ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಾನಸಭೆ ಚುನಾವಣೆ: ಹೀನಾಯವಾಗಿ ಸೋತ ಪ್ರಮುಖ ನಾಯಕರ ಪಟ್ಟಿ

|
Google Oneindia Kannada News

ಚಂಡೀಗಢ, ಮಾರ್ಚ್ 10: ಪಂಜಾಬ್‌, ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಮಣಿಪುರದಲ್ಲಿ ವಿಧಾನಸಭೆ ಚುನಾವಣೆ ನಡೆದಿದ್ದು, ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಸ್ಪಷ್ಟ ಚಿತ್ರಣ ಕಂಡು ಬಂದಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ, ಪಂಜಾಬ್‌ನಲ್ಲಿ ಎಎಪಿ, ಗೋವಾದಲ್ಲಿ ಬಿಜೆಪಿ, ಉತ್ತರಾಖಂಡದಲ್ಲಿ ಬಿಜೆಪಿ, ಮಣಿಪುರದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡುವ ಸಿದ್ಧತೆ ನಡೆಸಿದೆ.

ಪಂಜಾಬ್‌ನ 117 ವಿಧಾನಸಭೆ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಸಲಾಗಿದೆ. ಪಂಜಾಬ್‌ ವಿಧಾನಸಭೆ ಚುನಾವಣೆಯು ಫೆಬ್ರವರಿ 20ರಂದು ನಡೆದಿದೆ. ಪಂಜಾಬ್‌ ಹೊರತಾಗಿ ನಾಲ್ಕು ರಾಜ್ಯಗಳಲ್ಲೂ ವಿಧಾನಸಭೆ ಚುನಾವಣೆ ನಡೆದಿದೆ. ಉತ್ತರ ಪ್ರದೇಶ, ಗೋವಾ, ಉತ್ತರಾಖಂಡ ಮತ್ತು ಮಣಿಪುರದಲ್ಲೂ ಚುನಾವಣೆ ನಡೆದಿದೆ. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23, 27 ಮತ್ತು ಮಾರ್ಚ್ 3, 7 ರಂದು ಚುನಾವಣೆ ನಡೆದಿದೆ. ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆದಿದೆ. ಪಂಜಾಬ್‌ನಲ್ಲಿ ಫೆಬ್ರವರಿ 20 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 28 ಮತ್ತು ಮಾರ್ಚ್ 5 ರಂದು ಎರಡು ಹಂತಗಳಲ್ಲಿ ಮತದಾನ ನಡೆದಿದೆ. ಮಾರ್ಚ್ 10ರಂದು ಫಲಿತಾಂಶ ಪ್ರಕಟವಾಗಿದೆ.

 Punjab Election Result 2022: ಪಂಚ ನದಿಗಳ ನಾಡಲ್ಲಿ ಎಎಪಿ ವಿಜಯಕ್ಕೆ 5 ಕಾರಣಗಳು Punjab Election Result 2022: ಪಂಚ ನದಿಗಳ ನಾಡಲ್ಲಿ ಎಎಪಿ ವಿಜಯಕ್ಕೆ 5 ಕಾರಣಗಳು

ಈ ನಡುವೆ ಹಲವಾರು ಪ್ರಮುಖ ನಾಯಕರುಗಳು ಈ ಚುನಾವಣೆಯಲ್ಲಿ ಹೀನಾಯ ಸೋಲನ್ನು ಕಂಡಿದ್ದಾರೆ. ತಮ್ಮ ತಮ್ಮ ಸ್ಥಾನಗಳಿಂದ ಚುನಾವಣಾ ಕದನದಲ್ಲಿ ಸೋತ ಇಬ್ಬರು ಹಾಲಿ ಮತ್ತು ಐವರು ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ಹಲವು ರಾಜಕೀಯ ಪ್ರಮುಖರ ವಿಧಾನಸಭೆ ಚುನಾವಣೆಯ ಬಗ್ಗೆ ಇಲ್ಲಿ ಪ್ರಸ್ತುತ ಪಡಿಸಲಾಗಿದೆ ಮುಂದೆ ಓದಿ...

 ಎನ್‌ಪಿಪಿ, ಎನ್‌ಪಿಎಫ್‌ ಮಣಿಪುರ ಬಿಜೆಪಿ ಸರ್ಕಾರದ ಭಾಗವಾಗುತ್ತಾ? ಎನ್‌ಪಿಪಿ, ಎನ್‌ಪಿಎಫ್‌ ಮಣಿಪುರ ಬಿಜೆಪಿ ಸರ್ಕಾರದ ಭಾಗವಾಗುತ್ತಾ?

