ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ: 500 ಸಿಸಿಟಿವಿ ಕಣ್ಗಾವಲು

|
Google Oneindia Kannada News

ಬೆಂಗಳೂರು ಡಿಸೆಂಬರ್ 29: ಹೊಸ ವರ್ಷವನ್ನು ಬರ ಮಾಡಿಕೊಳ್ಳಲು ಸಿಲಿಕಾನ್ ಸಿಟಿ ಕಾತುರದಿಂದ ಕಾಯುತ್ತಿದೆ. ಈ ದಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಮತ್ತು ಚರ್ಚ್ ಸ್ಟ್ರೀಟ್‌ಗಳಲ್ಲಿ ಹೆಚ್ಚು ಜನ ಜಮಾಯಿಸುತ್ತಾರೆ. ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲು ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಮತ್ತು ಚರ್ಚ್ ಸ್ಟ್ರೀಟ್‌ಗಳಲ್ಲಿ 500ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

"ನಾವು ನಮ್ಮ ಬೆಂಗಳೂರು ಸುರಕ್ಷಿತವಾಗಿಡಲು ಹೆಚ್ಚಿನ ಸಮಯ ಕೆಲಸ ಮಾಡುತ್ತೇವೆ. ನಮಗೆ ಕೈ ಕೊಡಿ - ನೀವು ಏನನ್ನಾದರೂ ಅಹಿತಕರ ಸಂದರ್ಭಗಳು, ವ್ಯಕ್ತಿಗಳನ್ನು ಗಮನಿಸಿದಾಗ, 112ಗೆ ಕರೆ ಮಾಡಿ" ಎಂದು ಪೊಲೀಸ್ ಕಮಿಷನರ್ ಸಿಎಚ್ ಪ್ರತಾಪ್ ರೆಡ್ಡಿ ಅವರು ಟ್ವೀಟ್ ಮಾಡಿದ್ದಾರೆ. ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಮತ್ತು ಚರ್ಚ್ ಸ್ಟ್ರೀಟ್‌ಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

BTS-22: ಬೆಂಗಳೂರು ವಿಶ್ವದ ಸಿಲಿಕಾನ್ ವ್ಯಾಲಿಯಾಗಿ ಬೆಳೆದು ದೊಡ್ಡಣ್ಣನ ಸಾಧನೆ ಮೀರಿಸಲಿ: ಸಿಎಂBTS-22: ಬೆಂಗಳೂರು ವಿಶ್ವದ ಸಿಲಿಕಾನ್ ವ್ಯಾಲಿಯಾಗಿ ಬೆಳೆದು ದೊಡ್ಡಣ್ಣನ ಸಾಧನೆ ಮೀರಿಸಲಿ: ಸಿಎಂ

500 ಸಿಸಿಟಿವಿ ಕಣ್ಗಾವಲು

500 ಸಿಸಿಟಿವಿ ಕಣ್ಗಾವಲು

ಭದ್ರತಾ ವ್ಯವಸ್ಥೆಯನ್ನು ಪರಿಶೀಲನೆ ವೇಳೆ ಪೊಲೀಸ್ ಕಮಿಷನರ್ ಸಿಎಚ್ ಪ್ರತಾಪ್ ರೆಡ್ಡಿ, ಅವರೊಂದಿಗೆ ಹೆಚ್ಚುವರಿ ಪೊಲೀಸ್ ಆಯುಕ್ತ (ಪಶ್ಚಿಮ) ಸಂದೀಪ್ ಪಾಟೀಲ್ ಮತ್ತು ಉಪ ಪೊಲೀಸ್ ಆಯುಕ್ತ (ಕೇಂದ್ರ) ಶ್ರೀನಿವಾಸ್ ಗೌಡ ಇದ್ದರು. ಈ ವೇಳೆ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಮತ್ತು ಚರ್ಚ್ ಸ್ಟ್ರೀಟ್‌ನಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದ್ದು, ಈ ಪ್ರದೇಶ ಹೊಸ ವರ್ಷದ ಸಂಭ್ರಮಾಚರಣೆಯ ಕೇಂದ್ರವಾಗಿದೆ ಮತ್ತು ಸಾವಿರಾರು ಜನರನ್ನು ಸೆಳೆಯುತ್ತದೆ ಎಂದು ರೆಡ್ಡಿ ಹೇಳಿದರು. ಯಾವುದೇ ದುಷ್ಕೃತ್ಯಗಳನ್ನು ತಡೆಯಲು ಡ್ರೋನ್ ಕ್ಯಾಮೆರಾಗಳನ್ನು ನಿಯೋಜಿಸಲಾಗುವುದು. ಮಹಿಳೆಯರು ಮತ್ತು ಮಕ್ಕಳಿಗೆ ಸುರಕ್ಷತೆಯನ್ನು ಒದಗಿಸುವುದು ಪೊಲೀಸರ ಮೊದಲ ಆದ್ಯತೆಯಾಗಿದೆ. ನಾವು ಅದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತೇವೆ ಎಂದು ರೆಡ್ಡಿ ಹೇಳಿದರು.

