ಶಾಸಕ ಮಾಡಾಳ್ ಮೆರವಣಿಗೆ ಮಾಡಿದ ಬೆಂಬಲಿಗರು: ಪೊಲೀಸರಿಗೆ ಸೆಡ್ಡು ಹೊಡೆದ ಬಿಜೆಪಿ ಕಾರ್ಯಕರ್ತರು- ವಿಡಿಯೊ ನೋಡಿ
ಜಾಮೀನು ಸಿಕ್ಕ ನಂತರ ಮಾಡಾಳ್ ವಿರೂಪಾಕ್ಷಪ್ಪ ಅವರು ಬೆಂಗಳೂರಿನಿಂದ ದಾವಣಗೆರೆ ಮೂಲಕ ಚನ್ನಗಿರಿಯನ್ನು ತಲುಪಿದರು. ಅವರನ್ನು ತೆರೆದ ಕಾರಿನಲ್ಲಿ ಬೆಂಬಲಿಗರು ಮೆರವಣಿಗೆ ಮಾಡಿದರು. ಹೂವು ಹಾರಗಳನ್ನು ಎರಚಿದರು. ಘೋಷಣೆ ಕೂಗಿದರು. ವಿಡಿಯೊ ನೋಡಿ
ದಾವಣಗೆರೆ, ಮಾರ್ಚ್ 07: ಲಂಚ ಪ್ರಕರಣದಲ್ಲಿ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಕರ್ನಾಟಕ ಹೈಕೋರ್ಟ್ ಮಂಗಳವಾರ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ನಿರೀಕ್ಷಣಾ ಜಾಮೀನು ಆದೇಶವನ್ನು ಸ್ವೀಕರಿಸಿದ ನಂತರ 48 ಗಂಟೆಗಳ ಒಳಗೆ ಲೋಕಾಯುಕ್ತ ಪೊಲೀಸ್ ತನಿಖಾಧಿಕಾರಿ (ಐಒ) ಮುಂದೆ ಹಾಜರಾಗುವಂತೆ ಶಾಸಕ ಮಾಡಾಳ್ ಅವರಿಗೆ ನ್ಯಾಯಮೂರ್ತಿ ಕೆ.ನಟರಾಜನ್ ತಿಳಿಸಿದರು.
ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡುವಾಗ ನ್ಯಾಯಮೂರ್ತಿ ಕೆ ನಟರಾಜನ್ ಅವರು ವಿರೂಪಾಕ್ಷಪ್ಪ ಅವರು ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ (ಕೆಎಸ್‌ಡಿಎಲ್) ಆವರಣವನ್ನು ಪ್ರವೇಶಿಸಬಾರದು ಮತ್ತು ಸಾಕ್ಷ್ಯವನ್ನು ಹಾಳು ಮಾಡಬಾರದು ಎಂದು ಹೇಳಿದರು.

ಲೋಕಾಯುಕ್ತ ಪೊಲೀಸರು ತಮ್ಮ ಹಾಗೂ ಪುತ್ರ ಪ್ರಶಾಂತ್ ಮಾಡಾಳ್ ವಿರುದ್ಧ ಎಫ್‌ಐಆರ್ ದಾಖಲಿಸಿದ ನಂತರ ಕೆಎಸ್‌ಡಿಎಲ್ ಅಧ್ಯಕ್ಷ ಸ್ಥಾನಕ್ಕೆ ಮಾಡಾಳ್ ವಿರೂಪಾಕ್ಷಪ್ಪ ರಾಜೀನಾಮೆ ನೀಡಿದ್ದಾರೆ. ವಿರೂಪಾಕ್ಷಪ್ಪ ಅವರನ್ನು ಆರೋಪಿ ನಂಬರ್ ಒನ್ ಎಂದು ಹೆಸರಿಸಲಾಗಿದ್ದು, ಅವರ ಪುತ್ರ ಪ್ರಶಾಂತ್ ಮಾಡಾಳ್ ಅವರನ್ನು ಆರೋಪಿ ನಂಬರ್ 2 ಎಂದು ಹೆಸರಿಸಲಾಗಿದೆ.
ವಿರೂಪಾಕ್ಷಪ್ಪ ಅವರ ಪರ ವಾದ ಮಂಡಿಸಿದ ಹಿರಿಯ ವಕೀಲರು, ಹಂಚಿಕೆ, ಟೆಂಡರ್ ಸ್ವೀಕಾರ, ಖರೀದಿ ಆದೇಶ ನೀಡಿರುವುದು ವಿರೂಪಾಕ್ಷಪ್ಪ ಸದಸ್ಯರಾಗಿಲ್ಲದ ಸಮಿತಿಯಿಂದ ನಡೆದಿದೆ. ದೂರಿನಲ್ಲಿ ಮತ್ತು ಎಫ್‌ಐಆರ್‌ನಲ್ಲಿ ಎಲ್ಲಿಯೂ ವಿರೂಪಾಕ್ಷಪ್ಪ ವಿರುದ್ಧ ಅಕ್ರಮ ಸಲ್ಲಿಕೆಯ ನಿರ್ದಿಷ್ಟ ಆರೋಪವಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ಕೆಎಸ್‌ಡಿಎಲ್‌ಗೆ ಸುಗಂಧ ದ್ರವ್ಯ ಪೂರೈಕೆಯ ಟೆಂಡರ್‌ಗೆ ಸಂಬಂಧಿಸಿದಂತೆ 40 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರಿಗೆ ಪ್ರಶಾಂತ್ ಮಾಡಲ್ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ನಂತರ ಲೋಕಾಯುಕ್ತ ಪೊಲೀಸರು ಮಾಡಾಳ್ ವಿರೂಪಾಕ್ಷಪ್ಪ ಅವರ ಮನೆಯಲ್ಲಿ ಶೋಧ ನಡೆಸಿದಾಗ 6 ಕೋಟಿ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ.