 ಪಂಜಾಬ್‌ನಲ್ಲಿ ಸೋತ ಕ್ಯಾಪ್ಟನ್‌

ಪಂಜಾಬ್‌ನಲ್ಲಿ ಸೋತ ಕ್ಯಾಪ್ಟನ್‌

ಎರಡು ಬಾರಿ ಪಂಜಾಬ್ ಮುಖ್ಯಮಂತ್ರಿಯಾಗಿದ್ದ ಅಮರಿಂದರ್ ಸಿಂಗ್ ಅವರು ತಮ್ಮ ತವರು ಪಟಿಯಾಲ ಅರ್ಬನ್ ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ. 19,873 ಮತಗಳ ಅಂತರದಿಂದ ಸೋತಿದ್ದಾರೆ ಎಂದು ಗುರುವಾರ ಪ್ರಕಟವಾದ ವಿಧಾನಸಭಾ ಚುನಾವಣಾ ಫಲಿತಾಂಶಗಳು ತಿಳಿಸಿವೆ. ಕಾಂಗ್ರೆಸ್‌ ತೊರೆದು ತನ್ನದೇ ಆದ ಪಕ್ಷವನ್ನು ಸ್ಥಾಪನೆ ಮಾಡಿ ಬಿಜೆಪಿ ಮೈತ್ರಿಯಲ್ಲಿ ಸ್ಪರ್ಧಿಸಿದ ಅಮರಿಂದರ್‌ ಸಿಂಗ್‌ರನ್ನು ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಅಜಿತ್ ಪಾಲ್ ಸಿಂಗ್ ಕೊಹ್ಲಿ ಸೋಲಿಸಿದ್ದಾರೆ.

 ಎರಡೂ ಕ್ಷೇತ್ರದಲ್ಲಿ ಪಂಜಾಬ್‌ ಸಿಎಂ ಸೋಲು

ಎರಡೂ ಕ್ಷೇತ್ರದಲ್ಲಿ ಪಂಜಾಬ್‌ ಸಿಎಂ ಸೋಲು

ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಗುರುವಾರ ನಡೆದ ಚುನಾವಣಾ ಕದನದಲ್ಲಿ ಭದೌರ್ ಮತ್ತು ಚಮ್ಕೌರ್ ಸಾಹಿಬ್ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಸೋತಿದ್ದಾರೆ. ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಎದುರು ಸೋಲು ಕಂಡಿದ್ದಾರೆ. ಚುನಾವಣಾ ಆಯೋಗದ ವೆಬ್‌ಸೈಟ್ ಪ್ರಕಾರ, ಬದೌರ್ ಕ್ಷೇತ್ರದಿಂದ 37,558 ಮತಗಳ ಅಂತರದಿಂದ ಚನ್ನಿ ಅವರನ್ನು ಎಎಪಿಯ ನಾಯಕ ಲಾಭ್ ಸಿಂಗ್ ಉಗೋಕೆ ಸೋಲಿಸಿದ್ದಾರೆ. ಹಾಲಿ ಮುಖ್ಯಮಂತ್ರಿ ಚಮ್ಕೌರ್ ಸಾಹಿಬ್‌ನಲ್ಲೂ ಸೋಲು ಕಂಡಿದ್ದಾರೆ. ಎಎಪಿಯ ಚರಣ್‌ಜೀತ್‌ ಸಿಂಗ್‌ ಅವರನ್ನು 7,942 ಮತಗಳ ಅಂತರದಲ್ಲಿ ಎಎಪಿ ನಾಯಕರು ಸೋಲಿಸಿದರು.

