ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವೇ ಅತ್ಯುತ್ತಮ ಎಂದ Global arrival survey- ಜಾಗತಿಕ ಸಮೀಕ್ಷೆ ವರದಿಯಲ್ಲಿ ಏನಿದೆ?
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು (ಆಗಮನಕ್ಕಾಗಿ) ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ.
ಬೆಂಗಳೂರು, ಮಾರ್ಚ್ 08: ಏರ್‌ಪೋರ್ಟ್ಸ್ ಕೌನ್ಸಿಲ್ ಇಂಟರ್‌ನ್ಯಾಶನಲ್ ಸಂಸ್ಥೆಯು 2022 ರಲ್ಲಿ ನಡೆಸಿದ ಜಾಗತಿಕ ಸಮೀಕ್ಷೆಯಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅತ್ಯುತ್ತಮ (ಆಗಮನಕ್ಕಾಗಿ) ವಿಮಾನ ನಿಲ್ದಾಣವೆಂದು ಗುರುತಿಸಿದೆ. ಪ್ರಯಾಣಿಕರಿಂದ ವಿಮಾನ ನಿಲ್ದಾಣಗಳಲ್ಲಿ ಸಂಗ್ರಹಿಸಲಾದ ಅಭಿಪ್ರಾಯಗಳ ಮೂಲಕ ಸಮೀಕ್ಷೆಗಳನ್ನು ಕೈಗೊಳ್ಳಲಾಗಿದೆ. ಈ ಸಮೀಕ್ಷೆಗಳ ನೇರ ಸಂಶೋಧನೆಯ ಆಧಾರದ ಮೇಲೆ ವರದಿಯನ್ನು ನೀಡಿದೆ.

ಸಿಇಒ ಹರಿ ಮರಾರ್ ಪ್ರತಿಕ್ರಿಯೆ
ವಿಶ್ವದಾದ್ಯಂತ 15 ವಿಮಾನ ನಿಲ್ದಾಣಗಳಲ್ಲಿ KIA ಅತ್ಯುತ್ತಮ ವಿಮಾನ ನಿಲ್ದಾಣವಾಗಿ ಹೊರಹೊಮ್ಮಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದರುವ ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನ (ಬಿಐಎಎಲ್) ಎಂಡಿ ಮತ್ತು ಸಿಇಒ ಹರಿ ಮರಾರ್, 'ಈ ಮನ್ನಣೆಯು ಕೆಐಎ ತಂಡದ ಬದ್ಧತೆಯನ್ನು ಮಾನ್ಯ ಮಾಡಿದೆ' ಎಂದು ತಿಳಿಸಿದ್ದಾರೆ. 'ತಡೆರಹಿತ ಆಗಮನ ಪ್ರಕ್ರಿಯೆಯನ್ನು ಸಕ್ರಿಯಗೊಳಿಸಿದ್ದಕ್ಕಾಗಿ ಪ್ರಯಾಣಿಕರಿಗೆ, ವಿಮಾನ ನಿಲ್ದಾಣದಲ್ಲಿನ ಕಸ್ಟಮ್ಸ್ ಮತ್ತು ಸಿಐಎಸ್‌ಎಫ್ ಸಿಬ್ಬಂದಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ' ಎಂದು ಹೇಳಿದ್ದಾರೆ.

ಮುಂಬೈ, ದೆಹಲಿ ನಿಲ್ದಾಣಗಳಿಗೆ ಪ್ರಶಸ್ತಿ
ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳು ( ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ) 'ವಾರ್ಷಿಕವಾಗಿ 40 ಮಿಲಿಯನ್ ಪ್ರಯಾಣಿಕರ' ವಿಭಾಗದಲ್ಲಿ 'ಅತ್ಯುತ್ತಮ ವಿಮಾನ ನಿಲ್ದಾಣ' ಪ್ರಶಸ್ತಿಗಳನ್ನು ಪಡೆದಿವೆ.
ಮಾರ್ಚ್ 6 ರಂದು ಘೋಷಿಸಲಾದ ಏರ್‌ಪೋರ್ಟ್ ಸೇವಾ ಗುಣಮಟ್ಟದ ಪ್ರಶಸ್ತಿಗಳು ಗ್ರಾಹಕರ ಅನುಭವದ ಆಧಾರದ ಮೇಲೆ ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣಗಳನ್ನು ಗುರುತಿಸುತ್ತವೆ. ಪ್ರಯಾಣದ ದಿನದಂದು ವಿಮಾನ ನಿಲ್ದಾಣದಲ್ಲಿ ಸಂಗ್ರಹಿಸಲಾದ ಪ್ರಯಾಣಿಕರ ಸಮೀಕ್ಷೆಗಳ ಆಧಾರದ ಮೇಲೆ, ಏರ್‌ಪೋರ್ಟ್ಸ್ ಕೌನ್ಸಿಲ್ ಇಂಟರ್ನ್ಯಾಷನಲ್ ಟ್ರೇಡ್ ಬಾಡಿ ಮತ್ತು ಟ್ರಾವೆಲ್ ಟೆಕ್ನಾಲಜಿ ಕಂಪನಿ ಅಮೆಡಿಯಸ್ ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡಿದೆ.

