Get Updates
Get notified of breaking news, exclusive insights, and must-see stories!

ಬೆಂಗಳೂರು ಸೇರಿದಂತೆ ದೇಶದ ಏಳು ನಗರಗಳಲ್ಲಿ ತಿಂಗಳ ಮನೆ ಬಾಡಿಗೆ ಶೇ 23ರಷ್ಟು ಹೆಚ್ಚಳ- ಅಂಕಿಅಂಶ, ವರದಿ, ವಿವರ

ಬೆಂಗಳೂರು ಸೇರಿದಂತೆ ದೇಶದ ಏಳು ಅಗ್ರ ನಗರಗಳಲ್ಲಿ ತಿಂಗಳ ಮನೆ ಬಾಡಿಗೆ ವ್ಯಾಪಕವಾಗಿ ಏರಿಕೆ ಕಂಡಿದೆ. ಕೋವಿಡ್‌ ಸಂದರ್ಭದಲ್ಲಿ ವರ್ಕ್‌ ಫ್ರಂ ಹೋಮ್‌ನಲ್ಲಿದ್ದ ನೌಕರರನ್ನು ಕಂಪನಿಗಳು ವಾಪಸ್ಸು ಕಚೇರಿಗೆ ಕರೆಸಿಕೊಳ್ಳುತ್ತಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.

ನವದೆಹಲಿ, ಮಾರ್ಚ್‌ 09: ಬೆಂಗಳೂರು ಸೇರಿದಂತೆ ದೇಶದ ಏಳು ಅಗ್ರ ನಗರಗಳಲ್ಲಿ ತಿಂಗಳ ಮನೆ ಬಾಡಿಗೆ ವ್ಯಾಪಕವಾಗಿ ಏರಿಕೆ ಕಂಡಿದೆ. ಕೋವಿಡ್‌ ಸಂದರ್ಭದಲ್ಲಿ ವರ್ಕ್‌ ಫ್ರಂ ಹೋಮ್‌ನಲ್ಲಿದ್ದ ನೌಕರರನ್ನು ಕಂಪನಿಗಳು ವಾಪಸ್ಸು ಕಚೇರಿಗೆ ಕರೆಸಿಕೊಳ್ಳುತ್ತಿರುವುದು ಇದಕ್ಕೆ ಕಾರಣ ಎನ್ನಲಾಗಿದೆ. ಕೋವಿಡ್‌ ಸಂದರ್ಭದಲ್ಲಿ ಕುಸಿದಿದ್ದ ಮನೆ ಬಾಡಿಗೆಗಳು ಈಗ ತೀವ್ರ ಏರಿಕೆ ಕಂಡಿರುವುದು ಮಹಾನಗರದಲ್ಲಿ ವಾಸಿಸುವ ಉದ್ಯೋಗಗಳನ್ನು ಚಿಂತೆಗೀಡು ಮಾಡಿದೆ. ಈ ಕುರಿತು 'Consultancy Anarock' ಅಧ್ಯಯನ ನಡೆಸಿ ವರದಿ ನೀಡಿದೆ.

 ಮಾಸಿಕ ಬಾಡಿಗೆಯಲ್ಲಿ ಶೇಕಡಾ 23 ರಷ್ಟು ಏರಿಕೆ

ಮಾಸಿಕ ಬಾಡಿಗೆಯಲ್ಲಿ ಶೇಕಡಾ 23 ರಷ್ಟು ಏರಿಕೆ

'Consultancy Anarock' ನಡೆಸಿದ ಅಧ್ಯಯನವು ದೇಶದ ಅಗ್ರ ಏಳು ನಗರಗಳಲ್ಲಿ ಮಾಸಿಕ ಬಾಡಿಗೆಯಲ್ಲಿ ಶೇಕಡಾ 23 ರಷ್ಟು ಏರಿಕೆ ಕಂಡಿದೆ ಎಂದು ಹೇಳಿದೆ. ಕಲ್ಕತ್ತಾದ ಪ್ರಮುಖ ಎರಡು ಬಾಡಿಗೆ ಸ್ಥಳಗಳಾದ ರಾಜರಹತ್ ಮತ್ತು ಇಎಂ ಬೈಪಾಸ್ ಏರಿಯಾದಲ್ಲಿನ ಮನೆಗಳ ಮಾಸಿಕ ಬಾಡಿಗೆಯಲ್ಲಿ 11 ಮತ್ತು 16 ಪ್ರತಿಶತದಷ್ಟು ಏರಿಕೆ ಕಂಡಿದೆ.