ಧ್ವನಿ ಮಾಲಿನ್ಯ ನಿಯಮಗಳ ಅಡಿಯಲ್ಲಿ ಕಡ್ಡಾಯ ಪರವಾನಗಿ

ಧ್ವನಿ ಮಾಲಿನ್ಯ ನಿಯಮಗಳ ಅಡಿಯಲ್ಲಿ ಕಡ್ಡಾಯ ಪರವಾನಗಿ

ಬಾರ್ ಮತ್ತು ರೆಸ್ಟೋರೆಂಟ್‌ಗಳು ಮತ್ತು ಪಬ್‌ಗಳು ತಮ್ಮ ಆವರಣದಲ್ಲಿ ಹೆಚ್ಚಿನ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಪೊಲೀಸರು ಸೂಚಿಸಿದ್ದಾರೆ. ತಮ್ಮ ತಪಾಸಣೆಯ ನಂತರ ಟ್ವಿಟ್ ಮಾಡಿದ ಅವರು, ಹೊಸ ವರ್ಷವನ್ನು ಆಚರಿಸುವ ಜನರು ಧ್ವನಿವರ್ಧಕಗಳನ್ನು ಬಳಸಲು ಧ್ವನಿ ಮಾಲಿನ್ಯ ನಿಯಮಗಳ ಅಡಿಯಲ್ಲಿ ಕಡ್ಡಾಯ ಪರವಾನಗಿಯನ್ನು ಪಡೆದುಕೊಳ್ಳಲು ಮತ್ತು ಡೆಸಿಬಲ್ ಮಿತಿಗಳು ಮತ್ತು ಸಮಯವನ್ನು ಅನುಸರಿಸಲು ಸೂಚಿಸಿದ್ದಾರೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಪ್ರತಿ 30 ಅಡಿ ದೂರದಲ್ಲೊಂದು ಕ್ಯಾಮರಾ

ಪ್ರತಿ 30 ಅಡಿ ದೂರದಲ್ಲೊಂದು ಕ್ಯಾಮರಾ

ಹೊಸ ವರ್ಷದ ಮುನ್ನಾದಿನದ ವೇಳೆಗೆ ಕಣ್ಗಾವಲು ಜಾಲವನ್ನು ಕಾರ್ಯಗತಗೊಳಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. "ಪ್ರತಿ 30 ಅಡಿ ಮತ್ತು ಪರ್ಯಾಯ ಲೈಟ್ ಕಂಬಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಬ್ರಿಗೇಡ್ ರಸ್ತೆ, ಎಂಜಿ ರಸ್ತೆ ಮತ್ತು ಚರ್ಚ್ ಸ್ಟ್ರೀಟ್‌ಗಳಲ್ಲಿ ಫುಟ್‌ಪಾತ್ ಮತ್ತು ರಸ್ತೆಗಳನ್ನು ಕವರ್ ಮಾಡಲು ಆರು ಡ್ರೋನ್‌ಗಳನ್ನು ನಿಯೋಜಿಸಲಾಗುವುದು" ಎಂದು ಸ್ಟರ್ಲಿಂಗ್ ಸಿಸಿಟಿವಿ ಕ್ಯಾಮೆರಾಗಳ ಸೊಲ್ಯೂಷನ್ಸ್‌ನ ಎಚ್‌ಕೆ ವಿನೋದ್ ಕುಮಾರ್ ಹೇಳಿದ್ದಾರೆ. ತುರ್ತು ಸಂದರ್ಭಗಳಲ್ಲಿ ಪ್ರಥಮ ಚಿಕಿತ್ಸಾ ಕಿಟ್‌ಗಳು ಮತ್ತು ಆಂಬ್ಯುಲೆನ್ಸ್ ಸೇವೆಯನ್ನು ಸಹ ಸಿದ್ಧವಾಗಿ ಇರಿಸಲಾಗುತ್ತದೆ ಎಂದರು.

ಜನರವರಿ 1ರವರೆಗೆ ಕಟ್ಟೆಚ್ಚರ

ಜನರವರಿ 1ರವರೆಗೆ ಕಟ್ಟೆಚ್ಚರ

ಡಿಸೆಂಬರ್ 31ರ ರಾತ್ರಿ ಹೊಸ ವರ್ಷವನ್ನು ಬರ ಮಾಡಿಕೊಳ್ಳಲು ನೂರಾರು ಜನರು ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಮತ್ತು ಚರ್ಚ್ ಸ್ಟ್ರೀಟ್‌ಗಳಲ್ಲಿ ಸೇರುತ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ಮಳಿಗೆಗಳು, ಬಾರ್, ಪಬ್, ಕ್ಲಬ್‌ಗಳು ಇಲ್ಲಿರುವುದರಿಂದ ಜನ ದಟ್ಟಣೆ ಹೆಚ್ಚಾಗಿರುತ್ತದೆ. ಮಹಿಳೆ, ಮಕ್ಕಳು, ಯುವತಿಯರು ಹೀಗೆ ಎಲ್ಲಾ ವಯೋಮಾನದವರು ಇಲ್ಲಿ ಸೇರುವುದರಿಂದ ಪೊಲೀಸ್ ಭದ್ರತೆಯನ್ನು ಕೂಡ ಇಲ್ಲಿ ಹೆಚ್ಚಿಸಲಾಗಿದೆ. ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಈ ಮೂಲಕ ಮೇಲ್ವಿಚರಣೆ ಮಾಡಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

English summary
Silicon City is eagerly waiting to usher in the new year. On this day many people gather on MG Road, Brigade Road and Church Street. More than 500 CCTV cameras have been installed on MG Road, Brigade Road and Church Street to ensure that no untoward incident takes place.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X