ಪಂಜಾಬ್: ಕೋಟೆ ಕಟ್ಟಿ ಮೆರೆದ ಮೂವರನ್ನೂ ಮನೆಗೆ ಕಳುಹಿಸಿದ ಮತದಾರ
ಆಡಳಿತ ವಿರೋಧಿ ಅಲೆ ಯಾವರೀತಿ ಇರುತ್ತದೆ ಎನ್ನುವುದಕ್ಕೆ ಪಂಜಾಬ್ ಅಸೆಂಬ್ಲಿ ಚುನಾವಣೆಯ ಫಲಿತಾಂಶ ಸಾಕ್ಷಿಯಾಗಬಲ್ಲದು. ತನ್ನ ಆಡಳಿತವಿರುವ ಕೆಲವೇ ಕೆಲವು ರಾಜ್ಯಗಳಲ್ಲಿ ಒಂದಾಗಿದ್ದ ಪಂಜಾಬ್ ಅನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ವಿಫಲವಾಗಿದೆ.
ಸೂಕ್ತ ಮಾರ್ಗದರ್ಶನ, ಆಂತರಿಕ ತಿಕ್ಕಾಟ, ರಾಜಕೀಯ ತಂತ್ರಗಾರಿಕೆಯ ಕೊರತೆಯಿಂದಾಗಿ ಕಾಂಗ್ರೆಸ್ ಇಲ್ಲಿ ಸೋಲುಂಡಿದೆ. ಇನ್ನೊಂದೆಡೆ ಶಿರೋಮಣಿ ಅಕಾಲಿದಳ ಮತ್ತು ಬಿಜೆಪಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದು, ಇವೆಲ್ಲವೂ ಆಮ್ ಆದ್ಮಿ ಪಕ್ಷಕ್ಕೆ ಭರ್ಜರಿ ಫಸಲನ್ನು ತಂದುಕೊಟ್ಟಿದೆ.
ಕೆಲವೇ ಕೆಲವು ತಿಂಗಳ ಹಿಂದೆ ಉತ್ತಮ ಸ್ಥಿತಿಯಲ್ಲಿದ್ದ ಪಂಜಾಬ್ ನಲ್ಲಿ ಈ ರೀತಿಯ ಜನಾದೇಶ ಬರುತ್ತದೆ ಅಂದರೆ ಅದಕ್ಕೆ ಕಾಂಗ್ರೆಸ್ ತನ್ನನ್ನು ತಾನೇ ದೂಷಿಸಿಕೊಳ್ಳಬೇಕು. 92 ಸ್ಥಾನವನ್ನು ಆಮ್ ಆದ್ಮಿ ಪಕ್ಷ ಗೆಲ್ಲುವ ಮೂಲಕ, ಮುಂದಿನ ದೇಶದ ರಾಜಕೀಯ ಸಮೀಕರಣಕ್ಕೆ ಬೇರೆಯೇ ಆಯಾಮವನ್ನು ನೀಡಿದೆ.
