ಗ್ರಾಹಕರೇ ಗಮನಿಸಿ.. ಮುಂಬರುವ ದಿನಗಳಲ್ಲಿ ಬೆಂಗಳೂರಿನಲ್ಲಿ ಹಾಲಿನ ಕೊರತೆ

ಉತ್ಪಾದನೆ ಕಡಿಮೆಯಿಂದಾಗಿ ಮುಂಬರುವ ದಿನಗಳಲ್ಲಿ ಬೆಂಗಳೂರಿನಲ್ಲಿ ಹಾಲಿನ ಕೊರತೆ ಎದುರಾಗಲಿದೆ ಎಂದು ಬಮೂಲ್ ಹೇಳಿದೆ

ಬೆಂಗಳೂರು ಮಾರ್ಚ್ 7: ಮುಂಬರುವ ತಿಂಗಳುಗಳಲ್ಲಿ ಬೆಂಗಳೂರು ಶೀಘ್ರದಲ್ಲೇ ಹಾಲಿನ ಪೂರೈಕೆಯಲ್ಲಿ ಕೊರತೆಯನ್ನು ಎದುರಿಸಲಿದೆ. ಕರ್ನಾಟಕದ ಅತಿದೊಡ್ಡ ಒಕ್ಕೂಟಗಳಲ್ಲಿ ಒಂದಾದ ಬೆಂಗಳೂರು ಮಿಲ್ಕ್ ಯೂನಿಯನ್ ಲಿಮಿಟೆಡ್ (ಬಮೂಲ್) ನಷ್ಟದಲ್ಲಿದೆ. ರೈತರು ಹೈನುಗಾರಿಕೆಯನ್ನು ತ್ಯಜಿಸುವ ಪ್ರವೃತ್ತಿ ಹೆಚ್ಚಾಗುತ್ತಿರುವುದರಿಂದ ಹಾಲಿನ ಉತ್ಪಾದನೆ ಕಡಿಮೆಯಾಗಲಿದೆ. ಬೆಂಗಳೂರು ಹಾಲಿನ ಉತ್ಪಾದನೆಯಲ್ಲಿ ದಿನಕ್ಕೆ 14-15 ಲಕ್ಷ ಲೀಟರ್‌ನಿಂದ 12-13 ಲಕ್ಷ ಲೀಟರ್‌ಗೆ ಒಂದೆರಡು ತಿಂಗಳೊಳಗೆ ಇಳಿಯುವ ಸಾಧ್ಯತೆ ಇದೆ.

ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, 'ಪರಿಸ್ಥಿತಿ ಆತಂಕಕಾರಿಯಾಗಿದ್ದು, ರೈತರನ್ನು ರಕ್ಷಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಪ್ರತಿ ಲೀಟರ್ ಹಾಲಿಗೆ ನೆರೆಯ ರಾಜ್ಯಗಳು ರೈತರಿಗೆ 40 ರೂ.ಗಳನ್ನು ನೀಡುತ್ತಿದ್ದರೆ, ಕರ್ನಾಟಕವು 30 ರೂ.ಗಳನ್ನು ಪಾವತಿಸುತ್ತಿದೆ. ಇದು ರೈತರ ವೆಚ್ಚವನ್ನು ಭರಿಸುವುದಿಲ್ಲ. ಪ್ರತಿ ತಿಂಗಳು 15-20 ರೈತರು ನಮಗೆ ಹಾಲು ಮಾರಾಟ ಮಾಡುವುದನ್ನು ನಿಲ್ಲಿಸುತ್ತಿದ್ದಾರೆ' ಎಂದರು. ಹಾರು ಮಾರಾಟದಿಂದ ಬರುವ ಹಣದಲ್ಲಿ ಪಶು ಆಹಾರದ ಬೆಲೆಯನ್ನು ತೂಗಿಸಲಾಗದೆ ರೈತರು ಹಾಲು ಮಾರಾಟವನ್ನು ನಿಲ್ಲಿಸುತ್ತಿದ್ದಾರೆ.

Bengaluru likely to face milk scarcity due to production down : BAMUL

ಬೆಂಗಳೂರಿನಲ್ಲಿ ಹಾಲಿನ ಕೊರತೆ

ಬಮೂಲ್ (Bamul) ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಿಗೆ ಸೇವೆ ಸಲ್ಲಿಸುತ್ತದೆ. ಬಮುಲ್ ಅಂದಾಜಿನ ಪ್ರಕಾರ ಬೆಂಗಳೂರು ಪ್ರದೇಶವೊಂದರಿಂದಲೇ ಸುಮಾರು 2,500-3,000 ಜಾನುವಾರುಗಳನ್ನು ಪ್ರತಿ ತಿಂಗಳು ಹೈನುಗಾರಿಕೆ ಲಾಭದಾಯಕವಾಗಿರುವ ಇತರ ರಾಜ್ಯಗಳ ರೈತರಿಗೆ ಮಾರಾಟ ಮಾಡಲಾಗುತ್ತದೆ.