 ಕೋಲ್ಕತ್ತದಲ್ಲಿ ರೂ 11,000 ಏರಿಕೆ

ಕೋಲ್ಕತ್ತದಲ್ಲಿ ರೂ 11,000 ಏರಿಕೆ

ಕೋಲ್ಕತ್ತ ಮಾರುಕಟ್ಟೆಯ ಐಷಾರಾಮಿ ಪ್ರದೇಶದಲ್ಲಿನ ಅಲಿಪೋರ್ ಮತ್ತು ಬ್ಯಾಲಿಗಂಜ್‌ನಲ್ಲಿ 2,000 ಚದರ ಅಡಿ ಅಪಾರ್ಟ್‌ಮೆಂಟ್ ಬಾಡಿಗೆಯು ತಿಂಗಳಿಗೆ 65,000 ರೂಪಾಯಿ ಮತ್ತು 97,000 ರೂಪಾಯಿಗಳಷ್ಟಿದೆ. ಇದು ಕ್ರಮವಾಗಿ ರೂ 4,000 ಮತ್ತು ರೂ 11,000 ಏರಿಕೆಯಾಗಿದೆ ಎಂದು ಅಧ್ಯಯನವು ಬಹಿರಂಗಪಡಿಸಿದೆ.

 Anarock ಗ್ರೂಪ್‌ನ ಅಧ್ಯಕ್ಷ ಹೇಳಿದ್ದೇನು?

Anarock ಗ್ರೂಪ್‌ನ ಅಧ್ಯಕ್ಷ ಹೇಳಿದ್ದೇನು?

'2022 ರಲ್ಲಿ ಬಾಡಿಗೆ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದೆ. ಹೈಬ್ರಿಡ್ ಮೋಡ್ ಸೇರಿದಂತೆ ಹೆಚ್ಚಿನ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಮತ್ತೆ ಕಚೇರಿಗೆ ಕರೆಸುವುದರೊಂದಿಗೆ ಮನೆಗಳಿಗೆ ಬೇಡಿಕೆ ಬಂದಿದೆ. ಕೋವಿಡ್-19 ಅಲೆಗಳ ಸಮಯದಲ್ಲಿ ಕುಸಿದ ನಂತರ ಏಳು ಪ್ರಮುಖ ನಗರಗಳಲ್ಲಿ ಬಾಡಿಗೆ ಬೇಡಿಕೆ ಹೆಚ್ಚುತ್ತಿದೆ' ಎಂದು Anarock ಗ್ರೂಪ್‌ನ ಅಧ್ಯಕ್ಷ ಅನೂಜ್‌ ಪುರಿ ಹೇಳಿದ್ದಾರೆ. 2023 ರಲ್ಲಿ ಬಾಡಿಗೆ ಇನ್ನೂ ಹೆಚ್ಚಾಗಬಹುದು ಎಂದು ಸಲಹಾ ಸಂಸ್ಥೆ Anarock ಊಹಿಸಿದೆ.

 ಗೃಹ ಸಾಲ ಬಡ್ಡಿದರದ ಏರಿಕೆ

ಗೃಹ ಸಾಲ ಬಡ್ಡಿದರದ ಏರಿಕೆ

ಹೈಬ್ರಿಡ್ ವರ್ಕಿಂಗ್ ಮಾಡೆಲ್ ಮತ್ತು ಗೃಹ ಸಾಲ ಬಡ್ಡಿದರದ ಏರಿಕೆಯಿಂದಾಗಿ ಖರೀದಿದಾರರಲ್ಲಿ ಆಸಕ್ತಿ ಮೂಡಿಲ್ಲ. ವಿಶೇಷವಾಗಿ, ಯುವ ಪೀಳಿಗೆಯು ಪ್ರಾಪರ್ಟಿಗಳ ಖರೀದಿಯನ್ನು ಮುಂದೂಡುವ ಒಲವು ತೋರುತ್ತಿದೆ. ಪರಿಣಾಮವಾಗಿ, ಅವರು ಬಾಡಿಗೆ ಮನೆಗಳನ್ನು ಹುಡುಕುತ್ತಾರೆ ಎಂದು ಅಧ್ಯಯನವು ಹೇಳಿದೆ.