 ತೀರಾ ಸೋಲು ಕಂಡ ಪ್ರಕಾಶ್‌ ಸಿಂಗ್‌ ಬಾದಲ್‌

ತೀರಾ ಸೋಲು ಕಂಡ ಪ್ರಕಾಶ್‌ ಸಿಂಗ್‌ ಬಾದಲ್‌

ಎಸ್‌ಎಡಿ ಪ್ರಮುಖ ನಾಯಕ ಮತ್ತು ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರು ಮುಕ್ತಸರ್ ಜಿಲ್ಲೆಯ ತಮ್ಮ ಸಾಂಪ್ರದಾಯಿಕ ಲಂಬಿ ಸ್ಥಾನದಲ್ಲಿ ಸೋಲು ಕಂಡಿದ್ದಾರೆ. ಎಎಪಿಯ ಗುರ್ಮೀತ್ ಸಿಂಗ್ ಖುದಿಯಾನ್ ವಿರುದ್ಧ ಸೋಲು ಕಂಡಿದ್ದಾರೆ ಎಂದು ಗುರುವಾರ ಪ್ರಕಟವಾದ ಚುನಾವಣಾ ಫಲಿತಾಂಶಗಳು ತಿಳಿಸಿವೆ. 94ರ ಹರೆಯದ ಬಾದಲ್ ಅವರು ಕಣದಲ್ಲಿದ್ದ ಅತ್ಯಂತ ಹಿರಿಯ ಅಭ್ಯರ್ಥಿಯನ್ನು ಗುರ್ಮೀತ್ ಸಿಂಗ್ ಖುದಿಯಾನ್ 11,396 ಮತಗಳ ಅಂತರದಿಂದ ಸೋಲಿಸಿದ್ದಾರೆ.

 ನವಜೋತ್‌ ಸಿಂಗ್‌ ಸಿಧುಗೂ ಹೀನಾಯ ಸೋಲು

ನವಜೋತ್‌ ಸಿಂಗ್‌ ಸಿಧುಗೂ ಹೀನಾಯ ಸೋಲು

ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರು ಅಮೃತಸರ ಪೂರ್ವ ಕ್ಷೇತ್ರದಿಂದ ಗುರುವಾರ ಸೋಲು ಕಂಡಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಎಎಪಿ ಅಭ್ಯರ್ಥಿ ಹಾಗೂ ರಾಜಕೀಯ ಹಸಿರು ನಿಶಾನೆ ತೋರಿದ ಜೀವನ್‌ಜೋತ್‌ ಸಿಂಗ್‌ ಕೌರ್ ಅವರು ಸಿಧು ಅವರನ್ನು 6,750 ಮತಗಳ ಅಂತರದಿಂದ ಸೋಲಿಸಿದ್ದಾರೆ.

 ಉತ್ಪಲ್ ಪರಿಕ್ಕರ್‌ಗೆ ಎಷ್ಟು ಅಂತರದಲ್ಲಿ ಸೋಲು

ಉತ್ಪಲ್ ಪರಿಕ್ಕರ್‌ಗೆ ಎಷ್ಟು ಅಂತರದಲ್ಲಿ ಸೋಲು

ಗೋವಾದ ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಪುತ್ರ, ಸ್ವತಂತ್ರ ಅಭ್ಯರ್ಥಿ ಉತ್ಪಲ್ ಪರಿಕ್ಕರ್ ಅವರು ಗುರುವಾರ ಪಣಜಿ ವಿಧಾನಸಭಾ ಕ್ಷೇತ್ರದಲ್ಲಿ ಸೋತಿದ್ದಾರೆ. ಬಿಜೆಪಿಯ ಅಟಾನಾಸಿಯೊ ಮೊನ್ಸೆರಾಟ್ಟೆ ವಿರುದ್ಧ ಸೋತಿದ್ದಾರೆ. ಕೊನೆಯ ಸುತ್ತಿನ ಮತ ಎಣಿಕೆ ಮುಗಿದ ನಂತರ ಮೊನ್ಸೆರಾಟ್ಟೆ 674 ಮತಗಳಿಂದ ಜಯಗಳಿಸಿದ್ದಾರೆ ಎಂದು ಚುನಾವಣಾಧಿಕಾರಿಯೊಬ್ಬರು ತಿಳಿಸಿದ್ದಾರೆ.

 ಉತ್ತರಾಖಂಡ ಸಿಎಂ ಧಾಮಿ ಸೋಲು

ಉತ್ತರಾಖಂಡ ಸಿಎಂ ಧಾಮಿ ಸೋಲು

ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಖತಿಮಾದಲ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿ ಭುವನ್ ಕಾಪ್ರಿ ವಿರುದ್ಧ ಸೋಲು ಕಂಡಿದ್ದಾರೆ. ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದ್ದರೂ ಖತಿಮಾದಲ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿ ಭುವನ್ ಕಾಪ್ರಿ ವಿರುದ್ಧ 7,000 ಮತಗಳಿಂದ ಸೋತಿದ್ದಾರೆ.

English summary
Assembly Elections Results 2022: From Amarinder Singh, Charanjit Singh Channi to Pushkar Dhami, Here is the list of high-profile politicians who defeated the elections across the five states. Take a look.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X