15 ಲಕ್ಷ ಲೀಟರ್ ಹಾಲು ಪೂರೈಕೆ

ಇದರ ಪರಿಣಾಮವಾಗಿ, ಬಮುಲ್ ಬೃಹತ್ ಹಾಲಿನ ಪ್ಯಾಕೆಟ್‌ಗಳು, ತುಪ್ಪ ಮತ್ತು ಇತರ ಉತ್ಪನ್ನಗಳ ಉತ್ಪಾದನೆಯನ್ನು ಕಡಿಮೆ ಮಾಡಲು ಪ್ರಾರಂಭಿಸಿದೆ. 15 ಲಕ್ಷ ಲೀಟರ್ ಹಾಲಿನಲ್ಲಿ ಬೆಂಗಳೂರಿನಾದ್ಯಂತ ಸುಮಾರು 11 ಲಕ್ಷ ಲೀಟರ್ ಹಾಲಿನ ಗ್ರಾಹಕರಿಗೆ ಪೂರೈಕೆಯಾಗುತ್ತಿದೆ.

Bengaluru likely to face milk scarcity due to production down : BAMUL

ಉಳಿದವುಗಳನ್ನು ಕೆನೆರಹಿತ ಹಾಲಿನ ಪುಡಿ ಮತ್ತು ಚೀಸ್ ತಯಾರಿಸಲು ಬಳಸಲಾಗುತ್ತದೆ. ಹಾಲಿನ ಪುಡಿಯನ್ನು ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟದ ಯೋಜನೆಯಡಿ ಸರಬರಾಜು ಮಾಡಬೇಕು ಎಂದು ಮೂರ್ತಿ ಹೇಳಿದರು. ಸಹಾಯ ಕೋರಿದ ಬಮುಲ್‌ನ ಅನೇಕ ಮನವಿಗಳಿಗೆ ಸರ್ಕಾರ ಸ್ಪಂದಿಸದ ಕಾರಣ, ಇದೇ ಪರಿಸ್ಥಿತಿ ಒಂದು ತಿಂಗಳು ಮುಂದುವರಿದರೆ ಬಿಕ್ಕಟ್ಟು ಉಂಟಾಗುತ್ತದೆ ಎಂದು ಅವರು ಹೇಳಿದ್ದಾರೆ.

ನಷ್ಟದಲ್ಲಿ ರೈತರು

"ರೈತರಿಗೆ ಪಾವತಿಸಲು ನಾವು ಹಾಲಿನ ದರ ಪರಿಷ್ಕರಣೆ ಕೋರಿದ್ದೆವು. ಆದರೆ ರಾಜ್ಯ ಸರ್ಕಾರ ಚುನಾವಣೆ ಸಮೀಪಿಸುತ್ತಿರುವ ಕಾರಣ ಯಾವುದೇ ಕ್ರಮ ಕೈಗೊಂಡಿಲ್ಲ. ಸಂಘಗಳು ಭಾರಿ ನಷ್ಟವನ್ನು ಅನುಭವಿಸುತ್ತಿವೆ'' ನರಸಿಂಹಮೂರ್ತಿ ಹೇಳಿದ್ದಾರೆ.

Bengaluru likely to face milk scarcity due to production down : BAMUL

ಹೆಚ್ಚುತ್ತಿರುವ ಪಶು ಆಹಾರದ ಬೆಲೆಯನ್ನು ನಿಭಾಯಿಸಲು ಅಸಮರ್ಥತೆ ಮತ್ತು ಲಾಭದಾಯಕವಲ್ಲದ ಸಂಭಾವನೆಯಿಂದಾಗಿ ಅನೇಕ ರೈತರು ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಮಹಾರಾಷ್ಟ್ರದ ತಮ್ಮ ಸಹವರ್ತಿಗಳಿಗೆ ಜಾನುವಾರುಗಳನ್ನು ಮಾರಾಟ ಮಾಡುತ್ತಿದ್ದಾರೆ. ವಾಸ್ತವವಾಗಿ, ಅಂತಹ ವ್ಯಾಪಾರದಲ್ಲಿ ವ್ಯವಹರಿಸುವ ಮಧ್ಯವರ್ತಿಗಳಿದ್ದಾರೆ ಮತ್ತು ಒಬ್ಬ ರೈತ ಜಾನುವಾರುಗಳಿಗೆ 1.5 ಲಕ್ಷದಿಂದ 2 ಲಕ್ಷ ರೂಪಾಯಿ ಪಡೆಯುತ್ತಿದ್ದಾನೆ" ಮೂರ್ತಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+