 ಭಾರತದಲ್ಲಿ ಬಾಡಿಗೆ ಮನೆ ವ್ಯವಹಾರ

ಭಾರತದಲ್ಲಿ ಬಾಡಿಗೆ ಮನೆ ವ್ಯವಹಾರ

ಭಾರತದಲ್ಲಿ ಬಾಡಿಗೆ ಮನೆ ವ್ಯವಹಾರವು ಸಾಂಸ್ಥಿಕವಾಗಿಲ್ಲ. ಇಲ್ಲಿನ ಡೆವಲಪರ್‌ಗಳು ಬಾಡಿಗೆ ಆದಾಯಕ್ಕಾಗಿ ಆಸ್ತಿಯನ್ನು ಹಿಡಿದಿಟ್ಟುಕೊಳ್ಳುವ ಬದಲು ಅಪಾರ್ಟ್‌ಮೆಂಟ್‌ಗಳನ್ನು ಮಾರಾಟ ಮಾಡಲು ಹೆಚ್ಚಾಗಿ ಬಯಸುತ್ತಾರೆ. ರಿಯಲ್‌ ಎಸ್ಟೇಟ್‌ ಮಾರುಕಟ್ಟೆಯು ದೇಶದಲ್ಲಿನ ವಲಸೆ ನೌಕರರಿಂದ ಹೆಚ್ಚಾಗಿ ಬೆಳೆಯುತ್ತಿದೆ ಎಂದು ಅಧ್ಯಯನವು ಹೇಳಿದೆ.

 ಬೆಂಗಳೂರು ಬಾಡಿಗೆ ಮನೆಗಳ ಪ್ರಮುಖ ತಾಣ

ಬೆಂಗಳೂರು ಬಾಡಿಗೆ ಮನೆಗಳ ಪ್ರಮುಖ ತಾಣ

'ಹೆಚ್ಚಿನ ವಲಸೆ ಜನಸಂಖ್ಯೆಯಿಂದ ಬಾಡಿಗೆ ಆಸ್ತಿಗೆ ಬಲವಾದ ಬೇಡಿಕೆ ಬಂದಿದೆ. ಇದರ ಪರಿಣಾಮವಾಗಿ, ಬೆಂಗಳೂರು, ಹೈದರಾಬಾದ್, ಪುಣೆಯಂತಹ ಐಟಿ ಹಬ್‌ಗಳು ಬಾಡಿಗೆ ಮನೆಗಳ ಪ್ರಮುಖ ತಾಣಗಳಾಗಿವೆ' ಎಂದು ಸಿಟಿ ಆಧಾರಿತ ಪ್ರಾಪರ್ಟಿ ಬ್ರೋಕರೇಜ್ ಪಯೋನೀರ್ ಪ್ರಾಪರ್ಟಿ ಮ್ಯಾನೇಜ್‌ಮೆಂಟ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಜಿತೇಂದ್ರ ಖೈತಾನ್ ಹೇಳಿದ್ದಾರೆ.