ಏಷ್ಯಾ-ಪೆಸಿಫಿಕ್ ಪ್ರದೇಶ
ಮುಂಬೈ ಮತ್ತು ದೆಹಲಿ ವಿಮಾನ ನಿಲ್ದಾಣಗಳಲ್ಲದೆ, ಚೀನಾದ ಗುವಾಂಗ್‌ಝೌ ಬೈಯುನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಶಾಂಘೈ ಪುಡಾಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಶೆನ್ಜೆನ್ ಬಾವೊನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಸಿಂಗಾಪುರ್ ಚಾಂಗಿ ವಿಮಾನ ನಿಲ್ದಾಣಗಳು ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಇದೇ ಪ್ರಶಸ್ತಿಯನ್ನು ಪಡೆದಿವೆ.

ದೆಹಲಿ ವಿಮಾನ ನಿಲ್ದಾಣಕ್ಕೆ ಹಲವು ಪ್ರಶಸ್ತಿ
ಹಿಂದೆ, ದೆಹಲಿ ವಿಮಾನ ನಿಲ್ದಾಣವು 2018, 2019, 2020, ಮತ್ತು 2021 ರಲ್ಲಿ ಏಷ್ಯಾ-ಪೆಸಿಫಿಕ್ ಪ್ರದೇಶದ ಅತ್ಯುತ್ತಮ ವಿಮಾನ ನಿಲ್ದಾಣವಾಗಿ ಸತತವಾಗಿ ನಾಲ್ಕು ಬಾರಿ ಪ್ರಶಸ್ತಿಗಳನ್ನು ಪಡೆದಿದೆ. ದೆಹಲಿ ವಿಮಾನ ನಿಲ್ದಾಣವು ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ 'ಸ್ವಚ್ಛ ವಿಮಾನ ನಿಲ್ದಾಣ' ಪ್ರಶಸ್ತಿಯನ್ನು ಸಹ ಪಡೆದಿದೆ. ಏತನ್ಮಧ್ಯೆ, ಭಾರತದ ಹಲವಾರು ವಿಮಾನ ನಿಲ್ದಾಣಗಳು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಪಡೆದಿವೆ.

15 ರಿಂದ 25 ಮಿಲಿಯನ್ ಪ್ರಯಾಣಿಕರು
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಆಗಮನಕ್ಕಾಗಿ ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ( 15 ರಿಂದ 25 ಮಿಲಿಯನ್ ಪ್ರಯಾಣಿಕರ ವರ್ಗದಲ್ಲಿ ) ಏಷ್ಯಾ-ಪೆಸಿಫಿಕ್ ಪ್ರದೇಶದ ಅತ್ಯುತ್ತಮ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. ತಿರುಚಿರಾಪಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಏಷ್ಯಾ-ಪೆಸಿಫಿಕ್ ಪ್ರದೇಶದ 2 ಮಿಲಿಯನ್ ಪ್ರಯಾಣಿಕರ ಅಡಿಯಲ್ಲಿ ಅತ್ಯುತ್ತಮ ವಿಮಾನ ನಿಲ್ದಾಣವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ರೋಮ್‌ನ ಫಿಯುಮಿಸಿನೊ ವಿಮಾನ ನಿಲ್ದಾಣ
ರೋಮ್‌ನ ಫಿಯುಮಿಸಿನೊ ವಿಮಾನ ನಿಲ್ದಾಣವು ವಾರ್ಷಿಕವಾಗಿ 40 ದಶಲಕ್ಷಕ್ಕೂ ಹೆಚ್ಚು ಜನರನ್ನು ಆಕರ್ಷಿಸುತ್ತದೆ. ಇದು ಅತ್ಯಂತ ಸುಂದರವಾಗಿರುವ ಮೆಗಾ-ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. ಅದರ ಶ್ರೇಷ್ಠತೆಗಾಗಿ ಮನ್ನಣೆಯನ್ನು ಪಡೆಯುವುದರ ಜೊತೆಗೆ, ಅದರ ಸ್ವಚ್ಛತೆ, ಆಹ್ಲಾದಕರ ವಾತಾವರಣ ಮತ್ತು ಸಮರ್ಪಿತ ಸಿಬ್ಬಂದಿಗಾಗಿ ಪ್ರಶಂಸಿಸಗಾಗುತ್ತದೆ. ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣವು ತನ್ನ ಸಮರ್ಪಿತ ಸಿಬ್ಬಂದಿಗೆ ಹೆಚ್ಚುವರಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಇಸ್ತಾನ್‌ಬುಲ್‌ನ ವಿಮಾನ ನಿಲ್ದಾಣವು ಸ್ವಚ್ಛತೆಗೆ ಪ್ರಶಸ್ತಿಯನ್ನು ಪಡೆದುಕೊಂಡಿದೆ.












Click it and Unblock the Notifications