ಉತ್ತರ ಪ್ರದೇಶ ಅಸೆಂಬ್ಲಿಯನ್ನೇ ಸ್ಫೋಟಿಸಲು ಹೊರಟಿದ್ದ ಆ ಬಿಳಿಪುಡಿಯ ರಹಸ್ಯ

Posted By:
Subscribe to Oneindia Kannada

ಲಕ್ನೋ, ಜುಲೈ 14: ಕೇವಲ 150 ಗ್ರಾಂ ತೂಗುತ್ತಿದ್ದ ಮೈದಾ ಹಿಟ್ಟಿನಂಥ ಆ ಬಿಳಿ ಪುಡಿಗೆ ಉತ್ತರ ಪ್ರದೇಶದ ಅಸೆಂಬ್ಲಿಯ ಕೆಲಭಾಗವನ್ನೇನೆಲಸಮಮಾಡುವಷ್ಟು ಶಕ್ತಿಯಿತ್ತು ಅಂದರೆ ನಂಬುತ್ತೀರಾ?

ಹೌದು, ಉತ್ತರ ಪ್ರದೇಶ ಅಸೆಂಬ್ಲಿಯಲ್ಲಿ ಪತ್ತೆಯಾದ ಬಿಳಿ ಪುಡಿ ತೀರಾ ಅಪಾಯಕಾರಿ ಸ್ಫೋಟವಾಗಿತ್ತು ಎಂದು ಫೊರೆನ್ಸಿಕ್ ಲ್ಯಾಬ್ ದೃಢಪಡಿಸುತ್ತಿದ್ದಂತೆ ದೇಶದಾದ್ಯಂತ ಆತಂಕ ಮನೆಮಾಡಿದೆ.

ಉತ್ತರ ಪ್ರದೇಶ ಅಸೆಂಬ್ಲಿಯಲ್ಲಿ ಸ್ಫೋಟಕ ಪತ್ತೆ

ಇಡೀ ದೇಶವನ್ನೂ ತಲ್ಲಣಗೊಳಿಸಿದ ಪೆಂಟಾ ಎರಿಥ್ರಿಟೋಲ್ ಟೆಟ್ರಾ ನೈಟ್ರೇಟ್ (ಪಿಇಟಿಎನ್) ಎಂಬ ರಾಸಾಯನಿಕ ಅತ್ಯಂತ ಅಪಾಯಕಾರಿ ಸ್ಫೋಟಕ. ಅದಕ್ಕೆಂದೇ ಉತ್ತರ ಪ್ರದೇಶದ ಅಸೆಂಬ್ಲಿಯಲ್ಲಿ ಪತ್ತೆಯಾಗಿದ್ದು ಸ್ಫೋಟಕ ಎಂಬುದು ದೃಢವಾಗುತ್ತಿದ್ದಂತೆಯೇ ಅತ್ತ ನವದೆಹಲಿಯಲ್ಲೂ ಆತಂಕ ಸೃಷ್ಟಿಯಾಗಿ, ಸಂಸತ್ತಿಗೂ ಬಿಗಿಭದ್ರತೆ ಕಲ್ಪಿಸಲಾಗಿತ್ತು.

ಈ ಸಂಬಂಧ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತರಾತುರಿಯಲ್ಲಿ ಸಭೆ ಕರೆದು ಈ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೂ ಒಪ್ಪಿಸಿಯಾಗಿದೆ. ಆದರೆ ವಿಧಾನ ಸಭೆಯ ಒಳಭಾಗದಲ್ಲಿ, ಅದರಲ್ಲೂ ಶಾಸಕರೊಬ್ಬರ ಕುರ್ಚಿಯ ಕೆಳಗೆ ಪತ್ತೆಯಾದ ಈ ಪುಡಿ ಅಲ್ಲಿಯವರೆಗೂ ಬಂದಿದ್ದು ಹೇಗೆ? ಇಡಿ ರಾಜ್ಯದ ಶಕ್ತಿ ಕೇಂದ್ರವಾದ ಅಸೆಂಬ್ಲಿಯಲ್ಲಿ ಈ ಪರಿ ಭದ್ರತಾ ಲೋಪವೇ ಎಂದೆಲ್ಲ ಅನುಮಾನ ವ್ಯಕ್ತವಾಗುತ್ತಿರುವುದು ನಿಜ.

ಆದರೆ ಹದ್ದಿನ ಕಣ್ಣನ್ನೂ, ಲೋಹಶೋಧಕ ಯಂತ್ರವನ್ನೂ ಮೋಸಗೊಳಿಸಬಲ್ಲ ಈ ಬಿಳಿಪುಡಿಯ ವಿದ್ವಂಸಕ ಸ್ವಭಾವವೇ ಅಷ್ಟು ನಿಗೂಢವಾಗಿದೆ!