ಕಾಂಗ್ರೆಸ್ ಈ ರೀತಿಯ ಹೀನಾಯವಾಗಿ ಸೋಲಲು ಕಾರಣ ಯಾರು ಎಂದಾಗ, ನಾಲ್ಕು ಮುಖಂಡರು ಎಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ. ಕಾಂಗ್ರೆಸ್ ಕೇವಲ ಹದಿನೆಂಟು ಕ್ಷೇತ್ರದಲ್ಲಿ ಇಲ್ಲಿ ಜಯಗಳಿಸಿದೆ. ಕಳೆದ ಚುನಾವಣೆಯಲ್ಲಿ 77 ಸ್ಥಾನವನ್ನು ಗೆದ್ದಿತ್ತು. ಪಂಜಾಬ್ ಮುಖಭಂಗಕ್ಕೆ ಕಾರಣರಾದ ನಾಲ್ವರು ಯಾರು? ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಸ್ಥಳೀಯ ನಾಯಕರ ವೈಮನಸ್ಸನ್ನು ಸರಿದಾರಿಗೆ ತರಲು ರಾಹುಲ್ ತಡಮಾಡಿ, ವಿಫಲವಾಗಿದ್ದು
ಹೈಕಮಾಂಡ್ ಸಂಸ್ಕೃತಿಗೆ ಗಾಂಧಿ/ನೆಹರೂ ಕುಟುಂಬವನ್ನೇ ನೆಚ್ಚಿಕೊಂಡಿರುವ ಗತ ಇತಿಹಾಸದ ಕಾಂಗ್ರೆಸ್ಸಿಗೆ ಇತ್ತೀಚಿನ ದಿನಗಳಲ್ಲಿ ಅದೇ ಮುಳುವಾಗುತ್ತಿದೆ. ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾಗಿದ್ದ ವೇಳೆ ಮತ್ತು ಇದಾದ ನಂತರವೂ ಕಾಂಗ್ರೆಸ್ ಹಿನ್ನಡೆಯನ್ನು ಅನುಭವಿಸುತ್ತಲೇ ಇದೆ. ಪಂಜಾಬ್ ವಿಚಾರದಲ್ಲಿ ಅತ್ಯಂತ ಸ್ಪಷ್ಟವಾಗಿ ಕಾಣಿಸಿಕೊಂಡಿದ್ದು ಇಬ್ಬರು ಸ್ಥಳೀಯ ನಾಯಕರ ವೈಮನಸ್ಸನ್ನು ಸರಿದಾರಿಗೆ ತರಲು ರಾಹುಲ್ ಗಾಂಧಿ ತಡಮಾಡಿ, ವಿಫಲವಾಗಿದ್ದು. ಜೊತೆಗೆ, ಅಲ್ಲಿನ ಟಾಪ್ ಟು ನಾಯಕರ ಬಹಿರಂಗ ಹೇಳಿಕೆಗೆ ಬ್ರೇಕ್ ಹಾಕಲು ವಿಫಲರಾಗಿದ್ದು ಎಂದು ವಿಶ್ಲೇಷಿಸಲಾಗುತ್ತಿದೆ.

ಪಂಜಾಬ್ ನಲ್ಲಿ ಅಮರೀಂದರ್ ಸಿಂಗ್ ಮುಖ್ಯಮಂತ್ರಿ
ಪಂಜಾಬ್ ನಲ್ಲಿ ಅಮರೀಂದರ್ ಸಿಂಗ್ ಮುಖ್ಯಮಂತ್ರಿಯಾಗಿದ್ದ ವೇಳೆ ಕೃಷಿ ಕಾಯಿದೆಯ ವಿಚಾರದಲ್ಲಿ ಪ್ರಮುಖವಾಗಿ ಅಲ್ಲಿನ ರೈತರ ಹೋರಾಟ ಆರಂಭವಾಗಿತ್ತು. ಆ ವೇಳೆ, ಅಮರೀಂದರ್ ಕೇಂದ್ರದ ಕಡೆಗೆ ಕೈತೋರಿಸಿ ತಟಸ್ಥರಾದರು. ಇದಾದ ನಂತರ ಅಮರೀಂದರ್ ಸಿಂಗ್ ಮತ್ತು ನವಜೋತ್ ಸಿಂಗ್ ಸಿಧು ಅವರ ಕಲಹ ತಾರಕಕ್ಕೇರಿತು. ಸೂಕ್ತ ಸಮಯದಲ್ಲಿ ಹೈಕಮಾಂಡ್ ಇದನ್ನು ಬಗೆಹರಿಸಲು ವಿಫಲವಾಯಿತು. ಅಷ್ಟೊತ್ತಿಗೆ ಅಮರೀಂದರ್ ಸಿಂಗ್ ಕಾಂಗ್ರೆಸ್ಸಿನಿಂದ ದೂರವಾಗಿ, ಸ್ಥಳೀಯ ಪಕ್ಷವೊಂದನ್ನು ಆರಂಭಿಸಿದರು. ಆದರೆ, ಮತದಾರ ಇವರನ್ನು ಪಟಿಯಾಲ ಕ್ಷೇತ್ರದಿಂದ ಸೋಲಿಸಿ, ಆಕ್ರೋಶವನ್ನು ಹೊರಹಾಕಿದ್ದಾನೆ.

