ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ರೋದ ಹೊಸ ಅಧ್ಯಕ್ಷರಾಗಿ ವಿಜ್ಞಾನಿ ಶಿವನ್ ಕೆ ನೇಮಕ

|
Google Oneindia Kannada News

ನವದೆಹಲಿ, ಜನವರಿ 10: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಹೊಸ ಅಧ್ಯಕ್ಷರಾಗಿ ಹಿರಿಯ ವಿಜ್ಞಾನಿ ಶಿವನ್ .ಕೆ ನೇಮಕವಾಗಿದ್ದಾರೆ.

ಐತಿಹಾಸಿಕ ಮೈಲುಗಲ್ಲು, ಇಸ್ರೋದಿಂದ 100ನೇ ಉಪಗ್ರಹ ಉಡಾವಣೆಐತಿಹಾಸಿಕ ಮೈಲುಗಲ್ಲು, ಇಸ್ರೋದಿಂದ 100ನೇ ಉಪಗ್ರಹ ಉಡಾವಣೆ

ಜನವರಿ 12, 2015ರಲ್ಲಿ ಇಸ್ರೊದ ಅಧ್ಯಕ್ಷರಾಗಿದ್ದ ಹಿರಿಯ ವಿಜ್ಞಾನಿ ಕನ್ನಡಿಗ ಎ.ಎಸ್. ಕಿರಣ್ ಕುಮಾರ್ ಅವರ ಜಾಗಕ್ಕೆ ಶಿವನ್ .ಕೆ ನೇಮಿಸಿ ಕೇಂದ್ರ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ. ಬಾಹ್ಯಾಕಾಶ ಇಲಾಖೆ ಮತ್ತು ಬಾಹ್ಯಾಕಾಶ ಆಯೋಗದ ಅಧ್ಯಕ್ಷರಾಗಿ ಮೂರು ವರ್ಷಗಳ ಅವಧಿಗೆ ಶಿವನ್ ಅವರನ್ನು ನೇಮಕ ಮಾಡಲಾಗಿದೆ.

Renowned scientist Sivan K named new ISRO chairman

ಮದ್ರಾಸ್‌ ಐಐಟಿಯಲ್ಲಿ 1980ರಲ್ಲಿ ಏರೋನಾಟಿಕಲ್ ಎಂಜಿನಿಯರಿಂಗ್ ಪದವಿ ಪಡೆದಿರುವ ಶಿವನ್ ನಂತರ 1982ರಲ್ಲಿ ಬೆಂಗಳೂರಿನ ಐಐಎಸ್ ಸಿಯಲ್ಲಿ ಏರೋಸ್ಪೇಸ್ ಎಂಜನಿಯರಿಂಗ್ ಪದವಿ ಮುಗಿಸಿದ್ದಾರೆ.

ಸಂಕ್ರಾಂತಿ ವಿಶೇಷ ಪುಟ

ಬಳಿಕ 2006ರಲ್ಲಿ ಬಾಂಬೆ ಐಐಟಿಯಿಂದ ಅವರು ಏರೋಸ್ಪೇಸ್ ಇಂಜಿನಿಯರಿಂಗ್ ನಲ್ಲಿ ಪಿಎಚ್ ಡಿ ಪದವಿಯನ್ನು ಪಡೆದಿದ್ದಾರೆ. ಏಪ್ರಿಲ್ 2014ರಲ್ಲಿ ಚೆನ್ನೈನ ಸತ್ಯಾಬಾಮಾ ವಿಶ್ವವಿದ್ಯಾನಿಲಯದಿಂದ ಡಾಕ್ಟರ್ ಆಫ್ ಸೈನ್ಸ್ ಮತ್ತು 1999 ಶ್ರೀಹರಿ ಓಂ ಆಶ್ರಮ ಡಾ ವಿಕ್ರಮ್ ಸಾರಾಭಾಯ್ ಸಂಶೋಧನಾ ಪ್ರಶಸ್ತಿಯನ್ನು ಪಡೆದಿದ್ದಾರೆ.

English summary
The government on Wednesday appointed renowned scientist Sivan K as the chairman of Indian Space Research Organisation (ISRO) to replace of A S Kiran Kumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X