ಲೋಹ ಶೋಧಕ ಯಂತ್ರವನ್ನೇ ಮೋಸಗೊಳಿಸುತ್ತೆ!

ಲೋಹ ಶೋಧಕ ಯಂತ್ರವನ್ನೇ ಮೋಸಗೊಳಿಸುತ್ತೆ!

ಪೆಂಟಾ ಎರಿಥ್ರಿಟೋಲ್ ಟೆಟ್ರಾ ನೈಟ್ರೇಟ್ ಸಕ್ಷಿಪ್ತವಾಗಿ ಪಿಇಟಿಎನ್ ಎಂದು ಕರೆಯಲ್ಪಡುವ ಈ ಅಪಾಯಕಾರಿ ಸ್ಫೋಟಕವನ್ನು ಪತ್ತೆ ಮಾಡುವುದು ತೀರಾ ಕಷ್ಟ. ಪ್ಲಾಸ್ಟಿಕ್ ನಂತೆ ಕಾಣುವ ಇದು ಲೋಹಶೋಧಕ ಯಂತ್ರಗಳನ್ನೂ ಸುಲಭವಾಗಿ ಮೋಸಗೊಳಿಸಿ ಆಚೆ ಬರಬಲ್ಲದು!ಇದು ಬಿಸಿ ತಾಕುತ್ತಿದ್ದಂತೆಯೇ ಸ್ಫೋಟಿಸುವ ಗುಣ ಹೊಂದಿದೆ.

ಇದು ಲೋಹವಲ್ಲ!

ಇದು ಲೋಹವಲ್ಲ!

ಇದು ಲೋಹವಲ್ಲದೆ ಇರುವುದರಿಂದ ಎಕ್ಸ್ ರೇ ಯಂತ್ರದ ಮೂಲಕವೂ ಇದನ್ನು ಕಂಡುಹಿಡಿಯುವುದಕ್ಕಾಗುವುದಿಲ್ಲ! ಈ ಪುಡಿ ಕಡಿಮೆ ಒತ್ತಡದ ಅಣುಗಳನ್ನು ಹೊಂದಿರುವುದರಿಂದ ಬಾಂಬ್ ಪತ್ತೆ ಮಾಡುವ ಶ್ವಾನಗಳಿಗೂ ಇದನ್ನು ಪತ್ತೆ ಮಾಡುವುದು ಕಷ್ಟ.

ದೆಹಲಿ ಹೈಕೋರ್ಟ್ ಸ್ಫೋಟಕ್ಕೂ ಬಳಸಲಾಗಿತ್ತು!

ದೆಹಲಿ ಹೈಕೋರ್ಟ್ ಸ್ಫೋಟಕ್ಕೂ ಬಳಸಲಾಗಿತ್ತು!

2011 ರಂದು ನಡೆದ ದೆಹಲಿ ಹೈಕೋರ್ಟ್ ಸ್ಫೋಟದಲ್ಲೂ ಬಳಸಿದ್ದು ಇದೇ ಸ್ಫೋಟಕವನ್ನ. ಬ್ರೀಫ್ ಕೇಸಿನಲ್ಲಿದ್ದ ಬಾಂಬ್ ನಲ್ಲಿ ಪಿಇಟಿಎನ್ ಬಳಸಲಾಗಿತ್ತು ಎಂಬುದು ನಂತರ ದೃಢವಾಗಿತ್ತು. ಈ ಸ್ಫೋಟದಲ್ಲಿ 17 ಜನರು ಹತರಾಘಿದ್ದರು.

ಭಯಾನಕ ಸ್ಫೋಟ

ಭಯಾನಕ ಸ್ಫೋಟ

2001 ರಲ್ಲಿ ಅಮೆರಿಕನ್ ಏರ್ ಲೈನ್ಸ್ ಫ್ಲೈಟ್ ಮತ್ತು 2010 ರಲ್ಲಿ ಯೆಮನ್ ನಿಂದ ಅಮೆರಿಕಕ್ಕೆ ಹೊರಟಿದ್ದ ಎರಡು ವಿಮಾನದಲ್ಲಿ ಸಭವಿಸಿದ ಸ್ಫೋಟದಲ್ಲೂ ಇದೇ ಸ್ಫೋಟಕ ಬಳಸಲಾಗಿತ್ತು!

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In a strange incident, in Uttar Pradesh Assembly, an explosive was found by the security personnel with the help of dog squad on July 12 in the premises. As per reports, 150 grams of white powder, wrapped in small plastic bag, was found in the Assembly. Later, it was sent to forensic lab which confirmed that, it is Pentaerythritol tetranitrate (PETN), which is powerful explosive.
Please Wait while comments are loading...