ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವಜೋತ್ ಸಿಂಗ್ ಸಿಧುಗೆ 1 ವರ್ಷದ ಜೈಲು ಶಿಕ್ಷೆ ನೀಡಿದ ಸುಪ್ರೀಂ

|
Google Oneindia Kannada News

ನವದೆಹಲಿ, ಮೇ 19; 1988ರ ರೋಡ್ ರೇಜ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧುಗೆ ಸುಪ್ರೀಂ ಕೋರ್ಟ್ ಗುರುವಾರ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ. 32 ವರ್ಷಗಳಷ್ಟು ಹಳೆಯದಾದ ರೋಡ್ ರೇಜ್ ಪ್ರಕರಣದಲ್ಲಿ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಹೆಚ್ಚು ಗಂಭೀರ ಸ್ವರೂಪದ ಆರೋಪಗಳನ್ನು ಎದುರಿಸಬೇಕೇ ಎಂದು ನಿರ್ಧರಿಸಲು ಸುಪ್ರೀಂ ಕೋರ್ಟ್ ಈ ವರ್ಷದ ಫೆಬ್ರವರಿಯಲ್ಲಿ ಪ್ರಕರಣವನ್ನು ಮರುಪರಿಶೀಲನೆಗೆ ತೆಗೆದುಕೊಂಡಿತ್ತು.

ಸಂತ್ರಸ್ತೆಯ ಕುಟುಂಬವು ಶಿಕ್ಷೆಯ ಹೆಚ್ಚಳಕ್ಕೆ ಕೋರಿ ಮತ್ತು ಗಂಭೀರ ಅಪರಾಧಕ್ಕೆ ಶಿಕ್ಷೆಯನ್ನು ನೀಡಲು ಕೋರಿ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಿತ್ತು. ಆದರೆ ಜೈಲು ಶಿಕ್ಷೆ ವಿಧಿಸಬಾರದು ಎಂದು ಸಿಧು ಮನವಿ ಮಾಡಿದ್ದರು. ಈ ಕುರಿತು ನವಜೋತ್ ಸಿಂಗ್ ಸಿಧು ಈ ವರ್ಷದ ಮಾರ್ಚ್‌ನಲ್ಲಿ ಸುಪ್ರೀಂ ಕೋರ್ಟ್‌ಗೆ ರೋಡ್ ರೇಜ್ ಪ್ರಕರಣದಲ್ಲಿ ತಮಗೆ ಹೆಚ್ಚಿನ ಶಿಕ್ಷೆ ನೀಡಬೇಡಿ ಎಂದು ಅರ್ಜಿ ಸಲ್ಲಿಸಿದ್ದರು.

ಪಂಜಾಬ್‌ನಲ್ಲಿ ರೈತರ ಪ್ರತಿಭಟನೆ: ಸಿಎಂ ಮಾನ್‌ಗೆ ನವಜೋತ್ ಸಿಂಗ್ ಸಿಧು ಸಲಹೆಪಂಜಾಬ್‌ನಲ್ಲಿ ರೈತರ ಪ್ರತಿಭಟನೆ: ಸಿಎಂ ಮಾನ್‌ಗೆ ನವಜೋತ್ ಸಿಂಗ್ ಸಿಧು ಸಲಹೆ

ಈ ಪ್ರಕರಣದಲ್ಲಿ 65 ವರ್ಷದ ಗುರ್ನಾಮ್ ಸಿಂಗ್ ಎಂಬ ವ್ಯಕ್ತಿಗೆ "ಸ್ವಯಂಪ್ರೇರಿತವಾಗಿ ನೋವುಂಟು ಮಾಡಿದ" ಅಪರಾಧಕ್ಕಾಗಿ ಸಿಧುರನ್ನು ಮೇ 2018 ರಲ್ಲಿ ಸುಪ್ರೀಂ ಕೋರ್ಟ್ ತಪ್ಪಿತಸ್ಥರೆಂದು ಪರಿಗಣಿಸಿದ್ದರೂ, ಅದು ಅವರಿಗೆ ಜೈಲು ಶಿಕ್ಷೆಯನ್ನು ತಪ್ಪಿಸಿತ್ತು ಮತ್ತು ರೂ 1,000 ದಂಡವನ್ನು ವಿಧಿಸಿತ್ತು.

1987 Road Rage Case: Navjot Sidhu sentenced to one year in jail

1988 ರಲ್ಲಿ ಪಟಿಯಾಲದ ಗುರ್ನಾಮ್ ಸಿಂಗ್ ಸಾವನ್ನಪ್ಪಿದ ರೋಡ್ ರೇಜ್ ಪ್ರಕರಣದಲ್ಲಿ ಸಿಧು ಆರೋಪಿಯಾಗಿದ್ದರು. ಮೇ 2018 ರಲ್ಲಿ ಕೋರ್ಟ್ 1,000 ರೂಪಾಯಿ ದಂಡ ವಿಧಿಸುವ ಮೂಲಕ ಜೈಲು ಶಿಕ್ಷೆ ನೀಡದೇ ಸಿಧುಗೆ ಅವಕಾಶ ನೀಡಿತ್ತು. ಪ್ರಕರಣವು 30 ವರ್ಷಕ್ಕಿಂತ ಹಳೆಯದಾಗಿದೆ ಮತ್ತು ಆರೋಪಿಯು ಯಾವುದೇ ಆಯುಧವನ್ನು ಬಳಸಿಲ್ಲ ಎಂದು ಗಮನಿಸಿದ ಕೋರ್ಟ್ ದೋಷಮುಕ್ತಗೊಳಿಸಿತ್ತು.

English summary
Supreme Court on Thursday sentenced Congress leader Navjot Singh Sidhu to one year in jail in the 1988 road rage case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X