ಈ ರಾಶಿಯವರಿಗೆ ಹಣಕಾಸಿನ ಸಮಸ್ಯೆಗೆ ತೆರೆ, ಕೆಲಸ ಕಾರ್ಯಗಳಲ್ಲಿ ಜಯ, ಹೇಗಿದೆ ನೋಡಿ ನಿಮ್ಮ ದಿನ ಭವಿಷ್ಯ

Horoscope June 6: ಶನಿವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯ ಇದಾಗಿದೆ. ಶನಿವಾರ ರಾಹುಕಾಲವು ಬೆಳಗ್ಗೆ 9:00 ರಿಂದ 10:30 ರವರೆಗೆ ಇರುತ್ತದೆ. 12 ರಾಶಿಗಳಿಗೆ ಇಂದಿನ ಸಂಪೂರ್ಣ ಭವಿಷ್ಯ, ಫಲಾಫಲ ಮಾಹಿತಿ ಹೇಗಿದೆ ಎಂಬ ಪೂರ್ಣ ವಿವರ ತಿಳಿಯಿರಿ.

ಮೇಷ ರಾಶಿ:

ಇಂದಿನ ದಿನ ಆತ್ಮವಿಶ್ವಾಸದಿಂದ ಕೂಡಿರುವುದು. ಉದ್ಯಮಿಗಳಿಗೆ ಲಾಭವಾಗುವುದು. ಹೊಸ ಯೋಜನಗೆಳಿಗೆ ಕೈ ಹಾಕಬಹುದು. ಕಠಿಣ ಪರಿಶ್ರಮದ ಫಲ ಒಂದೊಂದಾಗಿಯೇ ಸಿಗುವುದು. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.

Horoscope June 6

ವೃಷಭ ರಾಶಿ:

ಇಂದು ಪ್ರಗತಿಯ ದಿನ. ಮಾಡಿದ ಕೆಲಸಕ್ಕೆ, ಪಟ್ಟ ಪ್ರಯತ್ನಕ್ಕೆ ಯಶಸ್ಸು ಸಿಗುವುದು. ಮಾನಸಿಕ ಒತ್ತಡ ಕಡಿಮೆಯಾಗುವುದು. ಆರೋಗ್ಯದತ್ತ ಗಮನ ಹರಿಸುವ ಅಗತ್ಯವಿದೆ. ಮನೆಯಲ್ಲಿ ಸಂತೋಷದ ವಾತಾವರಣ ಇರುವುದು.

ಮಿಥುನ ರಾಶಿ:

ಉತ್ತಮ ಅವಕಾಶಗಳು ಸಿಗುವ ಸೂಚನೆಗಳಿವೆ. ಕಚೇರಿಯಲ್ಲಿ ಸಹೋದ್ಯೋಗಿಗಳ ಬೆಂಬಲ ಸಿಗುವುದು. ಕೆಲಸ ಕಾರ್ಯಗಳಲ್ಲಿ ಉತ್ತಮ ಫಲಿತಾಂಶ ಸಿಗುವುದು. ಮದುವೆ ಮಾತುಕತೆ ನಡೆಯುವುದು. ವಿವಾಹ ನಿಶ್ಚಯವಾಗುವ ಸಾಧ್ಯತೆಯೂ ಇದೆ.

ಕರ್ಕಾಟಕ ರಾಶಿ:

ಇಡೀ ದಿನ ಸಂತೋಷದಿಂದ ಕಳೆಯುವುದು. ಬಹಳ ದಿನಗಳ ನಂತರ ಮಾನಸಿಕ ನೆಮ್ಮದಿ ಇರುವುದು. ಕುಟುಂಬ ಸದಸ್ಯರೊಂದಿಗೆ ಉತ್ತಮ ಸಮಯ ಕಳೆಯುವಿರಿ. ಕಠಿಣ ಶ್ರಮಕ್ಕೆ ಬೆಲೆ ಸಿಗುವುದು.

ಸಿಂಹ ರಾಶಿ:

ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಉದ್ಯೋಗ, ವ್ಯವಹಾರದಲ್ಲಿ ಲಾಭವಾಗುವುದು, ಯಶಸ್ಸು ಸಿಗುವುದು. ನಿಮ್ಮ ಮಾತಿಗೆ ಮನ್ನಣೆ ಸಿಗುವುದು. ಬಹಳ ಕಾಲದಿಂದ ಆರಂಭಿಸಬೇಕು ಎಂದುಕೊಂಡಿದ್ದ ಕೆಲಸಕ್ಕೆ ಕೈ ಹಾಕಬಹುದು. ಯಶಸ್ಸು ಸಿಗುವ ಸಾಧ್ಯತೆ ಇದೆ.

