DK Shivakumar: ಕರ್ನಾಟಕದ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್: ಕನಕಪುರ ಬಂಡೆಯ ಜಾತಕದಲ್ಲಿ ಯೋಗಾನುಯೋಗ ಹೇಗಿದೆ ?
DK Shivakumar: ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಲಿದ್ದಾರೆ. ಉಪ ಮುಖ್ಯಮಂತ್ರಿಯಾಗಿದ್ದ ಡಿ.ಕೆ.ಶಿವಕುಮಾರ್ ಕರುನಾಡ ಚುಕ್ಕಾಣಿ ಹಿಡಿಯಲಿದ್ದಾರೆ. ಈ ಸಂದರ್ಭದಲ್ಲಿ ಕನಕಪುರ ಬಂಡೆ ಎಂದೇ ಖ್ಯಾತರಾದ ಡಿಕೆಶಿ ಜಾತಕ ಹೇಗಿದೆ ಎಂಬುದನ್ನು ಖ್ಯಾತ ಜ್ಯೋತಿಷಿ ಹರೀಶ್ ಕಶ್ಯಪ್ ಅವರು ಬರೆದಿದ್ದಾರೆ.
ಕಾಂಗ್ರೆಸ್‌ನ ಪ್ರಭಾವಿ ನಾಯಕ, ಟ್ರಬಲ್ ಶೂಟರ್, ಫಂಡ್ ರೈಸರ್ ಹಾಗೂ ಅತ್ಯುತ್ತಮ ಸಂಘಟಕರಾದ ಡಿ.ಕೆ.ಶಿವಕುಮಾರ್ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆ ಎಂಬ ಮಾತಿಗೆ ಕಟಿಬದ್ಧರಾದ ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅವರ ಸ್ಥಾನವನ್ನು ಶಿವಕುಮಾರ್ ಅವರು ತುಂಬಲಿದ್ದಾರೆ. ಈ ಸಂದರ್ಭದಲ್ಲಿ ಅವರ ಜಾತಕ ಹೇಗಿದೆ ನೋಡಿ.

ಡಿಕೆಶಿ 2026 ಸದ್ಯ ಜಾತಕ ಬಲವು ಶನಿಯ ಕೇಂದ್ರದಿಂದ ಕೂಡಿದೆ. 2034ರವರೆಗೂ ಸ್ವಕ್ಷೇತ್ರದ ಶನಿಯ ಯೋಗವಿದ್ದು, ಉನ್ನತ ಅಧಿಕಾರ ಪ್ರಾಪ್ತಿಗೆ ಕಾರಣವಾಗಿದೆ. 65 ವರ್ಷದ ಶಿವಕುಮಾರ್ ಅವರಿಗೆ ರಾಜಕೀಯಕ್ಕೆ ಹೇಳಿ ಮಾಡಿಸಿದ ಹುಟ್ಟು, ಕರ್ಮ ಯೋಗಗಳು ಇವೆ (ಲಭ್ಯಜಾತಕ ಪ್ರಕಾರ). ಮೇಷ ಲಗ್ನ, ಕೃತಿಕಾ ವೃಷಭ ರಾಶಿಯವರು. 2014ರಿಂದ ಬಲಿಷ್ಠ ಶನಿಯ ದಶೆಯಲ್ಲೇ ರಾಜಕೀಯವಾಗಿ ಇವರು ಪ್ರವರ್ಧಮಾನಕ್ಕೆ ಏರಿದ್ದು, ಶಶಕಯೋಗದ ಫಲವೇ ಆಗಿದೆ. ಈ ಹತ್ತು ವರ್ಷಗಳಲ್ಲಿ ನಾನಾ ಬಗೆಯ ಅಧಿಕಾರದ ಯೋಗವಿದ್ದರೂ ಹಲವು ಕೃತಕರ್ಮ ದೋಷಗಳಿಂದ ನ್ಯಾಯಾಲಯಗಳ ಬಾಗಿಲ ಅಲೆಯುವ ಅವಯೋಗವೂ ಅನುಭವಿಸಬೇಕಾಯಿತು. ಇದಕ್ಕೆ ಮುಖ್ಯ ಕಾರಣ,
1.ಲಗ್ನಾಧೀಪ ಕುಜನು ನೀಚನಿದ್ದು, ಶತ್ರು ಶನಿಯಿಂದ ನೀಚ ಭಂಗ ಪಡೆದು, ಅಶುಭ ಯೋಗ ಹೀಗಾಗಿ ನೀಚಭಂಗ ರಾಜಯೋಗವಿಲ್ಲ.
2. ದ್ವಿತೀಯದ ವೃಷಭ ಉಚ್ಚ ಚಂದ್ರನಿದ್ದರೂ ಅಮಾವಾಸ್ಯೆ ಕರಿ ಇರುವ ಕಾರಣ ಚಂದ್ರ ಬಲವಿಲ್ಲ.
3. ದ್ವಿತೀಯಪತಿ (ಅಧಿಕಾರಕ) ಶುಕ್ರನು ವ್ಯಯದಲ್ಲಿ ಉಚ್ಚನಿರುವುದು ಕಾಂಕ್ಷೆಗಳು ಹೆಚ್ಚಿ, ಶ್ರಮಕ್ಕೆ ತಕ್ಕ ಫಲವಿರದು.
