ MSME : 3%ನಷ್ಟು ಖರೀದಿ ಮಹಿಳಾ ಉದ್ಯಮಿಗಳಿಂದ ಮಾಡಲಾಗಿದೆ.

7) ಟೂಲ್ ರೂಮ್ಸ್ : ತಾಂತ್ರಿಕ ಉನ್ನತೀಕರಣಕ್ಕಾಗಿ ದೇಶದ ಎಲ್ಲೆಡೆ ಟೂಲ್ ರೂಮ್ಸ್ ಗಳನ್ನು ಸ್ಥಾಪನೆ ಮಾಡಲಾಗುವುದು. ಈ ಯೋಜನೆಗಾಗಿ 6000 ಕೋಟಿ ರುಪಾಯಿ ಪ್ಯಾಕೇಜ್ ಘೋಷಣೆ, "ದೇಶದಾದ್ಯಂತ ಇಪ್ಪತ್ತು ಹಬ್ ಸ್ಥಾಪನೆ ಮತ್ತು 100 ಟೂಲ್ ರೂಮ್ ಸ್ಥಾಪನೆ" ಮಾಡಲಾಗುವುದು ಎಂದಿದ್ದಾರೆ ಮೋದಿ.

ಸ್ವಿಸ್ ಬ್ಯಾಂಕ್ ಗೆ ಮಲ್ಯ 198 ಕೋಟಿ ಸಾಲ ಬಾಕಿ, ಬಂಗಲೆ ಖಾಲಿಗೆ ಮನವಿ

8) ಫಾರ್ಮಾ ಕಂಪನಿಗಳಿಗೆ ಸಹಾಯ : ಸರಕಾರದಿಂದ ಕ್ಲಸ್ಟರ್ಸ್ ನ 70%ನಷ್ಟು ಮೊತ್ತವನ್ನು MSME ಫಾರ್ಮಾ ಕಂಪನಿಗಳಿಗೆ ಮಾಡಲಾಗುವುದು. ಇದರಿಂದ ಅವುಗಳ ವ್ಯವಹಾರ ಸಲೀಸಾಗುತ್ತದೆ. ಗ್ರಾಹಕರನ್ನು ಸಹ ಸುಲಭವಾಗಿ ತಲುಪಲು ಆಗುತ್ತದೆ.

9) ಪರಿಸರ ಕಾನೂನು : ವಾಯು ಹಾಗೂ ಜಲ ಮಾಲಿನ್ಯಕ್ಕೆ ಸಂಬಂಧಿಸಿದಂತೆ MSMEಗಳು ಒಂದು ಒಪ್ಪಿಗೆ ಪಡೆದರೆ ಸಾಕು. ಹತ್ತು ಪರ್ಸೆಂಟ್ ನಷ್ಟು MSMEಗಳನ್ನು ಮಾತ್ರ ಪರಿಶೀಲಿಸಲಾಗುತ್ತದೆ.

10) ಕಾರ್ಮಿಕ ಕಾನೂನು : MSME ವಲಯಕ್ಕೆ ಸಮಾಧಾನ ತರುವ ಸಂಗತಿ ಏನೆಂದರೆ, ಈ ವರೆಗೆ ಕಾರ್ಮಿಕ ಕಾನೂನು 8ರ ಅಡಿ ಹಾಗೂ ಕೇಂದ್ರ ಕಾನೂನು 10 ಅಡಿ ಪ್ರತಿ ವರ್ಷ ಒಂದು ರಿಟರ್ನ್ಸ್ ಮಾಡಿದರೆ ಸಾಕು. ಈ ವರೆಗೆ ಎರಡು ಮಾಡಬೇಕಿತ್ತು.

11) ನಗದು ಒಳಹರಿವು : ಈ ಯೋಜನೆಗಳಿಂದ ಇನ್ನು ಮುಂದೆ MSMEಗಳಿಗೆ ನಗದು ಹರಿವಿನಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಮೋದಿ ಹೇಳಿದ್ದಾರೆ.

12) ಟ್ರೇಡ್ ರಿಸೀವಬಲ್ಸ್ ಇ-ಡಿಸ್ಕೌಂಟಿಂಗ್ : ವಾರ್ಷಿಕ ವಹಿವಾಟು 500 ಕೋಟಿ ರುಪಾಯಿಗೂ ಹೆಚ್ಚು ಇರುವವರಿಗೆ ಟ್ರೇಡ್ ರಿಸೀವಬಲ್ಸ್ ಇ-ಡಿಸ್ಕೌಂಟಿಂಗ್ ವ್ಯವಸ್ಥೆಗೆ ಸೇರ್ಪಡೆ ಆಗುವುದು ಕಡ್ಡಾಯ ಎಂದಿದ್ದಾರೆ.

{document1}

English summary
12 major decisions taken by Central govt for MSMEs Sector are proof that when after breaking Silos, collective initiatives are taken, collective responsibilities are fulfilled, & collective decisions are taken, it creates a comprehensive impact: PM Narendra Modi .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X