 ಮುಂಬೈ, ದೆಹಲಿ ಸಾಂಪ್ರದಾಯಿಕ ಬಾಡಿಗೆ ಮಾರುಕಟ್ಟೆ

ಮುಂಬೈ, ದೆಹಲಿ ಸಾಂಪ್ರದಾಯಿಕ ಬಾಡಿಗೆ ಮಾರುಕಟ್ಟೆ

ಮುಂಬೈ ಮತ್ತು ದೆಹಲಿ ಸಾಂಪ್ರದಾಯಿಕವಾಗಿ ಬಾಡಿಗೆ ಮಾರುಕಟ್ಟೆಗಳಾಗಿವೆ. ಏಕೆಂದರೆ ಇಲ್ಲಿ ಮನೆ ಖರೀದಿ ಮಾಡಲು ಹೆಚ್ಚಿನ ಬಂಡವಾಳ ಬೇಕಾಗುತ್ತದೆ. ಆದ್ದರಿಂದ ಹೆಚ್ಚಿನ ಜನರಿಗೆ ಮನೆ ಖರೀದಿ ಮಾಡಲು ಸಾಧ್ಯವಾಗುವುದಿಲ್ಲ. ಬಾಡಿಗೆಗೆ ಮೀಸಲಾದ ವಸತಿ ಅಭಿವೃದ್ಧಿಯಲ್ಲಿ ಹೂಡಿಕೆಯನ್ನು ಸೆಳೆಯುವ ಅಂಶವೆಂದರೆ ಇಳುವರಿ. ಇದು ಆಸ್ತಿಯ ಬಂಡವಾಳ ಮೌಲ್ಯಕ್ಕೆ ವಾರ್ಷಿಕ ಬಾಡಿಗೆ ಆದಾಯದ ಅಂಶವಾಗಿದೆ. ಭಾರತದಲ್ಲಿ, ಇದು ಸಾಮಾನ್ಯವಾಗಿ ಶೇಕಡಾ 2.5 ರಿಂದ 3 ರಷ್ಟಿದೆ. ಅಂದರೆ 1 ಕೋಟಿ ರೂಪಾಯಿ ಆಸ್ತಿಯಲ್ಲಿ ವಾರ್ಷಿಕ ಬಾಡಿಗೆ 2,50,000 ರಿಂದ 3,00,000 ರೂ ಆಗಲಿದೆ.

 ಯುಎಸ್‌ನಲ್ಲಿ ದೊಡ್ಡ ಮಾರುಕಟ್ಟೆ

ಯುಎಸ್‌ನಲ್ಲಿ ದೊಡ್ಡ ಮಾರುಕಟ್ಟೆ

'ಇದು ಯುಎಸ್‌ನಲ್ಲಿ ದೊಡ್ಡ ಮಾರುಕಟ್ಟೆಯಾಗಿದೆ. ಆದರೆ, ಭಾರತದಲ್ಲಿ ಇದಿನ್ನೂ ಸಾಂಸ್ಥಿಕವಾಗಿಲ್ಲ. ಬಂಡವಾಳದ ಹೆಚ್ಚಿನ ವೆಚ್ಚ ಮತ್ತು ಕಡಿಮೆ ಬಾಡಿಗೆ ಇಳುವರಿಯು ಭಾರತದಲ್ಲಿದೆ. ಹೀಗಾಗಿ, ಇದು ಇನ್ನೂ ಸಾಂಸ್ಥಿಕ ವ್ಯವಹಾರವಾಗಿ ರೂಪಗೊಂಡಿಲ್ಲ' ಎಂದು ನೈಟ್ ಫ್ರಾಂಕ್ ಇಂಡಿಯಾದ ಪೂರ್ವ ನಿರ್ದೇಶಕ ಅಭಿಜಿತ್ ದಾಸ್ ಹೇಳಿದ್ದಾರೆ.

 ಬೆಂಗಳೂರು 42 ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರು

ಬೆಂಗಳೂರು 42 ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರು

ಕರ್ನಾಟಕ ರಾಜಧಾನಿ ಬೆಂಗಳೂರು ಸುಮಾರು 42 ಲಕ್ಷಕ್ಕೂ ಹೆಚ್ಚು ವಲಸೆ ನೌಕರರಿಗೆ ನೆಲೆಯಾಗಿದೆ. ಅದರಲ್ಲಿ ಸುಮಾರು ಶೇ 50 ರಷ್ಟು ಜನರು ಐಟಿಯೇತರ ವಲಯದಲ್ಲಿ ಸೇವೆಸುತ್ತಿದ್ದಾರೆ. ವಿಶೇಷವಾಗಿ, ಭದ್ರತಾ ಸಿಬ್ಬಂದಿ, ಗೃಹ ಸಹಾಯಕರು, ಚಾಲಕರು, ಬಡಗಿಗಳು, ಎಲೆಕ್ಟ್ರಿಷಿಯನ್ ಮತ್ತು ಬ್ಯೂಟಿಷಿಯನ್‌ಗಳು ಇತ್ಯಾದಿ. ಅವರ ಸರಾಸರಿ ಮಾಸಿಕ ಆದಾಯ 10,000 ರೂ.ಗಿಂತ ಕಡಿಮೆಯಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+