ಖುದ್ದು ಸಿಧು ಅಮೃತಸರ ಪೂರ್ವ ಕ್ಷೇತ್ರದಿಂದ ಪರಾಭವ
ಪಂಜಾಬ್ ನಲ್ಲಿ ಈ ರೀತಿಯ ಹೀನಾಯ ಫಲಿತಾಂಶ ಬರಲು ಪ್ರಮುಖ ಕಾರಣಕರ್ತರಲ್ಲಿ ಮಂಚೂಣಿಯಲ್ಲಿ ಬರುವ ಹೆಸರು ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ನವಜೋತ್ ಸಿಂಗ್ ಸಿಧು. ಅಮರೀಂದರ್ ಜೊತೆ ಭಿನ್ನಾಭಿಪ್ರಾಯ ಹೊಂದಿದ್ದ ಇವರು, ಸಿಎಂ ಚರಣಜಿತ್ ಸಿಂಗ್ ಚನ್ನಿ ಜೊತೆಯೂ ಮನಸ್ತಾಪವನ್ನು ಹೊಂದಿದ್ದರು. ಹೈಕಮಾಂಡ್ ಎಚ್ಚರಿಕೆಗೂ ಬೆಲೆ ಕೊಡದ ಸಿಧು ಅವರು ನೀಡುತ್ತಿದ್ದ ಹೇಳಿಕೆ ಪಕ್ಷಕ್ಕೆ ಮುಜುಗರವನ್ನು ತಂದೊಡ್ಡಿತ್ತು. ಬರೀ ಅಧಿಕಾರದ ಆಸೆಯ ಹಿಂದೆ ಬಿದ್ದರೆ ಏನು ಫಲಿತಾಂಶ ಬರುತ್ತದೆ ಎನ್ನುವುದಕ್ಕೆ ಸಾಕ್ಷಿಯಂತೆ, ಖುದ್ದು ಸಿಧು ಅಮೃತಸರ ಪೂರ್ವ ಕ್ಷೇತ್ರದಿಂದ ಪರಾಭವಗೊಂಡಿದ್ದಾರೆ.

ಚನ್ನಿ ಸ್ಪರ್ಧಿಸಿದ್ದ ಎರಡೂ ಕ್ಷೇತ್ರದಿಂದ (ಭದೌರ್, ಚಮ್ಕೌರ್) ಪರಾಭವ
ಅಮರೀಂದರ್ ಸಿಂಗ್ ರಾಜೀನಾಮೆಯ ನಂತರ ಅಚ್ಚರಿಯ ರೀತಿಯಲ್ಲಿ, ದಲಿತ ಸಮುದಾಯದ ಚರಣಜಿತ್ ಸಿಂಗ್ ಚನ್ನಿಅವರನ್ನು ಸಿಎಂ ಹುದ್ದೆಗೆ ನೇಮಿಸಲಾಯಿತು. ಮೊದಲ ದಿನದಿಂದಲೇ ತಂತಿಯ ಮೇಲೆ ನಡಿಗೆ ಎನ್ನುವ ಹಾಗೇ, ಸಮರ್ಥವಾಗಿ ಇವರಿಗೆ ಆಡಳಿತ ನಡೆಸಲು ತೊಡಕಾಗಿದ್ದೇ ಸಿಧು ಎನ್ನುವ ಮಾತಿದೆ. ಇವರ ಆಂತರಿಕ ಕಿತ್ತಾಟಕ್ಕೆ ಮತದಾರ ಸರಿಯಾದ ಪಾಠವನ್ನು ಕಲಿಸಿದ್ದಾನೆ. ಚನ್ನಿ ತಾನು ಸ್ಪರ್ಧಿಸಿದ್ದ ಎರಡೂ ಕ್ಷೇತ್ರದಿಂದ (ಭದೌರ್, ಚಮ್ಕೌರ್) ಪರಾಭವಗೊಂಡಿದ್ದಾರೆ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video












Click it and Unblock the Notifications