Video Viral: ರೈಲಿನ ಟಾಯ್ಲೆಟ್‌ನಲ್ಲಿ ಆಹಾರ ತಟ್ಟೆ ಇಟ್ಟ ಸಿಬ್ಬಂದಿ! ಪ್ರಯಾಣಿಕರ ಆಕ್ರೋಶ

Train Video Viral: ರೈಲು ಸಂಚಾರ ಸೇವೆಯಲ್ಲಿ ವರ್ಷದಿಂದ ವರ್ಷಕ್ಕೆ ಮತ್ತಷ್ಟು ಉನ್ನತಿಗೇರುತ್ತಿರುವ ಭಾರತೀಯ ರೈಲ್ವೆ ಜಾಲವು ವಿಸ್ತರಣೆ ಆಗುತ್ತಿದೆ. ಕೋಟ್ಯಾಂತರ ಪ್ರಯಾಣಿಕರು ನಿತ್ಯ ರೈಲುಗಳಲ್ಲಿ ಸಂಚರಿಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ರೈಲುಗಳ ನೈರ್ಮಲ್ಯದ ಕುರಿತು ಮೇಲಿಂದ ಮೇಲೆ ಅನುಮಾನ ಉಂಟಾಗುವಂತೆ ಆಗಿದೆ. ಪ್ರಯಾಣಿಕರು ರೈಲ್ವೆ ಶುಚಿತ್ವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇದಕ್ಕೆ ರೈಲಿನ ಒಳಗೆ ಆಹಾರ ವಿತರಣಾ ಕ್ರಮದಲ್ಲಿ ಆಗುತ್ತಿರುವ ಲೋಪದೋಷಗಳು ಕಾರಣವಾಗಿವೆ.

ಮುಂಬೈ ಲೋಕಮಾನ್ಯ ತಿಲಕ್ ಟರ್ಮಿನಸ್‌ನಿಂದ ಕೊಚ್ಚಿಗೆ ಸಂಚರಿಸುತ್ತಿದ್ದ (12223) ಡುರೊಂಟೊ ಎಕ್ಸ್‌ಪ್ರೆಸ್ (ಫಸ್ಟ್ ಎಸಿ ಕೋಚ್ ಎಚ್‌1) ನಲ್ಲಿ ಊಟ ವಿತರಣೆ ಸಿಬ್ಬಂದಿ ನಡೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಯಾಣಿಕರಿಗೆ ಆಹಾರ ನೀಡುವ ತಟ್ಟೆ, ಊಟ ತಿಂಡಿ ಪ್ಲೇಟ್‌ಗಳನ್ನು ಬುಟ್ಟಿಯಲ್ಲಿ ಹಾಕಿ ಟಾಯ್ಲೆಟ್ ಒಳಗೆ ಸೀಟಿನ ಮೇಲೆ ಇಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ.

Train Hygiene Shock

ರೈಲು ಸಂಚಾರ ಸಮಯದಲ್ಲಿ ಐಆರ್‍‌ಸಿಟಿಸಿ ಸಿಬ್ಬಂದಿ ಶೌಚಾಲಯದ ಸೀಟಿನ ಬಳಿ/ಮೇಲೆ ಆಹಾರ ತಟ್ಟೆಗಳು, ಟ್ರೇಯನ್ನು ಇಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದು ರೈಲಿನ ನೈರ್ಮಲ್ಯ ಮತ್ತು ಆಹಾರ ನಿರ್ವಹಣೆಯ ಮಾನದಂಡಗಳ ಬಗ್ಗೆ ಪ್ರಯಾಣಿಕರ ಗಂಭೀರ ಕಳವಳ ಹುಟ್ಟು ಹಾಕಿದೆ. ಇದನ್ನು ಪ್ರಶ್ನಿಸಿದ ಪ್ರಯಾಣಿಕರು ನೈರ್ಮಲ್ಯ ಕೊರತೆ ಬಗ್ಗೆ ದೂರು ನೀಡಲಾಗಿದೆ.

