ಬಿಜೆಪಿ ಸೇರಿದ ಸರಬ್ಜಿತ್ ಸಿಂಗ್ ಸೋದರಿ ದಲ್ಬೀರ್ ಕೌರ್

Posted By:
Subscribe to Oneindia Kannada

ಅಮೃತ್ ಸರ್, ಡಿಸೆಂಬರ್ 26: ಪಾಕಿಸ್ತಾನ ಜೈಲಿನಲ್ಲಿ ಮೃತಪಟ್ಟ ಭಾರತೀಯ ಸರಬ್ಜಿತ್ ಸಿಂಗ್ ಅವರ ಸೋದರಿ ದಲ್ಬೀರ್ ಕೌರ್ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಪಂಜಾಬ್ ನ ಕಿಸಾನ್ ಮೋರ್ಚಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾನುವಾರ ಬಿಜೆಪಿ ಶಾಸಕ ಮತ್ತು ಸಚಿವ ಸುರ್ಜಿತ್ ಗ್ಯಾನಿ ಅವರ ಸಮ್ಮುಖದಲ್ಲಿ ದಲ್ಬೀರ್ ಕೌರ್ ಅವರು ಭಾರತೀಯ ಜನತಾ ಪಕ್ಷ ಸೇರಿದ್ದಾರೆ.

ಪಾಕಿಸ್ತಾನ ಜೈಲಿನಲ್ಲಿದ್ದ ತಮ್ಮ ಸಹೋದರ ಸರಬ್ಜಿತ್ ರನ್ನು ಭಾರತಕ್ಕೆ ಕರೆತರಲು 2005 ರಿಂದಲೂ ದಲ್ಬೀರ್ ಪ್ರಯತ್ನಪಟ್ಟಿದ್ದರು. ದಲ್ಬೀರ್ ಅವರಿಗೆ ಬಿಜೆಪಿ ನೆರವು ನೀಡಿತ್ತು.

Punjab: Sarabjit Singh's sister joins BJP

ದಲ್ಬೀರ್ ಸಹೋದರ ಸರಬ್ಜಿತ್ ಸಿಂಗ್ ಅವರ ಮೇಲೆ ಭಯೋತ್ಪಾದನೆ ಹಾಗೂ ಗೂಢಚಾರಿಕೆ ಆರೋಪ ಹೊರಿಸಿದ್ದ ಪಾಕಿಸ್ತಾನ ಕೋರ್ಟ್, 1991ರಲ್ಲಿ ಮರಣ ದಂಡನೆ ವಿಧಿಸಿತ್ತು. ಆದರೆ, 2008ರಲ್ಲಿ ಮರಣದಂಡನೆಗೆ ತಡೆ ನೀಡಲಾಗಿತ್ತು. 2013ರ ಏಪ್ರಿಲ್ ನಲ್ಲಿ ಪಾಕಿಸ್ತಾನದ ಲಾಹೋರ್ ಜೈಲಿನಲ್ಲಿ ಸಹಖೈದಿ ನಡೆಸಿದ ಹಲ್ಲೆಯಿಂದ ಗಾಯಗೊಂಡು ಸರಬ್ಜಿತ್ ಸಿಂಗ್ ಮೃತಪಟ್ಟಿದ್ದರು.

ಸರಬ್ಜಿತ್ ಸಿಂಗ್ ಕಥೆಯನ್ನಾಧರಿಸಿ ಬಾಲಿವುಡ್ ನಲ್ಲಿ ಅದೇ ಹೆಸರಿನಲ್ಲಿ ಸಿನಿಮಾ ಕೂಡ ಬಂದಿತ್ತು. ಇದರಲ್ಲಿ ಸರಬ್ಜಿತ್ ಸಹೋದರಿಯಾಗಿ ಐಶ್ವರ್ಯ ರೈ ಅಭಿನಯಿಸಿದ್ದು, ಸರಬ್ಜಿತ್ ಪಾತ್ರದಲ್ಲಿ ರಣದೀಪ್ ಹೂಡಾ ನಟಿಸಿದ್ದಾರೆ.(ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Dalbir Kaur, the sister of Sarabjit Singh, who died in a Pakistan jail in 2013, on Sunday joined the BJP.
Please Wait while comments are loading...