ನವಜ್ಯೋತ್ ಸಿಧು ಹೊಸ ಇನ್ನಿಂಗ್ಸ್, ಅವಾಜ್ ಇ ಪಂಜಾಬ್ ಪಕ್ಷಕ್ಕೆ ಉದಯ

Posted By:
Subscribe to Oneindia Kannada

ಚಂಡೀಗಢ, ಸೆ. 08: ಮಾಜಿ ಕ್ರಿಕೆಟರ್, ಕಾಮೆಂಟೆಟರ್, ಮಾಜಿ ಸಂಸದ ನವಜ್ಯೋತ್ ಸಿಂಗ್ ಸಿಧು ಅವರು ಹೊಸ ರಾಜಕೀಯ ಪಕ್ಷಕ್ಕೆ ಉದಯ ಹಾಡಿದ್ದಾರೆ. ಗುರುವಾರ (ಸೆಪ್ಟೆಂಬರ್ 08)ದಂದು ಅವಾಜ್ ಇ ಪಂಜಾಬ್ ಹೆಸರಿನ ಪಕ್ಷ ಉದಯವಾಗಿದೆ.

ಪಂಜಾಬಿನ ಅಸೆಂಬ್ಲಿ ಚುನಾವಣೆಯಲ್ಲಿ ಸಂಚಲನ ಮೂಡಿಸುವ ಸಾಧ್ಯತೆಯಿದ್ದು, ಪಕ್ಷದ ಆರಂಭದಲ್ಲೇ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ವಿರುದ್ಧ ಸಿಧು ಕಿಡಿಕಾರಿದ್ದಾರೆ. [ರಾಜ್ಯಸಭೆಗೆ ಗುಡ್ ಬೈ ಹೇಳಿದ ನವಜ್ಯೋತ್ ಸಿಂಗ್ ಸಿಧು]

ಸೆಪ್ಟೆಂಬರ್ 09ರಂದು ಅವಾಜ್ ಇ ಪಂಜಾಬ್ ಹೆಸರಿನ ಪಕ್ಷ ಉದಯವಾಗಲಿದೆ ಎಂದು ನವಜ್ಯೋತ್ ಸಿಂಗ್ ಸಿಧು ಅವರ ಪತ್ನಿ ನವಜ್ಯೋತ್ ಕೌರ್ ಅವರು ಫೇಸ್ ಬುಕ್ ನಲ್ಲಿ ಹೇಳಿಕೊಂಡಿದ್ದರು. ಒಂದು ದಿನ ಮುಂಚಿತವಾಗಿ ಪಕ್ಷ ಆರಂಭವಾಗಿದೆ. [ಸಿಕ್ಸರ್ ಸಿಧು ಚುನಾವಣೆ ಫೀಲ್ಡ್ ನಿಂದ ಹೊರಕ್ಕೆ!]

Navjot Singh Sidhu formally Launches Awaaz-e-Punjab Party

ಕಳೆದ ತಿಂಗಳು ಬಿಜೆಪಿ ಸಂಸತ್ ಸ್ಥಾನದಿಂದ ಕೆಳಗಿಳಿದಿದ್ದ ಸಿಧು ಅವರು ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ಸೇರುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಜತೆಗೆ ಕಾಂಗ್ರೆಸ್ ನಿಂದಲೂ ಸಿಧುಗೆ ಆಹ್ವಾನ ಬಂದಿತ್ತು. ಆದರೆ, ಇದೆಲ್ಲ ಸುದ್ದಿಯನ್ನು ಬದಿಗೊತ್ತಿ ಅವಾಜ್ ಇ ಪಂಜಾಬ್ ಪರ ಸಿಧು ಬ್ಯಾಟಿಂಗ್ ಆರಂಭಿಸಿದ್ದಾರೆ.

2014ರ ಲೋಕಸಭೆ ಚುನಾವಣೆಯಲ್ಲಿ ಅರುಣ್ ಜೇಟ್ಲಿ ಅವರಿಗೆ ತಮ್ಮ ಅಮೃತಸರ್ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರು. ಸಿಧು ಅವರ ಪತ್ನಿ ನವಜ್ಯೋತ್ ಕೌರ್ ಅವರು ಪಂಜಾಬಿನ ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಸಂಸದೀಯ ಕಾರ್ಯದರ್ಶಿ ಹುದ್ದೆಯಲ್ಲಿದ್ದಾರೆ. ಕೌರ್ ಅವರು ಕೂಡಾ ಸದ್ಯದಲ್ಲೇ ಬಿಜೆಪಿ ತೊರೆಯುವ ಸಾಧ್ಯತೆಯಿದೆ.

ಕೇಜ್ರಿವಾಲ್ ಕ್ರೇಜಿ ಐಡಿಯಾ: ಪಂಜಾಬಿನಲ್ಲಿ ಚುನಾವಣೆ ಸ್ಪರ್ಧಿಸಲು ನನಗೆ ಅವಕಾಶ ನೀಡುವುದಿಲ್ಲ, ಆದರೆ, ಒಂದು ವೇಳೆ ಪಕ್ಷ ಗೆದ್ದು ಅಧಿಕಾರಕ್ಕೆ ಬಂದರೆ ನವಜ್ಯೋತ್ ಕೌರ್ ಅವರಿಗೆ ಸಚಿವ ಸ್ಥಾನ ಗ್ಯಾರಂಟಿ ಎಂದಿದ್ದರು. ಕೇಜ್ರಿವಾಲ್ ಅವರಿಗೆ ಎಲ್ಲದ್ದಕ್ಕೂ ಓಕೆ ಓಕೆ ಎನ್ನುವ ಅನುಯಾಯಿಗಳು ಮಾತ್ರ ಬೇಕು ಎಂದು ಆರೋಪಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Navjot Singh Sidhu, dressed in black and white, spoke mostly in Punjabi as he launched a new political party, the Awaaz-e-Punjab, and broke his long silence on his aborted talks to join Arvind Kejriwal's Aam Aadmi Party.
Please Wait while comments are loading...