4. ನವಮಾಧಿಪ ಗುರುವು ಕರ್ಮದಲ್ಲಿ ನೀಚನಿದ್ದು, ಗುರುದೋಷವಿರುವುದು ಪೂರ್ವಕೃತ ದೈವದೇವರ ಪ್ರಕೋಪ.
5. ಲಗ್ನಾಧಿಪ ಕುಜ, ಶನಿ, ಕುಂಭದ ಕೇತುಗಳು ಮೂರು ಪಾಪ ಗ್ರಹಗಳಿಗೆ ದೃಷ್ಟಿದೋಷಾದಿ (ಅನೇಕವಾಗಿದೆ) ಇದೆ.
6. ಸಿಂಹ, ರಾಹು ಕೂಡ ದೈವ ಬಲ ಕೆಡಿಸುವುದು.
ಇವೆಲ್ಲ ಸೇರಿ ರಾಜಯೋಗವಿದ್ದರೂ ಇವರ ಪ್ರತಿಭೆಗೆ, ತಕ್ಕ ಶ್ರಮಕ್ಕೆ ತಕ್ಕ ಆದರ ಸ್ಥಾನ (ಸಿಎಂ) ದೊರಕದೇ ಎಲ್ಲವಿದ್ದೂ ಮಾನಸಿಕ ಕೊರಗಿರುವುದು.
ಪಾಳೇಗಾರ ವಂಶದ ಪುಣ್ಯ ಫಲವೂ ಇದೆ
ಇವರು ಅನೇಕ ದೈವ ದೇವರ ಭಕ್ತಿ ಸೇವೆ ಮಾಡುವ ಒಳ್ಳೇಯ ಸತ್ಕರ್ಮಗಳನ್ನು ಮಾಡುವುದು ಎಲ್ಲ ದೋಷಗಳಿಗೆ ರಕ್ಷೆಯೂ ಆಗಿ ಕಾಯುತ್ತಲಿವೆ. ಇವರು ಪೂರ್ವದ 200 ವರ್ಷಗಳಲ್ಲಿ ಭೂನಾಯಕ ಪಾಳೇಗಾರ ವಂಶವಾಹಿಯಲ್ಲಿ ಇದ್ದವರು. ಆಗ ಗಳಿಸಿದ ಅನೇಕ ಪುಣ್ಯಗಳಿಂದ ಈಗ ನಾನಾ ದೊಡ್ಡ ಅಧಿಕಾರಗಳನ್ನು ಪಡೆದು, ಆಗಿನ ಶೇಷ ಕರ್ಮ ದೋಷಗಳು ಪುಣ್ಯಕ್ಕಿಂತಲೂ ಹೆಚ್ಚಿರುವುದರಿಂದ ನಿಜಕ್ಕೂ ಬೇಕಾದ ಹುದ್ದೆ ಸಿಗಲು ಬಹು ವಿಘ್ನಗಳಿಂದ ನೊಂದಿರುವವರು. ಈಗಿನ ಶನಿಯ ಕೇಂದ್ರ ಬಲಿಷ್ಠ ದಶೆ ಇದ್ದರೂ ಅದು ವಕ್ರಶನಿಯ ದಶೆ, ಅಶುಭವೇ ಆಗಿದೆ. ಅದಕ್ಕೆ ಶುಭ ಬರುವುದು ಕೇಂದ್ರ ಚಂದ್ರ ಕುಜರ ಯೋಗದಿಂದ ಮಾತ್ರವೇ.
ಇತರೆ ಯಾವ ಬಲವೂ ಕೆಲಸಕ್ಕೆ ಬರುವುದಿಲ್ಲ. ಸದ್ಯ 2027 ಜುಲೈವರೆಗೂ ಚಂದ್ರ ಭುಕ್ತಿ ಇದ್ದು, ಬಲವಿಲ್ಲದ್ದಾಗಿದೆ. ಪ್ರಸಕ್ತ ದಿನಗಳಲ್ಲಿ ಸಿದ್ದರಾಮಯ್ಯ ಅವರು ಬಿಟ್ಟು ಕೊಟ್ಟರೂ ಡಿಕೆಶಿ ಅವರಿಗಾಗಿ ಅಂತ ಆಗದು. ಅದಕ್ಕೆ ಬೇಕಾದ ಕೇಂದ್ರ ಬಲವಿಲ್ಲ. ಒಂದು ವೇಳೆ ಸದ್ಯ ಗೋಚಾರದ ಉಚ್ಚ ಗುರುವಿನ ವ್ಯವಹಾರಿಕ ಕಾರಣಗಳಿಂದ ಇವರಿಗೆ ಸಿಎಂ ಪಟ್ಟ ದೊರೆತಾಗಲೂ, ತಕ್ಕ ಯಶಸ್ಸು ಪಡೆಯಲು ದೈವ ಗ್ರಹಾನುಕೂಲ ಏನೂ ಸಾಲದು.
ದೈವಜ್ಞ ಹರೀಶ್ ಕಾಶ್ಯಪ: 8217058695














Click it and Unblock the Notifications