Vendor Samosa Tray Video: ರೈಲಿನಲ್ಲಿ ಸಮೋಸಾ ಟ್ರೇನಲ್ಲಿ ಕಾಲಿಟ್ಟ ಮಾರಾಟಗಾರ, ನೆಟ್ಟಿಗರ ಆಕ್ರೋಶ
Vendor Samosa Tray Video: ರೈಲಿನಲ್ಲಿ ಸಮೋಸಾ ಟ್ರೇನಲ್ಲಿ ಕಾಲಿಟ್ಟ ಮಾರಾಟಗಾರ, ನೆಟ್ಟಿಗರ ಆಕ್ರೋಶ

ಪ್ರಯಾಣಿಕರಿಗೆ ನೀಡುವ ಆಹಾರ, ಉಪಕರಣಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳುವುದು ಸಿಬ್ಬಂದಿ ಕೆಲಸ. ಅದನ್ನು ಬಿಟ್ಟು ಈ ರೀತಿ ಮಾಡಿದನ್ನು ಕಂಡ ನೆಟ್ಟಿಗರು ಆನ್‌ಲೈನ್‌ ಕೆಂಡ ಕಾರಿದ್ದಾರೆ. ವಿಶೇಷವಾಗಿ ಪ್ರಯಾಣಿಕರು ಪ್ರೀಮಿಯಂ ರೈಲು ಬೋಗಿಗಳಲ್ಲಿ ಸಂಚಾರಕ್ಕೆ ಟಿಕೆಟ್ ಬುಕ್ ಮಾಡುವುದೇ ನೈರ್ಮಲ್ಯ ಕಾರಣಕ್ಕಾಗಿ. ಇದೀಗ ಎಸಿ ಕೋಚ್‌ ನಲ್ಲೇ ಈ ರೀತಿ ಸಿಬ್ಬಂದಿ ಬೇಜವಾಬ್ದಾರಿ ವರ್ತನೆಯು ರೈಲ್ವೆ ಇಲಾಖೆಯ ಶುಚಿತ್ವವನ್ನು ಪ್ರಶ್ನಿಸುವಂತಾಗಿದೆ. ಎಸಿ ಕೋಚ್‌ನಲ್ಲೇ ಹೀಗೆ, ಇನ್ನೂ ಸಾಮಾನ್ಯ ರೈಲು ಬೋಗಿಗಳಲ್ಲಿ ಹೇಗಿರುತ್ತದೆ ಎಂದು ಅನೇಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಟಾಯ್ಲಟೆ ನೀರನ್ನೇನಾದರೂ ಪ್ಲೇಟ್ ತೊಳೆಯಲು ಬಳಸಿದರಾ ಎಂಬ ಅನುಮಾನ ಸಹ ಉಂಟಾಗಿದ್ದು, ಈ ಬಗ್ಗೆ ಗೊತ್ತಾಗಬೇಕಿದೆ.

ಪ್ರಯಾಣಿಕರು ಸುರಕ್ಷತೆ, ನೈರ್ಮಲ್ಯಕ್ಕೆ ಅರ್ಹರು

ರೈಲು ಪ್ರಯಾಣಿಕರು ಸೇವೆ ಪಡೆಯುವಾಗ ಅವರು ಸುರಕ್ಷಿತೆ, ನೈರ್ಮಲ್ಯಕ್ಕೆ, ಜವಾಬ್ದಾರಿಯುತ ಆಹಾರ ಸೇವೆಗೆ ಅರ್ಹರಾಗಿತ್ತಾರೆ. ಅದನ್ನು ಸುಸೂತ್ರವಾಗಿ ನಿರ್ವಹಿಸುವುದು ರೈಲ್ವೆ, ಸಿಬ್ಬಂದಿ ಕರ್ತವ್ಯವಾಗಿರುತ್ತದೆ. ಅದನ್ನು ಮರೆತಾಗ ಇಂತಹ ಕಳವಳಕಾರಿ ಸಂಗತಿಗಳು ನಡೆಯುತ್ತವೆ. ಈ ಸಂಬಂಧ ದೂರು ನೀಡಿದ್ದಾಗಿ (ದೂರಿನ ಸಂಖ್ಯೆ 2026052408416) ಎಕ್ಸ್ @truth_on_track ಪೋಸ್ಟ್‌ನಲ್ಲಿ ವಿಡಿಯೋ ಸಹಿತ ಮಾಹಿತಿ ನೀಡಲಾಗಿದೆ. ಸದ್ಯ ಕಾಮೆಂಟ್‌ಗಳಲ್ಲಿ ರೈಲ್ವೆ ಇಲಾಖೆ, ಅಧಿಕಾರಿಗಳು ಯಾರೊಬ್ಬರು ಅಧಿಕೃತ ಎಕ್ಸ್ ಹ್ಯಾಂಡಲ್‌ನಿಂದ ಈವರೆಗೆ ಪ್ರತಿಕ್ರಿಯಿಸಿಲ್ಲ.

