ಬೆಂಗಳೂರು ಬಾರ್‌ನಲ್ಲಿ ಗಲಾಟೆ: ಪ್ರತಿಭಟನಾಕಾರರು ಹಾಗೂ ಬೌನ್ಸರ್‌ಗಳ ನಡುವೆ ಘರ್ಷಣೆ
ಬೆಂಗಳೂರು ಬಾರ್‌ನಲ್ಲಿ ಘರ್ಷಣೆ ನಡೆದಿದ್ದು ಪ್ರತಿಭಟನಾಕಾರರು ಹಾಗೂ ಬೌನ್ಸರ್‌ಗಳ ನಡುವೆ ಗಲಾಟೆ ಉಂಟಾಗಿದೆ.
ಬೆಂಗಳೂರು ಮಾರ್ಚ್ 7: ನಗರದ ರೆಸಿಡೆನ್ಸಿ ರಸ್ತೆಯಲ್ಲಿರುವ ನರ್ತಕಿ ಬಾರ್ ಆ್ಯಂಡ್ ರೆಸ್ಟೋರೆಂಟ್‌ನ ಮುಂದೆ ಡ್ರಮ್ ಬಾರಿಸುವ ಮೂಲಕ ಗುಂಪೊಂದು ಪ್ರತಿಭಟನೆ ಮಾಡಿದೆ. ರೆಸ್ಟೋರೆಂಟ್‌ಗೆ ಪ್ರತಿಭಟನಾಕಾರರು ನುಗ್ಗಲು ಯತ್ನಿಸಿದ ಪರಿಣಾಮ ಬೌನ್ಸರ್‌ಗಳು ಅವರನ್ನು ತಡೆದು ಘರ್ಷಣೆ ನಡೆದಿದೆ.
ಹೀಗಾಗಿ ಶನಿವಾರ ನಡೆದ ಈ ಘಟನೆಯಿಂದಾಗಿ ಬಾರ್ ಸಿಬ್ಬಂದಿ ನೀಡಿದ ದೂರಿನ ಆಧಾರದ ಮೇಲೆ ಅಶೋಕನಗರ ಪೊಲೀಸರು ಕರ್ನಾಟಕ ರಾಜ್ಯ ಕಾರ್ಮಿಕ ಮಂಡಳಿಯ ಪ್ರತಿನಿಧಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕೆಎಸ್‌ಎಲ್‌ಸಿ ಕಾರ್ಯಕರ್ತರು ನೀಡಿದ ದೂರಿನ ಮೇರೆಗೆ ಬಾರ್‌ನ ಬೌನ್ಸರ್‌ಗಳ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ.

ನರ್ತಕಿ ಬಾರ್ ಮತ್ತು ಪಕ್ಕದ ಮೆಹಂದಿ ಬಾರ್ ಎದುರು ರಾತ್ರಿ 11.30ಕ್ಕೆ ಸುಮಾರು 15 ಮಂದಿ ಕ್ಲಬ್ ವಿರುದ್ಧ ಪ್ರತಿಭಟನೆ ನಡೆಸಲು ಯತ್ನಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬೌನ್ಸರ್‌ಗಳು ಅವರನ್ನು ಸ್ಥಳದಿಂದ ಹೊರಹೋಗುವಂತೆ ಹೇಳಿದ್ದು, ಮಾತಿನ ಚಕಮಕಿ ನಡೆಯಿತು.
ಕೆಎಸ್‌ಎಲ್‌ಸಿ ರಾಜ್ಯಾಧ್ಯಕ್ಷ ರವಿಶೆಟ್ಟಿ ಬೈಂದೂರು ಮಾತನಾಡಿ, ತಮ್ಮ ಸಂಘಟನೆಯು ಕಳೆದ ಒಂಬತ್ತು ದಿನಗಳಿಂದ ಫ್ರೀಡಂ ಪಾರ್ಕ್‌ನಲ್ಲಿ ಅಕ್ರಮ ಕ್ಲಬ್‌ಗಳು ಮತ್ತು ಪಬ್‌ಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ. ಕ್ಲಬ್‌ಗಳು ಮತ್ತು ಪಬ್‌ಗಳು ನಿಯಮಗಳು ಮತ್ತು ನ್ಯಾಯಾಲಯದ ನಿರ್ದೇಶನಗಳನ್ನು ಉಲ್ಲಂಘಿಸುತ್ತಿವೆ ಎಂದು ಅವರು ಆರೋಪಿಸಿದರು.

ಅವರು ಮದ್ಯ ಮತ್ತು ನೀರಿಗೆ ವಿಪರೀತ ದರವನ್ನು ವಿಧಿಸುತ್ತಾರೆ ಮತ್ತು ಹೆಚ್ಚು ಹಣವನ್ನು ಗಳಿಸಲು ತೆರಿಗೆಯನ್ನು ಪಾವತಿಸುವುದಿಲ್ಲ. ಅಮಾಯಕ ಹೆಣ್ಣುಮಕ್ಕಳನ್ನು ಬಾಡಿಗೆಗೆ ಪಡೆದು ತಮ್ಮ ವ್ಯಾಪಾರಕ್ಕೆ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಅವರನ್ನು ತಮ್ಮ ವ್ಯವಹಾರಕ್ಕೆ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಕ್ಲಬ್‌ಗಳು ಮತ್ತು ಪಬ್‌ಗಳಲ್ಲಿನ ಎಲ್ಲಾ ಅಕ್ರಮಗಳು ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ನಿಲ್ಲಿಸಬೇಕೆಂದು ನಾವು ಬಯಸುತ್ತೇವೆ. ಆದ್ದರಿಂದ ನಾವು ಪೊಲೀಸ್ ನಿಯಂತ್ರಣ ಕೊಠಡಿಗೆ ತಿಳಿಸಿ ಅವರ ಬಾರ್‌ನಿಂದ 50 ಮೀಟರ್ ದೂರದಲ್ಲಿ ಡ್ರಮ್ ಬಾರಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆವು. ಬಾರ್‌ನ ಹೊರಗೆ ಜಮಾಯಿಸಿದ ಬೌನ್ಸರ್‌ಗಳು ನಮ್ಮ ಮೇಲೆ ಹಲ್ಲೆ ನಡೆಸಿದರು" ಎಂದು ಬೈಂದೂರ್ ಹೇಳಿದರು. ಬಾರ್‌ನಲ್ಲಿ ನಡೆಯುತ್ತಿರುವ ಅಕ್ರಮದ ಬಗ್ಗೆ ಗೃಹ ಸಚಿವರಿಗೆ ದೂರು ನೀಡಿದ್ದೇವೆ ಎಂದರು.
ಘರ್ಷಣೆಯ ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಗುಂಪನ್ನು ಚದುರಿಸುವಲ್ಲಿ ಯಶಸ್ವಿಯಾದರು. "ನಾವು ಎರಡೂ ಪ್ರಕರಣಗಳಲ್ಲಿ ಶಂಕಿತರನ್ನು ಕರೆಸುತ್ತೇವೆ" ಎಂದು ಪೊಲೀಸರು ಹೇಳಿದ್ದಾರೆ.











Click it and Unblock the Notifications