ಕನ್ಯಾರಾಶಿ:

ಜೀವನದಲ್ಲಿ ಪ್ರಗತಿ ಮತ್ತು ಯಶಸ್ಸಿನ ಹಾದಿ ಸುಗಮವಾಗುತ್ತದೆ. ಕಠಿಣ ಪರಿಶ್ರಮಕ್ಕೆ ಬೆಲೆ ಸಿಗುವುದು. ಅಂದುಕೊಂಡ ಕೆಲಸವನ್ನು ಸರಾಗವಾಗಿ ಮಾಡಿ ಮುಗಿಸುವಿರಿ. ಕೆಲಸ ಕಾರ್ಯಗಳಲ್ಲಿ ಗೆಲುವಾಗುವುದು. ಈ ದಿನ ನಿಮ್ಮ ಅದೃಷ್ಟದ ದಿನವಾಗಿರಲಿದೆ.

ತುಲಾ ರಾಶಿ:

ನಿಮ್ಮ ಕೆಲಸದಿಂದ ಮೇಲಾಧಿಕಾರಿಗಳ ಮೆಚ್ಚುಗೆ ಗಳಿಸುವಿರಿ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಕುಟುಂಬ ಸದಸ್ಯರ ಸಲಹೆ ಪಡೆಯುವುದು ಒಳ್ಳೆಯದು. ಆತುರದ ನಿರ್ಧಾರ ಬೇಡ. ಸಂತೋಷ ಹೆಚ್ಚಾಗುವುದು.

ವೃಶ್ಚಿಕ ರಾಶಿ:

ಹೊಸ ಉದ್ಯೋಗಾವಕಾಶಗಳು ಒದಗಿ ಬರುವುದು. ಒಪ್ಪಿಕೊಂಡರೆ ಭವಿಷ್ಯದಲ್ಲಿ ಲಾಭವಾಗುವುದು. ತಾಳ್ಮೆ ಅಗತ್ಯ. ಇಂದು ಮಾತಿನ ಮೇಲೆ ಹಿಡಿತವಿರಲಿ. ಯಾರೊಂದಿಗೂ ವಾದಕ್ಕೆ ಇಳಿಯಬೇಡಿ. ನಿಮ್ಮ ದಿನ ಉತ್ತಮವಾಗಿ ಸಾಗುವುದು.

ಧನು ರಾಶಿ:

ಆತ್ಮವಿಶ್ವಾಸ ಹೆಚ್ಚಾಗಿರುವುದು. ಎಲ್ಲಾ ಅಡೆತಡೆಗಳನ್ನು ಮೀರಿ ಮುಂದುವರೆಯುವಿರಿ. ಕಚೇರಿಯಲ್ಲಿ ಎಲ್ಲರ ಪ್ರಶಂಸೆಗೆ ಪಾತ್ರರಾಗುವಿರಿ. ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುವುದರಿಂದ ಸಂತೋಷ ಇರುವುದು.

ಮಕರ ರಾಶಿ:

ಹಣಕಾಸಿನ ವಿಷಯಗಳಲ್ಲಿ ಕಾಳಜಿ ಅಗತ್ಯ. ಅನಾವಶ್ಯಕವಾಗಿ ಹಣ ವೆಚ್ಚವಾಗದಂತೆ ನೋಡಿಕೊಳ್ಳಿ. ಆದಾಯ ಹೆಚ್ಚಾಗುವುದು. ಆರೋಗ್ಯದ ಬಗ್ಗೆ ಗಮನ ಹರಿಸಿ. ಸ್ನೇಹಿತರಿಂದ ಸಂತಸ ಸಿಗುವುದು.

ಕುಂಭ ರಾಶಿ:

ನೀವು ಮಾಡುವ ಎಲ್ಲಾ ಕೆಲಸ ಕಾರ್ಯಗಳಿಗೆ ಮನೆಯವರ ಬೆಂಬಲ ಇರುವುದು. ವಿಶೇಷವಾಗಿ ತಾಯಿ ನಿಮ್ಮ ಜೊತೆ ನಿಲ್ಲುವರು. ಖರ್ಚುಗಳನ್ನು ನಿಯಂತ್ರಿಸುವುದು ಅವಶ್ಯಕ. ತಾಳ್ಮೆ ಇದ್ದರೆ ಜಯ ನಿಮ್ಮದಾಗುವುದು.

ಮೀನ ರಾಶಿ:

ವೃತ್ತಿ ಜೀವನದಲ್ಲಿ ಉತ್ತಮ ಅವಕಾಶಗಳು ಸಿಗಬಹುದು. ದೀರ್ಘಕಾಲದ ಸಮಸ್ಯೆಗೆ ಪರಿಹಾರ ಸಿಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ಹೊಸ ಕೆಲಸ ಆರಂಭಿಸುವ ಮುನ್ನ ಹಿರಿಯರ ಅಭಿಪ್ರಾಯ ಕೇಳಿಕೊಳ್ಳುವುದು ಒಳ್ಳೆಯದು.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+