ರೈಲ್ವೆ ಇಲಾಖೆ, ಸಚಿವರಿಗೆ ಕ್ಲಾಸ್‌ ತೆಗೆದುಕೊಂಡ ನೆಟ್ಟಿಗರು

'ಈ ಘಟನೆ ವರದಿ ಆದ ಮೇಲೆ ರೈಲ್ವೆ ಇಲಾಖೆ, IRCTC ಏನು ಕ್ರಮ ಕೈಗೊಂಡಿದೆ ತಿಳಿಸಿ ಎಂದು ಆಗ್ರಹಿಸಿದ್ದಾರೆ. ನೀವು ಇಲ್ಲಿಯವರೆಗೆ ಏನು ಕ್ರಮ ತೆಗೆದುಕೊಂಡಿದ್ದೀರಿ?' ಎಂದು ನೆಟ್ಟಿಗರೊಬ್ಬರು ಆಗ್ರಹಿಸಿದ್ದಾರೆ. ಇನ್ನೊಬ್ಬರು "ಅನಾನುಕೂಲತೆಗೆ ಕ್ಷಮಿಸಿ" ಕ್ಷಮಿಸಿ ಇಲ್ಲವೇ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಲಾಗಿದೆ' ಎಂದು ಹೇಳದೇಯೇ ನೈಜ ಕ್ರಮ ಏನು ಜರುಗಿಸಲಾಗಿದೆ ಎಂಬ ಮಾಹಿತಿ ಬೇಕು' ಎಂದು ಮತ್ತೊಬ್ಬರು ರೈಲ್ವೆ ಸಚಿವರು, IRCTC ಟ್ಯಾಗ್ ಮಾಡಿ ಕಿಡಿ ಕಾರಿದ್ದಾರೆ.

ಬೆಂಗಳೂರು ಮಾರ್ಗದ ರೈಲುಗಳ ಸಂಚಾರದಲ್ಲಿ ಬದಲಾವಣೆ, ರೈಲು ನಿಲುಗಡೆ 6 ತಿಂಗಳು ವಿಸ್ತರಣೆ, ಪಟ್ಟಿ ಇಲ್ಲಿದೆ
ಬೆಂಗಳೂರು ಮಾರ್ಗದ ರೈಲುಗಳ ಸಂಚಾರದಲ್ಲಿ ಬದಲಾವಣೆ, ರೈಲು ನಿಲುಗಡೆ 6 ತಿಂಗಳು ವಿಸ್ತರಣೆ, ಪಟ್ಟಿ ಇಲ್ಲಿದೆ

ದೂರಿನಿಂದ ಏನೂ ಪ್ರಯೋಜನ ಆಗಲ್ಲ

ಮೂರನೇಯವರು, 'ನಿಮ್ಮ ದೂರಿನಿಂದ ಏನು ಪ್ರಯೋಜನವಾಗಲ್ಲ. ರೈಲ್ವೆ ಅಧಿಕಾರಿಗಳು ದಂಡ ವಿಧಿಸಿದ್ದೇವೆ. ಪರವಾನಿಗೆ ರದ್ದು ಮಾಡಿದ್ದೇವೆ, ಎಚ್ಚರಿಕೆ ನೀಡಿದ್ದೇವೆ ಅಂತಲೂ ತೋರಿಸಿ ಸುಮ್ಮನಾಗುತ್ತಾರೆ. ಇಂತಹ ವ್ಯವಸ್ಥೆ ಇದ್ದಾಗ ನಮ್ಮ ಡೇಟಾ, ಸಮಯ ವ್ಯರ್ಥ' ಎಂದು ರೈಲ್ವೆ ವ್ಯವಸ್ಥೆ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ. ಹೀಗೆ ಅನೇಕ ಮಂದಿ ವಿಡಿಯೋ ಕುರಿತು ಅಭಿಪ್ರಾಯ ಹೊರ ಹಾಕಿದ್ದಾರೆ.

ಇತ್ತೀಚೆಗೆ ರೈಲಿನಲ್ಲಿ ಅನಧಿಕೃತ ಮಾರಾಟಗಾರ ಪ್ರಯಾಣಿಕರಿಗೆ ಮಾರಟಕ್ಕೆ ತಂದಿದ್ದ ಸಮೋಸಾ ಟ್ರೇನಲ್ಲಿ ಕಾಲಿಟ್ಟು ಕೂತಿದ್ದ ವಿಡಿಯೋ ವೈರಲ್ ಆಗಿತ್ತು. ಆಗಲೂ ನೈರ್ಮಲ್ಯ ಕುರಿತು ಆಕ್ರೋಶ ಕೇಳಿ ಬಂದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+