ಜಾಮೀನು ಸಿಕ್ಕ ನಂತರ ಮಾಡಾಳ್ ವಿರೂಪಾಕ್ಷಪ್ಪ ಅವರು ಬೆಂಗಳೂರಿನಿಂದ ದಾವಣಗೆರೆ ಮೂಲಕ ಚನ್ನಗಿರಿಯನ್ನು ತಲುಪಿದರು. ಅವರನ್ನು ತೆರೆದ ಕಾರಿನಲ್ಲಿ ಬೆಂಬಲಿಗರು ಮೆರವಣಿಗೆ ಮಾಡಿದರು. ಹೂವು ಹಾರಗಳನ್ನು ಎರಚಿದರು. ಮಾಡಾಳ್ ಪರ ಘೋಷಣೆ ಕೂಗಿದರು. ಹಾರ ತುರಾಯಿಗಳನ್ನು ಹಾಕಿದರು. ಇದೇ ವೇಳೆ, ಕರ್ತವ್ಯ ನಿರ್ವಹಣೆಯಲ್ಲಿ ತೊಡಗಿದ್ದ ಪೊಲೀಸರಿಗೆ ಸೆಡ್ಡು ಹೊಡೆದ ಸನ್ನೆ ಮಾಡಿ ಸವಾಲು ಹಾಕಿದರು.
#WATCH | Davanagere, Karnataka: Channagiri MLA Madal Virupakshappa was welcomed by BJP workers as he was granted interim anticipatory bail by Karnataka HC.
— ANI (@ANI) March 7, 2023
He was absconding for 5 days after his son was arrested along with 4 others while taking a bribe of Rs 40 lakhs. pic.twitter.com/loL3MI8n71
ಈ ಘಟನೆಗೆ ಸಂಬಂಧಿಸಿದ ವಿಡಿಯೊ ಅನ್ನು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ. 'ಲೋಕಾಯುಕ್ತ ಪೊಲೀಸರ ಕೈಗೆ ಸಿಗದಿದ್ದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಜಾಮೀನು ಸಿಕ್ಕ ಕೆಲವೇ ಗಂಟೆಗಳಲ್ಲಿ ಪ್ರತ್ಯಕ್ಷರಾಗುತ್ತಾರೆ. ಮೆರವಣಿಗೆ ಮಾಡಿ ಪೊಲೀಸರಿಗೆ ಸೆಡ್ಡು ಹೊಡೆಯುತ್ತಾರೆ. ಬಿಜೆಪಿಗರು ಬಾವುಟ ಹಿಡಿದು ಸಂಭ್ರಮಿಸುತ್ತಾರೆ. ಇದು ರಾಜ್ಯದ ಜನತೆಗೆ ಮಾಡುವ ಅಪಮಾನ. ಬಿಜೆಪಿಯು ಕಾನೂನಿನ ಅಣಕವಾಡುತ್ತಿದೆ' ಎಂದು ಕಾಂಗ್ರೆಸ್ ಟೀಕಿಸಿದೆ.
Mind blowing.
— Deepak Bopanna (@dpkBopanna) March 7, 2023
Crackers, flowers and slogans in praise !!!
BJP MLA Madal Virupakshappa given a hero's welcome as he returns to his house a few hours after securing interim bail in the Lokayukta corruption case in which he's been named as accused number 1. pic.twitter.com/kJbDqoaKDI
ಇದೇ ವಿಚಾರವಾಗಿ ಬೆಳಿಗ್ಗೆ ಟ್ವೀಟ್ ಮಾಡಿದ್ದ ಕಾಂಗ್ರೆಸ್, 'ಭ್ರಷ್ಟಾಚಾರ ಆರೋಪ ಹೊತ್ತ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸಿಎಂ ಕಚೇರಿಗೆ ಬಂದಿದ್ದರೂ ಬಂಧಿಸದೆ ಈಗ ನಾಪತ್ತೆ ಎಂಬ ಹೊಸ ನಾಟಕವಾಡುತ್ತಿದೆ. ನಾನು ಪ್ರಾಮಾಣಿಕ ಎಂದು ಕಣ್ಣೀರು ಹಾಕುವ ಬಸವರಾಜ ಬೊಮ್ಮಾಯಿ ಅವರೇ, ವಿರೂಪಾಕ್ಷಪ್ಪನವರಿಗೇನು ಅದೃಶ್ಯ ಯೋಗ ಸಿದ್ಧಿಸಿದೆಯೇ ಅಥವಾ ಸರ್ಕಾರವೇ ಅಡಗಿಸಿಟ್ಟಿದೆಯೇ?' ಎಂದು ಪ್ರಶ್ನೆ ಮಾಡಿದೆ.
-
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
ಮಾರ್ಚ್ 25ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Bengaluru: ಬಿಡಿಎಗೆ 50ರ ಸಂಭ್ರಮ; ಹೊಸ ಲೋಗೋ, ಟ್ಯಾಗ್ಲೈನ್ ವಿನ್ಯಾಸ ಮಾಡಿ 1 ಲಕ್ಷ ರೂ. ಬಹುಮಾನ ಗೆಲ್ಲಿ -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications